Free PSI Coaching Karnataka: ಕರ್ನಾಟಕ ಸರ್ಕಾರದಿಂದ 75 ದಿನಗಳ ಊಟ-ವಸತಿ ಸಹಿತ ಉಚಿತ ಪಿಎಸ್‌ಐ ಕೋಚಿಂಗ್ ಆಯೋಜಿಸಿದೆ. ಆನ್‌ಲೈನ್ ಅರ್ಜಿ, ಅರ್ಹತೆ, ಆಯ್ಕೆ ಪ್ರಕ್ರಿಯೆ ಸಂಪೂರ್ಣ ಮಾಹಿತಿ…
ಪೊಲೀಸ್ ಸಬ್‌ಇನ್ಸ್ಪೆಕ್ಟರ್ (PSI – Police Sub Inspector) ಆಗಬೇಕೆಂಬ ಕನಸು ಅನೇಕರಿಗೆ ಇದೆ. ಆದರೆ ಖಾಸಗಿ ಕೋಚಿಂಗ್ ಕೇಂದ್ರಗಳಲ್ಲಿ ಲಕ್ಷಾಂತರ ರೂಪಾಯಿ (huge coaching fees) ಖರ್ಚು ಮಾಡುವ ಸಾಮರ್ಥ್ಯ ಎಲ್ಲರಲ್ಲೂ ಇರದು. ವಿಶೇಷವಾಗಿ ಬಡ ಹಾಗೂ ಮಧ್ಯಮ ವರ್ಗದ ಅಭ್ಯರ್ಥಿಗಳಿಗೆ ಇದು ದೊಡ್ಡ ಅಡ್ಡಿಯಾಗಿದೆ.
ಇಂತಹ ಸಾವಿರಾರು ಯುವಕರ ಕನಸಿಗೆ ನೆರವಾಗಲು ಕರ್ನಾಟಕ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ (BCWD) 2025-26ನೇ ಸಾಲಿನ ಪಿಎಸ್‌ಐ ನೇಮಕಾತಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಅರ್ಹ ಅಭ್ಯರ್ಥಿಗಳಿಗಾಗಿ ಉಚಿತ ಪಿಎಸ್‌ಐ ಕೋಚಿಂಗ್ ಯೋಜನೆ (Free PSI Coaching Scheme) ಯನ್ನು ಜಾರಿಗೆ ತಂದಿದೆ.
ಸದರಿ ಯೋಇನೆಯ ಅಡಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ 75 ದಿನಗಳ ಕಾಲ ಉಚಿತ ತರಬೇತಿ (75 Days Residential Training) ನೀಡಲಾಗುತ್ತದೆ. ಜೊತೆಗೆ ಉಚಿತ ಊಟ ಮತ್ತು ವಸತಿ (Free Food & Accommodation) ಸೌಲಭ್ಯವನ್ನೂ ಕೂಡ ಸರ್ಕಾರವೇ ಒದಗಿಸುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು? (Eligibility Criteria)
ಈ ಉಚಿತ ತರಬೇತಿ ಯೋಜನೆಯ ಲಾಭ ಪಡೆಯಲು ಅಭ್ಯರ್ಥಿಗಳು ಕೆಳಗಿನ ಅರ್ಹತಾ ಮಾನದಂಡಗಳನ್ನು ಕಡ್ಡಾಯವಾಗಿ ಪೂರೈಸಿರಬೇಕು:
ಜಾತಿ / ವರ್ಗ (Category): ಅಭ್ಯರ್ಥಿಯು ಪ್ರವರ್ಗ-1, 2ಎ, 2ಬಿ, 3ಎ ಮತ್ತು 3ಬಿ ವರ್ಗಗಳಿಗೆ ಸೇರಿದವರಾಗಿರಬೇಕು.
ವಿದ್ಯಾರ್ಹತೆ (Educational Qualification): ಯುಜಿಸಿ (UGC – University Grants Commission) ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಪದವಿ (Any Degree) ಪಡೆದಿರಬೇಕು.
