Myalara Lingeshwara Karanika 2026: ಮಳೆ-ಬೆಳೆ ಸಮೃದ್ಧಿ, ಅನ್ನದಾತರ ತೃಪ್ತಿ | ರೈತರ ಬದುಕನ್ನು ವಿಶ್ಲೇಷಿಸುವ ಮೈಲಾರ ಕಾರ್ಣಿಕಗಳ ಮಹತ್ವ

WhatsApp Group Join Now
Telegram Group Join Now

Myalara Lingeshwara Karanika 2026: ಮಳೆ-ಬೆಳೆ ಸಮೃದ್ಧಿ, ಅನ್ನದಾತರ ತೃಪ್ತಿ – ರೈತರ ಬದುಕನ್ನು ವಿಶ್ಲೇಷಿಸುವ ಮೈಲಾರ ಕಾರ್ಣಿಕಗಳ ಮಹತ್ವ

ಗ್ರಾಮೀಣ ಬದುಕಿನ ನಾಡಿ ಮಳೆ. ಮಳೆಯೊಂದಿಗೆ ಬೆಳೆ, ಬೆಳೆಯೊಂದಿಗೆ ಅನ್ನ, ಅನ್ನದೊಂದಿಗೆ ಬದುಕು. ಈ ಸರಪಳಿಯ ಪ್ರತಿಯೊಂದು ಕೊಂಡಿಯೂ ರೈತನ ಬದುಕಿಗೆ ನೇರವಾಗಿ ಸಂಬಂಧಿಸಿದೆ.

ಅಂಥ ರೈತರ ಬದುಕಿನ ಏರುಪೇರನ್ನು, ಮಳೆ-ಬೆಳೆಗಳ ಸ್ಥಿತಿಗತಿಯನ್ನು, ಕಾಲದ ಓಟವನ್ನು ಶತಮಾನಗಳಿಂದಲೂ ಸಂಕೇತ ರೂಪದಲ್ಲಿ ಹೇಳುತ್ತಾ ಬಂದಿರುವ ದೈವಿಕ ಸಂಪ್ರದಾಯವೇ ಮೈಲಾರಲಿಂಗೇಶ್ವರ ಕಾರ್ಣಿಕ (Myalara Lingeshwara Karanika).

ಪ್ರತಿ ವರ್ಷ ಕಾರ್ಣಿಕದ ಒಂದೇ ಒಂದು ಸಾಲು- ಆದರೆ ಅದರೊಳಗೆ ಅಡಗಿರುವ ಅರ್ಥಗಳು ಅನೇಕ. ಅದನ್ನು ಅರ್ಥೈಸುವ ಪ್ರಯತ್ನದಲ್ಲಿ ಜನ, ರೈತರು, ಪಂಡಿತರು ತೊಡಗುತ್ತಾರೆ. ಇದೇ ಕಾರ್ಣಿಕದ ವೈಶಿಷ್ಟ್ಯ.

ಇದನ್ನೂ ಓದಿ: New Ration Card: ಈ ದಾಖಲೆಗಳಿದ್ರೆ 15 ದಿನದಲ್ಲಿ ನಿಮಗೆ ರೇಷನ್ ಕಾರ್ಡ್ ಸಿಗುತ್ತೆ!

2026ರ ಮೈಲಾರ ಕಾರ್ಣಿಕ: ‘ಸಂಪಾಯಿತಲೇ ಪರಾಕ್’

2026ನೇ ಸಾಲಿನ ಶ್ರೀಮೈಲಾರಲಿಂಗೇಶ್ವರ ಸ್ವಾಮಿಯ ವಾರ್ಷಿಕ ಕಾರ್ಣಿಕ: ‘ಸಂಪಾಯಿತಲೇ ಪರಾಕ್’. ನಿನ್ನೆ ಫೆಬ್ರವರಿ 4ರಂದು, ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಡೆಂಕನಮರಡಿಯಲ್ಲಿ, ಗೋಧೂಳಿ ಸಮಯದಲ್ಲಿ ಈ ಕಾರ್ಣಿಕ ನುಡಿಯು ಹೊರಬಂದಿತು.

