Gruhalakshmi Scheme 27th Installment: ಕರ್ನಾಟಕದ ಗೃಹಲಕ್ಷ್ಮಿ ಯೋಜನೆಯ 27ನೇ ಕಂತಿನ ₹2000 ಹಣ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಪ್ರಕ್ರಿಯೆ ಆರಂಭವಾಗಿದೆ. ನಿಮ್ಮ ಖಾತೆಗೆ ಹಣ ಬಂದಿದೆಯೇ? ಮೊಬೈಲ್‌ನಲ್ಲಿ ಚೆಕ್ ಮಾಡಿ…
ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಅತ್ಯಂತ ಜನಪ್ರಿಯ ಕಲ್ಯಾಣ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ (Gruha Lakshmi Scheme) ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕವಾಗಿ ಬಲ ನೀಡುತ್ತಿರುವ ಮಹತ್ವದ ಕಾರ್ಯಕ್ರಮವಾಗಿದೆ.
ಇದೀಗ ರಾಜ್ಯ ಸರ್ಕಾರ ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 27ನೇ ಕಂತಿನ ಹಣ ಜಮಾ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈಗಾಗಲೇ ಹಲವು ಮಹಿಳೆಯರ ಖಾತೆಗಳಿಗೆ ಹಣ ಜಮೆಯಾಗಿದ್ದು, ಉಳಿದವರಿಗೆ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಲಾಗುತ್ತಿದೆ.
ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಗೃಹಲಕ್ಷ್ಮಿ ಯೋಜನೆ
ಗೃಹಲಕ್ಷ್ಮಿ ಯೋಜನೆ ಆರಂಭವಾದ ಬಳಿಕ ರಾಜ್ಯದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಮಹಿಳೆಯರ ಬದುಕಿನಲ್ಲಿ ಗಮನಾರ್ಹ ಬದಲಾವಣೆ ಕಂಡುಬAದಿದೆ. ಮನೆಯ ಖರ್ಚು, ದಿನನಿತ್ಯದ ಅಗತ್ಯ ವಸ್ತುಗಳ ಖರೀದಿ, ಮಕ್ಕಳ ಶಿಕ್ಷಣ ಅಥವಾ ಸಣ್ಣಪುಟ್ಟ ಖರ್ಚುಗಳಿಗೆ ಈ ಹಣ ದೊಡ್ಡ ಸಹಾಯವಾಗುತ್ತಿದೆ.
ಇಂದಿನ ದಿನಗಳಲ್ಲಿ ಆಹಾರ ಪದಾರ್ಥಗಳು ಸೇರಿದಂತೆ ಅನೇಕ ವಸ್ತುಗಳ ಬೆಲೆ ಏರಿಕೆಯಾಗಿರುವ ಸಂದರ್ಭದಲ್ಲಿ, ಪ್ರತಿ ತಿಂಗಳು ದೊರೆಯುವ ಈ ₹2,000 ಆರ್ಥಿಕ ನೆರವು ಅನೇಕ ಕುಟುಂಬಗಳಿಗೆ ಆರ್ಥಿಕ ನೆಮ್ಮದಿಯನ್ನು ತಂದಿದೆ.
ಇದನ್ನೂ ಓದಿ: RTE Admission 2026: ಉಚಿತವಾಗಿ ಖಾಸಗಿ ಶಾಲೆಯಲ್ಲಿ ಓದಲು ಆರ್‌ಟಿಇ ಪ್ರವೇಶ | ಏಪ್ರಿಲ್ 9ರಿಂದ ಅರ್ಜಿ ಆರಂಭ
27ನೇ ಕಂತಿನ ಹಣ ಖಾತೆಗೆ ಜಮೆಯಾಗಿದೆಯೇ? ಮೊಬೈಲ್‌ನಲ್ಲೇ ಚೆಕ್ ಮಾಡುವ ವಿಧಾನ
ಫಲಾನುಭವಿಗಳು ತಮ್ಮ ಖಾತೆಗೆ ಹಣ ಜಮೆಯಾಗಿದೆಯೇ ಇಲ್ಲವೇ ಎಂಬುದನ್ನು ಈಗ ಬ್ಯಾಂಕ್‌ಗೆ ಹೋಗದೆ ಮೊಬೈಲ್ ಮೂಲಕವೇ ಸುಲಭವಾಗಿ ಪರಿಶೀಲಿಸಬಹುದು. ಇದಕ್ಕಾಗಿ ಸರ್ಕಾರದ ಅಧಿಕೃತ ಡಿಬಿಟಿ ಸೇವೆಯನ್ನು ಬಳಸಬಹುದು.
ವಿಧಾನ-1: DBT ಕರ್ನಾಟಕ (DBT Karnataka App) ಮೂಲಕ ಪರಿಶೀಲನೆ
ಮೊದಲು ಗೂಗಲ್ ಪ್ಲೇ ಸ್ಟೋರ್ (Google Play Store) ತೆರೆಯಿರಿ. ಅಲ್ಲಿ DBT Karnataka Mobile App ಅನ್ನು ಹುಡುಕಿ ಮತ್ತು ಡೌನ್‌ಲೋಡ್ ಮಾಡಿ.
