New Ration Card: ಈ ದಾಖಲೆಗಳಿದ್ರೆ 15 ದಿನದಲ್ಲಿ ನಿಮಗೆ ರೇಷನ್ ಕಾರ್ಡ್ ಸಿಗುತ್ತೆ!

WhatsApp Group Join Now
Telegram Group Join Now

New Ration Card: ಕೆಲವು ವಿಶೇಷ ದಾಖಲೆಗಳು ಇದ್ದರೆ ಕೇವಲ 15 ದಿನದಲ್ಲಿ ರೇಷನ್ ಕಾರ್ಡ್ ಪಡೆಯಬಹುದಾಗಿದ್ದು; ಯಾರಿಗೆಲ್ಲ ತುರ್ತು ರೇಷನ್ ರೇಷನ್ ಕಾರ್ಡ್ ಸಿಗುತ್ತೆ? ಸಂಪೂರ್ಣ ಮಾಹಿತಿ ಇಲ್ಲಿದೆ…

ರೇಷನ್ ಕಾರ್ಡ್ ಎಂದರೆ ಕೇವಲ ಆಹಾರ ಧಾನ್ಯ ಪಡೆಯುವ ಚೀಟಿ ಮಾತ್ರವಲ್ಲ. ಅದು ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳ ಆರ್ಥಿಕ ಭದ್ರತೆಗೆ ಆಧಾರವಾಗಿರುವ ಪ್ರಮುಖ ಸರ್ಕಾರಿ ದಾಖಲೆ. ಕರ್ನಾಟಕದಲ್ಲಿ ಲಕ್ಷಾಂತರ ಕುಟುಂಬಗಳು ಪಡಿತರ ಚೀಟಿಯ ಮೂಲಕ ಅಗ್ಗದ ದರದಲ್ಲಿ ಅಕ್ಕಿ, ಗೋಧಿ, ಕಿರುಧಾನ್ಯಗಳು ಮತ್ತು ಇತರ ಅಗತ್ಯ ವಸ್ತುಗಳನ್ನು ಪಡೆಯುತ್ತಿದ್ದಾರೆ.

ಇತ್ತೀಚೆಗೆ ರಾಜ್ಯ ಸರ್ಕಾರದಿಂದ ಬಂದಿರುವ ಹೊಸ ಮಾಹಿತಿಯಂತೆ, ಸಾಮಾನ್ಯ ಹೊಸ ರೇಷನ್ ಕಾರ್ಡ್ ಅರ್ಜಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಆದರೆ, ಕೆಲ ವಿಶೇಷ ಹಾಗೂ ತುರ್ತು ಸಂದರ್ಭಗಳಲ್ಲಿ ಮಾತ್ರ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಇಂತಹ ಅರ್ಜಿಗಳಿಗೆ ಪ್ರಕ್ರಿಯೆ ವೇಗವಾಗಿ ನಡೆದು 7 ರಿಂದ 15 ದಿನಗಳೊಳಗೆ ರೇಷನ್ ಕಾರ್ಡ್ ಸಿಗುವ ಸಾಧ್ಯತೆ ಇದೆ.

ಈ ಲೇಖನದಲ್ಲಿ ಯಾರಿಗೆ ತುರ್ತು ರೇಷನ್ ಕಾರ್ಡ್ ಸಿಗುತ್ತದೆ? ಯಾವ ದಾಖಲೆಗಳು ಕಡ್ಡಾಯ? ಅರ್ಜಿ ಹೇಗೆ ಸಲ್ಲಿಸಬೇಕು? ಎಷ್ಟು ದಿನಗಳಲ್ಲಿ ಪಡಿತರ ಚೀಟಿ ಸಿಗುತ್ತದೆ? ಎಂಬ ಎಲ್ಲಾ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುತ್ತದೆ.

ಇದನ್ನೂ ಓದಿ: Gruha Lakshmi Yojane: 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್! ನಿಮಗೂ ಹಣ ಜಮೆಯಾಗಿಲ್ಲವೇ?

ಈಗ ಹೊಸ ರೇಷನ್ ಕಾರ್ಡ್’ಗೆ ಯಾರಿಗೆ ಅವಕಾಶ ಇದೆ?

ಸರ್ಕಾರದ ಇತ್ತೀಚಿನ ಆದೇಶದಂತೆ, ಕೆಳಗಿನ ವಿಶೇಷ ವರ್ಗದವರು ಮಾತ್ರ ಹೊಸ ಪಡಿತರ ಚೀಟಿಗೆ ಅರ್ಜಿ ಹಾಕಬಹುದು.

