Post Office Recruitment 2026- ಪೋಸ್ಟ್ ಆಫೀಸ್ ನೇಮಕಾತಿ | ಎಸ್ಸೆಸ್ಸೆಲ್ಸಿ ಪಾಸಾದವರಿಗೆ 1,023 ಹುದ್ದೆಗಳು | ನಿಮ್ಮೂರಲ್ಲೇ ಉದ್ಯೋಗ ಮಾಡುವ ಅವಕಾಶ

WhatsApp Group Join Now
Telegram Group Join Now

Post Office Recruitment 2026: ಎಸ್ಸೆಸ್ಸೆಲ್ಸಿ ಪಾಸಾದವರಿಗೆ 1023 ಪೋಸ್ಟ್ ಮ್ಯಾನ್ / ಜಿಡಿಎಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯದ ಜಿಲ್ಲಾವಾರು ಹುದ್ದೆಗಳ ಸಂಪೂರ್ಣ ವಿವರ ಇಲ್ಲಿದೆ…

ಕರ್ನಾಟಕ ಅಂಚೆ ವೃತ್ತದ ಅಧೀನದಲ್ಲಿ 2026ನೇ ಸಾಲಿಗೆ ಗ್ರಾಮೀಣ ಡಾಕ್ ಸೇವಕ್ (GDS), ಬ್ರಾಂಚ್ ಪೋಸ್ಟ್ ಮಾಸ್ಟರ್ (BPM) ಹಾಗೂ ಸಹಾಯಕ ಶಾಖಾ ಪೋಸ್ಟ್ ಮಾಸ್ಟರ್ (ABPM) ಸೇರಿದಂತೆ ಒಟ್ಟು 1,023 ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.

ಈ ನೇಮಕಾತಿಯ ಪ್ರಮುಖ ಆಕರ್ಷಣೆ ಎಂದರೆ ಯಾವುದೇ ಲಿಖಿತ ಪರೀಕ್ಷೆ ಇಲ್ಲ, 10ನೇ ತರಗತಿ ಅಂಕಗಳ ಆಧಾರದಲ್ಲಿ ಆಯ್ಕೆ ಹಾಗೂ ಸ್ವಂತ ಜಿಲ್ಲೆಯಲ್ಲೇ ಉದ್ಯೋಗ ಪಡೆಯುವ ಅವಕಾಶ.

ಇದನ್ನೂ ಓದಿ: Jathi-Aadaya Pramanapatra- ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ – ಸಂಪೂರ್ಣ ಮಾಹಿತಿ

ಜಿಲ್ಲಾವಾರು ಖಾಲಿ ಹುದ್ದೆಗಳ ವಿವರ

ಈ ಬಾರಿ ನೇಮಕಾತಿ ಕರ್ನಾಟಕದ ಬಹುತೇಕ ಎಲ್ಲಾ ಜಿಲ್ಲೆಗಳನ್ನು ಒಳಗೊಂಡಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶದ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಕಲ್ಪಿಸಲಾಗಿದೆ. ಪ್ರಮುಖ ಜಿಲ್ಲೆಗಳ ಹುದ್ದೆಗಳ ವಿವರ ಈ ಕೆಳಗಿನಂತಿದೆ:

  • ಬಾಗಲಕೋಟೆ – 15
  • ಬಳ್ಳಾರಿ – 24
  • ಬೆಂಗಳೂರು ಜಿಪಿಒ – 02
  • ಬೆಳಗಾವಿ – 26
  • ಬೆಂಗಳೂರು ಪೂರ್ವ – 28
  • ಬೆಂಗಳೂರು ದಕ್ಷಿಣ – 45
  • ಬೆಂಗಳೂರು ಪಶ್ಚಿಮ – 14
  • ಬೀದರ್ – 22
  • ಚನ್ನಪಟ್ಟಣ – 27
  • ಚಿಕ್ಕಮಗಳೂರು – 48
  • ಚಿಕ್ಕೋಡಿ – 09
  • ಚಿತ್ರದುರ್ಗ – 24
  • ದಾವಣಗೆರೆ – 16
  • ಧಾರವಾಡ – 19
  • ಗದಗ – 14
  • ಗೋಕಾಕ್ – 10
  • ಹಾಸನ – 51
  • ಹಾವೇರಿ – 17
  • ಕಲಬುರಗಿ – 38
  • ಕಾರವಾರ – 31
  • ಕೊಡಗು – 41
  • ಕೋಲಾರ – 45
  • ಕೊಪ್ಪಳ – 14
  • ಮಂಡ್ಯ – 43
  • ಮಂಗಳೂರು – 22
  • ಮೈಸೂರು – 17
  • ನಂಜನಗೂಡು – 27
  • ಪುತ್ತೂರು – 64
  • ರಾಯಚೂರು – 34
  • ಬೆಂಗಳೂರು ವಿಂಗಡಣಾ ಪ್ರದೇಶ – 07
  • RMS HB – 01
  • RMS Q – 02
  • ಶಿವಮೊಗ್ಗ – 57
  • ಸಿರ್ಸಿ – 27
  • ತುಮಕೂರು – 62
  • ಉಡುಪಿ – 38
  • ವಿಜಯಪುರ – 27
  • ಯಾದಗಿರಿ – 15

ಇದನ್ನೂ ಓದಿ: Jameenina Mele Saala- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಮೊಬೈಲ್‌ನಲ್ಲೇ ಚೆಕ್ ಮಾಡಿ | ಸಂಪೂರ್ಣ ಮಾಹಿತಿ ಇಲ್ಲಿದೆ

ವೇತನ ವಿವರಗಳು (Salary Details)

ಸರ್ಕಾರಿ ಸೇವೆಯ ಭದ್ರತೆ ಜೊತೆಗೆ ನಿಯಮಿತ ಆದಾಯ ಈ ಉದ್ಯೋಗದ ವಿಶೇಷತೆಯಾಗಿದೆ. ಹುದ್ದೆಯ ಪ್ರಕಾರ ವೇತನವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ:

  • ಬ್ರಾಂಚ್ ಪೋಸ್ಟ್ ಮಾಸ್ಟರ್ (BPM): ರೂ. 12,000/- ರಿಂದ ರೂ. 29,380/- ವರೆಗೆ
  • ಸಹಾಯಕ ಶಾಖಾ ಪೋಸ್ಟ್ ಮಾಸ್ಟರ್ (GDS): ರೂ. 10,000/- ರಿಂದ ರೂ. 24,470/- ವರೆಗೆ

ಇದನ್ನೂ ಓದಿ: Grama Panchayati Yojanegalu- ಗ್ರಾಮ ಪಂಚಾಯತಿ ಮೂಲಕ ಯಾವೆಲ್ಲ ಯೋಜನೆ ಪ್ರಯೋಜನ ಪಡೆಯಬಹುದು? ಸಂಪೂರ್ಣ ಮಾಹಿತಿ

ಅರ್ಹತಾ ಮಾನದಂಡಗಳು (Eligibility Criteria)

ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಯಿAದ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು. ಕನ್ನಡ ಭಾಷೆಯ ಜ್ಞಾನ ಕಡ್ಡಾಯ. ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 40 ವರ್ಷದೊಳಗಿರಬೇಕು.

ವರ್ಗವಾರು OBC 3 ವರ್ಷ, SC / ST 5 ವರ್ಷ, PwD (ಸಾಮಾನ್ಯ) 10 ವರ್ಷ ಹಾಗೂ PwD (OBC) 13 ವರ್ಷ ಹಾಗೂ PwD (SC / ST) 15 ವರ್ಷ ವಯೋಮಿತಿ ಸಡಿಲಿಕೆ ಇದೆ.

