PM Awas Yojana House Subsidy: ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (Pradhan Mantri Awas Yojana – PMAY) ಸ್ವಂತ ಮನೆ ಕಟ್ಟಲು ಕೇಂದ್ರ ಸರ್ಕಾರ ಮಹತ್ವದ home loan subsidy ನೀಡುತ್ತಿದೆ. ಈ ಯೋಜನೆಯಡಿ ಸಾಲ (Housing Loan) ಮತ್ತು ಸಹಾಯಧನ (Government Subsidy) ಪಡೆಯುವ ಸಂಪೂರ್ಣ ಮಾಹಿತಿ ಇಲ್ಲಿದೆ…
ಸ್ವಂತ ಮನೆ ಎಂಬುದು ಪ್ರತಿಯೊಬ್ಬ ಭಾರತೀಯನ ಜೀವನದ ಅತೀ ದೊಡ್ಡ ಕನಸು. ಆದರೆ ಇಂದಿನ ದುಬಾರಿ ಜೀವನಶೈಲಿ, ಕಟ್ಟಡ ಸಾಮಗ್ರಿಗಳ ಬೆಲೆ ಏರಿಕೆ (construction material cost) ಮತ್ತು ಸಾಲದ ಬಡ್ಡಿದರಗಳು (home loan interest rates) ಮನೆ ನಿರ್ಮಾಣವನ್ನು ಸಾಮಾನ್ಯ ಜನರಿಗೆ ದೊಡ್ಡ ಸವಾಲಾಗಿ ಮಾಡಿವೆ.
ವರ್ಷಗಳ ಕಾಲ ದುಡಿದು ಕೂಡಿಟ್ಟ ಹಣ ಹಾಗೂ ನಿವೃತ್ತಿಯ ನಂತರ ದೊರೆಯುವ ಮೊತ್ತವನ್ನು ಒಟ್ಟುಗೂಡಿಸಿದರೂ, ಸಾಲವಿಲ್ಲದೆ ಮನೆ ಕಟ್ಟುವುದು ಬಹುತೇಕ ಅಸಾಧ್ಯವೇ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇಂತಹ ಸಂದರ್ಭದಲ್ಲೇ, ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಆಶಾಕಿರಣವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಯೋಜನೆಯೇ ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY). ಸ್ವಂತ ಮನೆ ಹೊಂದಬೇಕೆಂಬ ಲಕ್ಷಾಂತರ ಜನರ ಕನಸನ್ನು ನನಸು ಮಾಡುತ್ತಿರುವ ಈ ಯೋಜನೆ ನಿಜಕ್ಕೂ ಒಂದು ವರದಾನವಾಗಿದೆ.
ಇದನ್ನೂ ಓದಿ: Bele Hani Bele Vime Parihara: ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಹಣ ರೈತರ ಖಾತೆಗೆ ಜಮಾ | ಸಂಪೂರ್ಣ ವಿವರ ಇಲ್ಲಿದೆ…
ಮನೆ ಕನಸನ್ನು ನನಸಾಗಿಸುವ ಪ್ರಧಾನ ಮಂತ್ರಿ ಆವಾಸ್ ಯೋಜನೆ
ಪ್ರಧಾನ ಮಂತ್ರಿ ಆವಾಸ್ ಯೋಜನೆ ಕಳೆದ 2014ರಲ್ಲಿ ಪ್ರಾರಂಭಗೊಂಡಿದ್ದು, ‘ಎಲ್ಲರಿಗೂ ಮನೆ’ ಎಂಬ ಮಹತ್ವಾಕಾಂಕ್ಷೆಯ ಗುರಿಯನ್ನು ಹೊಂದಿದೆ. ಈ ಯೋಜನೆಯಡಿ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿನ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಾಣಕ್ಕೆ ಸಾಲ ಮತ್ತು ಸರ್ಕಾರದಿಂದ ಸಬ್ಸಿಡಿ ಒದಗಿಸಲಾಗುತ್ತದೆ.
ಯೋಜನೆ ಆರಂಭವಾದ ಬಳಿಕ ಇದುವರೆಗೆ ಲಕ್ಷಾಂತರ ಕಾಂಕ್ರೀಟ್ ಮನೆಗಳು ನಿರ್ಮಾಣಗೊಂಡಿವೆ. ಒಟ್ಟು ಒಂದು ಕೋಟಿ ಮನೆಗಳನ್ನು ಬಡವರಿಗೆ ಒದಗಿಸುವುದು ಕೇಂದ್ರ ಸರ್ಕಾರದ ಗುರಿಯಾಗಿದೆ. ಈ ಗುರಿ ಸಾಧನೆಗಾಗಿ ಸರ್ಕಾರ ಪ್ರತೀ ವರ್ಷವೂ ದೊಡ್ಡ ಮೊತ್ತದ ಅನುದಾನವನ್ನು ಮೀಸಲಿಡುತ್ತಿದೆ.
