Ahara Vahini Yojana: ಆಹಾರ ವಾಹಿನಿ ಯೋಜನೆಯಡಿ ಮೊಬೈಲ್ ಕ್ಯಾಂಟೀನ್ ಆರಂಭಿಸಲು ಸರ್ಕಾರದಿಂದ ₹3 ಲಕ್ಷ ಉಚಿತ ಸಹಾಯಧನ. ಸಂಪೂರ್ಣ ಮಾಹಿತಿ ಇಲ್ಲಿ ಓದಿ.
ರಾಜ್ಯ ಸರ್ಕಾರವು ವಿವಿಧ ಜಾತಿ-ಸಮುದಾಯಗಳ ಅಭಿವೃದ್ಧಿ ನಿಗಮಗಳ ಮೂಲಕ ‘ಆಹಾರ ವಾಹಿನಿ ಯೋಜನೆ’ (Aahara Vahini Scheme) ಎಂಬ ಮಹತ್ವದ ಯೋಜನೆಯನ್ನು ಜಾರಿಗೊಳಿಸಿದೆ.
ಕರ್ನಾಟಕ ಸರ್ಕಾರದ ಅಧೀನದ ಒಕ್ಕಲಿಗ, ವೀರಶೈವ ಲಿಂಗಾಯತ, ಹಿಂದುಳಿ ವರ್ಗ, ವಿಶ್ವಕರ್ಮ, ಮಡಿವಾಳ, ಮರಾಠ, ಸವಿತಾ ಸಮಾಜ ಅಭಿವೃದ್ಧಿ ನಿಗಮಗಳು ಸೇರಿದಂತೆ ವಿವಿಧ ನಿಗಮಗಳ ವತಿಯಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿದೆ.
ಇದನ್ನೂ ಓದಿ: Prize Money Scholarship 2026: ಈ ವಿದ್ಯಾರ್ಥಿಗಳಿಗೆ ₹35,000 ವರೆಗೆ ಪ್ರೋತ್ಸಾಹಧನ | ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನ
ನಾಲ್ಕು ಚಕ್ರಗಳ EV ಗೂಡ್ಸ್ ವಾಹನ ವಿತರಣೆ
‘ಆಹಾರ ವಾಹಿನಿ ಯೋಜನೆ’ ಯೋಜನೆಯಡಿ, ಸಾರ್ವಜನಿಕರಿಗೆ ಆಹಾರ ಪೂರೈಕೆ (Food Business) ಮಾಡುವ ಉದ್ದೇಶದಿಂದ ಸ್ಥಳಾಂತರಿಸಬಹುದಾದ ಮೊಬೈಲ್ ಕ್ಯಾಂಟೀನ್ಗಳು (Mobile Canteen / Food Kiosk) ನೀಡಲಾಗುತ್ತದೆ.
ವಿಶೇಷವಾಗಿ, ನಾಲ್ಕು ಚಕ್ರಗಳ ಇವಿ ಗೂಡ್ಸ್ ವಾಹನಗಳನ್ನು (Four-wheeler EV Goods Vehicle) ತಿಂಡಿ-ಆಹಾರ ಮಾರಾಟಕ್ಕೆ ತಕ್ಕಂತೆ ನವೀಕರಿಸಿ (Modified) ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುತ್ತದೆ.
ಇದನ್ನೂ ಓದಿ: Free PSI Coaching Karnataka- ಉಚಿತ ಪಿಎಸ್ಐ ಕೋಚಿಂಗ್: 75 ದಿನಗಳ ಊಟ, ವಸತಿ ಸಹಿತ ತರಬೇತಿಗೆ ಆನ್ಲೈನ್ ಅರ್ಜಿ ಆಹ್ವಾನ
₹3 ಲಕ್ಷ ಸರ್ಕಾರದ ಉಚಿತ ಸಹಾಯಧನ (Free Subsidy)
ಈ ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ, ವಾಹನ ಖರೀದಿಗಾಗಿ ರೂ. 3,00,000 (₹3 Lakhs) ವರೆಗೆ ಸರ್ಕಾರದಿಂದ ನೇರವಾಗಿ ಸಹಾಯಧನ (Subsidy) ನೀಡಲಾಗುವುದು.
ಉಳಿದ ಮೊತ್ತವನ್ನು ಫಲಾನುಭವಿಗಳು ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳ ಮೂಲಕ ಸಾಲ (Loan) ರೂಪದಲ್ಲಿ ಪಡೆಯಬಹುದು. ಇದರಿಂದ ಕಡಿಮೆ ಆರ್ಥಿಕ ಸಾಮರ್ಥ್ಯ ಹೊಂದಿರುವವರಿಗೂ ಉದ್ಯಮ ಆರಂಭಿಸಲು ಅವಕಾಶ ಸಿಗುತ್ತದೆ.
