Karnataka Pension Update: 1.20 ಲಕ್ಷ ರೂ. ಆದಾಯ ಮಿತಿಯೊಳಗಿನ ಅರ್ಹರಿಗೆ ತಕ್ಷಣ ಪಿಂಚಣಿ ವಿತರಿಸಲು ಜಿಲ್ಲಾಧಿಕಾರಿಗಳಿಗೆ ಕಂದಾಯ ಇಲಾಖೆ ಖಡಕ್ ಸೂಚನೆ ನೀಡಿದೆ. ವಂಚಿತರ ಪಟ್ಟಿ ಮತ್ತು ಸಂಪೂರ್ಣ ವಿವರ ಇಲ್ಲಿದೆ…
ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ವೃದ್ಧರು, ವಿಧವೆಯರು, ಅಂಗವಿಕಲರು ಸೇರಿದಂತೆ ಪಿಂಚಣಿ ಪಡೆಯುತ್ತಿದ್ದ ಜನರಿಗೆ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ.
ಸಾಮಾಜಿಕ ಭದ್ರತಾ ಯೋಜನೆಗಳ (Social Security Schemes) ಅಡಿಯಲ್ಲಿ ಪಿಂಚಣಿ ಪಡೆಯುತ್ತಿದ್ದ ಸುಮಾರು 9 ಲಕ್ಷಕ್ಕೂ ಅಧಿಕ ಜನರಿಗೆ ತಕ್ಷಣವೇ ಪಿಂಚಣಿ (Pension) ಹಣವನ್ನು ಬಿಡುಗಡೆ ಮಾಡುವಂತೆ ಕಂದಾಯ ಇಲಾಖೆಯು ಎಲ್ಲ ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.
ಇದನ್ನೂ ಓದಿ: Karnataka ZP TP Elections: ರಾಜ್ಯದಲ್ಲಿ ಜಿಪಂ, ತಾಪಂ ಚುನಾವಣೆ ಡೇಟ್ ಫಿಕ್ಸ್: 2027ರ ಜನವರಿ 15ರೊಳಗೆ ಮತದಾನ!
ಏನಿದು ಸಮಸ್ಯೆ?
ಈ ಹಿಂದೆ ಪಿಂಚಣಿ ಪಡೆಯಲು ವಾರ್ಷಿಕ ಆದಾಯ ಮಿತಿಯನ್ನು (Annual Income Limit) 32,000 ರೂಪಾಯಿಗಳಿಗೆ ನಿಗದಿಪಡಿಸಲಾಗಿತ್ತು.
ಇತ್ತೀಚೆಗೆ ‘ಸಂಯೋಜನೆ’ ಮೊಬೈಲ್ ಆ್ಯಪ್ (Samyojane Mobile App) ಮೂಲಕ ಫಲಾನುಭವಿಗಳ ಪರಿಶೀಲನೆ ನಡೆಸಿದಾಗ, ಅನೇಕರ ಆದಾಯ 32 ಸಾವಿರ ರೂ. ಗಿಂತ ಹೆಚ್ಚಿರುವುದು ಕಂಡುಬಂದಿತ್ತು. ಹೀಗಾಗಿ, ದಿಢೀರನೆ ಲಕ್ಷಾಂತರ ಜನರ ಪಿಂಚಣಿಯನ್ನು ಸರ್ಕಾರ ಕಡಿತಗೊಳಿಸಿತ್ತು.
ಆಕ್ರೋಶಕ್ಕೆ ಮಣಿದ ಸರ್ಕಾರ
ಸರ್ಕಾರದ ಈ ಕ್ರಮದ ವಿರುದ್ಧ ರಾಜ್ಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ವೃದ್ಧರು, ವಿಧವೆಯರು ಹಾಗೂ ವಿಕಲಚೇತನರು ತೀವ್ರ ಪರದಾಡುವಂತಾಗಿತ್ತು.
ಜನರ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರವು, ಕಳೆದ ಆಗಸ್ಟ್ 18ರಂದು ಆದಾಯ ಮಿತಿಯನ್ನು 32,000 ರೂ. ಗಳಿಂದ 1.20 ಲಕ್ಷ ರೂ. ಗಳಿಗೆ (1.20 Lakh Income Limit) ಏರಿಕೆ ಮಾಡಿ ಆದೇಶ ಹೊರಡಿಸಿತ್ತು.
ಇದನ್ನೂ ಓದಿ: Hasu Emme Kharidige Subsidy: ಗ್ರಾಮೀಣ ಮಹಿಳೆಯರಿಗೆ ಬಂಪರ್ ಗಿಫ್ಟ್: ಹಸು ಮತ್ತು ಎಮ್ಮೆ ಖರೀದಿಗೆ ₹18,750 ಧನಸಹಾಯ

ಆದೇಶ ಬಂದರೂ ಅಧಿಕಾರಿಗಳ ನಿರ್ಲಕ್ಷ್ಯ!
ಸರ್ಕಾರದ ಆದೇಶದನ್ವಯ 1.20 ಲಕ್ಷ ರೂ. ಆದಾಯ ಮಿತಿಯೊಳಗಿನ ಒಟ್ಟು 9,07,169 ಫಲಾನುಭವಿಗಳಿಗೆ (Pension Beneficiaries) ಮರಳಿ ಪಿಂಚಣಿ ಸಿಗಬೇಕಿತ್ತು.
