Karnataka Zilla Taluk Panchayat Election: ಜನವರಿಗೆ ಪಂಚಾಯಿತಿ ಚುನಾವಣೆ | ಫೈನಲ್ ಮೀಸಲಾತಿ ಪ್ರಕಟ | 4,681 ಸ್ಥಾನಗಳ ಸಂಪೂರ್ಣ ಪಟ್ಟಿ ಇಲ್ಲಿದೆ…

WhatsApp Group Join Now
Telegram Group Join Now

Karnataka Zilla Taluk Panchayat Election: ರಾಜ್ಯದ 30 ಜಿಲ್ಲಾ ಪಂಚಾಯಿತಿಗಳ 1,101 ಕ್ಷೇತ್ರ ಹಾಗೂ 234 ತಾಲ್ಲೂಕು ಪಂಚಾಯಿತಿಗಳ 3,580 ಸ್ಥಾನಗಳಿಗೆ ಅಂತಿಮ ಮೀಸಲಾತಿ ಪಟ್ಟಿ ಪ್ರಕಟವಾಗಿದೆ. 2027ರ ಜನವರಿಯಲ್ಲಿ ಚುನಾವಣೆ ನಡೆಯಲಿದ್ದು, ವರ್ಗವಾರು ಮೀಸಲಾತಿ ವಿವರ ಇಲ್ಲಿದೆ…

ಬೆಂಗಳೂರು: ಬರೋಬ್ಬರಿ ಐದೂವರೆ ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ರಾಜ್ಯದ ಗ್ರಾಮೀಣ ರಾಜಕಾರಣದಲ್ಲಿ ಮತ್ತೆ ಸಂಚಲನ ಶುರುವಾಗಿದೆ. ರಾಜ್ಯದ 30 ಜಿಲ್ಲಾ ಪಂಚಾಯಿತಿ ಹಾಗೂ 234 ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೆ ರಾಜ್ಯ ಸರ್ಕಾರವು ಅಂತಿಮ ಮೀಸಲಾತಿ ಅಧಿಸೂಚನೆಯನ್ನು (Final Reservation Notification) ಅಧಿಕೃತವಾಗಿ ಪ್ರಕಟಿಸಿದೆ.

ವಿಶೇಷ ರಾಜ್ಯ ಪತ್ರದ (Gazette Notification) ಮೂಲಕ ಈ ಆದೇಶ ಹೊರಬಿದ್ದಿದ್ದು, ಮುಂಬರುವ 2027ರ ಜನವರಿ ತಿಂಗಳಿನಲ್ಲಿ ಚುನಾವಣೆ ನಡೆಯುವುದು ಬಹುತೇಕ ಖಚಿತವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: Cattle Shed Subsidy: ರೈತರಿಗೆ ಭರ್ಜರಿ ಗುಡ್ ನ್ಯೂಸ್: ದನದ ಕೊಟ್ಟಿಗೆ ಕಟ್ಟಲು ಸರ್ಕಾರದಿಂದ ₹62,000 ನೆರವು | ನಿಮ್ಮ ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಹಾಕಿ

ಒಟ್ಟು ಸ್ಥಾನಗಳು ಮತ್ತು ಮಹಿಳಾ ಮೀಸಲಾತಿ

ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ಇನ್ನುಳಿದ 30 ಜಿಲ್ಲೆಗಳ 1,101 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹಾಗೂ 234 ತಾಲ್ಲೂಕು ಪಂಚಾಯಿತಿಗಳ 3,580 ಸದಸ್ಯ ಸ್ಥಾನಗಳಿಗೆ ಮೀಸಲಾತಿ ನಿಗದಿಯಾಗಿದೆ. ಒಟ್ಟಾರೆಯಾಗಿ 4,681 ಸ್ಥಾನಗಳಿಗೆ ಈ ಬಾರಿ ಚುನಾವಣೆ ನಡೆಯಲಿದೆ.

ವಿಶೇಷವೆಂದರೆ, ಸಾಮಾನ್ಯ ವರ್ಗ ಸೇರಿದಂತೆ ಎಲ್ಲಾ ಮೀಸಲಾತಿ ವಿಭಾಗಗಳಲ್ಲಿ ಆಯಾ ವರ್ಗದ ಮಹಿಳೆಯರಿಗೆ ಶೇಕಡಾ 50ರಷ್ಟು ಸ್ಥಾನಗಳನ್ನು (50% Women Reservation) ಮೀಸಲಿಡಲಾಗಿದೆ.