ಹನ್ನೊಂದು ದಿನಗಳ ಉಪವಾಸ ವ್ರತ ಆಚರಿಸಿದ್ದ ಗೊರವಪ್ಪ ರಾಮಪ್ಪಜ್ಜ, ಸಾಂಪ್ರದಾಯಿಕವಾಗಿ ಧನಸ್ಸನ್ನು ಏರಿ ಈ ಭವಿಷ್ಯವಾಣಿಯನ್ನು ನುಡಿದರು. ಈ ನುಡಿ ಕೇಳಿದ ಕ್ಷಣದಿಂದಲೇ ಭಕ್ತರ ಮುಖದಲ್ಲಿ ನಗು, ರೈತರ ಮನದಲ್ಲಿ ನಿರೀಕ್ಷೆ ಮೂಡಿತು.

ಇದನ್ನೂ ಓದಿ: Gruha Lakshmi Yojane: 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್! ನಿಮಗೂ ಹಣ ಜಮೆಯಾಗಿಲ್ಲವೇ?

ಕಾರ್ಣಿಕ ಎಂದರೇನು?

ಸರಳವಾಗಿ ಹೇಳಬೇಕೆಂದರೆ, ಕಾರ್ಣಿಕವೆಂದರೆ ಭವಿಷ್ಯವಾಣಿ. ಆದರೆ ಇದು ಸಾಮಾನ್ಯ ಭವಿಷ್ಯವಾಣಿ ಅಲ್ಲ. ಇದು ಒಗಟಿನ ರೂಪದಲ್ಲಿ ಬರುವ, ಕಾಲದ ಸೂಚನೆ ನೀಡುವ ದೈವವಾಣಿ.

‘ಸಂಪಾಯಿತಲೇ’ ಎಂಬ ಪದಕ್ಕೆ ಸಂಪತ್ತು, ಮಳೆ, ಬೆಳೆ, ಸಮೃದ್ಧಿ ಎಂಬ ಅರ್ಥಗಳು ಬರುತ್ತವೆ. ಸಕಾರಾತ್ಮಕ ಸಂದೇಶವನ್ನು ಈ ಕಾರ್ಣಿಕ ಸೂಚಿಸುತ್ತದೆ. ಅಂದರೆ:

  • ಈ ವರ್ಷ ಮಳೆ ಸರಿಯಾಗಿ ಬೀಳುತ್ತದೆ
  • ಬೆಳೆ ಸಮೃದ್ಧಿಯಾಗುತ್ತದೆ
  • ರೈತರಿಗೆ ಉತ್ತಮ ಫಸಲು ದೊರೆಯುತ್ತದೆ
  • ನಾಡಿನಲ್ಲಿ ಒಳ್ಳೆಯ ದಿನಗಳು ಬರಲಿವೆ

ಇದನ್ನೂ ಓದಿ: Post Office Recruitment 2026- ಪೋಸ್ಟ್ ಆಫೀಸ್ ನೇಮಕಾತಿ | ಎಸ್ಸೆಸ್ಸೆಲ್ಸಿ ಪಾಸಾದವರಿಗೆ 1,023 ಹುದ್ದೆಗಳು | ನಿಮ್ಮೂರಲ್ಲೇ ಉದ್ಯೋಗ ಮಾಡುವ ಅವಕಾಶ

ಶತಮಾನಗಳ ಇತಿಹಾಸ ಹೊಂದಿರುವ ಕಾರ್ಣಿಕ ಸಂಪ್ರದಾಯ

ಮೈಲಾರಲಿಂಗೇಶ್ವರ ಕಾರ್ಣಿಕಕ್ಕೆ ನಿನ್ನೆ-ಮೊನ್ನೆಯ ಇತಿಹಾಸವಲ್ಲ. ಇದು ಶತಮಾನಗಳ ಕಾಲದಿಂದ ನಡೆದು ಬಂದ ಜನಪದ ಸಂಪ್ರದಾಯ. ಪ್ರತಿ ವರ್ಷ ನಡೆಯುವ ಕಾರ್ಣಿಕೋತ್ಸವಕ್ಕೆ ಕರ್ನಾಟಕದ ನಾನಾ ಜಿಲ್ಲೆಗಳಿಂದ, ಮಹಾರಾಷ್ಟ್ರ, ಆಂಧ್ರ, ಗೋವಾ ಮೊದಲಾದ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.

ಈ ಜಾತ್ರೆಯ ಮುಖ್ಯ ಆಕರ್ಷಣೆಯೇ ಕಾರ್ಣಿಕ ನುಡಿ. ಗೊರವಪ್ಪನ ಬಾಯಿಂದ ಹೊರಡುವ ಒಂದೇ ಒಂದು ವಾಕ್ಯ ಕೇಳಲು ಜನ ಕಾದು ನಿಲ್ಲುತ್ತಾರೆ.

