Milk Incentive Hike: ಕರ್ನಾಟಕದಲ್ಲಿ ಹಾಲು ಪ್ರೋತ್ಸಾಹಧನವನ್ನು ₹5ರಿಂದ ₹7ಕ್ಕೆ ಹೆಚ್ಚಿಸಲು ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ. ಬಜೆಟ್‌ನಲ್ಲಿ ಘೋಷಣೆ ಸಾಧ್ಯತೆ. ಸಂಪೂರ್ಣ ಮಾಹಿತಿ ಇಲ್ಲಿದೆ…
ರಾಜ್ಯದಲ್ಲಿನ ಹಾಲು ಉತ್ಪಾದಕರಿಗೆ (Milk Producers) ಮಹತ್ವದ ಸುದ್ದಿ ಹೊರಬಿದ್ದಿದೆ. ಪ್ರತಿ ಲೀಟರ್ ಹಾಲಿಗೆ ನೀಡಲಾಗುತ್ತಿರುವ 5 ರೂಪಾಯಿ ಪ್ರೋತ್ಸಾಹಧನವನ್ನು 7 ರೂಪಾಯಿಗೆ ಹೆಚ್ಚಿಸುವಂತೆ ಕರ್ನಾಟಕ ಹಾಲು ಮಹಾಮಂಡಳಿ (KMF) ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಈ ಕುರಿತು ಬರುವ ಮಾರ್ಚ್ 6ರಂದು ಮಂಡನೆಯಾಗುವ ರಾಜ್ಯ ಬಜೆಟ್‌ನಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ನಿರ್ಧಾರ ಜಾರಿಯಾದರೆ ಲಕ್ಷಾಂತರ ಹಾಲು ಉತ್ಪಾದಕ ರೈತರಿಗೆ ನೇರ ಲಾಭ (Direct Benefit) ಸಿಗಲಿದೆ. ಈಗಾಗಲೇ ಪ್ರತಿದಿನ ರಾಜ್ಯದಲ್ಲಿ ಸುಮಾರು 1 ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿರುವ ಹಿನ್ನೆಲೆ, ಈ ಹೆಚ್ಚುವರಿ 2 ರೂ. ಪ್ರೋತ್ಸಾಹಧನ ಸರ್ಕಾರದ ಮೇಲೆ ದೊಡ್ಡ ಆರ್ಥಿಕ ಹೊರೆ ತಂದರೂ ರೈತರ ಆರ್ಥಿಕ ಸ್ಥಿತಿ ಸುಧಾರಿಸಲು ಇದು ನೆರವಾಗಲಿದೆ.
ಪ್ರೋತ್ಸಾಹಧನ ಹೆಚ್ಚಳದ ಹಿನ್ನೆಲೆ (Background of Milk Incentive Hike)
ಬೆಳಗಾವಿಯಲ್ಲಿ ಡಿಸೆಂಬರ್‌ನಲ್ಲಿ ನಡೆದ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಪ್ರೋತ್ಸಾಹಧನ ಹೆಚ್ಚಿಸುವ ಬಗ್ಗೆ ಘೋಷಣೆ ಮಾಡಿದ್ದರು. ಆದರೆ ಇದುವರೆಗೆ ಅದು ಜಾರಿಗೆ ಬಂದಿಲ್ಲ.
ಇದೀಗ ಕೆಎಂಎಫ್ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅಧಿಕೃತ ಪ್ರಸ್ತಾವನೆ ಸಲ್ಲಿಸಿದ್ದು, ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಮಹಾಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ತಿಳಿಸಿದ್ದಾರೆ.
ಸದ್ಯಕ್ಕೆ ಪ್ರತಿ ಲೀಟರ್ ರೈತರ ಹಾಲಿಗೆ ₹5 ಪ್ರೋತ್ಸಾಹಧನವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ (DBT – Direct Benefit Transfer) ತಿಂಗಳುವಾರು ಹಣ ಜಮಾ ಮಾಡಲಾಗುತ್ತದೆ.