ಇದನ್ನೂ ಓದಿ: Karnataka E-Swathu: ಅರ್ಜಿ ಸಲ್ಲಿಸಿದ 22 ದಿನಗಳಲ್ಲೇ ಸಿಗುತ್ತೆ ಇ ಸ್ವತ್ತು | ಸರ್ಕಾರದ ಮಹತ್ವದ ಬದಲಾವಣೆ

ವರ್ಗವಾರು ಮೀಸಲಾತಿ ವಿವರ (Category-wise Reservation)

ಅಕ್ಟೋಬರ್ 8ರಂದು ಸರ್ಕಾರ ಕರಡು ಅಧಿಸೂಚನೆ ಹೊರಡಿಸಿ, ಸಾರ್ವಜನಿಕರ ಆಕ್ಷೇಪಣೆಗೆ ಕಾಲಾವಕಾಶ ನೀಡಿತ್ತು. ಈ ಅವಧಿಯಲ್ಲಿ ಸುಮಾರು 2,900ಕ್ಕೂ ಹೆಚ್ಚು ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದವು.

ಅವುಗಳನ್ನೆಲ್ಲಾ ಕೂಲಂಕಷವಾಗಿ ಪರಿಶೀಲಿಸಿದ ಬಳಿಕ, ಮೀಸಲಾತಿಯ ಒಟ್ಟು ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಮಾಡದೆ ಕ್ಷೇತ್ರಗಳನ್ನು ಮಾತ್ರ ಅದಲು-ಬದಲು ಮಾಡಲಾಗಿದೆ.

ಇದನ್ನೂ ಓದಿ: 10 Lakh New BPL Ration Card: 10 ಲಕ್ಷ ಹೊಸ ರೇಷನ್ ಕಾರ್ಡ್ ವಿತರಣೆ | ಆಹಾರ ಸಚಿವರ ಸೂಚನೆ

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿಗಳ ವರ್ಗವಾರು ಮೀಸಲಾತಿ ಪಟ್ಟಿ (Reservation List) ಹೀಗಿದೆ:

ವರ್ಗ (Category) ಜಿಲ್ಲಾ ಪಂಚಾಯಿತಿ (1,101 ಕ್ಷೇತ್ರಗಳು) ತಾಲ್ಲೂಕು ಪಂಚಾಯಿತಿ (3,580 ಸ್ಥಾನಗಳು)
ಪರಿಶಿಷ್ಟ ಜಾತಿ (SC) 218 715
ಪರಿಶಿಷ್ಟ ಪಂಗಡ (ST) 101 389
ಹಿಂದುಳಿದ ವರ್ಗ ಎ (OBC-A) 178 498
ಹಿಂದುಳಿದ ವರ್ಗ ಬಿ (OBC-B) 42 108
ಸಾಮಾನ್ಯ ವರ್ಗ (General) 562 1,870

 

ಇದನ್ನೂ ಓದಿ: BPL Ration Card: ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

Karnataka Zilla Taluk Panchayat Election
Karnataka Zilla Taluk Panchayat Election

ಬೆಂಗಳೂರು ನಗರ ಜಿಲ್ಲೆಗೆ ಸದ್ಯಕ್ಕಿಲ್ಲ ಚುನಾವಣೆ

ಈ ಅಂತಿಮ ಪಟ್ಟಿಯಲ್ಲಿ ಬೆಂಗಳೂರು ನಗರ ಜಿಲ್ಲೆಯನ್ನು ಕೈಬಿಡಲಾಗಿದೆ. ಬೆಂಗಳೂರು ನಗರ ವ್ಯಾಪ್ತಿಯ 28 ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹಾಗೂ ಬೆಂಗಳೂರು ಉತ್ತರ, ಪೂರ್ವ, ಯಲಹಂಕ, ದಕ್ಷಿಣ ಮತ್ತು ಆನೇಕಲ್ ತಾಲ್ಲೂಕುಗಳ 76 ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಅಧಿಸೂಚನೆ ಇನ್ನೂ ಪ್ರಕಟವಾಗಿಲ್ಲ.

ಇದನ್ನೂ ಓದಿ: Kaaludari Bandidaari: ಜಮೀನಿನ ಕಾಲುದಾರಿ, ಬಂಡಿದಾರಿ ಮುಚ್ಚಿದ್ದಾರೆಯೇ? ಇದು ಅಪರಾಧ, ದೂರು ನೀಡಿದರೆ ಆಗಲಿದೆ ತೆರವು

ಚುನಾವಣೆ ಇಷ್ಟು ವರ್ಷ ವಿಳಂಬವಾಗಿದ್ದೇಕೆ?