1. ಇ-ಶ್ರಮ್ ಕಾರ್ಡ್ ಹೊಂದಿರುವವರು

ಅಸಂಘಟಿತ ಕ್ಷೇತ್ರದಲ್ಲಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಗೃಹಕಾರ್ಮಿಕರು ಮೊದಲಾದವರು ಇ-ಶ್ರಮ್ ಕಾರ್ಡ್ ಹೊಂದಿದ್ದರೆ ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಸಬಹುದು.

ಅರ್ಹತೆ: ವಯಸ್ಸು16 ರಿಂದ 59 ವರ್ಷ. EPFO, ESI ಅಥವಾ NPS ಸದಸ್ಯರಾಗಿರಬಾರದು ಮತ್ತು ಕುಟುಂಬದಲ್ಲಿ ಈಗಾಗಲೇ ರೇಷನ್ ಕಾರ್ಡ್ ಇರಬಾರದು. ಇ-ಶ್ರಮ್ ಕಾರ್ಡ್ ಇರುವುದರಿಂದ ಅರ್ಜಿಗೆ ಆದ್ಯತೆ ಸಿಗುತ್ತದೆ ಮತ್ತು ಪರಿಶೀಲನೆ ವೇಗವಾಗಿ ನಡೆಯುತ್ತದೆ.

ಇದನ್ನೂ ಓದಿ: Post Office Recruitment 2026- ಪೋಸ್ಟ್ ಆಫೀಸ್ ನೇಮಕಾತಿ | ಎಸ್ಸೆಸ್ಸೆಲ್ಸಿ ಪಾಸಾದವರಿಗೆ 1,023 ಹುದ್ದೆಗಳು | ನಿಮ್ಮೂರಲ್ಲೇ ಉದ್ಯೋಗ ಮಾಡುವ ಅವಕಾಶ

2. ವೈದ್ಯಕೀಯ ತುರ್ತು ಪರಿಸ್ಥಿತಿ ಇರುವ ಕುಟುಂಬಗಳು

ಕುಟುಂಬದ ಸದಸ್ಯರಿಗೆ ಗಂಭೀರ ಅನಾರೋಗ್ಯ, ಅಪಘಾತ, ಶಸ್ತ್ರಚಿಕಿತ್ಸೆ ಅಥವಾ ದೀರ್ಘಕಾಲದ ಆಸ್ಪತ್ರೆ ಚಿಕಿತ್ಸೆ ಅಗತ್ಯವಿದ್ದರೆ, ವೈದ್ಯಕೀಯ ತುರ್ತು ಆಧಾರದಲ್ಲಿ ಹೊಸ ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಸಬಹುದು.

ಈ ಸಂದರ್ಭದಲ್ಲಿ ಆಸ್ಪತ್ರೆ ದಾಖಲೆಗಳು, ವೈದ್ಯರ ಪ್ರಮಾಣ ಪತ್ರ ಕಡ್ಡಾಯವಾಗಿ ಸಲ್ಲಿಸಬೇಕು. ಈ ರೀತಿಯ ಅರ್ಜಿಗಳಿಗೆ ಸಾಮಾನ್ಯವಾಗಿ 7 ದಿನಗಳೊಳಗೆ ನಿರ್ಧಾರ ಕೈಗೊಳ್ಳಲಾಗುತ್ತದೆ.

New Ration Card
New Ration Card

ಇದನ್ನೂ ಓದಿ: Jathi-Aadaya Pramanapatra- ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ – ಸಂಪೂರ್ಣ ಮಾಹಿತಿ

3. ಪಿವಿಟಿಜಿ (PVTG) ಸಮುದಾಯದವರು

ರಾಜ್ಯದಲ್ಲಿರುವ ಅತ್ಯಂತ ಹಿಂದುಳಿದ ಮತ್ತು ವಿಶೇಷ ಬುಡಕಟ್ಟು ಸಮುದಾಯಗಳಾದ ಪಿವಿಟಿಜಿ (Particularly Vulnerable Tribal Groups) ಕುಟುಂಬಗಳಿಗೆ ಸರ್ಕಾರ ವಿಶೇಷ ಆದ್ಯತೆ ನೀಡಿದೆ.

ಈ ವರ್ಗದ ಫಲಾನುಭವಿಗಳ ಕುಟುಂಬದ ವಾರ್ಷಿಕ ಆದಾಯ ಸರ್ಕಾರ ನಿಗದಿಪಡಿಸಿದ ಮಿತಿಯೊಳಗೆ ಇರಬೇಕು. ಸಂಬಂಧಿತ ಜಾತಿ ಪ್ರಮಾಣಪತ್ರ ಕಡ್ಡಾಯ.

