ಮೊರಾರ್ಜಿ ಸೇರಿ ವಿವಿಧ ಉಚಿತ ವಸತಿ ಶಾಲೆಗಳ (Morarji Residential Schools Admission 2026) 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ ಮಾಡಲಾಗಿದೆ. ಒಟ್ಟು 807 ವಸತಿ ಶಾಲೆಗಳಲ್ಲಿ ಪ್ರವೇಶ ನಡೆಯಲಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ…
ಶಿಕ್ಷಣದ ಮೂಲಕ ಸಮಾಜದಲ್ಲಿ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನಡೆಸುತ್ತಿರುವ ಉಚಿತ ವಸತಿ ಶಾಲೆಗಳ ಪ್ರವೇಶ ಪ್ರಕ್ರಿಯೆ ಮತ್ತೆ ಆರಂಭವಾಗಿದೆ. 2026-27ನೇ ಶೈಕ್ಷಣಿಕ ಸಾಲಿಗೆ ಮೊರಾರ್ಜಿ ದೇಸಾಯಿ ಸೇರಿದಂತೆ ವಿವಿಧ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ (KREIS) ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಒಟ್ಟು 807 ವಸತಿ ಶಾಲೆಗಳಲ್ಲಿ ಪ್ರವೇಶ ಪಡೆಯಲು ಈ ಅವಕಾಶ ಕಲ್ಪಿಸಲಾಗಿದೆ. ಗ್ರಾಮೀಣ, ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದ್ದು, ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ.
ಇದನ್ನೂ ಓದಿ: Free Fodder Seed Kit Scheme- ರೈತರಿಗೆ ಉಚಿತ ಮೇವಿನ ಬೀಜ ಕಿಟ್ ವಿತರಣೆ | ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿ
ಪ್ರವೇಶ ಪರೀಕ್ಷೆ ಮೂಲಕ ಆಯ್ಕೆ
ಈ ಎಲ್ಲಾ ವಸತಿ ಶಾಲೆಗಳಿಗೆ ಪ್ರವೇಶ ಪರೀಕ್ಷೆಯ ಮೂಲಕವೇ ದಾಖಲಾತಿ ನೀಡಲಾಗುತ್ತದೆ. ಕೆಇಎ ನೀಡಿರುವ ಮಾಹಿತಿಯಂತೆ, ಪ್ರವೇಶ ಪರೀಕ್ಷೆಯು ಮಾರ್ಚ್ 1, 2026 (ಭಾನುವಾರ) ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿದೆ. ಪರೀಕ್ಷೆಯ ಮೂಲಕ ವಿದ್ಯಾರ್ಥಿಗಳ ಮೆರಿಟ್ ಆಧಾರದಲ್ಲಿ ಆಯ್ಕೆ ಮಾಡಲಾಗುತ್ತದೆ.
ಹೇಗೆ ಅರ್ಜಿ ಹಾಕಬೇಕು?
ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಏಇಂ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಿರುವ ಘೋಷಣಾ ಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು, ಯಾವುದೇ ಸಮೀಪದ ವಸತಿ ಶಾಲೆಗೆ ಸಲ್ಲಿಸಬೇಕು.
ಇದೇ ಜನವರಿ 25, 2026 ಒಳಗಾಗಿ ಅರ್ಜಿ ಸಲ್ಲಿಕೆ ಮಾಡಬೇಕು. ಅರ್ಜಿ ಸಲ್ಲಿಸಿದ ನಂತರ, ಆ ಶಾಲೆಯಿಂದ ಸ್ವೀಕೃತಿ ಪತ್ರ (Acknowledgement) ಪಡೆಯುವುದು ಕಡ್ಡಾಯವಾಗಿದೆ.
ಅರ್ಜಿ ಸಲ್ಲಿಸುವಾಗ ಗಮನಿಸಬೇಕಾದ ಅಂಶಗಳು
- ವಿದ್ಯಾರ್ಥಿಯು ಈಗಾಗಲೇ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರಬೇಕು
- ಪ್ರಸ್ತುತ ಓದುತ್ತಿರುವ ಶಾಲೆಯಿಂದ ಸ್ಯಾಟ್ಸ್ (SATS) ಸಂಖ್ಯೆ ಪಡೆದುಕೊಳ್ಳಬೇಕು
- ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ವಸತಿ ಶಾಲೆಯ ಮುಖ್ಯಸ್ಥರನ್ನು ಸಂಪರ್ಕಿಸಬೇಕು

ಶಾಲೆಗಳ ಆಯ್ಕೆ ಹೇಗೆ?
