Tractor Subsidy: ಟ್ರಾಕ್ಟರ್ ಖರೀದಿಗೆ ರೈತರಿಗೆ ₹5 ಲಕ್ಷ ಆರ್ಥಿಕ ನೆರವು! ಕಿಸಾನ್ ಟ್ರಾಕ್ಟರ್ ಯೋಜನೆಯಡಿ 50% ಸಬ್ಸಿಡಿ, ಅರ್ಹತೆ, ದಾಖಲೆಗಳು ಮತ್ತು ಅರ್ಜಿ ವಿಧಾನ ಸಂಪೂರ್ಣ ವಿವರ ಇಲ್ಲಿ ಓದಿ…
ಇಂದಿನ ಆಧುನಿಕ ಕೃಷಿಯಲ್ಲಿ ಟ್ರಾಕ್ಟರ್ (Tractor for Farming) ಒಂದು ಐಶಾರಾಮಿ ವಸ್ತುವಲ್ಲ, ಬದಲಾಗಿ ಅನಿವಾರ್ಯ ಸಾಧನವಾಗಿದೆ. ಉಳುಮೆ, ಬಿತ್ತನೆ, ಗೊಬ್ಬರ ಹಾಕುವುದು, ಕಟಾವು ಪ್ರತಿಯೊಂದು ಹಂತದಲ್ಲೂ ಟ್ರಾಕ್ಟರ್ ಇಲ್ಲದೆ ಕೃಷಿ ನಡೆಸುವುದು ಅಸಾಧ್ಯ ಎನ್ನುವ ಸ್ಥಿತಿಗೆ ನಾವು ಬಂದಿದ್ದೇವೆ.
ಆದರೆ ಟ್ರಾಕ್ಟರ್ ಖರೀದಿ ಎಂಬುದು ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಇನ್ನೂ ದೊಡ್ಡ ಕನಸೇ ಆಗಿದೆ. ಏಕೆಂದರೆ ಹೊಸ ಟ್ರಾಕ್ಟರ್ ಒಂದನ್ನು ಖರೀದಿಸಲು ₹8 ಲಕ್ಷದಿಂದ ₹10 ಲಕ್ಷಕ್ಕೂ ಹೆಚ್ಚು (Tractor Price in India) ವೆಚ್ಚವಾಗುತ್ತದೆ. ಈ ದೊಡ್ಡ ಮೊತ್ತವೇ ಅನೇಕ ರೈತರ ಕನಸಿಗೆ ಅಡ್ಡಿಯಾಗುತ್ತಿದೆ.
ಈ ಸಮಸ್ಯೆಯನ್ನು ಮನಗಂಡು ಕೇಂದ್ರ ಸರ್ಕಾರ (Central Government) ರೈತರಿಗೆ ದೊಡ್ಡ ರಿಲೀಫ್ ನೀಡುವ ಉದ್ದೇಶದಿಂದ ಶೇಕಡಾ 50ರಷ್ಟು ಸಬ್ಸಿಡಿಯೊಂದಿಗೆ ಟ್ರಾಕ್ಟರ್ ಖರೀದಿಸಲು ಅವಕಾಶ ನೀಡುವ ‘ಕಿಸಾನ್ ಟ್ರಾಕ್ಟರ್ ಯೋಜನೆ’ (Kisan Tractor Subsidy Scheme) ಅನ್ನು ಜಾರಿಗೆ ತಂದಿದೆ.
ಇದನ್ನೂ ಓದಿ: Labour Card Pension Scheme: ಲೇಬರ್ ಕಾರ್ಡ್ ಮೂಲಕ ಪ್ರತಿ ತಿಂಗಳು ₹3,000 ರೂ. ಪಡೆಯಿರಿ | ಸರ್ಕಾರದ ಭದ್ರತಾ ಗ್ಯಾರಂಟಿ
ಕಿಸಾನ್ ಟ್ರಾಕ್ಟರ್ ಯೋಜನೆ ಎಂದರೇನು? (What is Kisan Tractor Yojana)
ಕಿಸಾನ್ ಟ್ರಾಕ್ಟರ್ ಯೋಜನೆ ಎನ್ನುವುದು ರೈತರ ಕೃಷಿ ಕಾರ್ಯಗಳಲ್ಲಿ ಯಾಂತ್ರೀಕರಣ (Farm Mechanization) ಹೆಚ್ಚಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹತ್ವದ ಯೋಜನೆಯಾಗಿದೆ.
