Gruha Lakshmi 33rd Installment: ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಬಿಡುಗಡೆಯಾಗಿದ್ದು, ನಿಮ್ಮ ಖಾತೆಗೆ ಹಣ ಜಮೆಯಾಗಿದೆಯೇ ಎಂದು ಮೊಬೈಲ್‌ನಲ್ಲೇ ಚೆಕ್ ಮಾಡುವ ಸರಳ ವಿಧಾನ ಇಲ್ಲಿದೆ. ಹಣ ಬರದಿದ್ದರೆ ಏನು ಮಾಡಬೇಕು ಎಂಬ ಸಂಪೂರ್ಣ ಮಾಹಿತಿ…
ಗೃಹಲಕ್ಷ್ಮಿ ಯೋಜನೆಯ ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರಿಗೆ ಕೊನೆಗೂ ಖುಷಿಯ ಸುದ್ದಿ ಸಿಕ್ಕಿದೆ. ಮೂರು ತಿಂಗಳ ಸುದೀರ್ಘ ಕಾಯುವಿಕೆಯ ನಂತರ, ಇದೀಗ 33ನೇ ಕಂತಿನ ಹಣ (Gruha Lakshmi 33rd Installment) ಮನೆಯೊಡತಿಯರ ಬ್ಯಾಂಕ್ ಖಾತೆಗಳಿಗೆ ಜಮೆಯಾಗಲು ಶುರುವಾಗಿದೆ.
ಇದನ್ನೂ ಓದಿ: Karnataka Hingaru Rain: ಕರ್ನಾಟಕದಲ್ಲಿ ಅಕ್ಟೋಬರ್ 15ರಿಂದ ಹಿಂಗಾರು ಮಳೆ ಆರಂಭ | ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಕಳೆದ ಎರಡು ದಿನಗಳ ಹಿಂದೆಯೇ ಸರ್ಕಾರದಿಂದ ಹಣ ಬಿಡುಗಡೆಯ ಪ್ರಕ್ರಿಯೆ (Gruha Lakshmi money credited) ಶುರುವಾಗಿದೆ. ಹೀಗಾಗಿ ಈಗಾಗಲೇ ಬಹಳಷ್ಟು ಮಹಿಳೆಯರ ಖಾತೆಗೆ ಹಣ ಬಂದು ಸೇರಿದೆ.
ಒಂದು ವೇಳೆ ನಿಮ್ಮ ಖಾತೆಗೆ ಇನ್ನೂ ಹಣ ಬಂದಿಲ್ಲ ಎಂದರೆ ಆತಂಕ ಪಡುವ ಅಗತ್ಯವಿಲ್ಲ. ಇವತ್ತಿನೊಳಗೆ ಬಾಕಿ ಉಳಿದವರ ಖಾತೆಗೂ ಹಣ ಜಮೆಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: Karnataka E-Swathu: ಅರ್ಜಿ ಸಲ್ಲಿಸಿದ 22 ದಿನಗಳಲ್ಲೇ ಸಿಗುತ್ತೆ ಇ ಸ್ವತ್ತು | ಸರ್ಕಾರದ ಮಹತ್ವದ ಬದಲಾವಣೆ
ಮೊಬೈಲ್‌ನಲ್ಲೇ ಹಣ ಚೆಕ್ ಮಾಡುವುದು ಹೇಗೆ?
ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂದು ತಿಳಿಯಲು ಬ್ಯಾಂಕ್‌ಗೆ ಅಲೆಯಬೇಕಿಲ್ಲ. ನಿಮ್ಮ ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ‘ಡಿಬಿಟಿ ಕರ್ನಾಟಕ’ (DBT Karnataka) ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಆಪ್ ಓಪನ್ ಮಾಡಿ ನಿಮ್ಮ ಆಧಾರ್ ಕಾರ್ಡ್ ನಂಬರ್ ನಮೂದಿಸಿ ‘ಗೆಟ್ ಓಟಿಪಿ’ ಮೇಲೆ ಕ್ಲಿಕ್ ಮಾಡಿ. ಆಗ ನಿಮ್ಮ ಮೊಬೈಲ್‌ಗೆ ಬರುವ ಓಟಿಪಿ ಸಂಖ್ಯೆಯನ್ನು ಹಾಕಿ, ‘ಪೇಮೆಂಟ್ ಸ್ಟೇಟಸ್’ ಮೇಲೆ ಕ್ಲಿಕ್ ಮಾಡಬೇಕು.
