SSLC Prize Money Scheme 2026: ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳಿಗೆ ₹15,000 ಪ್ರೋತ್ಸಾಹಧನ! ಸರ್ಕಾರದಿಂದ ಅರ್ಜಿ ಆಹ್ವಾನ | ಇಲ್ಲಿದೆ ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now

SSLC Prize Money Scheme 2026: 2026ರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ₹15,000 ವರೆಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ…

2026ನೇ ಸಾಲಿನ ಎಸ್‌ಎಸ್‌ಎಲ್‌ಸಿ (SSLC Exam 2026) ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿಸುದ್ದಿ ದೊರೆತಿದೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನೀಡಲಾಗುವ ‘SSLC Prize Money Scheme 2026’ ಯೋಜನೆಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಜಾರಿಗೊಂಡಿರುವ ಈ ಯೋಜನೆಯಡಿ ಸಾವಿರಾರು ರೂಪಾಯಿ ನಗದು ಸಹಾಯಧನವನ್ನು ಸರ್ಕಾರ ನೀಡುತ್ತಿದೆ. ವಿಶೇಷವಾಗಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳಿಗೆ ಇದು ದೊಡ್ಡ ನೆರವಾಗಲಿದೆ.

ರಾಜ್ಯದ ಅನೇಕ ವಿದ್ಯಾರ್ಥಿಗಳು ಈಗಾಗಲೇ ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದು, ಈ ಬಾರಿ ಕೂಡ ಅರ್ಹ ಅಭ್ಯರ್ಥಿಗಳು ತಪ್ಪದೇ ಅರ್ಜಿ ಸಲ್ಲಿಸುವಂತೆ ಇಲಾಖೆ ಮನವಿ ಮಾಡಿದೆ.

ಇದನ್ನೂ ಓದಿ: BPL Card New Application: ಹೊಸ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿ ಯಾವಾಗ? ಮಹತ್ವದ ಮಾಹಿತಿ ಇಲ್ಲಿದೆ…

ಏನು ಈ SSLC Prize Money Scheme?

ಸಮಾಜ ಕಲ್ಯಾಣ ಇಲಾಖೆ (Department of Social Welfare) ವತಿಯಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳ ಶಿಕ್ಷಣಾಭಿವೃದ್ಧಿಗಾಗಿ ಜಾರಿಗೊಳಿಸಲಾದ ಪ್ರಮುಖ ಯೋಜನೆಯೇ SSLC Prize Money Scheme.

SSLC ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿಯೇ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಸರ್ಕಾರ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುತ್ತದೆ.

ಇದನ್ನೂ ಓದಿ: Aadhaar Update for Children: 5 ರಿಂದ 17 ವರ್ಷದ ಮಕ್ಕಳ ಆಧಾರ್ ಅಪ್‌ಡೇಟ್ ಕಡ್ಡಾಯ | ಪೋಷಕರು ಗಮನಿಸಲೇಬೇಕಾದ ಮಹತ್ವದ ಮಾಹಿತಿ

ಎಷ್ಟು ಪ್ರೋತ್ಸಾಹಧನ ಸಿಗಲಿದೆ?

ವಿದ್ಯಾರ್ಥಿಗಳು ಪಡೆದಿರುವ ಅಂಕಗಳ (Percentage) ಆಧಾರದ ಮೇಲೆ ಪ್ರೋತ್ಸಾಹಧನದ ಮೊತ್ತ ನಿಗದಿಪಡಿಸಲಾಗಿದೆ. ಅಂಕಗಳಿಗೆ ಅನುಗುಣವಾಗಿ ಸಿಗುವ ಮೊತ್ತ ಹೀಗಿದೆ:

  • 60% ರಿಂದ 74.99% ಅಂಕ ಪಡೆದ ವಿದ್ಯಾರ್ಥಿಗಳಿಗೆ ₹7,000 ಪ್ರೋತ್ಸಾಹಧನ ನೀಡಲಾಗುತ್ತದೆ.
  • 75% ಮತ್ತು ಅದಕ್ಕಿಂತ ಹೆಚ್ಚು ಅಂಕ ಪಡೆದವರಿಗೆ ₹15,000 ಪ್ರೋತ್ಸಾಹಧನ ನೀಡಲಾಗುತ್ತದೆ.
  • ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ (District Topper) ₹1,00,000 ವಿಶೇಷ ಬಹುಮಾನ ನೀಡಲಾಗುತ್ತದೆ.