ಮೌನ ಉತ್ಸವ ಮತ್ತು ಕಾರ್ಣಿಕದ ಆಚರಣೆ

ಭಾರತ ಹುಣ್ಣಿಮೆಯ ಮರುದಿನ, ಶ್ರೀಮೈಲಾರಲಿಂಗೇಶ್ವರ ಸ್ವಾಮಿಯ ಮೌನ ಉತ್ಸವ ನಡೆಯುತ್ತದೆ. ಮುಖ್ಯ ಗುಡಿಯಿಂದ ಪೂರ್ವ ದಿಕ್ಕಿನ ಡೆಂಕನಮರಡಿಗೆ ಮೆರವಣಿಗೆ ಹೊರಡುತ್ತದೆ.

ಇದು ಶಿವನು ಅಸುರರನ್ನು ಸಂಹರಿಸಲು ಯುದ್ಧಭೂಮಿಗೆ ಸದ್ದುಗದ್ದಲವಿಲ್ಲದೆ ಹೊರಟ ಸಂಕೇತವೆಂದು ನಂಬಲಾಗಿದೆ. ಈ ಮೆರವಣಿಗೆಯಲ್ಲೇ ಕಾರ್ಣಿಕದ ಗೊರವಪ್ಪ ಡೆಂಕನಮರಡಿಯಲ್ಲಿ ಉಳಿದುಕೊಳ್ಳುತ್ತಾರೆ. ಸಂಜೆಯ ವೇಳೆಗೆ ಕಾರ್ಣಿಕ ಘೋಷಣೆ ನಡೆಯುತ್ತದೆ.

ಇದನ್ನೂ ಓದಿ: New Voter ID- ಹೊಸ ಮತದಾರರ ಚೀಟಿಗೆ ಮೊಬೈಲ್ ಮೂಲಕ ಅರ್ಜಿ ಹಾಕುವುದು ಹೇಗೆ? ಸರಳ ವಿಧಾನ ಇಲ್ಲಿದೆ…

ಕಾರ್ಣಿಕ ಘೋಷಣೆಯ ರೋಮಾಂಚಕಾರಿ ಕ್ಷಣ

ಈ ವೇಳೆ, ಧರ್ಮಕರ್ತ ಒಡೆಯರು ಕುದುರೆ ಏರಿ ಬರುತ್ತಾರೆ. ಲಕ್ಷಾಂತರ ಜನ ‘ಏಳು ಕೋಟಿ ಕೋಟಿಗೂ, ಚಾಂಗ ಮಲೋ’ ಎಂದು ಘೋಷಿಸುತ್ತಾರೆ. ಅಷ್ಟರಲ್ಲಿ, ಸುಮಾರು 15 ಅಡಿ ಎತ್ತರದ ಬಿಲ್ಲನ್ನು ಗೊರವಪ್ಪ ಏರುತ್ತಾರೆ.

‘ಸದ್ದಲೇ’ ಎಂದು ಕೂಗಿದ ಕ್ಷಣ, ಅಲ್ಲಿ ಸಂಪೂರ್ಣ ಮೌನ ಆವರಿಸುತ್ತದೆ. ಅತ್ತಿತ್ತ ನೋಡಿ, ಒಂದು ಸಾಲಿನ ಕಾರ್ಣಿಕ ನುಡಿಯನ್ನು ಹೇಳಿ, ಗೊರವಪ್ಪ ಕೆಳಗೆ ಬೀಳುತ್ತಾರೆ. ಭಕ್ತರು ಅವರನ್ನು ಎತ್ತಿಕೊಳ್ಳುತ್ತಾರೆ. ಮತ್ತೆ ‘ಏಳುಕೋಟಿ’ ಘೋಷಣೆ ಮೊಳಗುತ್ತದೆ. ಅದೇ ಕ್ಷಣದಿಂದ ಕಾರ್ಣಿಕದ ಅರ್ಥೈಸುವ ಚರ್ಚೆಗಳು ಶುರುವಾಗುತ್ತವೆ.