ಈ ಯೋಜನೆ Sub-Mission on Agricultural Mechanization – SMAM ಅಡಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ರೈತರು ಹೊಸ ಟ್ರಾಕ್ಟರ್ ಖರೀದಿಸಿದರೆ ಅದರ ಆನ್ರೋಡ್ ಬೆಲೆಯ ಮೇಲೆ ಶೇಕಡಾ 50ರಷ್ಟು (50% Subsidy) ಸಹಾಯಧನ ನೀಡಲಾಗುತ್ತದೆ.
ಸರಳವಾಗಿ ಹೇಳಬೇಕಾದರೆ, ₹10 ಲಕ್ಷ ಬೆಲೆಯ ಟ್ರಾಕ್ಟರ್ ರೈತರಿಗೆ ಕೇವಲ ₹5 ಲಕ್ಷ ಮಾತ್ರ ಖರ್ಚು. ಉಳಿದ ₹5 ಲಕ್ಷವನ್ನು ಸರ್ಕಾರವೇ ಭರಿಸುತ್ತದೆ.
ಇದನ್ನೂ ಓದಿ: PM Kisan 22nd Installment Date: ಪಿಎಂ ಕಿಸಾನ್ 22ನೇ ಕಂತು ಜಮಾ ದಿನಾಂಕ ಫಿಕ್ಸ್? ರೈತರಿಗೆ ಮಹತ್ವದ ಮಾಹಿತಿ
ಈ ಯೋಜನೆಯ ಮುಖ್ಯ ಉದ್ದೇಶ (Scheme Objective)
ಈ ಯೋಜನೆಯ ಮೂಲ ಗುರಿ ರೈತರ ಜೀವನಮಟ್ಟವನ್ನು ಸುಧಾರಿಸುವುದಾಗಿದೆ.
- ಆಧುನಿಕ ಕೃಷಿ ಯಂತ್ರೋಪಕರಣಗಳನ್ನು ಕೈಗೆಟುಕುವ ದರದಲ್ಲಿ ಒದಗಿಸುವುದು
- ಕೃಷಿ ಕೆಲಸಗಳಲ್ಲಿ ಸಮಯ ಮತ್ತು ಶ್ರಮ ಉಳಿಸುವುದು
- ಇಳುವರಿ (Crop Yield) ಹೆಚ್ಚಿಸುವುದು
- ರೈತರ ಆದಾಯವನ್ನು ವೃದ್ಧಿಸುವುದು (Farmer Income Growth)
ಟ್ರಾಕ್ಟರ್ ಬಳಕೆಯಿಂದ ಕೃಷಿ ಕಾರ್ಯಗಳು ವೇಗವಾಗಿ ಮತ್ತು ಪರಿಣಾಮಕಾರಿಯಾಗಿ ನಡೆಯುವುದರಿಂದ ರೈತರಿಗೆ ನೇರವಾಗಿ ಲಾಭವಾಗುತ್ತದೆ.
ಕಿಸಾನ್ ಟ್ರಾಕ್ಟರ್ ಯೋಜನೆಯ ಪ್ರಮುಖ ಲಾಭಗಳು (Benefits of Kisan Tractor Scheme)
ಟ್ರಾಕ್ಟರ್ನ ಒಟ್ಟು ಆನ್ರೋಡ್ ಬೆಲೆಯ ಅರ್ಧದಷ್ಟು ಮೊತ್ತವನ್ನು ಸರ್ಕಾರವೇ ಪಾವತಿಸುತ್ತದೆ. ಇದು ರೈತರಿಗೆ ಭಾರೀ ಆರ್ಥಿಕ ಬಲ ನೀಡುತ್ತದೆ.
ಸಬ್ಸಿಡಿ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಹೀಗಾಗಿ ದಲ್ಲಾಳಿಗಳ ವಂಚನೆಗೆ ಅವಕಾಶವೇ ಇಲ್ಲ.
