Karnataka E-Swathu: ಗ್ರಾಮೀಣ ಭಾಗದ ಆಸ್ತಿ ಮಾಲೀಕರಿಗೆ ಸಿಹಿಸುದ್ದಿ! ಕೇವಲ 22 ದಿನಗಳಲ್ಲಿ ಇ-ಸ್ವತ್ತು ಪಡೆಯಿರಿ. ಅಧಿಕಾರಿಗಳಿಂದ ವಿಳಂಬವಾದರೆ ಸ್ವಯಂಚಾಲಿತ ಅನುಮೋದನೆ ಸಿಗಲಿದೆ. ಆಸ್ತಿ ಖಾತೆ, ಗ್ರಾಮ ಠಾಣಾ ಹಾಗೂ ಹೊಸ ನಿಯಮಗಳ ಸಂಪೂರ್ಣ ಮಾಹಿತಿ ಇಲ್ಲಿದೆ…
ಗ್ರಾಮೀಣ ಭಾಗದಲ್ಲಿ ಸ್ವಂತ ಮನೆ ಅಥವಾ ನಿವೇಶನ ಹೊಂದಿರುವವರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ. ಪಂಚಾಯಿತಿ ಕಚೇರಿಗಳಲ್ಲಿ ಇ-ಸ್ವತ್ತು (E-Swathu) ಮತ್ತು ಖಾತೆ (Khata) ಪಡೆಯಲು ಅಲೆದಾಡುವುದಕ್ಕೆ ಇನ್ನು ಮುಂದೆ ಬ್ರೇಕ್ ಬೀಳಲಿದೆ.
ಆಸ್ತಿ ನೋಂದಣಿ ಹಾಗೂ ಖಾತಾ ಬದಲಾವಣೆಯಲ್ಲಿ ಆಗುತ್ತಿದ್ದ ವಿಳಂಬವನ್ನು ತಪ್ಪಿಸಲು ಸರ್ಕಾರ ಐತಿಹಾಸಿಕ ನಿಯಮಗಳನ್ನು ಜಾರಿಗೆ ತಂದಿದ್ದು, ಇನ್ನು ಕೇವಲ 22 ಕೆಲಸದ ದಿನಗಳಲ್ಲಿ ಇ-ಸ್ವತ್ತು ಪ್ರಮಾಣಪತ್ರ ನಿಮ್ಮ ಕೈ ಸೇರಲಿದೆ.
ಸ್ವಯಂಚಾಲಿತವಾಗಿ ಅನುಮೋದನೆ
ಈ ಹೊಸ ನಿಯಮಗಳು ಅಕ್ಟೋಬರ್ 8, 2026 ರಿಂದಲೇ ಜಾರಿಗೆ ಬಂದಿವೆ. ಪಂಚಾಯತ್ ರಾಜ್ ಇಲಾಖೆಯ (Panchayat Raj Department) ಹೊಸ ಅಧಿಸೂಚನೆ ಪ್ರಕಾರ, ನಿಗದಿತ 22 ದಿನಗಳೊಳಗೆ ಅಧಿಕಾರಿಗಳು ಅರ್ಜಿಯನ್ನು ವಿಲೇವಾರಿ ಮಾಡಬೇಕು.
ಒಂದು ವೇಳೆ ಅರ್ಜಿ ವಿಲೇವಾರಿ ಮಾಡದಿದ್ದರೆ, ತಂತ್ರಾಂಶವೇ (Software) ಸ್ವಯಂಚಾಲಿತವಾಗಿ ಅನುಮೋದನೆ (Auto-Approval) ನೀಡಲಿದೆ. ಇದರಿಂದ ಸಾರ್ವಜನಿಕರು ಅಧಿಕಾರಿಗಳ ಹಿಂದೆ ದಿನಗಟ್ಟಲೆ ತಿರುಗುವುದು ತಪ್ಪಲಿದೆ.
ಇದನ್ನೂ ಓದಿ: Karnataka ZP TP Elections: ರಾಜ್ಯದಲ್ಲಿ ಜಿಪಂ, ತಾಪಂ ಚುನಾವಣೆ ಡೇಟ್ ಫಿಕ್ಸ್: 2027ರ ಜನವರಿ 15ರೊಳಗೆ ಮತದಾನ!
