Women Loan Subsidy Schemes 2026-27: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದಿಂದ ಮಹಿಳೆಯರಿಗೆ ಬಡ್ಡಿ ಇಲ್ಲದ 3 ಲಕ್ಷ ರೂ. ಸಾಲ ಹಾಗೂ ಸಹಾಯಧನ ನೀಡುವ ಉದ್ಯೋಗಿನಿ, ಧನಶ್ರೀ ಸೇರಿ 5 ಯೋಜನೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿದೆ ಸಂಪೂರ್ಣ ಮಾಹಿತಿ…
ಸ್ವಂತ ಕಾಲಿನ ಮೇಲೆ ನಿಲ್ಲಬೇಕು, ತಾವೇ ಸ್ವತಃ ಒಂದು ಬಿಸಿನೆಸ್ ಶುರು ಮಾಡಬೇಕು ಅನ್ನೋ ಕನಸು ಬಹಳಷ್ಟು ಮಹಿಳೆಯರಿಗೆ ಇರುತ್ತದೆ. ಆದರೆ, ಕೈಯಲ್ಲಿ ಬಂಡವಾಳ ಇಲ್ಲವಲ್ಲ ಎಂಬ ಚಿಂತೆ ಕಾಡುವುದು ಸಹಜ. ಇಂಥದ್ದೇ ಚಿಂತೆಯಲ್ಲಿರುವ ಮಹಿಳೆಯರಿಗೆ ನೆರವಾಗಲು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಭರ್ಜರಿ ಅವಕಾಶವೊಂದನ್ನು ಒದಗಿಸಿದೆ.
ಹೌದು, 2026-27ನೇ ಸಾಲಿನ ವಿವಿಧ ಯೋಜನೆಗಳಡಿ ಸ್ವಯಂ ಉದ್ಯೋಗ (Self employment) ಆರಂಭಿಸಲು ಬಡ್ಡಿ ಇಲ್ಲದೆ ₹3 ಲಕ್ಷದವರೆಗೆ ಸಾಲ ಹಾಗೂ ಆಕರ್ಷಕ ಸಹಾಯಧನಕ್ಕೆ (Subsidy) ಇದೀಗ ಅರ್ಜಿ ಆಹ್ವಾನಿಸಲಾಗಿದೆ.
ಇದನ್ನೂ ಓದಿ: BPL Card Cancellation Paused: ಬಿಪಿಎಲ್ ಕಾರ್ಡ್ ರದ್ದತಿಗೆ ಬ್ರೇಕ್: ರೇಷನ್ ಕಾರ್ಡುದಾರರಿಗೆ ಬಿಗ್ ರಿಲೀಫ್!
ಉದ್ಯೋಗಿನಿ ಯೋಜನೆ: ಭರ್ಜರಿ ಸಹಾಯಧನ
ಈ ನಿಗಮದ ಅತಿ ದೊಡ್ಡ ಹಾಗೂ ಜನಪ್ರಿಯ ಯೋಜನೆ ಎಂದರೆ ‘ಉದ್ಯೋಗಿನಿ ಯೋಜನೆ’. ಇದರಡಿ ಮಹಿಳೆಯರು ಸ್ವಂತ ಉದ್ಯೋಗ ಶುರು ಮಾಡಲು ಬ್ಯಾಂಕ್ಗಳ ಮೂಲಕ ಬರೋಬ್ಬರಿ ₹3 ಲಕ್ಷದವರೆಗೆ ಸಾಲ ಪಡೆಯಬಹುದು. ವಿಶೇಷವೆಂದರೆ ಇದಕ್ಕೆ ಯಾವುದೇ ಬಡ್ಡಿ ಇರುವುದಿಲ್ಲ.
ಇದನ್ನೂ ಓದಿ: PM Kisan New Application: ಪಿಎಂ ಕಿಸಾನ್ ಯೋಜನೆಗೆ ರೈತರಿಂದ ಹೊಸ ಅರ್ಜಿ ಆಹ್ವಾನ | ನೀವು ಅರ್ಹರಾ? ಚೆಕ್ ಮಾಡಿ
ಅಷ್ಟೇ ಅಲ್ಲ, ಸಾಮಾನ್ಯ ವರ್ಗದ 18 ವರ್ಷ ಮೇಲ್ಪಟ್ಟ ಮಹಿಳೆಯರಾಗಿದ್ದರೆ (ವಾರ್ಷಿಕ ಆದಾಯ ₹1.5 ಲಕ್ಷದೊಳಗಿದ್ದರೆ) ಪಡೆದ ಸಾಲದಲ್ಲಿ ಶೇ.30ರಷ್ಟು, ಅಂದರೆ ಗರಿಷ್ಠ ₹90,000 ಉಚಿತ ಸಹಾಯಧನ ಸಿಗುತ್ತದೆ.
ಇನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ (SC/ST) ಮಹಿಳೆಯರಿಗೆ ವಾರ್ಷಿಕ ಆದಾಯ ₹2 ಲಕ್ಷದೊಳಗಿದ್ದರೆ ಶೇ.50ರಷ್ಟು, ಅಂದರೆ ₹1.5 ಲಕ್ಷದವರೆಗೂ ಸಬ್ಸಿಡಿ ಸಿಗಲಿದೆ. ಅಂದರೆ, ನೀವು ಪಡೆದ ಸಾಲದ ಅರ್ಧದಷ್ಟು ಹಣವನ್ನು ಸರ್ಕಾರವೇ ಮನ್ನಾ ಮಾಡಿದಂತಾಗುತ್ತದೆ!
ಇದನ್ನೂ ಓದಿ: Google Pay Instant Personal Loan: ₹9 ಲಕ್ಷವರೆಗೆ ಗೂಗಲ್ ಪೇ ಲೋನ್ | ಮೊಬೈಲ್ನಲ್ಲೇ ಅರ್ಜಿ ಹಾಕಿ…

ನೇರ ಆರ್ಥಿಕ ನೆರವು ನೀಡುವ ಇತರೆ ಯೋಜನೆಗಳು
ಉದ್ಯೋಗಿನಿ ಮಾತ್ರವಲ್ಲದೆ, ಇನ್ನುಳಿದ ಕೆಲವು ಯೋಜನೆಗಳಲ್ಲೂ ಮಹಿಳೆಯರಿಗೆ ನೇರವಾಗಿ ಆರ್ಥಿಕ ನೆರವು ಸಿಗಲಿದೆ.
-
ಧನಶ್ರೀ ಯೋಜನೆ (Dhanashree Scheme): 18 ರಿಂದ 60 ವರ್ಷದೊಳಗಿನ ಮಹಿಳೆಯರು ಸಣ್ಣಪುಟ್ಟ ಬಿಸಿನೆಸ್ ಮಾಡಲು ₹30,000 ಉಚಿತ ಪ್ರೋತ್ಸಾಹಧನ (Incentive) ಪಡೆಯಬಹುದು.
ಇದನ್ನೂ ಓದಿ: SBI Personal Loan: ಎಸ್ಬಿಐ ಪರ್ಸನಲ್ ಲೋನ್ | ಕಡಿಮೆ ಬಡ್ಡಿದರದಲ್ಲಿ ಸುಲಭವಾಗಿ ಸಾಲ ಪಡೆಯುವ ಸಂಪೂರ್ಣ ವಿಧಾನ
-
ಚೇತನ ಯೋಜನೆ (Chetana Scheme): ದಮನಿತ ಮಹಿಳೆಯರು ಹೊಸ ಜೀವನ ಕಟ್ಟಿಕೊಳ್ಳಲು ₹30,000 ಆರ್ಥಿಕ ನೆರವು ಲಭ್ಯವಿದೆ.
-
ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ: ಲಿಂಗತ್ವ ಅಲ್ಪಸಂಖ್ಯಾತರು (ಮಂಗಳಮುಖಿಯರು) ಸ್ವಾವಲಂಬಿಯಾಗಿ ಬದುಕಲು ₹30,000 ಪ್ರೋತ್ಸಾಹಧನ ಸಿಗಲಿದೆ.
-
ಮಾಜಿ ದೇವದಾಸಿ ಮಹಿಳೆಯರ ಪುನರ್ವಸತಿ: ಸರ್ಕಾರದ ಸಮೀಕ್ಷೆಯಲ್ಲಿ ಗುರುತಿಸಲ್ಪಟ್ಟ ಮಾಜಿ ದೇವದಾಸಿ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ₹30,000 ಆರ್ಥಿಕ ನೆರವು ನೀಡಲಾಗುತ್ತದೆ.
ಇದನ್ನೂ ಓದಿ: PhonePe Personal Loan: ₹5 ಲಕ್ಷದವರೆಗೆ ಫೋನ್ಪೇ ಪರ್ಸನಲ್ ಲೋನ್ | ಮೊಬೈಲ್ನಲ್ಲೇ ಅರ್ಜಿ ಹಾಕಿ ತ್ವರಿತವಾಗಿ ಹಣ ಪಡೆಯಿರಿ
ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು
ಅರ್ಜಿ ಹಾಕಲು ಹೋಗುವಾಗ ಈ ಕೆಳಗಿನ ದಾಖಲೆಗಳನ್ನು ನಿಮ್ಮ ಜೊತೆ ಇಟ್ಟುಕೊಳ್ಳಲು ಮರೆಯಬೇಡಿ:
- ಆಧಾರ್ ಕಾರ್ಡ್ (ಗಮನಿಸಿ: ನಿಮ್ಮ ಆಧಾರ್ ಕಾರ್ಡ್ಗೆ ಮೊಬೈಲ್ ನಂಬರ್ ಲಿಂಕ್ ಆಗಿರಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಕಡ್ಡಾಯವಾಗಿ ಆಗಿರಬೇಕು).
- ಬಿಪಿಎಲ್ ರೇಷನ್ ಕಾರ್ಡ್ (BPL Card) ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
- ಶಾಲಾ ವರ್ಗಾವಣೆ ಪತ್ರ (TC) ಅಥವಾ ಎಸ್ಎಸ್ಎಲ್ಸಿ ಅಂಕಪಟ್ಟಿ ಹಾಗೂ ಬ್ಯಾಂಕ್ ಪಾಸ್ಬುಕ್.