ಅಭ್ಯರ್ಥಿಯು ತಾನು ಪ್ರವೇಶ ಬಯಸುವ ತಮ್ಮ ಜಿಲ್ಲೆಯಲ್ಲಿರುವ ಎಲ್ಲಾ ಕ್ರೈಸ್ (KREIS) ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಬೇಕು.
ಆದ್ಯತೆಯಲ್ಲಿ ನಮೂದಿಸಿದ ಶಾಲೆಗಳನ್ನಷ್ಟೇ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ. ಮೆರಿಟ್, ಮೀಸಲಾತಿ ಹಾಗೂ ಆದ್ಯತಾ ಕ್ರಮದ ಆಧಾರದ ಮೇಲೆ ಕಂಪ್ಯೂಟರೀಕೃತ ವಿಧಾನದಿಂದ ಸೀಟು ಹಂಚಿಕೆ ನಡೆಯಲಿದೆ.
ಯಾರು ಅರ್ಹರು? (ಅರ್ಹತಾ ಮಾನದಂಡ)
6ನೇ ತರಗತಿ ಪ್ರವೇಶಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ಅರ್ಹತಾ ನಿಯಮಗಳು ಅನ್ವಯವಾಗುತ್ತವೆ:
ಶೈಕ್ಷಣಿಕ ಅರ್ಹತೆ: ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಮಾತ್ರ ಅರ್ಹರು.
ಆದಾಯ ಮಿತಿ: ಪರಿಶಿಷ್ಟ ಜಾತಿ (SC), ಪರಿಶಿಷ್ಟ ವರ್ಗದ (ST) ಕುಟುಂಬಗಳ ಆದಾಯ ₹2.50 ಲಕ್ಷ ಒಳಗೆ ಮತ್ತು ಹಿಂದುಳಿದ ವರ್ಗಗಳ ಆದಾಯ (ಪ್ರವರ್ಗ-1) ₹2.50 ಲಕ್ಷ ಒಳಗೆ ಇರಬೇಕು. ಇತರ ವರ್ಗಗಳಿಗೆ ₹1 ಲಕ್ಷ ಒಳಗೆ ಆದಾಯ ಮಿರಿ ನಿಗದಿಪಡಿಸಲಾಗಿದೆ.
ಇದನ್ನೂ ಓದಿ: Narega Kuri Shed – ಕುರಿ ಶೆಡ್ ನಿರ್ಮಾಣಕ್ಕೆ ರೂ.70,000 ಸಹಾಯಧನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ…
ಯಾವ ಯಾವ ವಸತಿ ಶಾಲೆಗಳು?