ಪ್ರಕ್ರಿಯೆ ಹೇಗೆ ನಡೆಯುತ್ತದೆ? (Process Flow)
ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ತಕ್ಷಣ, ಸಾರ್ವಜನಿಕ ಆಕ್ಷೇಪಣೆಗಾಗಿ (Public Objections) 7 ದಿನಗಳ ನೋಟಿಸ್ ಸ್ವಯಂಚಾಲಿತವಾಗಿ ಪ್ರಕಟವಾಗುತ್ತದೆ. ಬಂದ ಆಕ್ಷೇಪಣೆಗಳನ್ನು 5 ದಿನಗಳಲ್ಲಿ ಪರಿಶೀಲಿಸಿ, ಸ್ಥಳ ಮಹಜರು (Spot Inspection) ಮಾಡಿ ಪಿಡಿಒ ವರದಿ ಸಲ್ಲಿಸಬೇಕು.
ನಂತರದ 4 ಕೆಲಸದ ದಿನಗಳಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು (Taluk Panchayat EO) ದಾಖಲೆಗಳನ್ನು ಪರಿಶೀಲಿಸಬೇಕು. ಒಂದು ವೇಳೆ ಅವರು ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕು.
ನಿರ್ಧಾರ ತೆಗೆದುಕೊಳ್ಳದಿದ್ದರೆ, ಸಿಸ್ಟಮ್ ಅದಾಗಿಯೇ ಪರಿಶೀಲನೆ ಮುಗಿದಿದೆ ಎಂದು ಪರಿಗಣಿಸುತ್ತದೆ. ಅಂತಿಮವಾಗಿ 2 ದಿನಗಳೊಳಗೆ ಪಿಡಿಒ ಡಿಜಿಟಲ್ ಸಹಿ (Digital Signature) ಮಾಡಬೇಕು. ಇಲ್ಲದಿದ್ದರೂ ತಂತ್ರಾಂಶದಿಂದಲೇ ಸ್ವಯಂಚಾಲಿತ ಅನುಮೋದನೆ ಸಿಗುತ್ತದೆ.

ಇದನ್ನೂ ಓದಿ: Hasu Emme Kharidige Subsidy: ಗ್ರಾಮೀಣ ಮಹಿಳೆಯರಿಗೆ ಬಂಪರ್ ಗಿಫ್ಟ್: ಹಸು ಮತ್ತು ಎಮ್ಮೆ ಖರೀದಿಗೆ ₹18,750 ಧನಸಹಾಯ
ವಿವಿಧ ಆಸ್ತಿಗಳಿಗೆ ಹೊಸ ನಿಯಮಗಳು (Property Guidelines)
ಗ್ರಾಮ ಠಾಣಾ (Grama Thana) ವ್ಯಾಪ್ತಿಯಲ್ಲಿರುವ, ನೋಂದಾಯಿತ ದಾಖಲೆಗಳಿಲ್ಲದ ಕಟ್ಟಡಗಳಿಗೆ ನಮೂನೆ 11ಎ (Form 11A) ಪಡೆಯಲು ಕೆಲವು ಷರತ್ತುಗಳಿವೆ.
ಈ ಕಟ್ಟಡಗಳು 2025ರ ಏಪ್ರಿಲ್ 7ಕ್ಕೆ ಮುನ್ನ ನಿರ್ಮಾಣವಾಗಿರಬೇಕು ಮತ್ತು 4,000 ಚದರ ಅಡಿಗಿಂತ (Sq ft) ದೊಡ್ಡದಿರಬಾರದು. ಇದಕ್ಕೆ ತಹಸೀಲ್ದಾರ್ ನಕ್ಷೆ, ಕರ ನಿರ್ಧರಣಾ ವಹಿ, ವಿದ್ಯುತ್ ಬಿಲ್ ಹಾಗೂ ಸ್ಥಳ ಮಹಜರ್ ವರದಿ ಕಡ್ಡಾಯ.
ಕೃಷಿ ಜಮೀನಿನಲ್ಲಿ ಮನೆ
ಕೃಷಿ ಜಮೀನಿನಲ್ಲಿ (Agricultural Land) ಮನೆ ಕಟ್ಟಿಕೊಂಡಿದ್ದರೆ ಅಥವಾ ಕೃಷಿ ಸಲಕರಣೆ ಇಡಲು ಶೆಡ್ ನಿರ್ಮಿಸಿದ್ದರೆ, ಸೂಕ್ತ ದಾಖಲೆ ನೀಡಿ ನಮೂನೆ 11ಬಿ (Form 11B) ಪಡೆಯಬಹುದು.