ಅರ್ಜಿ ಸಲ್ಲಿಸಲು ಅವಕಾಶ ಇರುವ ಕ್ಷೇತ್ರಗಳು (Eligible Constituencies)
ಈ ಯೋಜನೆಗೆ ರಾಜ್ಯದ ಹಲವು ನಗರ ವಿಧಾನಸಭಾ ಕ್ಷೇತ್ರಗಳು ಒಳಪಟ್ಟಿವೆ. ಬೆಂಗಳೂರಿಗೆ ಸಂಬಂಧಿಸಿದಂತೆ ಯಲಹಂಕ, ಮಲ್ಲೇಶ್ವರಂ, ಹೆಬ್ಬಾಳ, ಕೆ.ಆರ್.ಪುರ, ಮಹದೇವಪುರ, ಜಯನಗರ, ಬಸವನಗುಡಿ, ರಾಜಾಜಿನಗರ, ಶಿವಾಜಿನಗರ, ಯಶವಂತಪುರ, ಬೆಂಗಳೂರು ದಕ್ಷಿಣ, ಆನೇಕಲ್ ಮುಂತಾದ ಕ್ಷೇತ್ರಗಳು ಇದರಲ್ಲಿವೆ.
ಅದೇ ರೀತಿ ಕನಕಪುರ, ಶಿವಮೊಗ್ಗ ನಗರ, ತುಮಕೂರು ನಗರ, ಚಿತ್ರದುರ್ಗ, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ, ಮಂಡ್ಯ, ಮೈಸೂರು, ಉಡುಪಿ, ಮಂಗಳೂರು ನಗರ ಉತ್ತರ-ದಕ್ಷಿಣ, ಹಾಸನ, ಚಿಕ್ಕಮಗಳೂರು, ಮಡಿಕೇರಿ ಕ್ಷೇತ್ರಗಳು.
ಇತ್ತ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಗದಗ, ಹುಬ್ಬಳ್ಳಿ-ಧಾರವಾಡ, ಕಾರವಾರ, ಹಾವೇರಿ, ಕಲಬುರಗಿ, ಯಾದಗಿರಿ, ಬಳ್ಳಾರಿ, ಬೀದರ್, ರಾಯಚೂರು, ಕೊಪ್ಪಳ, ವಿಜಯನಗರ ಕ್ಷೇತ್ರಗಳು ಕೂಡ ಈ ಯೋಜನೆಯ ವ್ಯಾಪ್ತಿಗೆ ಬರುತ್ತವೆ.
ಇದನ್ನೂ ಓದಿ: Labour Card Pension Scheme: ಲೇಬರ್ ಕಾರ್ಡ್ ಮೂಲಕ ಪ್ರತಿ ತಿಂಗಳು ₹3,000 ರೂ. ಪಡೆಯಿರಿ | ಸರ್ಕಾರದ ಭದ್ರತಾ ಗ್ಯಾರಂಟಿ

ಯಾರು ಅರ್ಜಿ ಸಲ್ಲಿಸಬಹುದು? (Eligibility Criteria)
ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೆಲವು ಮುಖ್ಯ ಅರ್ಹತಾ ನಿಯಮಗಳು (Eligibility Conditions) ಇವೆ:
- ಅರ್ಜಿದಾರರು ಸಂಬಂಧಿಸಿದ ಜಾತಿ ಸಮುದಾಯಕ್ಕೆ (Community) ಸೇರಿರಬೇಕು
- ಕುಟುಂಬದ ವಾರ್ಷಿಕ ಆದಾಯ (Annual Income) ರೂ. 3 ಲಕ್ಷದೊಳಗಿರಬೇಕು
- ಅರ್ಜಿದಾರರ ವಯಸ್ಸು (Age Limit) 21 ರಿಂದ 45 ವರ್ಷಗಳ ನಡುವೆ ಇರಬೇಕು
- ಒಬ್ಬ ಕುಟುಂಬದಿಂದ ಒಬ್ಬ ಸದಸ್ಯ ಮಾತ್ರ (One Member per Family) ಯಾವುದೇ ಒಂದು ಯೋಜನೆಗೆ ಅರ್ಜಿ ಸಲ್ಲಿಸಬಹುದು
ಈ ಯೋಜನೆಗೆ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳು ನಿರ್ದಿಷ್ಟ ಕ್ಷೇತ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಉಳಿದ ವೀರಶೈವ ಲಿಂಗಾಯತ, ಹಿಂದುಳಿ ವರ್ಗ, ವಿಶ್ವಕರ್ಮ, ಮಡಿವಾಳ, ಮರಾಠ, ಸವಿತಾ ಸಮಾಜ ಸೇರಿದಂತೆ ಇತರ ಸಮುದಾಯಗಳಿಗೂ ಅವಕಾಶ ನೀಡಲಾಗಿದೆ.
