PF Complete Guide- ನೌಕರರ ಭವಿಷ್ಯಕ್ಕೆ ಭದ್ರತೆಯ ಆಧಾರಸ್ತಂಭ – ಭವಿಷ್ಯನಿಧಿ ಬಗ್ಗೆ ಸಂಪೂರ್ಣ ಮಾಹಿತಿ
ನಾವು ಕೆಲಸ ಮಾಡುತ್ತಿರುವವರೆಗೆ ಪ್ರತಿ ತಿಂಗಳು ಸಂಬಳ ಬರುತ್ತದೆ. ಆದರೆ ಒಂದು ದಿನ ನಿವೃತ್ತಿ ಆಗಲೇಬೇಕಲ್ಲವೇ? ಆ ನಂತರದ ಜೀವನವನ್ನು ಆರ್ಥಿಕವಾಗಿ ನೆಮ್ಮದಿಯಾಗಿ ಸಾಗಿಸಲು ನಮಗೆ ಯಾವ ಆಧಾರ ಬೇಕು?
ಅದಕ್ಕೆ ಉತ್ತರವೇ ಭವಿಷ್ಯನಿಧಿ (Provident Fund – PF / EPF). ಇದು ಕೇವಲ ಸಂಬಳದಿAದ ಕಡಿತವಾಗುವ ಹಣವಲ್ಲ, ನಿಮ್ಮ ನಿವೃತ್ತಿ ಜೀವನದ ಆರ್ಥಿಕ ಭದ್ರತೆ.
ಭವಿಷ್ಯನಿಧಿ (PF) ಎಂದರೇನು?
ಭವಿಷ್ಯನಿಧಿ ಎನ್ನುವುದು ನೌಕರರ ನಿವೃತ್ತಿಯ ನಂತರದ ಭವಿಷ್ಯವನ್ನು ಭದ್ರಗೊಳಿಸಲು ನೌಕರರ ಭವಿಷ್ಯನಿಧಿ ಸಂಸ್ಥೆ (EPFO) ನಡೆಸುವ ಉಳಿತಾಯ ಯೋಜನೆ. ಸಾಮಾನ್ಯವಾಗಿ ಇದನ್ನು PF ಅಥವಾ EPF ಎಂದು ಕರೆಯಲಾಗುತ್ತದೆ.
ಈ ಯೋಜನೆಯಲ್ಲಿ ನೌಕರ ಮತ್ತು ಉದ್ಯೋಗದಾತ ಇಬ್ಬರೂ ತಮ್ಮ ಪಾಲಿನ ಹಣವನ್ನು ಪ್ರತಿ ತಿಂಗಳು ಪಿಎಫ್ ಖಾತೆಗೆ ಜಮಾ ಮಾಡುತ್ತಾರೆ. ವರ್ಷಗಳ ಕಾಲ ಈ ಹಣದ ಮೇಲೆ ಬಡ್ಡಿ ಸೇರುತ್ತಾ ಹೋಗಿ, ನಿವೃತ್ತಿಯ ವೇಳೆಗೆ ದೊಡ್ಡ ಮೊತ್ತವಾಗಿ ನಿಮ್ಮ ಕೈ ಸೇರುತ್ತದೆ.
ಇದನ್ನೂ ಓದಿ: Free Fodder Seed Kit Scheme- ರೈತರಿಗೆ ಉಚಿತ ಮೇವಿನ ಬೀಜ ಕಿಟ್ ವಿತರಣೆ | ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿ
ಪಿಎಫ್ ಯಾರಿಗೆ ಕಡ್ಡಾಯ?
- ಕನಿಷ್ಠ 20 ಅಥವಾ ಅದಕ್ಕಿಂತ ಹೆಚ್ಚು ನೌಕರರು ಇರುವ ಸಂಸ್ಥೆಗಳಲ್ಲಿ ಪಿಎಫ್ ಯೋಜನೆ ಕಡ್ಡಾಯ.
- ಹೆಚ್ಚಿನ ಖಾಸಗಿ, ಕಾರ್ಪೊರೇಟ್ ಮತ್ತು ಸಂಘಟಿತ ವಲಯದ ಸಂಸ್ಥೆಗಳಲ್ಲಿ ಇದು ಈಗಾಗಲೇ ಜಾರಿಯಲ್ಲಿದೆ.