ಡಿಜಿಟಲ್ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸುವ ವ್ಯವಸ್ಥೆ ಇರುವುದರಿಂದ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕವಾಗಿರುತ್ತದೆ. ಅರ್ಜಿಯ ಸ್ಥಿತಿಯನ್ನು ಆನ್ಲೈನ್ನಲ್ಲೇ ಟ್ರ್ಯಾಕ್ ಮಾಡಬಹುದು.

ಸಬ್ಸಿಡಿ ಹೊರತುಪಡಿಸಿ ಉಳಿದ ಮೊತ್ತಕ್ಕೆ ರಾಷ್ಟ್ರೀಕೃತ ಬ್ಯಾಂಕ್ಗಳಿAದ ಸುಲಭವಾಗಿ ಸಾಲ ಪಡೆಯಲು ಸಹಾಯವಾಗುತ್ತದೆ.
ಟ್ರಾಕ್ಟರ್ ಬಳಕೆಯಿಂದ ಉಳುಮೆ, ಬಿತ್ತನೆ, ಕಟಾವು ಮುಂತಾದ ಕೆಲಸಗಳು ಕಡಿಮೆ ಸಮಯದಲ್ಲಿ ಮುಗಿಯುತ್ತವೆ. ಇದರಿಂದ ಇಳುವರಿ ಹೆಚ್ಚುತ್ತದೆ.
ಸಾಮಾನ್ಯ, OBC, SC, ST ಎಲ್ಲ ವರ್ಗದ ರೈತರು ಈ ಯೋಜನೆಯ ಲಾಭ ಪಡೆಯಬಹುದು.
ಆದ್ಯತೆ ಯಾರಿಗೆ? (Priority Beneficiaries)
- ಸಣ್ಣ ಮತ್ತು ಅತಿ ಸಣ್ಣ ರೈತರು
- ಮಹಿಳಾ ರೈತರು (Women Farmers)
- ಆರ್ಥಿಕವಾಗಿ ದುರ್ಬಲ ರೈತರು
ಕಿಸಾನ್ ಟ್ರಾಕ್ಟರ್ ಯೋಜನೆಗೆ ಅರ್ಹತೆಗಳು (Eligibility Criteria)
ಈ ಯೋಜನೆಗೆ ಅರ್ಜಿ ಸಲ್ಲಿಸಲು ರೈತರು ಕೆಳಗಿನ ಅರ್ಹತೆಗಳನ್ನು ಪೂರೈಸಬೇಕು:
- ಅರ್ಜಿದಾರರು ಭಾರತದ ಪ್ರಜೆಯಾಗಿರಬೇಕು
- ರೈತರ ವಾರ್ಷಿಕ ಆದಾಯ ₹2 ಲಕ್ಷಕ್ಕಿಂತ ಕಡಿಮೆ ಇರಬೇಕು
- ಈ ಹಿಂದೆ ಯಾವುದೇ ಟ್ರಾಕ್ಟರ್ ಸಬ್ಸಿಡಿ ಪಡೆದಿರಬಾರದು
- ಒಂದು ಕುಟುಂಬಕ್ಕೆ ಒಂದೇ ಟ್ರಾಕ್ಟರ್ ಸಬ್ಸಿಡಿ
- ಅಸ್ಥಿತ್ವದಲ್ಲಿರುವ ಭೂ ದಾಖಲೆಗಳನ್ನು ಹೊಂದಿರಬೇಕು
ಇದನ್ನೂ ಓದಿ: Gruha Lakshmi Yojane: 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್! ನಿಮಗೂ ಹಣ ಜಮೆಯಾಗಿಲ್ಲವೇ?
