KarnatakaOne Centre Application: ಫ್ರಾಂಚೈಸಿ ಆಧಾರದ ಮೇಲೆ ಕರ್ನಾಟಕದ ವಿವಿಧ ನಗರಗಳಲ್ಲಿ ಕರ್ನಾಟಕ ಸರ್ಕಾರದ ‘ಕರ್ನಾಟಕಒನ್’ ಕೇಂದ್ರ ತೆರೆಯಲು ಆನ್‌ಲೈನ್ ಅರ್ಜಿ, ಅರ್ಹತೆ, ದಿನಾಂಕ ಮತ್ತು ಸಂಪೂರ್ಣ ಮಾಹಿತಿ ಇಲ್ಲಿ ಓದಿ…
ರಾಜ್ಯದಲ್ಲಿ ನಾಗರಿಕರಿಗೆ ಸರ್ಕಾರಿ ಹಾಗೂ ಖಾಸಗಿ ಸೇವೆಗಳನ್ನು ಒಂದೇ ಸ್ಥಳದಲ್ಲಿ ಸುಲಭವಾಗಿ ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ (Government of Karnataka) ಮಹತ್ವದ ಹೆಜ್ಜೆಯೊಂದನ್ನು ಇಟ್ಟಿದೆ.
ಅದರ ಭಾಗವಾಗಿ ಕರ್ನಾಟಕಒನ್ (Karnataka One) ಯೋಜನೆಯ ಅಡಿಯಲ್ಲಿ ರಾಜ್ಯದ ವಿವಿಧ ನಗರ ಪ್ರದೇಶಗಳಲ್ಲಿ ಹೊಸ ಕರ್ನಾಟಕಒನ್ ಕೇಂದ್ರಗಳನ್ನು (Karnataka One Centres) ಸ್ಥಾಪಿಸಲು ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಇದನ್ನೂ ಓದಿ: Prize Money Scholarship 2026: ಈ ವಿದ್ಯಾರ್ಥಿಗಳಿಗೆ ₹35,000 ವರೆಗೆ ಪ್ರೋತ್ಸಾಹಧನ | ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನ
ಕರ್ನಾಟಕಒನ್ ಯೋಜನೆ ಎಂದರೇನು?
ಬೆಂಗಳೂರು ನಗರದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರು ಒನ್ (Bangalore One) ಮಾದರಿಯನ್ನು ರಾಜ್ಯದ ಇತರೆ ನಗರಗಳಿಗೂ ವಿಸ್ತರಿಸುವ ಉದ್ದೇಶದಿಂದ ಈ ಕರ್ನಾಟಕಒನ್ ಯೋಜನೆ (Karnataka One Project) ರೂಪಿಸಲಾಗಿದೆ.
ಒಂದೇ ಸೂರಿನಡಿ (Single Roof Concept) ವಿವಿಧ ಸರ್ಕಾರಿ ಇಲಾಖೆಗಳಿಂದ ಹಾಗೂ ಖಾಸಗಿ ಸಂಸ್ಥೆಗಳಿAದ ಒದಗಿಸಲಾಗುವ ಸೇವೆಗಳನ್ನು ನಾಗರಿಕ ಸ್ನೇಹಿ (Citizen Friendly) ರೀತಿಯಲ್ಲಿ ಜನರಿಗೆ ತಲುಪಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ.
ಇದನ್ನೂ ಓದಿ: Free PSI Coaching Karnataka- ಉಚಿತ ಪಿಎಸ್‌ಐ ಕೋಚಿಂಗ್: 75 ದಿನಗಳ ಊಟ, ವಸತಿ ಸಹಿತ ತರಬೇತಿಗೆ ಆನ್‌ಲೈನ್ ಅರ್ಜಿ ಆಹ್ವಾನ
ಯಾವ ಪ್ರದೇಶಗಳಲ್ಲಿ ಕೇಂದ್ರಗಳು ಸ್ಥಾಪನೆಯಾಗಲಿವೆ?
ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆ-ತಾಲ್ಲೂಕು ಕೇಂದ್ರಗಳಲ್ಲಿ ಕರ್ನಾಟಕಒನ್ ಕೇಂದ್ರ ಸ್ಥಾಪನೆಗೆ ಅವಕಾಶ ನೀಡಲಾಗಿದ್ದು; ಈ ಕೆಳಕಂಡ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕರ್ನಾಟಕಒನ್ ಕೇಂದ್ರ ತೆರೆಯಬಹುದಾಗಿದೆ:
- ನಗರಪಾಲಿಕೆ (City Corporation)
- ನಗರಸಭೆ (City Municipal Council)
- ಪಟ್ಟಣ ಪಂಚಾಯಿತಿ (Town Panchayat)
- ಪುರಸಭೆ (Municipality)
ವ್ಯಾಪ್ತಿಯೊಳಗೆ ಫ್ರಾಂಚೈಸಿ ಆಧಾರದ ಮೇಲೆ (Franchise Model) ಕರ್ನಾಟಕಒನ್ ಕೇಂದ್ರಗಳನ್ನು ತೆರೆಯಲು ಅವಕಾಶ ನೀಡಲಾಗುತ್ತಿದೆ.

ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕಒನ್ ಕೇಂದ್ರಗಳು
ಬೆಂಗಳೂರು ನಗರವನ್ನು ಹೊರತುಪಡಿಸಿ ಇತರ ನಗರಗಳಲ್ಲಿ ಸ್ಥಾಪಿಸಲಾದ ಈ ಕೇಂದ್ರಗಳನ್ನು ‘ಕರ್ನಾಟಕಒನ್ ಕೇಂದ್ರಗಳು’ (Karnataka One Centres) ಎಂದು ಕರೆಯಲಾಗುತ್ತದೆ.
