BPL Card New Application: ರಾಜ್ಯದಲ್ಲಿ ಬರೋಬ್ಬರಿ 7.76 ಲಕ್ಷ ನಕಲಿ ಬಿಪಿಎಲ್ ಕಾರ್ಡ್ ಪತ್ತೆಯಾಗಿವೆ. 3 ವರ್ಷಗಳಿಂದ ಹೊಸ ಅರ್ಜಿ ಇಲ್ಲದಾಗಿದ್ದು; ಈಗ ಹೊಸ ಅರ್ಜಿ ಯಾವಾಗ ಆರಂಭ? ಸಂಪೂರ್ಣ ಮಾಹಿತಿ ಇಲ್ಲಿ ನೋಡಿ…
ರಾಜ್ಯದಲ್ಲಿ ಬಿಪಿಎಲ್ ಪಡಿತರ ಚೀಟಿ (BPL Ration Card) ಕುರಿತು ಮತ್ತೆ ದೊಡ್ಡ ಚರ್ಚೆ ಆರಂಭವಾಗಿದೆ. ಲಕ್ಷಾಂತರ ಬಡ ಕುಟುಂಬಗಳು ಹೊಸ ರೇಷನ್ ಕಾರ್ಡ್ ಅರ್ಜಿ ಯಾವಾಗ? ಎಂದು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಇತ್ತ ರಾಜ್ಯದಲ್ಲಿ ಬರೋಬ್ಬರಿ 7.76 ಲಕ್ಷಕ್ಕೂ ಹೆಚ್ಚು ನಕಲಿ ಅಥವಾ ಅನುಮಾನಾಸ್ಪದ ಕಾರ್ಡುಗಳು ಪತ್ತೆಯಾಗಿವೆ. ಈ ಪರಿಸ್ಥಿತಿ ಸಾಮಾನ್ಯ ಜನರಲ್ಲಿ ಗೊಂದಲ ಮತ್ತು ಅಸಮಾಧಾನವನ್ನು ಉಂಟುಮಾಡಿದೆ.
ಇದನ್ನೂ ಓದಿ: PM Kisan New Application: ಪಿಎಂ ಕಿಸಾನ್ ಯೋಜನೆಗೆ ರೈತರಿಂದ ಹೊಸ ಅರ್ಜಿ ಆಹ್ವಾನ | ನೀವು ಅರ್ಹರಾ? ಚೆಕ್ ಮಾಡಿ
ಮೂರು ವರ್ಷಗಳಿಂದ ಅರ್ಜಿ ಇಲ್ಲ
ರಾಜ್ಯ ಸರ್ಕಾರವು ಕಳೆದ ಮೂರು ವರ್ಷಗಳಿಂದ ಹೊಸ ಬಿಪಿಎಲ್ ಕಾರ್ಡ್ ಅರ್ಜಿಗಳನ್ನು (New BPL Application) ಆಹ್ವಾನಿಸಿಲ್ಲ. ಇದು ಕೇವಲ ಆಡಳಿತಾತ್ಮಕ ತಡವಲ್ಲ, ಬಡವರ ಬದುಕಿಗೆ ನೇರ ಹೊಡೆತವಾಗಿದೆ.
ಇಂದಿನ ಕಾಲದಲ್ಲಿ ರೇಷನ್ ಕಾರ್ಡು ದಿನಸಿ ಸಾಮಗ್ರಿಗಳಿಂದ ಹಿಡಿದ ಹಲವು ಸರ್ಕಾರಿ ಯೋಜನೆಗಳಿಗೆ ಅನಿವಾರ್ಯ ಕಾರ್ಡ್ ಆಗಿದೆ. ಆದರೆ ಹೊಸ ಅರ್ಜಿ ಪ್ರಕ್ರಿಯೆ ಆರಂಭವಾಗದೇ ಇರುವುದರಿಂದ, ಸಾವಿರಾರು ಅರ್ಹ ಕುಟುಂಬಗಳು ಸರ್ಕಾರದ ಸೌಲಭ್ಯದಿಂದ ದೂರವಾಗಿವೆ.