- ನೀವು ಯಾವ ಬಿಸಿನೆಸ್ ಮಾಡುತ್ತಿದ್ದೀರಿ, ಅದಕ್ಕೆ ಎಷ್ಟು ಖರ್ಚಾಗುತ್ತದೆ ಎಂಬ ಬಗ್ಗೆ ಒಂದು ಸಣ್ಣ ಯೋಜನಾ ವರದಿ (Project Report).
- ವಿಧವೆ ಅಥವಾ ಅಂಗವಿಕಲರಾಗಿದ್ದರೆ ಅದಕ್ಕೆ ಸಂಬಂಧಿಸಿದ ದೃಢೀಕರಣ ಪ್ರಮಾಣಪತ್ರ.
ಇದನ್ನೂ ಓದಿ: Mudra Loan: ಮುದ್ರಾ ಲೋನ್ ಪಡೆಯಲು ಸುಲಭ ವಿಧಾನ | ₹20 ಲಕ್ಷ ಸಾಲಕ್ಕೆ ಹೇಗೆ ಅರ್ಜಿ ಹಾಕಬೇಕು? ಸಂಪೂರ್ಣ ಮಾಹಿತಿ
ಅರ್ಜಿ ಸಲ್ಲಿಕೆ ಎಲ್ಲಿ ಮತ್ತು ಹೇಗೆ?
ಅರ್ಜಿ ಸಲ್ಲಿಕೆ ಪ್ರಕ್ರಿಯೆ ಬಹಳ ಸುಲಭವಾಗಿದೆ. ನಿಮ್ಮೂರಿನ ಸಮೀಪವಿರುವ ಗ್ರಾಮ ಒನ್ (Grama One), ಕರ್ನಾಟಕ ಒನ್, ಬೆಂಗಳೂರು ಒನ್ ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಹೋಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಒಂದು ವೇಳೆ ಶಾಸಕರು ಅಥವಾ ಸಚಿವರ ವಿವೇಚನಾ ಕೋಟಾದಡಿ (Discretionary Quota) ಶಿಫಾರಸು ಪತ್ರದ ಮೂಲಕ ಹೋಗುವುದಾದರೆ ಸೇವಾ ಸಿಂಧು (Seva Sindhu) ಪೋರ್ಟಲ್ನಲ್ಲಿ ಅರ್ಜಿ ಹಾಕಬೇಕಾಗುತ್ತದೆ.
ಇದನ್ನೂ ಓದಿ: BPL Ration Card: ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಏನು ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ
ಕೊನೆಯ ದಿನಾಂಕ ಮತ್ತು ಪ್ರಮುಖ ಸೂಚನೆಗಳು
ಅರ್ಜಿ ಸಲ್ಲಿಸಲು ಅಕ್ಟೋಬರ್ 31, 2026ರ ಸಂಜೆ 5.30 ಕಡೆಯ ದಿನವಾಗಿದೆ (Last Date). ಕೊನೆ ಗಳಿಗೆಯ ಗಡಿಬಿಡಿ ಬೇಡ, ಆದಷ್ಟು ಬೇಗ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಹಾಕಿ. ಗಮನಿಸಿ, ಕಳೆದ ಬಾರಿ ಅರ್ಜಿ ಹಾಕಿ ಆಯ್ಕೆಯಾಗದವರು ಅಥವಾ ಈಗಾಗಲೇ ನಿಗಮದ ಯೋಜನೆಗಳ ಲಾಭ ಪಡೆದವರು ಮತ್ತೊಮ್ಮೆ ಅರ್ಜಿ ಹಾಕುವಂತಿಲ್ಲ.
ಇನ್ನಷ್ಟು ಮಾಹಿತಿಗಾಗಿ ನಿಮ್ಮ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರನ್ನು ಸಂಪರ್ಕಿಸಬಹುದು ಅಥವಾ 080-26632792 / 080-26632973 ಸಹಾಯವಾಣಿಗೆ ಕರೆ ಮಾಡಬಹುದು.
ಆನ್ಲೈನ್ನಲ್ಲಿ ವಿವರ ಬೇಕಿದ್ದರೆ ಅಧಿಕೃತ ವೆಬ್ಸೈಟ್ kswdc.karnataka.gov.in ನೋಡಬಹುದು. ಬದುಕು ಕಟ್ಟಿಕೊಳ್ಳುವ ಮಹಿಳೆಯರಿಗೆ ಇದೊಂದು ಅತ್ಯುತ್ತಮ ಅವಕಾಶ, ಖಂಡಿತಾ ಸದುಪಯೋಗಪಡಿಸಿಕೊಳ್ಳಿ!
BPL Card Cancellation Paused: ಬಿಪಿಎಲ್ ಕಾರ್ಡ್ ರದ್ದತಿಗೆ ಬ್ರೇಕ್: ರೇಷನ್ ಕಾರ್ಡುದಾರರಿಗೆ ಬಿಗ್ ರಿಲೀಫ್!