ಇದನ್ನೂ ಓದಿ: e-Swathu 2.0: ಗ್ರಾಮ ಪಂಚಾಯಿತಿ ಆಸ್ತಿ ಮಾಲೀಕರಿಗೆ ಭರ್ಜರಿ ಸಿಹಿಸುದ್ದಿ | ‘ಇ-ಸ್ವತ್ತು’ ತಂತ್ರಾಂಶದ ತಾಂತ್ರಿಕ ಕಿರಿಕಿರಿಗೆ ಕೊನೆಗೂ ಮುಕ್ತಿ!

ಯಾರು ಅರ್ಜಿ ಸಲ್ಲಿಸಲು ಅರ್ಹರು?

ಯೋಜನೆಯ ಲಾಭ ಪಡೆಯಲು ಕೆಲವು ನಿರ್ದಿಷ್ಟ ಅರ್ಹತಾ ಮಾನದಂಡಗನ್ನು ಕಡ್ಡಾಯಗೊಳಿಸಲಾಗಿದೆ.

  • ವಿದ್ಯಾರ್ಥಿ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
  • ಪರಿಶಿಷ್ಟ ಜಾತಿ (SC Category)ಗೆ ಸೇರಿರಬೇಕು
  • 2026ನೇ ಸಾಲಿನ SSLC ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು
  • ಪ್ರಥಮ ಪ್ರಯತ್ನದಲ್ಲೇ (First Attempt) ಪಾಸ್ ಆಗಿರಬೇಕು
  • ಪ್ರಥಮ ದರ್ಜೆಯಲ್ಲಿ (First Class) ಉತ್ತೀರ್ಣರಾಗಿರಬೇಕು

ಈ ಎಲ್ಲಾ ಷರತ್ತುಗಳನ್ನು ಪೂರೈಸಿದ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಇದನ್ನೂ ಓದಿ: Google Pay Instant Personal Loan: ₹9 ಲಕ್ಷವರೆಗೆ ಗೂಗಲ್ ಪೇ ಲೋನ್ | ಮೊಬೈಲ್‌ನಲ್ಲೇ ಅರ್ಜಿ ಹಾಕಿ…

SSLC Prize Money Scheme 2026
SSLC Prize Money Scheme 2026

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸುವ ಮೊದಲು ಕೆಲವು ಮುಖ್ಯ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು.

  • ಆಧಾರ್ ಕಾರ್ಡ್ (Aadhaar Card)
  • SSLC ಮಾರ್ಕ್ಸ್ ಕಾರ್ಡ್
  • ಜಾತಿ ಪ್ರಮಾಣ ಪತ್ರ (Caste Certificate)
  • ಆದಾಯ ಪ್ರಮಾಣ ಪತ್ರ (Income Certificate)
  • ಬ್ಯಾಂಕ್ ಪಾಸ್‌ಬುಕ್ ವಿವರ
  • ಮೊಬೈಲ್ ಸಂಖ್ಯೆ
  • ವಿದ್ಯಾರ್ಥಿಯ ಫೋಟೋ

ಇದನ್ನೂ ಓದಿ: BPL Ration Card: ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ

ಬ್ಯಾಂಕ್ ಖಾತೆ ಬಗ್ಗೆ ಗಮನಿಸಬೇಕಾದ ವಿಷಯಗಳು

ಪ್ರೋತ್ಸಾಹಧನದ ಹಣವನ್ನು ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ DBT (Direct Benefit Transfer) ಮೂಲಕ ಜಮಾ ಮಾಡಲಾಗುತ್ತದೆ. ಆದ್ದರಿಂದ ಬ್ಯಾಂಕ್ ಖಾತೆ ಹಾಗೂ ಆಧಾರ್ ಮಾಹಿತಿ ಸರಿಯಾಗಿರಬೇಕು.

  • ಬ್ಯಾಂಕ್ ಖಾತೆ ಆಧಾರ್‌ಗೆ ಲಿಂಕ್ ಆಗಿರಬೇಕು.
  • NPCI Map ಆಗಿರುವ ಬ್ಯಾಂಕ್ ಖಾತೆ ಮಾತ್ರ ಹಣ ಸ್ವೀಕರಿಸಲು ಸಾಧ್ಯ.
  • ಬ್ಯಾಂಕ್ ಖಾತೆ Active ಆಗಿರಬೇಕು.

ಒಮ್ಮೆ ಅರ್ಜಿ ಸಲ್ಲಿಸಿದ ನಂತರ ಬ್ಯಾಂಕ್ ಅಥವಾ ಆಧಾರ್ ಮಾಹಿತಿಯನ್ನು ಬದಲಾಯಿಸಬಾರದು ಎಂದು ಇಲಾಖೆ ಸೂಚಿಸಿದೆ.