- ಕಡ್ಡಾಯವಲ್ಲದ ಸಂಸ್ಥೆಗಳೂ ಸಹ ಸ್ವಯಂ ಇಚ್ಛೆಯಿಂದ ಈ ಯೋಜನೆಯನ್ನು ಅಳವಡಿಸಿಕೊಳ್ಳಬಹುದು.
ಪಿಎಫ್ ಖಾತೆಯ ವಿಧಗಳು
ಪಿಎಫ್ ವ್ಯವಸ್ಥೆಯಲ್ಲಿ ಮುಖ್ಯವಾಗಿ ಎರಡು ಖಾತೆಗಳಿವೆ:
- ಭವಿಷ್ಯನಿಧಿ ಖಾತೆ (EPF)
- ನಿವೃತ್ತಿ ವೇತನ / ಪಿಂಚಣಿ ಯೋಜನೆ (EPS – Employee Pension Scheme)
EPF ಮತ್ತು EPS ನಡುವಿನ ವ್ಯತ್ಯಾಸ
ನೌಕರನ ಸಂಬಳದಿಂದ ಕಡಿತವಾಗುವ ಸಂಪೂರ್ಣ ಮೊತ್ತ ಭವಿಷ್ಯನಿಧಿಗೆ (EPF) ಜಮೆಯಾಗುತ್ತದೆ. ಇದರಲ್ಲಿ ಉದ್ಯೋಗದಾತನ 12% ಪಾಲಿನಲ್ಲಿ 8.33% ನಿವೃತ್ತಿ ವೇತನ (EPS) ಮತ್ತು 3.67% ಭವಿಷ್ಯನಿಧಿ (EPF) ಖಾತೆಗೆ ಜಮೆ ಮಾಡಲಾಗುತ್ತದೆ.
ನಿವೃತ್ತಿ ವೇತನ (EPS) ಕುರಿತು ಮಹತ್ವದ ವಿಷಯ
ಕನಿಷ್ಠ 10 ವರ್ಷಗಳ ಕಾಲ ಹಣ ಜಮೆಯಾಗಿರಬೇಕು. ಈ ಹಣವನ್ನು ಮಧ್ಯದಲ್ಲಿ ಹಿಂಪಡೆಯಲು ಸಾಧ್ಯವಿಲ್ಲ. ನಿವೃತ್ತಿಯಾದ ನಂತರ ಪಿಂಚಣಿ ರೂಪದಲ್ಲಿ ಮಾತ್ರ ದೊರೆಯುತ್ತದೆ.
ಪಿಎಫ್‌ಗೆ ಎಷ್ಟು ಹಣ ಜಮೆಯಾಗುತ್ತದೆ?
ಪ್ರತಿ ತಿಂಗಳು ನೌಕರರ ಮೂಲವೇತನದ ಶೇ.12 ಹಾಗೂ ಉದ್ಯೋಗದಾತರ ಮೂಲವೇತನದ ಶೇ.12ರಷ್ಟು ಮೊತ್ತ ಜಮೆಯಾಗಲಿದ್ದು; ಈ ಮೊತ್ತ ದೀರ್ಘಾವಧಿಯಲ್ಲಿ ಉತ್ತಮ ಬಡ್ಡಿಯೊಂದಿಗೆ ದೊಡ್ಡ ಉಳಿತಾಯವಾಗುತ್ತದೆ.
ಪಿಎಫ್ ಹಣ ಹಿಂಪಡೆಯುವ ನಿಯಮಗಳು
ಪಿಎಫ್‌ನ ಸೌಲಭ್ಯವೆಂದರೆ ಅದು Flexible. ಕೆಲಸ ತೊರೆದ 60 ದಿನಗಳ ನಂತರ ಸಂಪೂರ್ಣ ಮೊತ್ತವನ್ನು ಹಿಂಪಡೆಯಬಹುದು.
ಉದ್ಯೋಗದಲ್ಲಿದ್ದಾಗಲೇ ಮದುವೆ, ಮಕ್ಕಳ ಶಿಕ್ಷಣ, ಮನೆ ಕಟ್ಟುವಿಕೆ ಅಥವಾ ಖರೀದಿ, ವೈದ್ಯಕೀಯ ಚಿಕಿತ್ಸೆ ಇತ್ಯಾದಿ ಸಂದರ್ಭಗಳಲ್ಲಿ ಭಾಗಶಃ ಹಣ ಹಿಂಪಡೆಯುವ ಅವಕಾಶ ಇದೆ.