ವಯೋಮಿತಿ (Age Limit): ಕನಿಷ್ಠ ವಯಸ್ಸು: 21 ವರ್ಷ ಹಾಗೂ ಗರಿಷ್ಠ ವಯಸ್ಸು: 27 ವರ್ಷ (ವಯಸ್ಸು ಲೆಕ್ಕ ಹಾಕುವಿಕೆ ಅಧಿಕೃತ ನಿಯಮಾವಳಿಯಂತೆ)
ಆದಾಯ ಮಿತಿ (Income Limit): ಅಭ್ಯರ್ಥಿಯ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ. 8 ಲಕ್ಷಗಳ ಒಳಗಿರಬೇಕು.
ನಿವಾಸ ಪ್ರಮಾಣ (Domicile): ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಾಸಿ (Karnataka Domicile) ಆಗಿರಬೇಕು.
ಇದನ್ನೂ ಓದಿ: Labour Card Pension Scheme: ಲೇಬರ್ ಕಾರ್ಡ್ ಮೂಲಕ ಪ್ರತಿ ತಿಂಗಳು ₹3,000 ರೂ. ಪಡೆಯಿರಿ | ಸರ್ಕಾರದ ಭದ್ರತಾ ಗ್ಯಾರಂಟಿ
ತರಬೇತಿ ಎಲ್ಲಿ ನಡೆಯುತ್ತದೆ? ಸೌಲಭ್ಯಗಳೇನು? (Training Details)
ತರಬೇತಿ ಅವಧಿ (Duration): ಒಟ್ಟು 75 ದಿನಗಳ ತರಬೇತಿ (75 Days Coaching Program) ನೀಡಲಾಗುತ್ತದೆ.
ತರಬೇತಿ ಸ್ಥಳ (Training Centers): ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ರಾಜ್ಯದಾದ್ಯಂತ ಗುರುತಿಸಿರುವ ಪ್ರತಿಷ್ಠಿತ ಕೋಚಿಂಗ್ ಸಂಸ್ಥೆಗಳಲ್ಲಿ (Reputed Training Institutes) ತರಬೇತಿ ನೀಡಲಿದೆ.

ಸೌಲಭ್ಯಗಳು (Facilities)
- ತರಬೇತಿ ಶುಲ್ಕ ಸಂಪೂರ್ಣ ಉಚಿತ
- ಉಚಿತ ಊಟ ಮತ್ತು ವಸತಿ
- ಊಟ ಮತ್ತು ವಸತಿ ಬಳಸದೆ ಹೊರಗಡೆ ಉಳಿಯುವ ಅಭ್ಯರ್ಥಿಗಳಿಗೆ ಮಾಸಿಕ ಭತ್ಯೆ (Monthly Stipend) ನೀಡಲಾಗುತ್ತದೆ
ಕಂದಾಯ ವಿಭಾಗವಾರು ತರಬೇತಿ (Division-wise Training)
ರಾಜ್ಯದ 4 ಕಂದಾಯ ವಿಭಾಗಗಳಲ್ಲಿ (Revenue Divisions) ತರಬೇತಿ ಆಯೋಜಿಸಲಾಗುತ್ತದೆ:
- ಪುರುಷ ಅಭ್ಯರ್ಥಿಗಳಿಗೆ: ಬೆಂಗಳೂರು, ಬೆಳಗಾವಿ ಮತ್ತು ಕಲಬುರಗಿ ವಿಭಾಗಗಳು
- ಮಹಿಳಾ ಅಭ್ಯರ್ಥಿಗಳಿಗೆ: ಮೈಸೂರು ವಿಭಾಗದಲ್ಲಿ ಮಾತ್ರ
ಆಯ್ಕೆ ಪ್ರಕ್ರಿಯೆ ಹೇಗೆ? (Selection Process)
ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸಂಪೂರ್ಣವಾಗಿ ಮೆರಿಟ್ ಆಧಾರಿತ (Merit Based Selection) ಆಗಿರುತ್ತದೆ.
ಪದವಿಯಲ್ಲಿ ಪಡೆದ ಒಟ್ಟು ಶೇಕಡಾವಾರು ಅಂಕಗಳ ಆಧಾರದ ಮೇಲೆ ((Degree Percentage) ಮೆರಿಟ್ ಪಟ್ಟಿ ತಯಾರಿಸಲಾಗುತ್ತದೆ. ಯಾವುದೇ ಪ್ರತ್ಯೇಕ ಪ್ರವೇಶ ಪರೀಕ್ಷೆ (Entrance Exam) ಇರುವುದಿಲ್ಲ.