ಕಳೆದ ಬಾರಿ 2016ರ ಏಪ್ರಿಲ್‌ನಲ್ಲಿ ಈ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದಿತ್ತು. ಆ ಸದಸ್ಯರ ಅಧಿಕಾರಾವಧಿ 2021ರ ಏಪ್ರಿಲ್‌ಗೆ ಮುಕ್ತಾಯಗೊಂಡಿತ್ತು.

ಆದರೆ, ಹಲವು ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೇರಿಸಿದ್ದು ಮತ್ತು ಕೆಲವು ಗ್ರಾಮೀಣ ಭಾಗಗಳು ನಗರಸಭೆ, ಪುರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆಯಾಗಿದ್ದರಿಂದ ಕ್ಷೇತ್ರ ಮರುವಿಂಗಡಣೆ (Delimitation) ಮಾಡುವುದು ಅನಿವಾರ್ಯವಾಗಿತ್ತು. ಈ ತಾಂತ್ರಿಕ ಕಾರಣಗಳಿಂದ ಚುನಾವಣೆ ಮುಂದೂಡಲ್ಪಟ್ಟಿತ್ತು.

ಇದನ್ನೂ ಓದಿ: HDFC Bank Express Personal Loan: 10 ಸೆಕೆಂಡಿನಲ್ಲಿ ಲೋನ್ | ಎಚ್‌ಡಿಎಫ್‌ಸಿ ಬ್ಯಾಂಕ್ ಎಕ್ಸ್ಪ್ರೆಸ್ ಪರ್ಸನಲ್ ಲೋನ್ ಟಾಪ್‌ಅಪ್ ಅರ್ಜಿ ಮಾಹಿತಿ

ಬ್ಯಾಲೆಟ್ ಪೇಪರ್ ಮೂಲಕವೇ ಮತದಾನ (Ballot Paper Voting)

ಮೀಸಲಾತಿ ಪ್ರಕಟಿಸುವ ಮೂಲಕ ಸರ್ಕಾರ ತನ್ನ ಜವಾಬ್ದಾರಿಯನ್ನು ಪೂರ್ಣಗೊಳಿಸಿದೆ. ನಿಯಮದ ಪ್ರಕಾರ, ಅಂತಿಮ ಅಧಿಸೂಚನೆ ಹೊರಬಿದ್ದ 45 ದಿನಗಳ ಒಳಗೆ ರಾಜ್ಯ ಚುನಾವಣಾ ಆಯೋಗವು (State Election Commission) ಚುನಾವಣೆ ನಡೆಸಬೇಕಿದೆ. ಆಯೋಗವು ಕ್ಷೇತ್ರವಾರು ಮತದಾರರ ಪಟ್ಟಿಯನ್ನು ಸಿದ್ಧಪಡಿಸಿ, ಶೀಘ್ರದಲ್ಲೇ ವೇಳಾಪಟ್ಟಿ ಪ್ರಕಟಿಸಲಿದೆ.

ಇದನ್ನೂ ಓದಿ: Canara Bank Personal Loan: ಕಡಿಮೆ ಬಡ್ಡಿದರದಲ್ಲಿ 10 ಲಕ್ಷ ರೂ.ವರೆಗೆ ಕೆನರಾ ಬ್ಯಾಂಕ್ ಪರ್ಸನಲ್ ಲೋನ್ | ಅರ್ಜಿ ಹಾಕುವುದು ಹೇಗೆ?

ಈ ಬಾರಿಯ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳನ್ನು ವಿದ್ಯುನ್ಮಾನ ಮತಯಂತ್ರದ ಬದಲಾಗಿ ಬ್ಯಾಲೆಟ್ ಪೇಪರ್ (ಮತಪತ್ರ) ಮೂಲಕವೇ ನಡೆಸಲಾಗುವುದು ಎಂದು ಸಚಿವರು ಖಚಿತಪಡಿಸಿದ್ದಾರೆ. ಆಸಕ್ತರು ರಾಜ್ಯ ಸರ್ಕಾರದ ಅಧಿಕೃತ ಗೆಜೆಟ್ ವೆಬ್‌ಸೈಟ್ (erajyapatra.karnataka.gov.in) ಮೂಲಕ ತಮ್ಮ ಕ್ಷೇತ್ರದ ಮೀಸಲಾತಿ ವಿವರಗಳನ್ನು ಪರಿಶೀಲಿಸಬಹುದು.

ಅಂತಿಮ ಮೀಸಲಾತಿ ಪಟ್ಟಿಯ ಎಲ್ಲ ಅಧಿಸೂಚನೆಗಳ ಲಿಂಕ್: Download

Google Pay Instant Personal Loan: ₹9 ಲಕ್ಷವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…

WhatsApp Group Join Now
Telegram Group Join Now
error: Content is protected !!