ಇದನ್ನೂ ಓದಿ: Grama Panchayati Yojanegalu- ಗ್ರಾಮ ಪಂಚಾಯತಿ ಮೂಲಕ ಯಾವೆಲ್ಲ ಯೋಜನೆ ಪ್ರಯೋಜನ ಪಡೆಯಬಹುದು? ಸಂಪೂರ್ಣ ಮಾಹಿತಿ

4. ಹೊಸ ವಿವಾಹಿತ ದಂಪತಿಗಳು

ಇತ್ತೀಚೆಗೆ ವಿವಾಹವಾದ ದಂಪತಿಗಳು ಅಥವಾ ಪ್ರತ್ಯೇಕವಾಗಿ ಹೊಸ ಕುಟುಂಬ ಆರಂಭಿಸಿರುವವರು ಕೂಡ ಈ ವಿಶೇಷ ವರ್ಗದಡಿ ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸಲು ಅವಧಿ ಮತ್ತು ಸಮಯ

  • ಅರ್ಜಿ ಅವಧಿ: 2025 ಅಕ್ಟೋಬರ್ 4 ರಿಂದ 2026 ಮಾರ್ಚ್ 31 ರವರೆಗೆ
  • ಸಮಯ: ಬೆಳಿಗ್ಗೆ 10 ಗಂಟೆಯಿAದ ಸಂಜೆ 5 ಗಂಟೆಯವರೆಗೆ

ಇದನ್ನೂ ಓದಿ: Jameenina Mele Saala- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಮೊಬೈಲ್‌ನಲ್ಲೇ ಚೆಕ್ ಮಾಡಿ | ಸಂಪೂರ್ಣ ಮಾಹಿತಿ ಇಲ್ಲಿದೆ

ಹೊಸ ರೇಷನ್ ಕಾರ್ಡ್’ಗೆ ಅಗತ್ಯ ಅರ್ಹತೆ

  • ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
  • ಕುಟುಂಬದಲ್ಲಿ ಈಗಾಗಲೇ ರೇಷನ್ ಕಾರ್ಡ್ ಇರಬಾರದು
  • ಸಲ್ಲಿಸುವ ಎಲ್ಲಾ ದಾಖಲೆಗಳು ನಿಖರ ಮತ್ತು ಮಾನ್ಯವಾಗಿರಬೇಕು

ಇದನ್ನೂ ಓದಿ: PM Surya Ghar Yojana- ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಅರ್ಜಿ ಆಹ್ವಾನ | ಸಂಪೂರ್ಣ ಮಾಹಿತಿ ಇಲ್ಲಿದೆ…

ರೇಷನ್ ಕಾರ್ಡ್’ಗೆ ಅರ್ಜಿ ಸಲ್ಲಿಸುವ ವಿಧಾನ

ಮೇಲ್ಕಾಣಿಸಿದ ವರ್ಗದ ಫಲಾನುಭವಿಗಳು ಅಗತ್ಯ ದಾಖಲೆಗಳನ್ನು ಹೊಂದಿದ್ದೆ ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ರೀತಿಯಲ್ಲೂ ಅರ್ಜಿ ಸಲ್ಲಿಸಲು ಅವಕಾಶವಿದೆ.

ಆನ್‌ಲೈನ್ ಮೂಲಕ ಅರ್ಜಿ

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ ‘ಹೊಸ ಪಡಿತರ ಚೀಟಿ’ ಆಯ್ಕೆಮಾಡಿ, ಆಧಾರ್ ಸಂಖ್ಯೆ ನಮೂದಿಸಿ. ಬಯೋಮೆಟ್ರಿಕ್ ದೃಢೀಕರಣ ಮಾಡಿ, ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ ಅರ್ಜಿ ಸಲ್ಲಿಸಿ.

New Ration Card
New Ration Card

ಆನ್‌ಲೈನ್ ಅರ್ಜಿ ಲಿಂಕ್: ahara.karnataka.gov.in

ಆಫ್‌ಲೈನ್ ಮೂಲಕ ಅರ್ಜಿ

ನಿಮ್ಮ ಹತ್ತಿರದ ಗ್ರಾಮ್ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳು ಅಥವಾ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಅರ್ಜಿ ನಮೂನೆ ಭರ್ತಿ ಮಾಡಿ, ದಾಖಲೆಗಳೊಂದಿಗೆ ಸಲ್ಲಿಸಬಹುದು.