ಗ್ರಾಮೀಣ ಪ್ರದೇಶಗಳಲ್ಲಿ (Rural Areas) ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ. ದಿನಗೂಲಿ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು, ಸಣ್ಣ ರೈತರು ಬಿಪಿಎಲ್ ಕಾರ್ಡ್ ಜೀವನ ಸಾಗಿಸಲು ಅಗತ್ಯವಿರುವ ಮೂಲಭೂತ ಸಹಾಯವಾಗಿದೆ. ಆದರೆ ಇವರಲ್ಲಿ ಅನೇಕರು ಇನ್ನೂ ಕಾರ್ಡಿಗಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ: Aadhaar Update for Children: 5 ರಿಂದ 17 ವರ್ಷದ ಮಕ್ಕಳ ಆಧಾರ್ ಅಪ್‌ಡೇಟ್ ಕಡ್ಡಾಯ | ಪೋಷಕರು ಗಮನಿಸಲೇಬೇಕಾದ ಮಹತ್ವದ ಮಾಹಿತಿ
ವಿಶೇಷ ವರ್ಗಗಳಿಗೆ ಮಾತ್ರ ಆದ್ಯತೆ
ಪ್ರಸ್ತುತ ಸರ್ಕಾರ ಕೆಲವು ನಿರ್ದಿಷ್ಟ ವರ್ಗಗಳಿಗೆ ಮಾತ್ರ ಆದ್ಯತೆ ನೀಡುತ್ತಿದೆ. ಉದಾಹರಣೆಗೆ:
- ವೈದ್ಯಕೀಯ ತುರ್ತು ಪರಿಸ್ಥಿತಿಯಲ್ಲಿರುವವರು (Medical Emergency Cases)
- ಇ-ಶ್ರಮ್ ನೋಂದಾಯಿತ ಕಾರ್ಮಿಕರು (e-Shram Registered Workers)
- ಬುಡಕಟ್ಟು ಸಮುದಾಯದವರು (Tribal Communities)
ಈ ಕ್ರಮ ಮಾನವೀಯವಾಗಿದ್ದರೂ, ಸಾಮಾನ್ಯ ಬಡ ಕುಟುಂಬಗಳಿಗೆ ಇದು ಸಾಕಾಗುವುದಿಲ್ಲ. ಬಡತನ ಒಂದೇ ಕಾರಣವಾಗಿದ್ದರೂ, ಎಲ್ಲರಿಗೂ ಸಮಾನ ಅವಕಾಶ ಸಿಗುತ್ತಿಲ್ಲ ಎಂಬ ಪ್ರಶ್ನೆ ಉದ್ಭವವಾಗಿದೆ.
ಇದನ್ನೂ ಓದಿ: Karnataka Monsoon 2026: ಈ ವರ್ಷ ಮುಂಗಾರು ಮಳೆ ಕೊರತೆ | ಕರ್ನಾಟಕದ 20+ ಜಿಲ್ಲೆಗಳಿಗೆ ಬರದ ಭೀತಿ!?
ಅಂಕಿ-ಅಂಶಗಳು ಹೇಳುತ್ತಿರುವುದೇನು?
ರಾಜ್ಯದ ಪಡಿತರ ಚೀಟಿಗಳ ಅಂಕಿ-ಅಂಶಗಳು (Ration Card Statistics) ಒಂದು ಮಹತ್ತರ ಚಿತ್ರಣವನ್ನು ನೀಡುತ್ತವೆ.
- ಅಂತ್ಯೋದಯ ಅನ್ನ ಯೋಜನೆ: 10,47,080 ಕಾರ್ಡ್’ಗಳು
- ಬಿಪಿಎಲ್: 1,14,38,886 ಕಾರ್ಡ್’ಗಳು
- ಎಪಿಎಲ್: 29,71,601 ಕಾರ್ಡ್’ಗಳು
ಒಟ್ಟಾರೆ 1.54 ಕೋಟಿ ಪಡಿತರ ಚೀಟಿಗಳಿದ್ದು, 5.45 ಕೋಟಿ ಜನರಿಗೆ ಇದರ ಲಾಭ ಸಿಗುತ್ತಿದೆ.
ಈ ಅಂಕಿ-ಅಂಶಗಳು ಒಂದು ಕಡೆ ಸರ್ಕಾರದ ವ್ಯಾಪ್ತಿಯನ್ನು (Coverage) ತೋರಿಸಿದರೆ, ಮತ್ತೊಂದೆಡೆ ಇನ್ನೂ ಅನೇಕ ಅರ್ಹರು ಹೊರಗುಳಿದಿರುವುದನ್ನು ಸೂಚಿಸುತ್ತವೆ.
ವೈದ್ಯಕೀಯ ತುರ್ತು ವ್ಯವಸ್ಥೆ
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ (Food & Civil Supplies Department) 102 ಗಂಭೀರ ಕಾಯಿಲೆಗಳನ್ನು ಗುರುತಿಸಿ, ವೈದ್ಯಕೀಯ ತುರ್ತು (Medical Emergency) ಪ್ರಕರಣಗಳಿಗೆ ವಿಶೇಷ ವ್ಯವಸ್ಥೆ ರೂಪಿಸಿದೆ.