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು (Required Documents)
- ಆಧಾರ್ ಕಾರ್ಡ್ (Aadhaar Card)
- ಭೂ ಮಾಲೀಕತ್ವದ ದಾಖಲೆ – ಪಹಣಿ / RTC
- ಬ್ಯಾಂಕ್ ಪಾಸ್ಬುಕ್
- ನಿವಾಸ ಪ್ರಮಾಣ ಪತ್ರ
- ಖರೀದಿಸಲು ಉದ್ದೇಶಿಸಿರುವ ಟ್ರಾಕ್ಟರ್ನ ದರಪಟ್ಟಿ (ಕಿuoಣಚಿಣioಟಿ)
- ಪಾಸ್ಪೋರ್ಟ್ ಸೈಜ್ ಫೋಟೋ
ಇದನ್ನೂ ಓದಿ: Grama Panchayati Yojanegalu- ಗ್ರಾಮ ಪಂಚಾಯತಿ ಮೂಲಕ ಯಾವೆಲ್ಲ ಯೋಜನೆ ಪ್ರಯೋಜನ ಪಡೆಯಬಹುದು? ಸಂಪೂರ್ಣ ಮಾಹಿತಿ
ಕಿಸಾನ್ ಟ್ರಾಕ್ಟರ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ (How to Apply)
ಕಿಸಾನ್ ಟ್ರಾಕ್ಟರ್ ಯೋಜನೆಗೆ ಅರ್ಹ ರೈತರು ಆನ್ಲೈನ್ ಹಾಗೂ ಆಫ್ಲೈನ್ (Online & Offline Application) ಎರಡೂ ರೀತಿಯಲ್ಲೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ಆನ್ಲೈನ್ ಅರ್ಜಿ ವಿಧಾನ
ಕೃಷಿ ಯಾಂತ್ರೀಕರಣ ಪೋರ್ಟಲ್ agrimachinery.nic.in ಅಥವಾ ರಾಜ್ಯ ಕೃಷಿ ಇಲಾಖೆಯ ಅಧಿಕೃತ ವೆಬ್ಸೈಟ್ kkisan.karnataka.gov.inಗೆ ಭೇಟಿ ನೀಡಿ. ಹೊಸ ರೈತ ನೋಂದಣಿ ಆಯ್ಕೆ ಮಾಡಿ ಆಧಾರ್ ಮೂಲಕ e-KYC ಪೂರ್ಣಗೊಳಿಸಿ.
ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಪಡೆದುಕೊಳ್ಳಿ. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ಟ್ರಾಕ್ಟರ್ ಸಬ್ಸಿಡಿ ಯೋಜನೆಗೆ ಅರ್ಜಿ ಸಲ್ಲಿಸಿ ಹಾಗೂ ಅಪ್ಲಿಕೇಶನ್ ಐಡಿ ಮೂಲಕ ಅರ್ಜಿಯ ಸ್ಥಿತಿ ಪರಿಶೀಲಿಸಿ.
ಇದನ್ನೂ ಓದಿ: Jameenina Mele Saala- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಮೊಬೈಲ್ನಲ್ಲೇ ಚೆಕ್ ಮಾಡಿ | ಸಂಪೂರ್ಣ ಮಾಹಿತಿ ಇಲ್ಲಿದೆ
ಆಫ್ಲೈನ್ ಅರ್ಜಿ ವಿಧಾನ
ಸಮೀಪದ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಕೇಂದ್ರಗಳು ಅಥವಾ ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ. ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ. ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸಲ್ಲಿಸಿ. ಪರಿಶೀಲನೆ ನಂತರ ಸಬ್ಸಿಡಿ ಅನುಮೋದನೆ ನೀಡಲಾಗುತ್ತದೆ
ಒಟ್ಟಾರೆ ಕಿಸಾನ್ ಟ್ರಾಕ್ಟರ್ ಯೋಜನೆಯು (Tractor Subsidy for Farmers) ದುಬಾರಿ ಬೆಲೆಯ ಕಾರಣದಿಂದ ಟ್ರಾಕ್ಟರ್ ಖರೀದಿಸಲು ಹಿಂಜರಿಯುತ್ತಿದ್ದ ರೈತರಿಗೆ ದೊಡ್ಡ ಆಸರೆಯಾಗಿದೆ.
ನೀವು ಅರ್ಹರಾಗಿದ್ದರೆ, ತಡಮಾಡದೇ ಈಗಲೇ ಅರ್ಜಿ ಸಲ್ಲಿಸಿ. ನಿಮ್ಮ ಕೃಷಿಯನ್ನು ಯಾಂತ್ರೀಕರಣದತ್ತ ಕೊಂಡೊಯ್ಯಿ, ಸಮಯ ಉಳಿಸಿ, ವೆಚ್ಚ ಕಡಿಮೆ ಮಾಡಿ ಮತ್ತು ನಿಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಿ.
Jai chandrashekar /T ganganna ballarey di tq Moka goturu post masudipur Vi