ಇದನ್ನೂ ಓದಿ: PM Surya Ghar Yojana- ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಅರ್ಜಿ ಆಹ್ವಾನ | ಸಂಪೂರ್ಣ ಮಾಹಿತಿ ಇಲ್ಲಿದೆ…

ಅರ್ಜಿ ಶುಲ್ಕದ ವಿವರ

ಮಹಿಳಾ ಅಭ್ಯರ್ಥಿಗಳು, SC / SಖT / PwD / ಟ್ರಾನ್ಸ್ಜೆಂಡರ್ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇಲ್ಲ. ಇತರ ಅಭ್ಯರ್ಥಿಗಳು ರೂ.100/- ಶುಲ್ಕವನ್ನು ಆನ್‌ಲೈನ್ ಮೂಲಕ ಮಾತ್ರ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ ಹೇಗೆ?

ಈ ನೇಮಕಾತಿಯಲ್ಲಿ ಯಾವುದೇ ಲಿಖಿತ ಪರೀಕ್ಷೆ ಇಲ್ಲ. 10ನೇ ತರಗತಿ ಅಂಕಗಳ ಆಧಾರದಲ್ಲಿ ಮೆರಿಟ್ ಪಟ್ಟಿ, ನಂತರ ದಾಖಲೆ ಪರಿಶೀಲನೆ. ಅಗತ್ಯವಿದ್ದಲ್ಲಿ ಸಂದರ್ಶನ ಮೂಲಕ ನೇಮಕ ಮಾಡಲಾಗುತ್ತದೆ. ಕಡಿಮೆ ವಿದ್ಯಾರ್ಹತೆಯೊಂದಿಗೆ ಸರ್ಕಾರಿ ಉದ್ಯೋಗ ಪಡೆಯಲು ಇದು ಅತ್ಯುತ್ತಮ ಅವಕಾಶ.

ಇದನ್ನೂ ಓದಿ: PF Complete Guide- ಪ್ರತಿ ನೌಕರರು ತಿಳಿಯಬೇಕಾದ ಪಿಎಫ್ ಹೊಸ ನಿಯಮಗಳು ಮತ್ತು ಲಾಭಗಳು

ಅರ್ಜಿ ಸಲ್ಲಿಸುವ ವಿಧಾನ (How to Apply)

Post Office Recruitment 2026
Post Office Recruitment 2026

ಮೊದಲು ಕೆಳಗೆ ನೀಡಿರುವ ಕರ್ನಾಟಕ ಅಂಚೆ ವೃತ್ತ ನೇಮಕಾತಿ 2026 ಅಧಿಸೂಚನೆಯನ್ನು ಡೌನ್‌ಲೋಡ್ ಮಾಡಿಕೊಂಡು ಸಂಪೂರ್ಣವಾಗಿ ಓದಿಕೊಳ್ಳಿ. ನೀವು ಅರ್ಹರಾಗಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಇಮೇಲ್ ಐಡಿ, ಮೊಬೈಲ್ ಸಂಖ್ಯೆ, ಶೈಕ್ಷಣಿಕ ಪ್ರಮಾಣಪತ್ರ, ಫೋಟೋ, ಐಡಿ ಪ್ರೂಫ್ ಸಿದ್ಧವಾಗಿರಲಿ. ಅಧಿಕೃತ ವೆಬ್‌ಸೈಟ್‌ನಲ್ಲಿರುವ ಆನ್‌ಲೈನ್ ಲಿಂಕ್ ಮೂಲಕ ಅರ್ಜಿ ಭರ್ತಿ ಮಾಡಿ. ಅನ್ವಯಿಸಿದರೆ ಅರ್ಜಿ ಶುಲ್ಕ ಪಾವತಿಸಿ, ಕೊನೆಯದಾಗಿ Submit ಬಟನ್ ಕ್ಲಿಕ್ ಮಾಡಿ