ಆದರೆ, ಪ್ರತಿ ಲೀಟರ್ ರೈತರ ಹಾಲಿಗೆ ಹೆಚ್ಚುವರಿ ₹2 ಸೇರಿಸಿ ಒಟ್ಟು ₹7 ರೈತರ ಖಾತೆಗೆ ಜಮಾ ಮಾಡುವಂತೆ ಪ್ರಸ್ತಾವ ಸಲ್ಲಿಸಲಾಗಿದೆ. ಇದು ಜಾರಿಯಾದರೆ ದಿನಕ್ಕೆ 20 ಲೀಟರ್ ಹಾಲು ಹಾಕುವ ರೈತನಿಗೆ ತಿಂಗಳಿಗೆ ಸುಮಾರು ₹1200 ಹೆಚ್ಚುವರಿ ಆದಾಯ ಸಿಗಬಹುದು.
ಹಾಲು ಪ್ರೋತ್ಸಾಹಧನ ಯಾರಿಗೆ ಸಿಗುತ್ತದೆ?
ಗ್ರಾಮ ಮಟ್ಟದ ಸಹಕಾರಿ ಹಾಲು ಡೈರಿಗಳಿಗೆ (Co-operative Milk Societies) ಹಾಲು ಸರಬರಾಜು ಮಾಡುವ ಎಲ್ಲಾ ರೈತರಿಗೆ ಈ ಪ್ರೋತ್ಸಾಹಧನ ಸಿಗುತ್ತದೆ.
ಇದು ಖಾಸಗಿ ಡೈರಿಗಳಿಗೆ ಹಾಲು ನೀಡುವವರಿಗೆ ಅನ್ವಯಿಸುವುದಿಲ್ಲ. ಪ್ರೋತ್ಸಾಹಧನವು ರಾಜ್ಯ ಸರ್ಕಾರದಿಂದ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಇದರಿಂದ ಮಧ್ಯವರ್ತಿಗಳ ಸಮಸ್ಯೆ ಇಲ್ಲ.
ಇದನ್ನೂ ಓದಿ: Karnataka Farmer ID: ರೈತರ ಐಡಿ ಅಪ್ಡೇಟ್ ಮಾಡದಿದ್ದರೆ ಸಬ್ಸಿಡಿ ಬಂದ್! ಅಪ್ಡೇಟ್ ಮಾಡೋದು ಹೇಗೆ? ಸಂಪೂರ್ಣ ಮಾಹಿತಿ ಇಲ್ಲಿದೆ…
ಮೊಬೈಲ್‌ನಲ್ಲಿ ಹಾಲು ಪ್ರೋತ್ಸಾಹಧನ ಜಮಾ ವಿವರ ಹೇಗೆ ಚೆಕ್ ಮಾಡುವುದು?
ಇಂದಿನ ಡಿಜಿಟಲ್ ಯುಗದಲ್ಲಿ ರೈತರು ತಮ್ಮ ಮೊಬೈಲ್‌ನಲ್ಲೇ ಸರ್ಕಾರದ DBT ಹಣದ ವಿವರವನ್ನು ಪರಿಶೀಲಿಸಬಹುದು. ಅದಕ್ಕಾಗಿ DBT Karnataka (Direct Benefit Transfer Karnataka) ಅಪ್ಲಿಕೇಶನ್ ಉಪಯೋಗಿಸಬಹುದು.
ಹಂತ-1 ಅಪ್ಲಿಕೇಶನ್ ಡೌನ್‌ಲೋಡ್: Google Play Store ಗೆ ಹೋಗಿ, ‘DBT Karnataka’ ರಾಜ್ಯ ಸರ್ಕಾರದ ಅಧಿಕೃತ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ.
ಹಂತ-2 ನೋಂದಣಿ (Registration Process): ನಂತರ ಅಪ್ಲಿಕೇಶನ್ ತೆರೆಯಿರಿ. 12 ಅಂಕಿಯ ಆಧಾರ್ ಸಂಖ್ಯೆ ನಮೂದಿಸಿ. ಮೊಬೈಲ್‌ಗೆ ಬರುವ OTP ನಮೂದಿಸಿ. ಬಳಿಕ 4 ಅಂಕಿಯ ಪಾಸ್‌ವರ್ಡ್ ರಚಿಸಿ.
ಹಂತ-3 ಲಾಗಿನ್ ಮಾಡಿ ಪಾವತಿ ಸ್ಥಿತಿ ಪರಿಶೀಲನೆ: ಆನಂತರ ನೀವು ರಚಿಸಿದ ಪಾಸ್‌ವರ್ಡ್ ಹಾಕಿ ಲಾಗಿನ್ ಆಗಿ ‘Payment Status / ಪಾವತಿ ಸ್ಥಿತಿ’ ಆಯ್ಕೆಮಾಡಿ.