ಮುಖ್ಯ ಸೂಚನೆ: ಈ ಹಿಂದೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ UPSC / KPSC / Banking ಪರೀಕ್ಷೆಗಳಿಗಾಗಿ ಉಚಿತ ತರಬೇತಿ ಪಡೆದವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ಇದನ್ನೂ ಓದಿ: Gruha Lakshmi Yojane: 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್! ನಿಮಗೂ ಹಣ ಜಮೆಯಾಗಿಲ್ಲವೇ?
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು (Required Documents)
ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಕೆಳಗಿನ ದಾಖಲೆಗಳನ್ನು ಅಪ್‌ಲೋಡ್ ಮಾಡಬೇಕು:
- ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ – ಜನ್ಮ ದಿನಾಂಕ ದೃಢೀಕರಣಕ್ಕೆ
- ಪದವಿ ಅಂಕಪಟ್ಟಿಗಳು
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಆಧಾರ್ ಕಾರ್ಡ್
- ವಿಕಲಚೇತನರಾಗಿದ್ದಲ್ಲಿ (PWD) ಪ್ರಮಾಣ ಪತ್ರ
- ಇಲಾಖೆಯು ಸೂಚಿಸುವ ಇತರೆ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ (How to Apply)
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ bcwd.karnataka.gov.inಗೆ ಭೇಟಿ ನೀಡಿ ಆನ್‌ಲೈನ್ ಮೂಲಕವೇ (Online Application) ಅರ್ಜಿ ಸಲ್ಲಿಸಬೇಕು.

ಆಫ್‌ಲೈನ್ ಅಥವಾ ಅಂಚೆ ಮೂಲಕ ಸಲ್ಲಿಸಿದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಸರ್ವರ್ ಸಮಸ್ಯೆ (Server Issue) ಉಂಟಾಗುವ ಸಾಧ್ಯತೆ ಇರುವುದರಿಂದ, ಕೊನೆಯ ದಿನಕ್ಕಾಗಿ ಕಾಯದೆ ಇಂದೇ ಅರ್ಜಿ ಸಲ್ಲಿಸುವುದು ಉತ್ತಮ.
ಇದನ್ನೂ ಓದಿ: Jathi-Aadaya Pramanapatra- ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ – ಸಂಪೂರ್ಣ ಮಾಹಿತಿ
ಇಂದೇ ಅರ್ಜಿ ಹಾಕಿ…
ಪಿಎಸ್‌ಐ ಹುದ್ದೆಗಳಿಗೆ ಸ್ಪರ್ಧೆ ದಿನೇದಿನೇ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ, ಖಾಸಗಿ ಕೋಚಿಂಗ್‌ಗೆ ಸಾವಿರಾರು ರೂಪಾಯಿ ಖರ್ಚು ಮಾಡುವ ಬದಲು, ಸರ್ಕಾರವೇ ನೀಡುತ್ತಿರುವ ಈ ಉಚಿತ ಪಿಎಸ್‌ಐ ಕೋಚಿಂಗ್ ಅನ್ನು ಸದುಪಯೋಗಪಡಿಸಿಕೊಳ್ಳಿ.
ಇದು ಕೇವಲ ತರಬೇತಿ ಮಾತ್ರವಲ್ಲ, ನಿಮ್ಮ ಸರ್ಕಾರಿ ಉದ್ಯೋಗ ಕನಸಿಗೆ (Government Job Dream) ಮೊದಲ ದೊಡ್ಡ ಹೆಜ್ಜೆಯಾಗಬಹುದು. ಅವಕಾಶ ಕೈ ತಪ್ಪಿಸಿಕೊಳ್ಳದೆ, ಇಂದೇ ಅರ್ಜಿ ಹಾಕಿ.
ಪ್ರಮುಖ ಲಿಂಕುಗಳು
Grama Panchayati Yojanegalu- ಗ್ರಾಮ ಪಂಚಾಯತಿ ಮೂಲಕ ಯಾವೆಲ್ಲ ಯೋಜನೆ ಪ್ರಯೋಜನ ಪಡೆಯಬಹುದು? ಸಂಪೂರ್ಣ ಮಾಹಿತಿ