ಈ ಮೂಲಕ ಗಂಭೀರ ರೋಗಗಳಿಂದ ಬಳಲುತ್ತಿರುವವರು ಆದ್ಯತಾ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಬಹುದು. ಇದು ಒಳ್ಳೆಯ ಕ್ರಮವಾದರೂ, ಇದು ಸೀಮಿತ ವರ್ಗಕ್ಕೆ ಮಾತ್ರ ಉಪಯೋಗವಾಗುತ್ತಿದೆ. ಸಾಮಾನ್ಯ ಬಡ ಕುಟುಂಬಗಳ ಸಮಸ್ಯೆ ಇನ್ನೂ ಉಳಿದಂತೆಯೇ ಇದೆ.
ಇದನ್ನೂ ಓದಿ: Kaaludari Bandidaari: ಜಮೀನಿನ ಕಾಲುದಾರಿ, ಬಂಡಿದಾರಿ ಮುಚ್ಚಿದ್ದಾರೆಯೇ? ಇದು ಅಪರಾಧ, ದೂರು ನೀಡಿದರೆ ಆಗಲಿದೆ ತೆರವು

ಬಾಕಿ ಅರ್ಜಿಗಳು ಮತ್ತು ನಿಧಾನ ಪರಿಶೀಲನೆ
2025ರ ಅಂತ್ಯದ ವೇಳೆಗೆ 3,36,982 ಅರ್ಜಿಗಳು ಬಂದಿದ್ದು, ಅವುಗಳ ಸ್ಥಳ ಪರಿಶೀಲನೆ (Field Verification) ನಡೆಯುತ್ತಿದೆ. ಅರ್ಹರನ್ನು ಗುರುತಿಸಿ ಕಾರ್ಡ್ ನೀಡುವ ಪ್ರಕ್ರಿಯೆ ಮುಂದುವರಿದಿದೆ.
ಆದರೆ ಈ ಪರಿಶೀಲನೆ ಪ್ರಕ್ರಿಯೆ ನಿಧಾನವಾಗಿರುವುದು ಜನರಲ್ಲಿ ಬೇಸರವನ್ನು ಉಂಟುಮಾಡುತ್ತಿದೆ. ಅರ್ಜಿ ಸಲ್ಲಿಸಿದ ನಂತರ ತಿಂಗಳುಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ.
7.76 ಲಕ್ಷ ನಕಲಿ ಕಾರ್ಡ್’ಗಳು
ಕೇಂದ್ರ ಸರ್ಕಾರವು 7.76 ಲಕ್ಷ ಶಂಕಾಸ್ಪದ ಪಡಿತರ ಫಲಾನುಭವಿಗಳನ್ನು ಗುರುತಿಸಿರುವುದು ಅತ್ಯಂತ ಗಂಭೀರ ವಿಷಯ. ಈ ಪಟ್ಟಿಯಲ್ಲಿ ಸೇರಿರುವವರು:
- ವಾರ್ಷಿಕ ಆದಾಯ ₹1.20 ಲಕ್ಷಕ್ಕಿಂತ ಹೆಚ್ಚು ಇರುವವರು
- ₹25 ಲಕ್ಷಕ್ಕಿಂತ ಹೆಚ್ಚು ಜಿಎಸ್‌ಟಿ ವ್ಯವಹಾರ ನಡೆಸುವವರು
- ದುಬಾರಿ ವಾಹನಗಳ ಮಾಲೀಕರು
- 7.5 ಎಕರೆಗೂ ಹೆಚ್ಚು ಭೂಮಿ ಹೊಂದಿರುವವರು
ಇದರಿಂದ ಸ್ಪಷ್ಟವಾಗುವುದು ಏನೆಂದರೆ ಅರ್ಹರಲ್ಲದವರು ಸರ್ಕಾರದ ಸೌಲಭ್ಯ ಪಡೆಯುತ್ತಿದ್ದಾರೆ, ಆದರೆ ನಿಜವಾದ ಬಡವರು (Genuine Beneficiaries) ಹೊರಗುಳಿಯುತ್ತಿದ್ದಾರೆ.