ಈ ಪ್ರವೇಶ ಪ್ರಕ್ರಿಯೆ ಅಡಿಯಲ್ಲಿ ಕೆಳಗಿನ ಉಚಿತ ವಸತಿ ಶಾಲೆಗಳಲ್ಲಿ ದಾಖಲಾತಿ ನೀಡಲಾಗುತ್ತದೆ:
- ಮೊರಾರ್ಜಿ ದೇಸಾಯಿ ವಸತಿ ಶಾಲೆ
- ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ
- ಏಕಲವ್ಯ ಮಾದರಿ ವಸತಿ ಶಾಲೆ
- ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ
- ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆ
- ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ
- ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ವಸತಿ ಶಾಲೆ
- ಸಂಗೊಳ್ಳಿ ರಾಯಣ್ಣ ವಸತಿ ಶಾಲೆ
- ಕವಿ ರನ್ನ ವಸತಿ ಶಾಲೆ
- ಗಾಂಧಿ ತತ್ವ ವಸತಿ ಶಾಲೆ
- ಶ್ರೀ ನಾರಾಯಣ ಗುರು ವಸತಿ ಶಾಲೆ
ಅರ್ಜಿ ಸಲ್ಲಿಕೆಗೆ ಅಗತ್ಯ ದಾಖಲೆಗಳು
- SATS ಸಂಖ್ಯೆ
- ಇತ್ತೀಚಿನ ಭಾವಚಿತ್ರ
- ಜಾತಿ ಮತ್ತು ಆದಾಯ ಪ್ರಮಾಣಪತ್ರ
- ಆಧಾರ್ ಕಾರ್ಡ್ / ರೇಷನ್ ಕಾರ್ಡ್
- ಸ್ಥಳೀಯ ನಿವಾಸಿ ಪ್ರಮಾಣಪತ್ರ
- ಅವಿಶೇಷ ಪ್ರವರ್ಗದ ಅಭ್ಯರ್ಥಿಗಳು ಸಕ್ಷಮ ಪ್ರಾಧಿಕಾರದಿಂದ ಪಡೆದ ಪ್ರಮಾಣಪತ್ರ/ಗುರುತಿನ ಚೀಟಿ
ಇದನ್ನೂ ಓದಿ: Grama One Application- ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ | ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ
ಸ್ಥಳೀಯ ಅಭ್ಯರ್ಥಿಗಳಿಗೆ ಹೆಚ್ಚಿನ ಆದ್ಯತೆ
ರಾಜ್ಯ ಸರ್ಕಾರ ಸ್ಥಳೀಯ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸುವ ಉದ್ದೇಶದಿಂದ ಸೀಟು ಹಂಚಿಕೆಯಲ್ಲಿ ಈ ನಿಯಮ ಜಾರಿಗೆ ತಂದಿದೆ:
- ಸ್ಥಳೀಯ ತಾಲೂಕು ಅಭ್ಯರ್ಥಿಗಳಿಗೆ: ಶೇ.75
- ಅದೇ ಜಿಲ್ಲೆಯ ಇತರ ತಾಲೂಕು ಅಭ್ಯರ್ಥಿಗಳಿಗೆ: ಶೇ.25
ಪ್ರಮುಖ ದಿನಾಂಕಗಳು (Important Dates)
- ಅರ್ಜಿ ಸಲ್ಲಿಕೆ ಕೊನೆಯ ದಿನ: ಜನವರಿ 25, 2026
- ಪ್ರವೇಶಪತ್ರ ಬಿಡುಗಡೆ: ಫೆಬ್ರವರಿ 18, 2026
- ಪ್ರವೇಶ ಪರೀಕ್ಷೆ: ಮಾರ್ಚ್ 1, 2026
ಉಚಿತ ಶಿಕ್ಷಣ, ವಸತಿ, ಆಹಾರ ಮತ್ತು ಗುಣಮಟ್ಟದ ಅಧ್ಯಯನ ಸೌಲಭ್ಯಗಳನ್ನು ಒದಗಿಸುವ ಮೊರಾರ್ಜಿ ಸೇರಿದಂತೆ ವಿವಿಧ ವಸತಿ ಶಾಲೆಗಳು, ಗ್ರಾಮೀಣ ಹಾಗೂ ಬಡ ಕುಟುಂಬದ ಮಕ್ಕಳ ಭವಿಷ್ಯ ರೂಪಿಸಲು ಮಹತ್ವದ ಪಾತ್ರ ವಹಿಸುತ್ತಿವೆ. ನಿಮ್ಮ ಮಗು 5ನೇ ತರಗತಿಯಲ್ಲಿ ಓದುತ್ತಿದ್ದರೆ, ಈ ಅವಕಾಶವನ್ನು ತಪ್ಪಿಸದೇ ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಿ.
ಘೋಷಣಾ ಪತ್ರ ಮತ್ತು ಶಾಲಾ ವಿವರಗಳಿಗಾಗಿ KEA ಅಧಿಕೃತ ವೆಬ್‌ಸೈಟ್ ಪರಿಶೀಲಿಸುವುದು ಅತ್ಯಂತ ಮುಖ್ಯ. ಅದರ ಲಿಂಕ್ ಇಲ್ಲಿದೆ…
TQ Jamkhandi Jilla baglkote village Hulyal