ಆಪ್ ತೆರೆಯುವ ನಂತರ ಆಧಾರ್ ಸಂಖ್ಯೆ (Aadhaar Number) ನಮೂದಿಸಿ ಲಾಗಿನ್ ಆಗಬೇಕು. ಲಾಗಿನ್ ಆದ ಬಳಿಕ Payment Status ಅಥವಾ Beneficiary Payment Details ವಿಭಾಗವನ್ನು ತೆರೆಯಿರಿ.
ಅಲ್ಲಿ ಗೃಹಲಕ್ಷ್ಮಿ ಯೋಜನೆಯಡಿ ಎಷ್ಟು ಕಂತುಗಳು ಜಮೆಯಾಗಿವೆ, ಯಾವ ದಿನಾಂಕಕ್ಕೆ ಹಣ ಬಂದಿದೆ ಎಂಬ ಸಂಪೂರ್ಣ ಮಾಹಿತಿಯನ್ನು ನೋಡಬಹುದು. ಈ ವಿಧಾನವನ್ನು ಬಳಸುವುದರಿಂದ ಫಲಾನುಭವಿಗಳು ತಮ್ಮ ಪಾವತಿ ಸ್ಥಿತಿ ಅನ್ನು ಕೆಲವೇ ನಿಮಿಷಗಳಲ್ಲಿ ತಿಳಿದುಕೊಳ್ಳಬಹುದು.

ವಿಧಾನ-2: ಬ್ಯಾಂಕ್ SMS ಮೂಲಕ ಪರಿಶೀಲನೆ
ನಿಮ್ಮ ಬ್ಯಾಂಕ್ ಖಾತೆಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೆ, ಹಣ ಜಮೆಯಾದ ತಕ್ಷಣ ಬ್ಯಾಂಕ್‌ನಿಂದ SMS Notification ಬರುತ್ತದೆ.
ಈ ಸಂದೇಶದಲ್ಲಿ ಹಣ ಜಮೆಯಾದ ದಿನಾಂಕ, ಜಮೆಯಾದ ಮೊತ್ತ, ಬ್ಯಾಂಕ್ ಖಾತೆಯ ವಿವರ ಎಲ್ಲ ಮಾಹಿತಿ ಕಾಣಿಸುತ್ತದೆ. ಆದ್ದರಿಂದ ಬ್ಯಾಂಕ್ ಸಂದೇಶಗಳನ್ನು ಗಮನಿಸುವುದು ಕೂಡ ಮುಖ್ಯ.
ಇದನ್ನೂ ಓದಿ: Top 5 Personal Loans: ಖಾತರಿ ಇಲ್ಲದೇ ಸಿಗುವ 5 ಪರ್ಸನಲ್ ಲೋನ್‌ಗಳು | ತಕ್ಷಣ ಹಣ ಬೇಕಾದರೆ ಇಲ್ಲಿವೆ ಸೂಪರ್ ಆಯ್ಕೆ
ಫಲಾನುಭವಿ ಮಹಿಳೆ ಮರಣ ಹೊಂದಿದರೆ ಹಣ ಸಿಗುತ್ತದೆಯೇ?
ಯೋಜನೆಯ ಆರಂಭದಲ್ಲಿ ನೋಂದಾಯಿಸಿಕೊಂಡಿದ್ದ ಮಹಿಳೆ ಒಂದು ವೇಳೆ ಮರಣ ಹೊಂದಿದರೆ, ಅವರ ಖಾತೆಗೆ ಗೃಹಲಕ್ಷ್ಮಿ ಹಣ ಮುಂದುವರಿಯುವುದಿಲ್ಲ.
ಆದರೆ ಸರ್ಕಾರದ ನಿಯಮಗಳ ಪ್ರಕಾರ, ಆ ಕುಟುಂಬದಲ್ಲಿ ಮತ್ತೊಬ್ಬ ಅರ್ಹ ಮಹಿಳೆಯನ್ನು ಮನೆಯ ಯಜಮಾನಿ ಎಂದು ಪಡಿತರ ಚೀಟಿಯಲ್ಲಿ ಬದಲಾವಣೆ ಮಾಡಿಕೊಂಡರೆ, ನಂತರ ಆ ವ್ಯಕ್ತಿಗೆ ಯೋಜನೆಯ ಲಾಭವನ್ನು ವರ್ಗಾಯಿಸುವ ಅವಕಾಶ ಇದೆ.
