Prize Money Scholarship 2026: ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಎಸ್‌ಎಸ್‌ಎಲ್‌ಸಿ ಯಿಂದ ವೃತ್ತಿಪರ ಶಿಕ್ಷಣದವರೆಗೆ ₹35,000 ವರೆಗೆ ಪ್ರೋತ್ಸಾಹಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು (State & Central Government) ಹಲವು ವಿದ್ಯಾರ್ಥಿ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿವೆ. ಅದರಲ್ಲಿ ಸಮಾಜ ಕಲ್ಯಾಣ ಇಲಾಖೆಯ ‘ಪ್ರೋತ್ಸಾಹಧನ’ (Prize Money Scholarship) ಯೋಜನೆ ಕೂಡ ಒಂದಾಗಿದೆ.
ಈ ಯೋಜನೆಯಡಿ ಅರ್ಹ ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ (SSLC) ಯಿಂದ ಹಿಡಿದು ಸ್ನಾತಕೋತ್ತರ (Post Graduation) ಮತ್ತು ವೃತ್ತಿಪರ ಶಿಕ್ಷಣ (Professional Courses) ವರೆಗೆ ಗರಿಷ್ಠ ₹35,000 ವರೆಗೆ ಆರ್ಥಿಕ ನೆರವು (Financial Assistance) ನೀಡಲಾಗುತ್ತಿದೆ.
ಇದನ್ನೂ ಓದಿ: Free PSI Coaching Karnataka- ಉಚಿತ ಪಿಎಸ್‌ಐ ಕೋಚಿಂಗ್: 75 ದಿನಗಳ ಊಟ, ವಸತಿ ಸಹಿತ ತರಬೇತಿಗೆ ಆನ್‌ಲೈನ್ ಅರ್ಜಿ ಆಹ್ವಾನ
ದಿನಾಂಕ ವಿಸ್ತರಣೆ
ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಈ ಹಿಂದೆ ನಿಗದಿಪಡಿಸಿದ್ದ ಕೊನೆಯ ದಿನಾಂಕವನ್ನು (Last Date) ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದು.
ಈ ಲೇಖನದಲ್ಲಿ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ತರಗತಿವಾರು ಎಷ್ಟು ಪ್ರೋತ್ಸಾಹಧನ ಸಿಗುತ್ತದೆ? ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು ಯಾವುವು? ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ ಎಂಬ ಎಲ್ಲಾ ಮಾಹಿತಿಯನ್ನು ವಿವರವಾಗಿ ನೀಡಲಾಗಿದೆ.
ತರಗತಿವಾರು ಎಷ್ಟು ಪ್ರೋತ್ಸಾಹಧನ (Incentive Amount) ನೀಡಲಾಗುತ್ತದೆ?
ಸಮಾಜ ಕಲ್ಯಾಣ ಇಲಾಖೆಯ ಪ್ರೋತ್ಸಾಹಧನ ಯೋಜನೆಯಡಿ ವಿದ್ಯಾರ್ಥಿಗಳ ವಿದ್ಯಾರ್ಹತೆ (Qualification) ಮತ್ತು ಕೋರ್ಸ್ ಆಧಾರವಾಗಿ ಕೆಳಕಂಡಂತೆ ಪ್ರೋತ್ಸಾಹಧನ ನಿಗದಿಪಡಿಸಲಾಗಿದೆ:
- SSLC – 60% ರಿಂದ 75% ಅಂಕ: ₹7,500/-
- SSLC- 75% ಕ್ಕಿಂತ ಹೆಚ್ಚು ಅಂಕ: ₹15,000/-
- PUC / Diploma: ₹20,000/-
- ಪದವಿ (Degree): ₹25,000/-
- ಸ್ನಾತಕೋತ್ತರ ಪದವಿ (PG): ₹30,000/-
- ವೃತ್ತಿಪರ ಪದವಿ (Medical / Engineering / Agriculture ಇತ್ಯಾದಿ) ₹35,000/-
ಗಮನಿಸಿ: ಇದು ಒಮ್ಮೆ ಮಾತ್ರ (One Time Incentive) ನೀಡುವ ಪ್ರೋತ್ಸಾಹಧನವಾಗಿದೆ.

ಯಾರೆಲ್ಲ ಅರ್ಜಿ ಸಲ್ಲಿಸಬಹುದು? (Eligibility Criteria)
ಈ ಪ್ರೋತ್ಸಾಹಧನ ಯೋಜನೆಗೆ ಅರ್ಜಿ ಸಲ್ಲಿಸಲು ಸಮಾಜ ಕಲ್ಯಾಣ ಇಲಾಖೆಯು ಕೆಲವು ಅರ್ಹತಾ ಮಾನದಂಡಗಳನ್ನು (Eligibility Conditions) ನಿಗದಿಪಡಿಸಿದೆ. ಅವುಗಳು ಈ ಕೆಳಗಿನಂತಿವೆ:
- ಅರ್ಜಿದಾರ ವಿದ್ಯಾರ್ಥಿ ಕರ್ನಾಟಕ ರಾಜ್ಯದ ಖಾಯಂ ನಿವಾಸಿ ಆಗಿರಬೇಕು.
- ವಿದ್ಯಾರ್ಥಿ ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು.