ಇದನ್ನೂ ಓದಿ: Free Fodder Seed Kit Scheme- ರೈತರಿಗೆ ಉಚಿತ ಮೇವಿನ ಬೀಜ ಕಿಟ್ ವಿತರಣೆ | ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿ

ಪ್ರಮುಖ ದಿನಾಂಕಗಳು (Important Dates)

  • ಅರ್ಜಿ ಆರಂಭ ದಿನಾಂಕ: 31-01-2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 14-02-2026
  • ಅರ್ಜಿ ಶುಲ್ಕ ಪಾವತಿ ಕೊನೆಯ ದಿನಾಂಕ: 16-02-2026
  • ತಿದ್ದುಪಡಿ ವಿಂಡೋ: 18 ರಿಂದ 19 ಫೆಬ್ರವರಿ 2026

ಇದನ್ನೂ ಓದಿ: Narega Kuri Shed – ಕುರಿ ಶೆಡ್ ನಿರ್ಮಾಣಕ್ಕೆ ರೂ.70,000 ಸಹಾಯಧನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ…

ಕೇವಲ ಎಸ್ಸೆಸ್ಸೆಲ್ಸಿ ಅರ್ಹತೆಯೊಂದಿಗೆ ಪರೀಕ್ಷೆ ಇಲ್ಲದೆ, ಸ್ವಂತ ಜಿಲ್ಲೆಯಲ್ಲೇ ಕೆಲಸ ಮಾಡುವ ಅವಕಾಶ ನೀಡುವ ಈ ಕರ್ನಾಟಕ ಅಂಚೆ ವೃತ್ತ GDS ನೇಮಕಾತಿ 2026 ನಿಜಕ್ಕೂ ಅಪರೂಪದ ಸರ್ಕಾರಿ ಉದ್ಯೋಗ ಅವಕಾಶವಾಗಿದೆ.

ನೀವು ಸರ್ಕಾರಿ ವೃತ್ತಿಜೀವನ ಆರಂಭಿಸಲು ಯೋಚಿಸುತ್ತಿದ್ದರೆ, ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದನ್ನು ಮರೆತಿರಬೇಡಿ. ಇಂತಹ ಸರ್ಕಾರಿ ಉದ್ಯೋಗ ಮಾಹಿತಿ, ಫಲಿತಾಂಶಗಳು ಮತ್ತು ನೋಟಿಫಿಕೇಶನ್‌ಗಳಿಗಾಗಿ ನಮ್ಮ ವೆಬ್‌ಸೈಟ್ ಅನ್ನು ನಿರಂತರವಾಗಿ ಓದುತ್ತಿರಿ.

ಪ್ರಮುಖ ಲಿಂಕ್‌ಗಳು

  • ಅಧಿಕೃತ ಅಧಿಸೂಚನೆ: Download
  • ಆನ್‌ಲೈನ್‌ನಲ್ಲಿ ಅರ್ಜಿ ಲಿಂಕ್: Aplly Now
  • ಅಧಿಕೃತ ವೆಬ್‌ಸೈಟ್: indiapost.gov.in

Grama Panchayati Yojanegalu- ಗ್ರಾಮ ಪಂಚಾಯತಿ ಮೂಲಕ ಯಾವೆಲ್ಲ ಯೋಜನೆ ಪ್ರಯೋಜನ ಪಡೆಯಬಹುದು? ಸಂಪೂರ್ಣ ಮಾಹಿತಿ

WhatsApp Group Join Now
Telegram Group Join Now

4 thoughts on “Post Office Recruitment 2026- ಪೋಸ್ಟ್ ಆಫೀಸ್ ನೇಮಕಾತಿ | ಎಸ್ಸೆಸ್ಸೆಲ್ಸಿ ಪಾಸಾದವರಿಗೆ 1,023 ಹುದ್ದೆಗಳು | ನಿಮ್ಮೂರಲ್ಲೇ ಉದ್ಯೋಗ ಮಾಡುವ ಅವಕಾಶ”

Leave a Comment