ಅಲ್ಲಿ ‘Milk Incentive/ ಹಾಲಿನ ಪ್ರೋತ್ಸಾಹಧನ’ ಮೇಲೆ ಕ್ಲಿಕ್ ಮಾಡಿ. ತಿಂಗಳುವಾರು ಜಮಾ ವಿವರ ನೋಡಿ. ಇದರಿಂದ ರೈತರು ಬ್ಯಾಂಕ್‌ಗೆ ಹೋಗದೆ ಮನೆಯಲ್ಲೇ ತಮ್ಮ ಹಣದ ಮಾಹಿತಿ (Transaction Details) ತಿಳಿದುಕೊಳ್ಳಬಹುದು.

ಹಾಲಿನ ಪ್ರೋತ್ಸಾಹಧನ ಜಮಾ ಆಗದಿರುವ ಪ್ರಮುಖ ಕಾರಣಗಳು
ಹಲವಾರು ರೈತರಿಗೆ ಹಣ ಜಮಾ ಆಗದಿರುವುದು ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕೆ ಕೆಲವು ಮುಖ್ಯ ಕಾರಣಗಳಿವೆ:
1) ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಇಲ್ಲದಿರುವುದು
- DBT ಮೂಲಕ ಹಣ ಪಡೆಯಲು ಆಧಾರ್-ಬ್ಯಾಂಕ್ ಲಿಂಕಿಂಗ್ ಕಡ್ಡಾಯ (Aadhaar Seeding Mandatory). ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲದಿದ್ದರೆ ಹಣ ಜಮಾ ಆಗುವುದಿಲ್ಲ.
- ಪರಿಹಾರ: ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ಆಧಾರ್ ಲಿಂಕ್ ಮಾಡಿಸಿ NPCI Mapping ಪರಿಶೀಲಿಸಿ.
2) ಇ-ಕೆವೈಸಿ (e-KYC) ಮಾಡಿಸದೇ ಇರುವುದು
- ಬಹಳ ವರ್ಷಗಳಿಂದ ಬ್ಯಾಂಕ್ ಖಾತೆ ಅಪ್‌ಡೇಟ್ ಮಾಡಿಸದೇ ಇದ್ದರೆ ಖಾತೆ ನಿಷ್ಕ್ರಿಯ (Inactive Account) ಆಗಿರಬಹುದು.
- ಪರಿಹಾರ: ಬ್ಯಾಂಕ್‌ಗೆ ಹೋಗಿ e-KYC ಪೂರ್ಣಗೊಳಿಸಿ PAN ಮತ್ತು Aadhaar ನೀಡಿರಿ.
3) ದಾಖಲೆಗಳಲ್ಲಿ ವಿವರ ತಾಳೆಯಾಗದೇ ಇರುವುದು
- ಡೈರಿಯಲ್ಲಿ ಸಲ್ಲಿಸಿದ ಬ್ಯಾಂಕ್ ಖಾತೆ ವಿವರ ಮತ್ತು ಆಧಾರ್ ವಿವರ ಒಂದಕ್ಕೊಂದು ಹೊಂದಿಕೆಯಾಗದೇ ಇದ್ದರೆ ಹಣ ಜಮಾ ಆಗುವುದಿಲ್ಲ.
- ಪರಿಹಾರ: ಡೈರಿಯಲ್ಲಿ ನಿಮ್ಮ ದಾಖಲಾತಿ ಪರಿಶೀಲಿಸಿ. ತಪ್ಪಿದ್ದರೆ ತಿದ್ದುಪಡಿ ಮಾಡಿಸಿ.
ಇದನ್ನೂ ಓದಿ: Cow Shed Subsidy under MGNREGA: ಹಸು ಕೊಟ್ಟಿಗೆ ನಿರ್ಮಾಣಕ್ಕೆ ₹57,000 ಸಹಾಯಧನ | ರೈತರಿಗೆ ಸಂಪೂರ್ಣ ಮಾರ್ಗದರ್ಶಿ
ಪ್ರೋತ್ಸಾಹಧನ ಹೆಚ್ಚಳದ ಪರಿಣಾಮ (Impact on Farmers)
- ಪ್ರತಿ ಲೀಟರ್‌ಗೆ ₹2 ಹೆಚ್ಚಳವು ಸಣ್ಣ ಮತ್ತು ಅತಿಸಣ್ಣ ರೈತರಿಗೆ ದೊಡ್ಡ ಸಹಾಯವಾಗಲಿದೆ.