ಇದನ್ನೂ ಓದಿ: Tenant Rights in India: ನೀವು ಬಾಡಿಗೆ ಮನೆಯಲ್ಲಿ ಇದ್ದೀರಾ? ತಪ್ಪದೇ ಈ ಕಾನೂನು ಮಾಹಿತಿ ತಿಳಿದುಕೊಳ್ಳಿ
ದುರ್ಬಳಕೆ ವಿರುದ್ಧ ಕಠಿಣ ಕ್ರಮ
ಪಡಿತರ ವ್ಯವಸ್ಥೆಯ ದುರ್ಬಳಕೆ (PDS Misuse) ತಡೆಯಲು ಸರ್ಕಾರ ಕ್ರಮ ಕೈಗೊಂಡಿದೆ. ಅಗತ್ಯ ವಸ್ತುಗಳ ಕಾಯಿದೆ (Essential Commodities Act, 1955) ಅಡಿಯಲ್ಲಿ 747 ಪ್ರಕರಣಗಳನ್ನು ದಾಖಲಿಸಲಾಗಿದೆ.
2025-26ರ ಜನವರಿವರೆಗೆ 45,000ಕ್ಕೂ ಹೆಚ್ಚು ಕ್ವಿಂಟಾಲ್ ಆಹಾರ ಧಾನ್ಯ ವಶಪಡಿಸಿಕೊಳ್ಳಲಾಗಿದೆ. ಲಕ್ಷಾಂತರ ಮೌಲ್ಯದ ವಸ್ತುಗಳ ಜಪ್ತಿ ಮಾಡಲಾಗಿದೆ. ಎಲ್‌ಪಿಜಿ, ಪೆಟ್ರೋಲ್, ಡೀಸೆಲ್ ವಶಪಡಿಕೆ ಹಾಗೂ 419 ವಾಹನಗಳ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: Grama Panchayati Sadasyara Kartavyagalu: ಗ್ರಾಮ ಪಂಚಾಯಿತಿ ಸದಸ್ಯರ ಕರ್ತವ್ಯಗಳೇನು? ಎಲ್ಲರೂ ತಿಳಿದಿರಬೇಕಾದ ಮಾಹಿತಿ
ಜನರ ದೊಡ್ಡ ಪ್ರಶ್ನೆ- ಹೊಸ ಅರ್ಜಿ ಯಾವಾಗ?
ವಿಧಾನ ಪರಿಷತ್‌ನಲ್ಲಿ ಕೇಳಲಾದ ಪ್ರಶ್ನೆಗೆ ಸರ್ಕಾರ ‘ಹೊಸ ಅರ್ಜಿಗಳನ್ನು ಆಹ್ವಾನಿಸಿಲ್ಲ’ ಎಂದು ಉತ್ತರಿಸಿದೆ. ಇದು ಲಕ್ಷಾಂತರ ಜನರಲ್ಲಿ ನಿರಾಶೆ ಮೂಡಿಸಿದೆ. ಈಗ ‘ಹೊಸ ಬಿಪಿಎಲ್ ಕಾರ್ಡ್ ಅರ್ಜಿ ಯಾವಾಗ ಆರಂಭವಾಗುತ್ತದೆ?’ ಎಂಬುವುದು ಎಲ್ಲರ ಮನದಲ್ಲಿರುವ ಪ್ರಶ್ನೆಯಾಗಿದೆ.
ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕಾಗಿದೆ. ಸರ್ಕಾರ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ನಕಲಿ ಕಾರ್ಡ್ಗಳನ್ನು ರದ್ದುಪಡಿಸುವುದು, ಹೊಸ ಅರ್ಜಿಗಳನ್ನು ಶೀಘ್ರ ಆರಂಭಿಸುವುದು, ಡಿಜಿಟಲ್ ಪರಿಶೀಲನಾ ವ್ಯವಸ್ಥೆ ವೇಗಗೊಳಿಸುವುದು, ಅರ್ಹರಿಗೆ ಆದ್ಯತೆ ನೀಡುವಂತಹ ಕ್ರಮಗಳು ತುರ್ತಾಗಿ ನಡೆಯಬೇಕಿದೆ.
ಸರ್ಕಾರವು ತ್ವರಿತವಾಗಿ ಕ್ರಮ ಕೈಗೊಂಡು, ಅರ್ಹರಿಗೆ ನ್ಯಾಯ ಒದಗಿಸಬೇಕು. ಇಲ್ಲವಾದರೆ, ‘ಅರ್ಹರು ಕಾಯುತ್ತಿರುತ್ತಾರೆ; ಅನರ್ಹರು ಸೌಲಭ್ಯ ಪಡೆಯುತ್ತಾರೆ’ ಎಂಬ ಅಸಮತೋಲನ ಮುಂದುವರಿಯುವ ಅಪಾಯ ಇದೆ.
BPL Ration Card: ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