ಕೆಲ ಕಾಲ ಕೆಲಸ ಇಲ್ಲದಿದ್ದರೂ ನಿಮ್ಮ ಪಿಎಫ್ ಖಾತೆ ಸುರಕ್ಷಿತವಾಗಿರುತ್ತದೆ. ಮತ್ತೆ ಕೆಲಸಕ್ಕೆ ಸೇರಿದಾಗ ಅದೇ ಖಾತೆಯನ್ನು ಮುಂದುವರಿಸಬಹುದು.

ಪಿಎಫ್ ಯೋಜನೆಯ ಪ್ರಮುಖ ಲಾಭಗಳು
ಅತ್ಯಂತ ಸುರಕ್ಷಿತ ಮತ್ತು ನಂಬಿಗಸ್ತ ಉಳಿತಾಯ ಯೋಜನೆಯಾಗಿದೆ. ಆದಾಯ ತೆರಿಗೆಯಲ್ಲಿ ವಿನಾಯಿತಿ ಇರುತ್ತದೆ. ತುರ್ತು ಸಂದರ್ಭಗಳಿಗೆ ಹಣ ಬಳಕೆಯ ಅವಕಾಶವಿರುತ್ತದೆ.
ನೌಕರ ಉದ್ಯೋಗದಲ್ಲಿರುವಾಗ ಮರಣ ಹೊಂದಿದರೆ ₹50,000 ರಿಂದ ₹7 ಲಕ್ಷ ರೂ. ವರೆಗೆ ವಿಮಾ ಸೌಲಭ್ಯ ಹಶಗೂ ನಿವೃತ್ತಿಯ ನಂತರ ಆರ್ಥಿಕ ನೆಮ್ಮದಿಗೆ ಆಧಾರ.
ಇದನ್ನೂ ಓದಿ: Narega Kuri Shed – ಕುರಿ ಶೆಡ್ ನಿರ್ಮಾಣಕ್ಕೆ ರೂ.70,000 ಸಹಾಯಧನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ…
ಪಿಎಫ್ 2025ರ ಹೊಸ ಬದಲಾವಣೆಗಳು
2025ರಲ್ಲಿ ಪಿಎಫ್ ವ್ಯವಸ್ಥೆಯಲ್ಲಿ ಹಲವು ನೌಕರ ಸ್ನೇಹಿ ಡಿಜಿಟಲ್ ಬದಲಾವಣೆಗಳು ಜಾರಿಯಾಗಿದೆ:
- ರಿಯಲ್-ಟೈಮ್ ಡಿಜಿಟಲ್ ಪಾಸ್‌ಬುಕ್
- ಪ್ರಸ್ತುತ 8.25% ಬಡ್ಡಿದರ
- ಸಂಸ್ಥೆ ಬದಲಿಸಿದಾಗ ಸ್ವಯಂಚಾಲಿತ PF ವರ್ಗಾವಣೆ
- ನಾಮಿನಿ ನೋಂದಣಿ ಕಡ್ಡಾಯ
- ಸಂಪೂರ್ಣ ಆನ್‌ಲೈನ್ ಸೇವೆಗಳು
- ಪಿಎಫ್‌ನ ಡಿಜಿಟಲ್ ಯುಗ
- ಇಂದು ಪಿಎಫ್ ವ್ಯವಸ್ಥೆ ಸಂಪೂರ್ಣ ಡಿಜಿಟಲ್ ಆಗಿದೆ.
- UAN (Universal Account Number) ಮೂಲಕ ಖಾತೆ ನಿರ್ವಹಣೆ
ವಿಶೇಷವೆಂದರೆ EPFO ಪೋರ್ಟಲ್ ಹಾಗೂ UMANG ಆಪ್ ಮೂಲಕ ಪಾಸ್‌ಬುಕ್ ಪರಿಶೀಲನೆ, ಹಣ ಹಿಂಪಡೆಯುವ ಅರ್ಜಿ, ನಾಮಿನಿ ನೋಂದಣಿ, ಖಾತೆ ವಿವರ ತಿದ್ದುಪಡಿ ಎಲ್ಲವನ್ನೂ ಮನೆಯಲ್ಲೇ ಕುಳಿತು ಮಾಡಬಹುದು.