ಅಗತ್ಯ ದಾಖಲೆಗಳ ಸಂಪೂರ್ಣ ಪಟ್ಟಿ

  • ಇ-ಶ್ರಮ್ ಕಾರ್ಡ್ (ವಿಶೇಷ ಅರ್ಜಿಗಳಿಗೆ ಕಡ್ಡಾಯ)
  • ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
  • ವಿಳಾಸ ಪುರಾವೆ (ವಿದ್ಯುತ್ ಬಿಲ್ / ವೋಟರ್ ಐಡಿ / ಡ್ರೈವಿಂಗ್ ಲೈಸೆನ್ಸ್)
  • ಆದಾಯ ಪ್ರಮಾಣಪತ್ರ
  • ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
  • ಪಾಸ್‌ಪೋರ್ಟ್ ಸೈಜ್ ಫೋಟೋ
  • ವೈದ್ಯಕೀಯ ತುರ್ತು ಪ್ರಕರಣಕ್ಕೆ ಆಸ್ಪತ್ರೆ ದಾಖಲೆಗಳು
  • 6 ವರ್ಷದೊಳಗಿನ ಮಕ್ಕಳಿಗೆ ಜನನ ಪ್ರಮಾಣಪತ್ರ

ಇದನ್ನೂ ಓದಿ: Free Fodder Seed Kit Scheme- ರೈತರಿಗೆ ಉಚಿತ ಮೇವಿನ ಬೀಜ ಕಿಟ್ ವಿತರಣೆ | ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿ

ಎಷ್ಟು ದಿನಗಳಲ್ಲಿ ರೇಷನ್ ಕಾರ್ಡ್ ಸಿಗುತ್ತದೆ?

ಸಾಮಾನ್ಯ ಅರ್ಜಿಗಳಿಗೆ 15-30 ದಿನಗಳು ಬೇಕಾಗುತ್ತದೆ. ವೈದ್ಯಕೀಯ ತುರ್ತು ಅರ್ಜಿಗಳಿಗೆ ಎಲ್ಲಾ ದಾಖಲೆಗಳು ಸರಿಯಾಗಿ ಇದ್ದರೆ 7 ರಿಂದ 15 ದಿನಗಳಲ್ಲಿ ರೇಷನ್ ಕಾರ್ಡ್ ಸಿಗುತ್ತದೆ.

ರೇಷನ್ ಕಾರ್ಡ್ ತಿದ್ದುಪಡಿಗೂ ಅವಕಾಶ

ಮಾರ್ಚ್ 31ರವರೆಗೆ ಈ ಬದಲಾವಣೆಗಳನ್ನು ಕೂಡ ಮಾಡಬಹುದು:

  • ಹೊಸ ಸದಸ್ಯ ಸೇರಿಸುವುದು
  • ಹೆಸರು ತಿದ್ದುಪಡಿ
  • ವಿಳಾಸ ನವೀಕರಣ
  • ಸದಸ್ಯರನ್ನು ತೆಗೆದುಹಾಕುವುದು

ಇದನ್ನೂ ಓದಿ: BSNL Recruitment 2026: ಬಿಎಸ್‌ಎನ್‌ಎಲ್‌ನಲ್ಲಿ ಭರ್ಜರಿ ನೇಮಕಾತಿ | ತಿಂಗಳಿಗೆ 90,000 ರೂ.ವರೆಗೆ ವೇತನ – ಸಂಪೂರ್ಣ ಮಾಹಿತಿ

ಮುಖ್ಯ ಸೂಚನೆಗಳು

ಯಾವುದೇ ಕಾರಣಕ್ಕೂ ನಕಲಿ ದಾಖಲೆಗಳನ್ನು ಬಳಸಬೇಡಿ. ಕಾನೂನು ಸಮಸ್ಯೆ ಎದುರಾಗಬಹುದು. ಅರ್ಜಿ ಸಲ್ಲಿಸಿದ ನಂತರ ಅರ್ಜಿ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ‍್ಯಾಕ್ ಮಾಡಬಹುದು.

ಎಲ್ಲಾ ದಾಖಲೆಗಳು ಸಿದ್ಧವಾಗಿದ್ದರೆ, ವಿಶೇಷವಾಗಿ ಇ-ಶ್ರಮ್ ಕಾರ್ಡ್ ಅಥವಾ ವೈದ್ಯಕೀಯ ದಾಖಲೆಗಳಿದ್ದರೆ, ರೇಷನ್ ಕಾರ್ಡ್ ಪಡೆಯುವ ಪ್ರಕ್ರಿಯೆ ಇನ್ನಷ್ಟು ವೇಗವಾಗಿ ಪೂರ್ಣಗೊಳ್ಳುತ್ತದೆ.

Gruha Lakshmi Yojane: 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್! ನಿಮಗೂ ಹಣ ಜಮೆಯಾಗಿಲ್ಲವೇ?

WhatsApp Group Join Now
Telegram Group Join Now

9 thoughts on “New Ration Card: ಈ ದಾಖಲೆಗಳಿದ್ರೆ 15 ದಿನದಲ್ಲಿ ನಿಮಗೆ ರೇಷನ್ ಕಾರ್ಡ್ ಸಿಗುತ್ತೆ!”

Leave a Comment