ಅರ್ಜಿ ಸಲ್ಲಿಸುವ ವಿಧಾನ (How to Apply)
ಯೋಜನೆಯ ಸೌಲಭ್ಯ ಪಡೆಯಲು ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್ (Seva Sindhu Portal) ಮೂಲಕ ಆನ್ಲೈನ್ (Online Application) ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಯನ್ನು ಸಲ್ಲಿಸುವಾಗ ಆಧಾರ್ಗೆ ಜೋಡಿಸಲಾದ ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ (Active Bank Account) ಇರಬೇಕು.
ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಹಾಗೂ ಬ್ಯಾಂಕ್ ಪಾಸ್ ಬುಕ್ನಲ್ಲಿರುವ ಹೆಸರುಗಳು ಒಂದೇ ರೀತಿಯಾಗಿರಬೇಕು.ಹೆಸರು, ಶ್ರೀ/ಶ್ರೀಮತಿ/ಕುಮಾರಿ ಮುಂತಾದ ವಿವರಗಳಲ್ಲಿ ವ್ಯತ್ಯಾಸ ಇರಬಾರದು
ಅರ್ಜಿಗಳನ್ನು ಗ್ರಾಮ ಒನ್ / ಬೆಂಗಳೂರು ಒನ್ / ಕರ್ನಾಟಕ ಒನ್ (Grama One / Bangalore One / Karnataka One) ಕೇಂದ್ರಗಳ ಮೂಲಕವೂ ಸಲ್ಲಿಸಬಹುದು.
ಫಲಾನುಭವಿಗಳ ಆಯ್ಕೆ ಪ್ರಕ್ರಿಯೆ (Selection Process)
ಈ ಯೋಜನೆಯನ್ನು ಅನುಷ್ಟಾನಗೊಳಿಸುವ ನಿಗಮವು, ಮಾನ್ಯ ಶಾಸಕರ ಅಧ್ಯಕ್ಷತೆಯಲ್ಲಿ ರಚಿಸಲಾದ ಆಯ್ಕೆ ಸಮಿತಿ (Selection Committee) ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುತ್ತದೆ.
ಸರ್ಕಾರದ ವಿವೇಚನಾ ಕೋಟಾ (Discretionary Quota) ಅಥವಾ ನಿಗಮದ ಅಧ್ಯಕ್ಷರು / ನಿರ್ದೇಶಕರ ಮಂಡಳಿಯ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯಲು ಬಯಸುವವರೂ ಸಹ ಕಡ್ಡಾಯವಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
ಇದನ್ನೂ ಓದಿ: Bele Hani Bele Vime Parihara: ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಹಣ ರೈತರ ಖಾತೆಗೆ ಜಮಾ | ಸಂಪೂರ್ಣ ವಿವರ ಇಲ್ಲಿದೆ…
ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕ (Last Date)
ಈ ಯೋಜನೆಯಡಿ ಸೌಲಭ್ಯ ಪಡೆಯಲು ಬಯಸುವ ವಿವಿಧ ಸಮುದಾಯಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ಕೊನೆಯ ದಿನಾಂಕವನ್ನು ನಿಗದಿ ಮಡಲಗಿದೆ. ಬಹುತೇಕ 2026ರ ಮಾರ್ಚ್ 6, 7, 8, 9ನೇ ತಾರೀಖು ಅರ್ಜಿ ಸಲ್ಲಿಕೆ ಕೊನೆಯ ದಿನವಾಗಿದೆ.
ಯೋಜನೆಯ ಸಂಪೂರ್ಣ ವಿವರಗಳು, ಅರ್ಹತೆ ಅಗತ್ಯ ದಾಖಲೆಗಳು (Required Documents) ಮತ್ತು ಇತರ ಮಾಹಿತಿಗಾಗಿ ಆಯಾ ಸಮುದಾಯದ ಅಭಿವೃದ್ಧಿ ನಿಗಮದ ಅಧಿಕೃತ ಜಾಲತಾಣಗೆ ಭೇಟಿ ನೀಡುವುದು ಉತ್ತಮ.
Ahara vagini yojana