ಇದನ್ನೂ ಓದಿ: Jathi-Aadaya Pramanapatra- ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ – ಸಂಪೂರ್ಣ ಮಾಹಿತಿ

ಒಗಟಿನ ರೂಪದ ಕಾರ್ಣಿಕ ನುಡಿಗಳು

ಕಾರ್ಣಿಕ ನುಡಿ ಎಂದಿಗೂ ನೇರವಾಗಿರುವುದಿಲ್ಲ. ಅವು ಒಗಟಿನ ರೂಪದಲ್ಲಿರುತ್ತವೆ. ಉದಾಹರಣೆಗೆ:

  • ಆಕಾಶಕ್ಕೆ ಸಿಡ್ಲ ಬಡೀತಲೇ ಪರಾಕ್
  • ಮರ್ತ್ಯಕ್ಕ ಮಬ್ಬಗವೀತಲೇ ಪರಾಕ್
  • ಅಂಬ್ಲಿ ಹಳಿಸ್ತಲೇ ಪರಾಕ್
  • ಮುತ್ತಿನ ಮಾಲಿ ಹರದು ಚೂರಾದೀತಲೇ ಪರಾಕ್

ಇವುಗಳೆಲ್ಲವೂ ಪ್ರಕೃತಿ, ಸಮಾಜ, ಆರ್ಥಿಕತೆ, ಮಾನವ ಬದುಕಿನ ಸ್ಥಿತಿಗತಿಗಳನ್ನು ಸಂಕೇತಿಸುತ್ತವೆ ಎಂದು ಜನ ನಂಬುತ್ತಾರೆ.

ಇದನ್ನೂ ಓದಿ: Jameenina Mele Saala- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಮೊಬೈಲ್‌ನಲ್ಲೇ ಚೆಕ್ ಮಾಡಿ | ಸಂಪೂರ್ಣ ಮಾಹಿತಿ ಇಲ್ಲಿದೆ

ಜನಪದರ ದೈವ ಮೈಲಾರಲಿಂಗ

ಮೈಲಾರಲಿಂಗೇಶ್ವರ ಜನಪದರ ದೈವ. ಅಂದರೆ, ಸಾಮಾನ್ಯ ಗ್ರಾಮೀಣ ಜನರ ದೇವರು. ರೈತರು, ಪಶುಪಾಲಕರು, ಗೊರವ-ಗೊರವಿಯರು ಇವರ ಬದುಕಿನೊಂದಿಗೆ ಈ ದೈವ ಬೆಸೆದುಕೊಂಡಿದೆ. ಜಾತಿ-ಧರ್ಮ-ಭಾಷೆಗಳ ಗಡಿ ಮೀರಿ ಮೈಲಾರಲಿಂಗನ ಆರಾಧನೆ ನಡೆಯುತ್ತದೆ.

ಶೈವ-ವೈಷ್ಣವ ಸಂಪ್ರದಾಯಗಳ ಸಂಗಮ, ಜೈನ ಸಾಹಿತ್ಯದಲ್ಲಿಯೂ ಉಲ್ಲೇಖ, ವಿವಿಧ ಬುಡಕಟ್ಟುಗಳ ನಂಬಿಕೆ – ಇವೆಲ್ಲವೂ ಮೈಲಾರಲಿಂಗನ ವೈಶಿಷ್ಟ್ಯ. ಒಂದು ಅಂದಾಜಿನ ಪ್ರಕಾರ, ಪ್ರಮುಖ-ಅಪ್ರಮುಖ ಸೇರಿ ಐನೂರುಕ್ಕೂ ಹೆಚ್ಚು ಮೈಲಾರನ ಗುಡಿಗಳು ಇವೆ.

ಇದನ್ನೂ ಓದಿ: Grama Panchayati Yojanegalu- ಗ್ರಾಮ ಪಂಚಾಯತಿ ಮೂಲಕ ಯಾವೆಲ್ಲ ಯೋಜನೆ ಪ್ರಯೋಜನ ಪಡೆಯಬಹುದು? ಸಂಪೂರ್ಣ ಮಾಹಿತಿ

ರಾಜ್ಯಾದ್ಯಂತ ಮೈಲಾರನ ಕ್ಷೇತ್ರಗಳು

ಮೈಲಾರನ ಸಂಪ್ರದಾಯಗಳು ಕೇವಲ ಕರ್ನಾಟಕಕ್ಕೆ ಸೀಮಿತವಲ್ಲ. ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ಮಧ್ಯಪ್ರದೇಶ ವರೆಗೂ ಹರಡಿವೆ. ಕರ್ನಾಟಕದಲ್ಲಿ ಪ್ರಮುಖ ಕ್ಷೇತ್ರಗಳು:

  • ಹಿರೇ ಮೈಲಾರ (ಹೂವಿನಹಡಗಲಿ)
  • ದೇವರಗುಡ್ಡ (ರಾಣೆಬೆನ್ನೂರು)
  • ಮಂಗಸೂಳಿ (ಬೆಳಗಾವಿ)
  • ಮೈಲಾಪುರ (ಯಾದಗಿರಿ)
  • ಮೈಲಾರಪುರ (ಚಿತ್ರದುರ್ಗ)
  • ದೇವರಹಿಪ್ಪರಗಿ (ವಿಜಯಪುರ)

ಇವೆಲ್ಲದರಲ್ಲೂ ಹಿರೇ ಮೈಲಾರ ಜಾತ್ರೆ ಅತ್ಯಂತ ಪ್ರಸಿದ್ಧ.