- ವಿದ್ಯಾರ್ಥಿಯು ಕನಿಷ್ಠ ಪ್ರಥಮ ದರ್ಜೆ ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು.
- ಪ್ರಥಮ ಪ್ರಯತ್ನದಲ್ಲೇ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರ ಪ್ರೋತ್ಸಾಹಧನ ಲಭ್ಯವಾಗುತ್ತದೆ.
- ಈ ಬಗ್ಗೆ ಅಧಿಕೃತ ಅಧಿಸೂಚನೆಯಲ್ಲಿ (Official Notification) ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: Labour Card Pension Scheme: ಲೇಬರ್ ಕಾರ್ಡ್ ಮೂಲಕ ಪ್ರತಿ ತಿಂಗಳು ₹3,000 ರೂ. ಪಡೆಯಿರಿ | ಸರ್ಕಾರದ ಭದ್ರತಾ ಗ್ಯಾರಂಟಿ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ? (How to Apply Online)
ಅರ್ಹ ವಿದ್ಯಾರ್ಥಿಗಳು ಕೆಳಗಿನ ಹಂತಗಳನ್ನು (Steps) ಅನುಸರಿಸಿ ಸುಲಭವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು:
ಹಂತ-1: ಮೊದಲಿಗೆ ಸಮಾಜ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ (Official Website) ಗೆ ಭೇಟಿ ನೀಡಬೇಕು. ಅದಕ್ಕಾಗಿ ಈ Prize Money Online Application ಲಿಂಕ್ ಮೇಲೆ ಕ್ಲಿಕ್ ಮಾಡಿ.
ಹಂತ-2: ವೆಬ್‌ಸೈಟ್‌ನಲ್ಲಿ ಕಾಣಿಸುವ Scholarship / Prize Money Sectionಗೆ ಹೋಗಿ One Time Registration / Login ಆಯ್ಕೆಯನ್ನು ಕ್ಲಿಕ್ ಮಾಡಿ. ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆ ನಮೂದಿಸಿ OTP (One Time Password) ಮೂಲಕ ಲಾಗಿನ್ ಆಗಬೇಕು.
ಹಂತ-3: ಲಾಗಿನ್ ಆದ ನಂತರ ಅಧಿಕೃತ ಅರ್ಜಿ ನಮೂನೆ (Application Form) ತೆರೆದುಕೊಳ್ಳುತ್ತದೆ. ಅಲ್ಲಿ ಕೇಳಲಾಗುವ ಎಲ್ಲಾ ವೈಯಕ್ತಿಕ ವಿವರಗಳು, ವಿದ್ಯಾರ್ಹತೆ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.
ಅಗತ್ಯ ದಾಖಲೆಗಳನ್ನು (Upload Documents) ಅಪ್‌ಲೋಡ್ ಮಾಡಿ. ಕೊನೆಯಲ್ಲಿ Submit Button ಮೇಲೆ ಕ್ಲಿಕ್ ಮಾಡಿ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: Gruha Lakshmi Yojane: 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್! ನಿಮಗೂ ಹಣ ಜಮೆಯಾಗಿಲ್ಲವೇ?
ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು (Required Documents)
ಆನ್‌ಲೈನ್ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕೆಳಗಿನ ದಾಖಲೆಗಳನ್ನು ಸಿದ್ಧವಾಗಿರಿಸಿಕೊಳ್ಳಬೇಕು:
- ಜಾತಿ ಪ್ರಮಾಣ ಪತ್ರ (Caste Certificate)
- ಆದಾಯ ಪ್ರಮಾಣ ಪತ್ರ (Income Certificate)
- ಅಂಕಪಟ್ಟಿ (Marks Card)
- ಆಧಾರ್ ಕಾರ್ಡ್ (Aadhaar Card)
- ಬ್ಯಾಂಕ್ ಖಾತೆ ವಿವರಗಳು (Bank Account Details)
- ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ (Passport Size Photo)
- ವ್ಯಾಸಂಗ ಪ್ರಮಾಣ ಪತ್ರ / ಬೋನಫೈಡ್ ಪ್ರಮಾಣ ಪತ್ರ (Study / Bonafide Certificate)
ಇದನ್ನೂ ಓದಿ: Jathi-Aadaya Pramanapatra- ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ – ಸಂಪೂರ್ಣ ಮಾಹಿತಿ
ಸಹಾಯವಾಣಿ ಮಾಹಿತಿ (Helpline)
ಯೋಜನೆಗೆ ಸಂಬAಧಿಸಿದ ಹೆಚ್ಚಿನ ಮಾಹಿತಿಗಾಗಿ ಅಥವಾ ಅರ್ಜಿ ಸಲ್ಲಿಸುವಾಗ ತಾಂತ್ರಿಕ ತೊಂದರೆ ಎದುರಾದಲ್ಲಿ, ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ 24×7 ಸಹಾಯವಾಣಿ ಸಂಖ್ಯೆ 94823 00400ಗೆ ಕರೆ ಮಾಡಬಹುದು:
ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕದೊಳಗೆ (Before Last Date) ತಪ್ಪದೇ ಅರ್ಜಿ ಸಲ್ಲಿಸಿ ಈ ಆರ್ಥಿಕ ನೆರವಿನ ಪ್ರಯೋಜನವನ್ನು ಪಡೆದುಕೊಳ್ಳಿ.
I riqvested mobile cantine
6360762957