ಆದರೆ, ತಹಸೀಲ್ದಾರ್‌ಗಳು (Tahsildars) ಈ ಬಗ್ಗೆ ತ್ವರಿತ ಕ್ರಮ ಕೈಗೊಳ್ಳದೆ ತೀವ್ರ ನಿರ್ಲಕ್ಷ್ಯ ವಹಿಸಿದ್ದರು. ಇದರಿಂದಾಗಿ ಫಲಾನುಭವಿಗಳಿಗೆ ಸರಿಯಾಗಿ ಹಣ ತಲುಪಿರಲಿಲ್ಲ.
ಪ್ರಜಾಸೇವಾ ಅಭಿಯಾನದಲ್ಲಿ ದೂರುಗಳ ಸುರಿಮಳೆ
ಇತ್ತೀಚೆಗೆ ನಡೆದ ‘ಪ್ರಜಾಸೇವಾ ಅಭಿಯಾನ’ದಲ್ಲಿ (Praja Seva Abhiyan) ಈ ಬಗ್ಗೆ ನೂರಾರು ದೂರುಗಳು ಸಲ್ಲಿಕೆಯಾಗಿದ್ದವು. ಅಧಿಕಾರಿಗಳ ಈ ವಿಳಂಬ ನೀತಿಯಿಂದ ಸರ್ಕಾರಕ್ಕೆ ತೀವ್ರ ಮುಜುಗರ ಉಂಟಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಕಂದಾಯ ಇಲಾಖೆ ಆಯುಕ್ತರು, ಇದೀಗ ಎಲ್ಲ ಜಿಲ್ಲಾಧಿಕಾರಿಗಳಿಗೆ (District Commissioners – DC) ತುರ್ತು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: 10 Lakh New BPL Ration Card: 10 ಲಕ್ಷ ಹೊಸ ರೇಷನ್ ಕಾರ್ಡ್ ವಿತರಣೆ | ಆಹಾರ ಸಚಿವರ ಸೂಚನೆ
ಬಿಎಂಎಸ್ ತಂತ್ರಾಂಶ ಬಳಕೆಗೆ ಸೂಚನೆ
ಬಿಎಂಎಸ್ ತಂತ್ರಾಂಶದ (BMS Software) ಮೂಲಕ ನಿಯಮಾನುಸಾರ ಎಲ್ಲ ಅರ್ಹ ಫಲಾನುಭವಿಗಳಿಗೂ ತಕ್ಷಣವೇ ಪಿಂಚಣಿ ಮುಂದುವರಿಸಲು ತಹಸೀಲ್ದಾರ್‌ಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡುವಂತೆ ಆಯುಕ್ತರು ಡಿಸಿಗಳಿಗೆ ಸೂಚಿಸಿದ್ದಾರೆ. ಇದರಿಂದಾಗಿ ತಿಂಗಳುಗಳಿಂದ ಹಣವಿಲ್ಲದೆ ಪರದಾಡುತ್ತಿದ್ದ ಲಕ್ಷಾಂತರ ಜನರಿಗೆ ನಿರಾಳವಾದಂತಾಗಿದೆ.
ಪಿಂಚಣಿ ವಂಚಿತರ ಜಿಲ್ಲಾವಾರು ಪಟ್ಟಿ (Pension Deprived List)
ರಾಜ್ಯದ 31 ಜಿಲ್ಲೆಗಳಿಂದ ಒಟ್ಟು 9,07,169 ಮಂದಿ ಪಿಂಚಣಿಯಿಂದ ವಂಚಿತರಾಗಿದ್ದರು. ಆ ಪೈಕಿ ಅತಿ ಹೆಚ್ಚು ಬಾಧಿತರಾದ ಪ್ರಮುಖ 5 ಜಿಲ್ಲೆಗಳ ವಿವರ ಇಲ್ಲಿದೆ:
- ಮೈಸೂರು (Mysuru): 76,463
- ಬೀದರ್ (Bidar): 64,101
- ಬೆಂಗಳೂರು ನಗರ (Bengaluru Urban): 59,342
- ಕಲಬುರಗಿ (Kalaburagi): 58,153
- ಕೋಲಾರ (Kolar): 54,154
ಬಡವರ ಪಾಲಿನ ಆಸರೆಯಾಗಿರುವ ಈ ಪಿಂಚಣಿ ಹಣವು (Monthly Pension) ಯಾವುದೇ ಅಡೆತಡೆಯಿಲ್ಲದೆ, ಕೆಂಪುಪಟ್ಟಿ ಶಾಹಿಗೆ ಸಿಲುಕದೆ ಶೀಘ್ರದಲ್ಲೇ ಫಲಾನುಭವಿಗಳ ಕೈಸೇರಲಿ ಎಂಬುದು ಎಲ್ಲರ ಆಶಯವಾಗಿದೆ. ಸಂಬAಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತುಕೊಂಡು ಬಡವರಿಗೆ ತ್ವರಿತವಾಗಿ ಸ್ಪಂದಿಸಬೇಕಿದೆ.