ಇದನ್ನೂ ಓದಿ: Check Free Cibil Score: ಕಡಿಮೆ ಬಡ್ಡಿದರದಲ್ಲಿ ಸುಲಭವಾಗಿ ಸಾಲ ಪಡೆಯಬೇಕೆ? ಹಾಗಾದರೆ ನಿಮ್ಮ ‘ಸಿಬಿಲ್ ಸ್ಕೋರ್’ ಬಗ್ಗೆ ನಿಮಗೆ ತಿಳಿದಿರಲೇಬೇಕು!

ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವಿಧಾನ

ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ಮನೆಯಿಂದಲೇ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಅರ್ಜಿ ಸಲ್ಲಿಸಬಹುದು.

  • ಹಂತ 1: ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • ಹಂತ 2: ‘Register’ ಅಥವಾ ‘New Registration’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಹಂತ 3: ‘SSLC Prize Money Scheme 2026’ ಯೋಜನೆಯನ್ನು ಆಯ್ಕೆಮಾಡಿ.
  • ಹಂತ 4: ವಿದ್ಯಾರ್ಥಿಯ Aadhaar Number ನಮೂದಿಸಿ OTP Verification ಪೂರ್ಣಗೊಳಿಸಿ.
  • ಹಂತ 5: ಜಾತಿ ಮತ್ತು ಆದಾಯ ವಿವರಗಳನ್ನು ಭರ್ತಿ ಮಾಡಿ.
  • ಹಂತ 6: SSLC Register Number, Marks Details ಸೇರಿದಂತೆ ಇತರೆ ಮಾಹಿತಿ ನಮೂದಿಸಿ.
  • ಹಂತ 7: ಕೊನೆಯದಾಗಿ ಅರ್ಜಿಯನ್ನು Submit ಮಾಡಿ.

ಪ್ರತಿ ವರ್ಷ ಅನೇಕ ವಿದ್ಯಾರ್ಥಿಗಳು ಸಣ್ಣ ತಪ್ಪುಗಳಿಂದ ಯೋಜನೆಯ ಲಾಭ ಕಳೆದುಕೊಳ್ಳುತ್ತಾರೆ. ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ಎಲ್ಲಾ ಮಾಹಿತಿಯನ್ನು ಎರಡು ಬಾರಿ ಪರಿಶೀಲಿಸಬೇಕು.

ಇದನ್ನೂ ಓದಿ: Mudra Loan: ಮುದ್ರಾ ಲೋನ್ ಪಡೆಯಲು ಸುಲಭ ವಿಧಾನ | ₹20 ಲಕ್ಷ ಸಾಲಕ್ಕೆ ಹೇಗೆ ಅರ್ಜಿ ಹಾಕಬೇಕು? ಸಂಪೂರ್ಣ ಮಾಹಿತಿ

ಸಹಾಯವಾಣಿ ಸಂಖ್ಯೆ

ಯೋಜನೆ ಕುರಿತು ಯಾವುದೇ ಗೊಂದಲಗಳು ಅಥವಾ ತಾಂತ್ರಿಕ ಸಮಸ್ಯೆಗಳಿದ್ದರೆ ಇಲಾಖೆಯ ಸಹಾಯವಾಣಿ ಸಂಖ್ಯೆ 9482300400 ಯನ್ನು ಸಂಪರ್ಕಿಸಬಹುದು. ಅಥವಾ ಹತ್ತಿರದ ಜಿಲ್ಲಾ ಸಮಾಜ ಕಲ್ಯಾಣ ಕಚೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು.

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸರ್ಕಾರ ನೀಡುತ್ತಿರುವ ಈ ಪ್ರೋತ್ಸಾಹಧನ ಯೋಜನೆ ನಿಜಕ್ಕೂ ದೊಡ್ಡ ಅವಕಾಶವಾಗಿದೆ. ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕದವರೆಗೆ ಕಾಯದೇ ತಕ್ಷಣವೇ ಅರ್ಜಿ ಸಲ್ಲಿಸುವುದು ಉತ್ತಮ.

SSLC Prize Money 2026 Application Link: Apply Online

PM Kisan New Application: ಪಿಎಂ ಕಿಸಾನ್ ಯೋಜನೆಗೆ ರೈತರಿಂದ ಹೊಸ ಅರ್ಜಿ ಆಹ್ವಾನ | ನೀವು ಅರ್ಹರಾ? ಚೆಕ್ ಮಾಡಿ

WhatsApp Group Join Now
Telegram Group Join Now