ಇದನ್ನೂ ಓದಿ: Gruha Lakshmi Yojane: 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್! ನಿಮಗೂ ಹಣ ಜಮೆಯಾಗಿಲ್ಲವೇ?
ಸಾಲ ಮತ್ತು ಸಬ್ಸಿಡಿ ನೆರವಿನ ಸಂಪೂರ್ಣ ವಿವರ
ಪ್ರಧಾನ ಮಂತ್ರಿ ಆವಾಸ್ ಯೋಜನೆಯ ವಿಶೇಷತೆ ಎಂದರೆ, ಮನೆ ಕಟ್ಟಲು ಸಾಲ ಸಿಗುವುದರ ಜೊತೆಗೆ ಸರ್ಕಾರದಿಂದ ನೇರವಾಗಿ ಸಬ್ಸಿಡಿ ಸಹಾಯಧನ ದೊರೆಯುವುದು.
ಈ ಸಬ್ಸಿಡಿಯನ್ನು ಬ್ಯಾಂಕುಗಳು, ಸರ್ಕಾರಿ ಹಣಕಾಸು ಸಂಸ್ಥೆಗಳು ಹಾಗೂ ವಾಣಿಜ್ಯ ಬ್ಯಾಂಕುಗಳ ಮೂಲಕ ನೀಡಲಾಗುತ್ತದೆ. ಫಲಾನುಭವಿಗಳನ್ನು ಅವರ ವಾರ್ಷಿಕ ಆದಾಯದ ಆಧಾರದ ಮೇಲೆ ವಿವಿಧ ವರ್ಗಗಳಾಗಿ ವಿಭಜಿಸಲಾಗಿದೆ.
ಇದನ್ನೂ ಓದಿ: New Voter ID- ಹೊಸ ಮತದಾರರ ಚೀಟಿಗೆ ಮೊಬೈಲ್ ಮೂಲಕ ಅರ್ಜಿ ಹಾಕುವುದು ಹೇಗೆ? ಸರಳ ವಿಧಾನ ಇಲ್ಲಿದೆ…
EWS – ಆರ್ಥಿಕವಾಗಿ ಹಿಂದುಳಿದ ವರ್ಗ
- ಕುಟುಂಬದ ವಾರ್ಷಿಕ ಆದಾಯ 6 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಇರಬೇಕು.
- ಮನೆಯ ಕಾರ್ಪೆಟ್ ಪ್ರದೇಶ 30 ಚದರ ಮೀಟರ್
- ಮನೆಯ ಆಸ್ತಿ ಮಹಿಳೆಯ ಹೆಸರಿನಲ್ಲಿ ಇರಬೇಕು
- ಗರಿಷ್ಠ 6 ಲಕ್ಷ ರೂಪಾಯಿ ಸಾಲ
- ಗರಿಷ್ಠ 2.67 ಲಕ್ಷ ರೂಪಾಯಿ ಸಬ್ಸಿಡಿ
- ಸಬ್ಸಿಡಿ ಮೊತ್ತವನ್ನು ನೇರವಾಗಿ ಮಹಿಳೆಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ
ಇದನ್ನೂ ಓದಿ: Jathi-Aadaya Pramanapatra- ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ – ಸಂಪೂರ್ಣ ಮಾಹಿತಿ

LIG – ಕಡಿಮೆ ಆದಾಯ ವರ್ಗ
- ವಾರ್ಷಿಕ ಆದಾಯ 6 ಲಕ್ಷದಿಂದ 12 ಲಕ್ಷ ರೂಪಾಯಿ ಒಳಗೆ ಇರಬೇಕು
- ಮನೆಯ ವಿಸ್ತೀರ್ಣ 60 ಚದರ ಮೀಟರ್
- ಮಹಿಳೆ ಮನೆಯ ಯಜಮಾನಳಾಗಿರಬೇಕೆಂಬ ಷರತ್ತು ಇಲ್ಲ
- ಗರಿಷ್ಠ 9 ಲಕ್ಷ ರೂಪಾಯಿ ಸಾಲ
- ಗರಿಷ್ಠ 2.35 ಲಕ್ಷ ರೂಪಾಯಿ ಸಬ್ಸಿಡಿ
ಇದನ್ನೂ ಓದಿ: Jameenina Mele Saala- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಮೊಬೈಲ್‌ನಲ್ಲೇ ಚೆಕ್ ಮಾಡಿ | ಸಂಪೂರ್ಣ ಮಾಹಿತಿ ಇಲ್ಲಿದೆ
MIG – I (ಮಧ್ಯಮ ಆದಾಯ ವರ್ಗ – I)
- ವಾರ್ಷಿಕ ಆದಾಯ 12 ಲಕ್ಷದಿಂದ 18 ಲಕ್ಷ ರೂಪಾಯಿ ಒಳಗೆ ಇರಬೇಕು
- ನಿವೇಶನ ವಿಸ್ತೀರ್ಣ 160 ಚದರ ಮೀಟರ್ ವರೆಗೆ
- ಮಹಿಳೆಯ ಹೆಸರಿನ ಕಡ್ಡಾಯವಿಲ್ಲ
- ಗರಿಷ್ಠ 12 ಲಕ್ಷ ರೂಪಾಯಿ ಸಾಲ
- ಗರಿಷ್ಠ 2.30 ಲಕ್ಷ ರೂಪಾಯಿ ಸಬ್ಸಿಡಿ
ಇದನ್ನೂ ಓದಿ: Grama Panchayati Yojanegalu- ಗ್ರಾಮ ಪಂಚಾಯತಿ ಮೂಲಕ ಯಾವೆಲ್ಲ ಯೋಜನೆ ಪ್ರಯೋಜನ ಪಡೆಯಬಹುದು? ಸಂಪೂರ್ಣ ಮಾಹಿತಿ