ಇದನ್ನೂ ಓದಿ: Grama One Application- ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ | ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ
ಪಿಎಫ್ ಖಾತೆದಾರರು ಗಮನಿಸಬೇಕಾದ ಅಂಶಗಳು
- ಪಾಸ್‌ಬುಕ್ ಅನ್ನು ನಿಯಮಿತವಾಗಿ ಪರಿಶೀಲಿಸಿ
- ನಾಮಿನಿಯನ್ನು ತಪ್ಪದೇ ಸೇರಿಸಿ
- ಆಧಾರ್, ಪಾನ್, ಬ್ಯಾಂಕ್ ವಿವರಗಳು ಸರಿಯಾಗಿವೆಯೇ ನೋಡಿಕೊಳ್ಳಿ
- ಯಾವುದೇ ಅಧಿಕಾರಿಗಳು ಕರೆ ಮಾಡಿ ಪಿಎಫ್ ವಿವರ ಕೇಳುವುದಿಲ್ಲ ಎಚ್ಚರಿಕೆ
- UAN / ಖಾತೆ ವಿವರಗಳನ್ನು ಯಾರಿಗೂ ಹಂಚಿಕೊಳ್ಳಬೇಡಿ
- ಸಮಸ್ಯೆಗಳಿದ್ದರೆ EPFO ಸಹಾಯವಾಣಿ ಅಥವಾ ಪ್ರಾದೇಶಿಕ ಕಚೇರಿ ಸಂಪರ್ಕಿಸಿ
ಸ್ವಯಂ ಪ್ರೇರಿತ ಭವಿಷ್ಯನಿಧಿ Voluntary Provident Fund – VPF)
ಸಾಮಾನ್ಯ ಪಿಎಫ್ ಜೊತೆಗೆ, ನೀವು ಇಚ್ಛಿಸಿದರೆ ಹೆಚ್ಚುವರಿ ಹಣವನ್ನು ಪಿಎಫ್ ಖಾತೆಗೆ ಜಮಾ ಮಾಡಬಹುದು. ಇದನ್ನೇ VPF ಎಂದು ಕರೆಯಲಾಗುತ್ತದೆ.
ಇದಕ್ಕೆ ಪ್ರತ್ಯೇಕ ಖಾತೆ ಅಗತ್ಯವಿಲ್ಲ. ಮೂಲವೇತನ ಮತ್ತು ಡಿಎ ಮಿತಿಯೊಳಗೆ ಹೂಡಿಕೆ ಮಾಡಬಹುದು. ವರ್ಷಕ್ಕೆ ₹2.5 ಲಕ್ಷ ರೂ. ಮೀರಿದ ಮೊತ್ತಕ್ಕೆ ಮಾತ್ರ ತೆರಿಗೆ ಪಾವತಿಸಬೇಕಾಗುತ್ತದೆ. ಅದಕ್ಕೂ 8.25% ಬಡ್ಡಿ ಸಿಗುತ್ತದೆ.
ಸಾರ್ವಜನಿಕ ಭವಿಷ್ಯನಿಧಿ (Public Provident Fund-PPF)
ಇದು ಎಲ್ಲಾ ಭಾರತೀಯ ನಾಗರಿಕರಿಗೂ ಅನ್ವಯವಾಗುತ್ತದೆ. ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಖಾತೆ ತೆರೆಯಬಹುದು. ಸರ್ಕಾರದ ಸಂಪೂರ್ಣ ಭರವಸೆ ಇರುತ್ತದೆ. ಪ್ರಸ್ತುತ 7.1% ಬಡ್ಡಿದರವಿದೆ. ದೀರ್ಘಾವಧಿಯ ಅತ್ಯಂತ ಸುರಕ್ಷಿತ ಉಳಿತಾಯ ಯೋಜನೆ ಇದಾಗಿದೆ.
ಒಟ್ಟಾರೆ ಭವಿಷ್ಯನಿಧಿ ಎಂದರೆ ಕೇವಲ ಸಂಬಳದಿಂದ ಕಡಿತವಾಗುವ ಹಣವಲ್ಲ. ಅದು ನಿಮ್ಮ ನಿವೃತ್ತಿ ಜೀವನದ ಭದ್ರ ಅಡಿಪಾಯ. ಇಂದೇ ಸರಿಯಾಗಿ ಪಿಎಫ್ ನಿರ್ವಹಿಸಿದರೆ, ನಾಳೆಯ ಜೀವನ ಆರ್ಥಿಕವಾಗಿ ನೆಮ್ಮದಿಯಾಗಿರುತ್ತದೆ.
1 thought on “PF Complete Guide- ಪ್ರತಿ ನೌಕರರು ತಿಳಿಯಬೇಕಾದ ಪಿಎಫ್ ಹೊಸ ನಿಯಮಗಳು ಮತ್ತು ಲಾಭಗಳು”