ವಸತಿ ಯೋಜನೆಗಳ ಅಡಿ ನಿರ್ಮಿಸಿದ ಕಟ್ಟಡಗಳಿಗೂ ನಿಯಮದಂತೆ ಇ-ಸ್ವತ್ತು ಸಿಗಲಿದ್ದು, ಫಲಾನುಭವಿಯ ಹೆಸರನ್ನು ‘ಅಧಿಭೋಗದಾರ’ ಎಂದು ನಮೂದಿಸಲಾಗುತ್ತದೆ.
ಅರಣ್ಯ ಹಕ್ಕು ಕಾಯ್ದೆ ಆಸ್ತಿಗಳಿಗೂ ಇ-ಸ್ವತ್ತು
ಅರಣ್ಯ ಹಕ್ಕು ಕಾಯ್ದೆ (Forest Rights Act) 2006ರ ಅಡಿ ಮಂಜೂರಾದ ಆಸ್ತಿಗಳಿಗೂ ಇ-ಸ್ವತ್ತು ನೀಡಲಾಗುತ್ತದೆ. ಆದರೆ ಈ ಆಸ್ತಿಗಳನ್ನು ಮಾರಾಟ ಮಾಡುವಂತಿಲ್ಲ.
ಇದು ಕೇವಲ ವಂಶಪಾರಂಪರ್ಯವಾಗಿ (Hereditary Rights) ಹಕ್ಕು ಹೊಂದಲು ಮಾತ್ರ ಸೀಮಿತ ಎಂದು ದಾಖಲೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗುತ್ತದೆ. ಭೂ ಮಂಜೂರಾತಿ ನಿಯಮಗಳಡಿ ಪಡೆದ ಮನೆಗಳಿಗೆ ನಿವೇಶನದ ಅಳತೆ 1,000 ಚದರ ಮೀಟರ್ ಅಥವಾ 10,763 ಚ. ಅಡಿ ಮೀರಬಾರದು.
ನಗರಾಭಿವೃದ್ಧಿ ಪ್ರಾಧಿಕಾರದಿಂದ (Urban Development Authority) ಅನುಮೋದನೆಗೊಂಡ ಬಡಾವಣೆಗಳಾದರೆ (Approved Layouts), ಭೂ ಪರಿವರ್ತನೆ ಆದೇಶ (Land Conversion Order), ಅನುಮೋದಿತ ನಕ್ಷೆ ಹಾಗೂ ನೋಂದಾಯಿತ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು.
ಇದನ್ನೂ ಓದಿ: 10 Lakh New BPL Ration Card: 10 ಲಕ್ಷ ಹೊಸ ರೇಷನ್ ಕಾರ್ಡ್ ವಿತರಣೆ | ಆಹಾರ ಸಚಿವರ ಸೂಚನೆ
ಅಧಿಕಾರಿಗಳಿಗೆ ದಂಡದ ಬಿಸಿ (Penalty for Officials)
ಯಾವುದೇ ಅಧಿಕಾರಿಗಳು ಸೇವಾ ಲೋಪ ಎಸಗಿದರೆ ಅಥವಾ ಬೇಕೆಂತಲೇ ಕಡತ ವಿಳಂಬ ಮಾಡಿ ಆಟೋ-ಅಪ್ರೂವಲ್‌ಗೆ ದಾರಿ ಮಾಡಿಕೊಟ್ಟರೆ, ಅವರ ವಿರುದ್ಧ ಕಠಿಣ ಶಿಸ್ತು ಕ್ರಮ (Disciplinary Action) ಜರುಗಿಸಲಾಗುತ್ತದೆ.
ನಿಯಮ ಮೀರಿ ಅಕ್ರಮವಾಗಿ ಖಾತೆ ನೀಡುವ ಅಧಿಕಾರಿಗಳಿಗೆ ದಂಡ ವಿಧಿಸಲು ತಾಲೂಕು ಇಒ ಅವರು ಆಯುಕ್ತರಿಗೆ ಶಿಫಾರಸು ಮಾಡಲಿದ್ದಾರೆ. ಅಕ್ರಮ ಕಂಡುಬಂದರೆ ನೀಡಲಾದ ಇ-ಸ್ವತ್ತನ್ನು ರದ್ದುಪಡಿಸುವ (Cancellation) ಅಧಿಕಾರವೂ ಇಲಾಖೆಗಿದೆ.