MIG – II (ಮಧ್ಯಮ ಆದಾಯ ವರ್ಗ – II)
- ವಾರ್ಷಿಕ ಆದಾಯ 18 ಲಕ್ಷ ರೂಪಾಯಿಯನ್ನು ಮೀರಬಾರದು
- ಕಾರ್ಪೆಟ್ ಪ್ರದೇಶ 200 ಚದರ ಮೀಟರ್ ವರೆಗೆ
- ಮಹಿಳೆ ಯಜಮಾನಳಾಗಿರಬೇಕೆಂಬ ಷರತ್ತು ಇಲ್ಲ
- ಗರಿಷ್ಠ 12 ಲಕ್ಷ ರೂಪಾಯಿ ಸಾಲ
- ಗರಿಷ್ಠ 2.30 ಲಕ್ಷ ರೂಪಾಯಿ ಸಹಾಯಧನ
ಇದನ್ನೂ ಓದಿ: Free Fodder Seed Kit Scheme- ರೈತರಿಗೆ ಉಚಿತ ಮೇವಿನ ಬೀಜ ಕಿಟ್ ವಿತರಣೆ | ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿ
ಅರ್ಜಿ ಸಲ್ಲಿಸಲು ಅಗತ್ಯವಿರುವ ಪ್ರಮುಖ ದಾಖಲೆಗಳು
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲು ಕೆಳಗಿನ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಬೇಕು:
- ಅರ್ಜಿದಾರರ Aadhaar Card
- ವಿಳಾಸ ಪ್ರಮಾಣ ಪತ್ರ (Address Proof)
- ಆದಾಯ ಪ್ರಮಾಣ ಪತ್ರ (Income Certificate)
- ಮಾನ್ಯವಾದ Mobile Number
- ಬ್ಯಾಂಕ್ ಖಾತೆ ಪುಸ್ತಕ (Bank Passbook)
- Passport Size Photo
ಇದನ್ನೂ ಓದಿ: Grama Panchayat Election 2026: ಏಪ್ರಿಲ್-ಮೇನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ | ಸರ್ಕಾರದ ತಯಾರಿ ಶುರು
ಅರ್ಜಿ ಸಲ್ಲಿಸುವ ವಿಧಾನ
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸುವುದು ಬಹಳ ಸುಲಭವಾಗಿದೆ. ಯೋಜನೆಯ ಅಧಿಕೃತ ಜಾಲತಾಣದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಸ್ವತಃ ನೀವೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಆಗದಿದ್ದರೆ ಸಮೀಪದ ಗ್ರಾಮ ಒನ್, ಕರ್ನಾಟಕ ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅಲ್ಲಿನ ಸಿಬ್ಬಂದಿ ನಿಮ್ಮ ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಲು ನೆರವಾಗುತ್ತಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಸರ್ಕಾರ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಮನೆ ಭದ್ರತೆಯನ್ನು ಒದಗಿಸಲು ಪ್ರಯತ್ನಿಸುತ್ತಿದೆ. ನೀವು ಅರ್ಹರಾಗಿದ್ದರೆ ಈ ಯೋಜನೆಯ ಪ್ರಯೋಜನವನ್ನು ತಪ್ಪದೇ ಪಡೆಯಿರಿ. ನಿಮ್ಮ ಮನೆ ಕನಸನ್ನು ನನಸು ಮಾಡಿಕೊಳ್ಳಲು ಇದು ಅತ್ಯುತ್ತಮ ಅವಕಾಶ.
ಅಧಿಕೃತ ವೆಬ್‌ಸೈಟ್ : pmaymis.gov.in
New Ration Card: ಈ ದಾಖಲೆಗಳಿದ್ರೆ 15 ದಿನದಲ್ಲಿ ನಿಮಗೆ ರೇಷನ್ ಕಾರ್ಡ್ ಸಿಗುತ್ತೆ!
Maddi. Virupaxappa. At. Hanumagadan. Halli. Post. Gaddikere. T
LlG