- ಹೆಚ್ಚುವರಿ ಆದಾಯದಿಂದ ಪಶುಪಾಲನೆ (Dairy Farming) ವೃದ್ಧಿಯಾಗಬಹುದು.
- ಹಾಲು ಉತ್ಪಾದನೆ ಗ್ರಾಮೀಣ ಕುಟುಂಬಗಳ ಮುಖ್ಯ ಆದಾಯ ಮೂಲ. ಇದರಿಂದ ಗ್ರಾಮೀಣ ಆರ್ಥಿಕ ಚಟುವಟಿಕೆ ಹೆಚ್ಚಾಗಲಿದೆ.
ಇದನ್ನೂ ಓದಿ: Pension Hike 2026: ಅಂಗವಿಕಲ, ವಿಧವಾ ಮತ್ತು ವೃದ್ಧಾಪ್ಯ ವೇತನ ಹೆಚ್ಚಳ | ನಿಜವಾದ ಮಾಹಿತಿ ಏನು?
ಸರ್ಕಾರದ ಮೇಲೆ ಆರ್ಥಿಕ ಹೊರೆ
ಪ್ರತಿ ದಿನ 1 ಕೋಟಿ ಲೀಟರ್ ಹಾಲು ಸಂಗ್ರಹವಾಗುತ್ತಿರುವ ಹಿನ್ನೆಲೆ:
- ₹2 ಹೆಚ್ಚಳ x 1 ಕೋಟಿ ಲೀಟರ್ = ₹2 ಕೋಟಿ ಪ್ರತಿ ದಿನ
- ತಿಂಗಳಿಗೆ ಸುಮಾರು ₹60 ಕೋಟಿ ಹೆಚ್ಚುವರಿ ವೆಚ್ಚ
ಇದರಿಂದ ರಾಜ್ಯ ಸರ್ಕಾರದ ಹಣಕಾಸಿನ ಮೇಲೆ ಒತ್ತಡ ಬರಬಹುದು. ಆದರೂ ರೈತರ ಹಿತದೃಷ್ಟಿಯಿಂದ ಸರ್ಕಾರ ಈ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಲಕ್ಷಾಂತರ ರೈತರಿಗೆ ಆಶಾದಾಯಕ
ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹಧನವನ್ನು ₹5ರಿಂದ ₹7ಕ್ಕೆ ಹೆಚ್ಚಿಸುವ ಕೆಎಂಎಫ್ ಪ್ರಸ್ತಾವ ರಾಜ್ಯದ ಲಕ್ಷಾಂತರ ರೈತರಿಗೆ ಆಶಾದಾಯಕವಾಗಿದೆ. ಬರುವ ಬಜೆಟ್‌ನಲ್ಲಿ ಘೋಷಣೆ ಆಗುವುದಾದರೆ ಇದು ರೈತರ ಆದಾಯ ಹೆಚ್ಚಿಸಲು ಮಹತ್ವದ ಹೆಜ್ಜೆಯಾಗಲಿದೆ.
ರೈತರು ತಮ್ಮ ಪ್ರೋತ್ಸಾಹಧನ ಜಮಾ ವಿವರವನ್ನು ನಿಯಮಿತವಾಗಿ ಆಃಖಿ ಏಚಿಡಿಟಿಚಿಣಚಿಞಚಿ ಅಪ್ಲಿಕೇಶನ್ ಮೂಲಕ ಪರಿಶೀಲಿಸಬೇಕು. ಬ್ಯಾಂಕ್ ಖಾತೆ, ಆಧಾರ್ ಲಿಂಕಿAಗ್, e-ಏಙಅ ಇತ್ಯಾದಿಗಳನ್ನು ಸರಿಯಾಗಿ ಹೊಂದಿಸಿಕೊಂಡರೆ ಯಾವುದೇ ತೊಂದರೆ ಇಲ್ಲದೆ ಹಣ ಪಡೆಯಬಹುದು.
ರಾಜ್ಯದ ಹಾಲು ಉತ್ಪಾದಕರು ಈ ನಿರ್ಧಾರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಸರ್ಕಾರದಿಂದ ಅಂತಿಮ ಘೋಷಣೆ ಹೊರಬಂದ ಬಳಿಕ ಸ್ಪಷ್ಟತೆ ಸಿಗಲಿದೆ.