ಇದನ್ನೂ ಓದಿ: Bele Vime Parihara: ಬೆಳೆ ವಿಮೆ ಹಣ ಬಿಡುಗಡೆ | 2.90 ಲಕ್ಷ ರೈತರಿಗೆ ₹243.52 ಕೋಟಿ ಹಣ ಜಮಾ | ನಿಮಗೆ ಹಣ ಬಂತಾ ಚೆಕ್ ಮಾಡಿ…
ಇದಕ್ಕಾಗಿ ಈ ಕ್ರಮಗಳನ್ನು ಅನುಸರಿಸಬೇಕು:
- ಪಡಿತರ ಚೀಟಿಯಲ್ಲಿ ಯಜಮಾನಿಯ ಹೆಸರು ಬದಲಾವಣೆ ಮಾಡಬೇಕು
- ಸಮೀಪದ ಗ್ರಾಮ ಒನ್ / ಬೆಂಗಳೂರು ಒನ್ / ಕರ್ನಾಟಕ ಒನ್ ಕೇಂದ್ರಕ್ಕೆ ಭೇಟಿ ನೀಡಬೇಕು
- ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು
- ಅದಾದ ಬಳಿಕ ಪರಿಶೀಲನೆ ಪೂರ್ಣಗೊಂಡರೆ ಯೋಜನೆಯ ಹಣ ಹೊಸ ಫಲಾನುಭವಿಗೆ ವರ್ಗಾವಣೆ ಆಗುತ್ತದೆ.
ಇದನ್ನೂ ಓದಿ: SBI Personal Loan: ಎಸ್‌ಬಿಐ ಪರ್ಸನಲ್ ಲೋನ್ | ಕಡಿಮೆ ಬಡ್ಡಿದರದಲ್ಲಿ ಸುಲಭವಾಗಿ ಸಾಲ ಪಡೆಯುವ ಸಂಪೂರ್ಣ ವಿಧಾನ
ಗೃಹಲಕ್ಷ್ಮಿ ಹಣ ಸ್ಥಗಿತವಾಗಿದ್ದರೆ ಏನು ಮಾಡಬೇಕು?
ಕೆಲವರಿಗೆ ತಾಂತ್ರಿಕ ಕಾರಣಗಳಿಂದ ಅಥವಾ ದಾಖಲೆಗಳ ಕೊರತೆಯಿಂದ ಗೃಹಲಕ್ಷ್ಮಿ ಹಣ ಖಾತೆಗೆ ಜಮೆಯಾಗದೇ ಇರಬಹುದು. ಅಂತಹ ಸಂದರ್ಭದಲ್ಲಿ ಕೆಳಗಿನ ವಿಷಯಗಳನ್ನು ಪರಿಶೀಲಿಸುವುದು ಅತ್ಯಂತ ಮುಖ್ಯ.
1. ಇ-ಕೆವೈಸಿ (e-KYC) ಅಪ್‌ಡೇಟ್
ನಿಮ್ಮ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ ಗೆ e-KYC ಪ್ರಕ್ರಿಯೆ ಪೂರ್ಣಗೊಂಡಿದೆಯೇ ಎಂದು ಖಚಿತಪಡಿಸಿಕೊಳ್ಳಿ. ಪೂರ್ಣಗೊಳ್ಳದಿದ್ದರೆ ಹಣ ಜಮೆಯಾಗುವುದು ತಾತ್ಕಾಲಿಕವಾಗಿ ಸ್ಥಗಿತವಾಗಬಹುದು.
2. ಆಧಾರ್-ಬ್ಯಾಂಕ್ ಲಿಂಕ್ (Aadhaar Bank Linking)
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಆಗಿರಬೇಕು. ಜೊತೆಗೆ ಅದು NPCI Mappingನಲ್ಲಿ ಸಕ್ರಿಯವಾಗಿರಬೇಕು. ಇದರಲ್ಲಿ ಸಮಸ್ಯೆ ಇದ್ದರೆ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಸರಿಪಡಿಸಬಹುದು.
3. ಪಡಿತರ ಚೀಟಿಯಲ್ಲಿನ ವಿವರಗಳು
ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ ಯಾರು ಎಂಬುದು ಸ್ಪಷ್ಟವಾಗಿರಬೇಕು. ಯಾವುದೇ ತಿದ್ದುಪಡಿ ಅಥವಾ ಹೆಸರು ಬದಲಾವಣೆ ಇದ್ದರೆ ತಕ್ಷಣ ಆಹಾರ ಇಲಾಖೆ ಕಚೇರಿ ಅಥವಾ ಸೇವಾ ಕೇಂದ್ರದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬೇಕು.
4. ಇಲಾಖೆ ಸಂಪರ್ಕ
ಎಲ್ಲ ದಾಖಲೆಗಳು ಸರಿಯಾಗಿದ್ದರೂ ಹಣ ಬರುತ್ತಿಲ್ಲವೆಂದರೆ ನಿಮ್ಮ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ (CDPO Office)ಗೆ ಭೇಟಿ ನೀಡಿ ಲಿಖಿತ ದೂರು ನೀಡಬಹುದು. ಅವರು ನಿಮ್ಮ ಅರ್ಜಿಯನ್ನು ಪರಿಶೀಲಿಸಿ ಸಮಸ್ಯೆ ಪರಿಹರಿಸುವ ಕ್ರಮ ಕೈಗೊಳ್ಳುತ್ತಾರೆ.