ಪ್ರಸ್ತುತ ಕರ್ನಾಟಕ ರಾಜ್ಯದ ಈ ಕೆಳಕಂಡ 24 ನಗರಗಳಲ್ಲಿ ಕರ್ನಾಟಕಒನ್ ಕೇಂದ್ರಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಅವುಗಳೆಂದರೆ:
- ಬಳ್ಳಾರಿ
- ಬೆಳಗಾವಿ
- ದಾವಣಗೆರೆ
- ಗುಲ್ಬರ್ಗ
- ಹುಬ್ಬಳ್ಳಿ-ಧಾರವಾಡ
- ಮಂಗಳೂರು
- ಮೈಸೂರು
- ಶಿವಮೊಗ್ಗ
- ತುಮಕೂರು
- ಬಾಗಲಕೋಟೆ
- ಕಾರವಾರ
- ಉಡುಪಿ
- ವಿಜಯಪುರ
- ಬೀದರ್
- ದಾಂಡೇಲಿ
- ಹಾವೇರಿ
- ಹಾಸನ
- ಮಂಡ್ಯ
- ಕೊಪ್ಪಳ
- ಚಿತ್ರದುರ್ಗ
- ಕೋಲಾರ
- ರಾಯಚೂರು
- ಯಾದಗಿರಿ
- ಗದಗ
ಇದನ್ನೂ ಓದಿ: New Ration Card: ಈ ದಾಖಲೆಗಳಿದ್ರೆ 15 ದಿನದಲ್ಲಿ ನಿಮಗೆ ರೇಷನ್ ಕಾರ್ಡ್ ಸಿಗುತ್ತೆ!
ಆನ್‌ಲೈನ್ ಸೇವೆಗಳ ಸೌಲಭ್ಯ
ನಾಗರಿಕರಿಗೆ ಇನ್ನಷ್ಟು ಅನುಕೂಲವಾಗುವಂತೆ, ವಿವಿಧ ಸೇವೆಗಳು ಕರ್ನಾಟಕಒನ್ ಪೋರ್ಟಲ್ (Karnataka One Portal) ಮೂಲಕವೂ ಲಭ್ಯವಿವೆ.
ಆನ್‌ಲೈನ್ ಪಾವತಿ (Online Payment), ಅರ್ಜಿ ಸಲ್ಲಿಕೆ, ಸೇವೆಗಳ ಸ್ಥಿತಿ ಪರಿಶೀಲನೆ ಸೇರಿದಂತೆ ಹಲವಾರು ಸೇವೆಗಳನ್ನು ಮನೆಬಾಗಿಲಲ್ಲೇ ಪಡೆಯುವ ವ್ಯವಸ್ಥೆ ಇದಾಗಿದೆ.
ಅರ್ಜಿ ಸಲ್ಲಿಸುವ ದಿನಾಂಕ ಮತ್ತು ವಿಧಾನ
- ಅರ್ಜಿ ಸಲ್ಲಿಕೆ ಪ್ರಾರಂಭ: 16-02-2026, ಬೆಳಿಗ್ಗೆ 8.00 ಗಂಟೆಯಿಂದ
- ಅರ್ಜಿ ಸಲ್ಲಿಕೆ ಅಂತ್ಯ: 02-03-2026, ರಾತ್ರಿ 8.00 ಗಂಟೆಯವರೆಗೆ
ಅರ್ಜಿ ಸಲ್ಲಿಸುವವರು ಆನ್‌ಲೈನ್ ಮೂಲಕ ಮಾತ್ರ (Online Application) ಅರ್ಜಿ ಸಲ್ಲಿಸಬೇಕು. ಆನ್‌ಲೈನ್ ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ಸಲ್ಲಿಸಲಾದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಇದನ್ನೂ ಓದಿ: Jathi-Aadaya Pramanapatra- ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ – ಸಂಪೂರ್ಣ ಮಾಹಿತಿ
ನಿರುದ್ಯೋಗಿಗಳಿಗೆ ಉತ್ತಮ ಅವಕಾಶ
ಸ್ವಂತ ಉದ್ಯಮ ಆರಂಭಿಸಲು ಆಸಕ್ತಿ ಇರುವವರು, ಸಾರ್ವಜನಿಕ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ಉತ್ಸಾಹ ಹೊಂದಿರುವವರು ಹಾಗೂ ಫ್ರಾಂಚೈಸಿ ಆಧಾರದ ಮೇಲೆ ಸ್ಥಿರ ಆದಾಯ ಬಯಸುವವರಿಗೆ ಕರ್ನಾಟಕಒನ್ ಕೇಂದ್ರ ಸ್ಥಾಪನೆ ಅತ್ಯುತ್ತಮ ಅವಕಾಶವಾಗಿದೆ.
ಸರ್ಕಾರಿ ಸೇವೆಗಳನ್ನು ಜನರಿಗೆ ಸುಲಭವಾಗಿ ತಲುಪಿಸುವ ಈ ಮಹತ್ವದ ಯೋಜನೆಯ ಭಾಗವಾಗಲು ಆಸಕ್ತರು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸುವುದನ್ನು ಮರೆತಿರಬೇಡಿ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
- ದೂರವಾಣಿ: 080-24410574
- ಅರ್ಜಿ ಲಿಂಕ್: Apply Now
- ಅಧಿಕೃತ ಜಾಲತಾಣ: karnatakaone.gov.in