ಅಲ್ಲಿ ಗೃಹಲಕ್ಷ್ಮಿ ಆಯ್ಕೆಯನ್ನು ಒತ್ತಿದರೆ, ಇಲ್ಲಿಯವರೆಗೆ ನಿಮಗೆ ಎಷ್ಟು ಹಣ ಬಂದಿದೆ ಎಂಬ ಸಂಪೂರ್ಣ ವಿವರ ನಿಮ್ಮ ಮುಂದಿರುತ್ತದೆ.
ಇದನ್ನೂ ಓದಿ: Karnataka ZP TP Elections: ರಾಜ್ಯದಲ್ಲಿ ಜಿಪಂ, ತಾಪಂ ಚುನಾವಣೆ ಡೇಟ್ ಫಿಕ್ಸ್: 2027ರ ಜನವರಿ 15ರೊಳಗೆ ಮತದಾನ!
ಇಲ್ಲಿಯವರೆಗೆ ಒಟ್ಟು ಎಷ್ಟು ಹಣ ಬಂದಿದೆ?
ಗೃಹಲಕ್ಷ್ಮಿ ಯೋಜನೆ ಶುರುವಾದಾಗಿನಿಂದ ಇಲ್ಲಿಯವರೆಗೆ ಒಟ್ಟು 33 ಕಂತುಗಳ ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಅಂದರೆ, ಇದುವರೆಗೆ ಪ್ರತಿ ಫಲಾನುಭವಿಯ ಖಾತೆಗೆ ಒಟ್ಟಾರೆ 66,000 ರೂಪಾಯಿಗಳು ಜಮೆಯಾದಂತಾಗಿದೆ.
ಗೃಹಲಕ್ಷ್ಮಿ ಯೋಜನೆಗೆ ಬರಲಿದ್ಯಾ ಹೊಸ ರೂಲ್ಸ್?
ಈ ನಡುವೆ ಗೃಹಲಕ್ಷ್ಮಿ ಯೋಜನೆಗೆ ಹೊಸ ನಿಯಮವೊಂದನ್ನು (Gruha Lakshmi new rules) ತರುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ.
ಮೃತಪಟ್ಟ ಮಹಿಳೆಯರ ಖಾತೆಗೂ ಹಣ ಹೋಗುತ್ತಿರುವುದನ್ನು ತಪ್ಪಿಸಲು, ಇನ್ನು ಮುಂದೆ ಪ್ರತಿ ವರ್ಷ ‘ಜೀವಿತ ಪ್ರಮಾಣ ಪತ್ರ’ ಸಲ್ಲಿಸುವುದನ್ನು ಕಡ್ಡಾಯ ಮಾಡುವ ಸಾಧ್ಯತೆಯಿದೆ.
ಹಣ ಬರದಿದ್ದರೆ ಏನು ಮಾಡಬೇಕು? ಇಲ್ಲಿದೆ ಸಹಾಯವಾಣಿ
ಒಂದು ವೇಳೆ ನಿಮ್ಮ ಬ್ಯಾಂಕ್ ಖಾತೆಗೆ ಇ-ಕೆವೈಸಿ ಮಾಡಿಸದಿದ್ದರೆ ಅಥವಾ ಬೇರೆ ಏನಾದರೂ ತಾಂತ್ರಿಕ ದೋಷಗಳಿದ್ದರೆ ಹಣ ಬರುವುದು ನಿಲ್ಲುತ್ತದೆ. ಇಂತಹ ಸಮಯದಲ್ಲಿ ಗೊಂದಲ ಬೇಡ.
ನೇರವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಚಿತ ಸಹಾಯವಾಣಿ (Gruha Lakshmi helpline number) 181 ಸಂಖ್ಯೆಗೆ ಕರೆ ಮಾಡಿ ನೀವು ನಿಖರವಾದ ಮಾಹಿತಿಯನ್ನು ಪಡೆಯಬಹುದು.