ಇದನ್ನೂ ಓದಿ: Grama Panchayati Yojanegalu- ಗ್ರಾಮ ಪಂಚಾಯತಿ ಮೂಲಕ ಯಾವೆಲ್ಲ ಯೋಜನೆ ಪ್ರಯೋಜನ ಪಡೆಯಬಹುದು? ಸಂಪೂರ್ಣ ಮಾಹಿತಿ

ಭಕ್ತಿ ಮತ್ತು ಸಂಭ್ರಮದ ಏಳುಕೋಟಿ ಮೈಲಾರ ಜಾತ್ರೆ

ತುಂಗಭದ್ರಾ ನದಿ ತೀರದಲ್ಲಿರುವ ಹಿರೇ ಮೈಲಾರ ಕ್ಷೇತ್ರದಲ್ಲಿ ರಥಸಪ್ತಮಿಯಿಂದ ಭಾರತ ಹುಣ್ಣಿಮೆಯವರೆಗೆ ಏಳುಕೋಟಿ ಮೈಲಾರಲಿಂಗನ ಜಾತ್ರೆ ನಡೆಯುತ್ತದೆ.

ಲಕ್ಷಾಂತರ ಭಕ್ತರು ವಾಹನಗಳಲ್ಲಿ, ಪಾದಯಾತ್ರೆಯಲ್ಲಿ, ಬರಿಗಾಲಲ್ಲಿ ಹರಕೆ ಹೊತ್ತು ಬರುತ್ತಾರೆ. ಈ ಜಾತ್ರೆ ಭಕ್ತರಿಗೆ ಭಕ್ತಿ-ಶ್ರದ್ಧೆಯ ಕೇಂದ್ರವಾದರೆ, ಅಧ್ಯಯನಾಸಕ್ತರಿಗೆ ಜನಪದ ಸಂಸ್ಕೃತಿಯ ಜೀವಂತ ಪಾಠಶಾಲೆ.

ಒಟ್ಟಾರೆ ಮೈಲಾರ ಕಾರ್ಣಿಕ ಕೇವಲ ಭವಿಷ್ಯವಾಣಿ ಅಲ್ಲ. ಅದು ಗ್ರಾಮೀಣ ಭಾರತದ ಆತ್ಮಧ್ವನಿ. ಮಳೆ-ಬೆಳೆ-ಮಾನವ ಬದುಕಿನ ನಡುವಿನ ಸಂಬAಧವನ್ನು ಒಂದೇ ಸಾಲಿನಲ್ಲಿ ಹೇಳುವ ಜನಪದ ಜ್ಞಾನಪರಂಪರೆಯ ಅದ್ಭುತ ಉದಾಹರಣೆ.

2026ರ ‘ಸಂಪಾಯಿತಲೇ ಪರಾಕ್’ ಅನ್ನದಾತರಿಗೆ ಆಶಾವಾದವಾಗಲಿ, ನಾಡಿಗೆ ಸಮೃದ್ಧಿಯ ಸೂಚಕವಾಗಲಿ ಎಂಬುದು ಎಲ್ಲರ ಹಾರೈಕೆ.

– ಮಾಲತೇಶ್ ಮಾಳಮ್ಮನವರ್

Bele Hani Bele Vime Parihara: ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಹಣ ರೈತರ ಖಾತೆಗೆ ಜಮಾ | ಸಂಪೂರ್ಣ ವಿವರ ಇಲ್ಲಿದೆ…

WhatsApp Group Join Now
Telegram Group Join Now

1 thought on “Myalara Lingeshwara Karanika 2026: ಮಳೆ-ಬೆಳೆ ಸಮೃದ್ಧಿ, ಅನ್ನದಾತರ ತೃಪ್ತಿ | ರೈತರ ಬದುಕನ್ನು ವಿಶ್ಲೇಷಿಸುವ ಮೈಲಾರ ಕಾರ್ಣಿಕಗಳ ಮಹತ್ವ”

Leave a Comment