Kandaya Ilakhe Pension Yojane – ಕಂದಾಯ ಇಲಾಖೆಯ ಪಿಂಚಣಿ ಯೋಜನೆಗಳು: ಯಾರಿಗೆ ಎಷ್ಟು ಪಿಂಚಣಿ? ಅರ್ಜಿ ಹೇಗೆ? ಸಂಪೂರ್ಣ ಮಾಹಿತಿ...
ಸಮಾಜದ ದುರ್ಬಲ ವರ್ಗಗಳ ಬದುಕಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರವು ಕಂದಾಯ ಇಲಾಖೆಯ (Revenue Department) ಮೂಲಕ ಅನೇಕ ಸಾಮಾಜಿಕ ಭದ್ರತಾ ಪಿಂಚಣಿ (Social Security Pension Karnataka) ಯೋಜನೆಗಳನ್ನು ಅನುಷ್ಠಾನಗೊಳಿಸಿದೆ.
ವೃದ್ಧರು, ವಿಧವೆಯರು, ಅಂಗವಿಕಲರು, ಏಕಾಂಗ ಮಹಿಳೆಯರು, ಅಲ್ಪಸಂಖ್ಯಾತರು, ರೈತ ಕುಟುಂಬಗಳು ಹಾಗೂ ವಿಶೇಷ ಸಂತ್ರಸ್ತರ ನೆರವಿಗಾಗಿ ಈ ಯೋಜನೆಗಳು ಅತ್ಯಂತ ಉಪಯುಕ್ತವಾಗಿವೆ.
ಇದನ್ನೂ ಓದಿ: Narega Kuri Shed – ಕುರಿ ಶೆಡ್ ನಿರ್ಮಾಣಕ್ಕೆ ರೂ.70,000 ಸಹಾಯಧನ | ಅರ್ಜಿ ಸಲ್ಲಿಕೆಯ ಸಂಪೂರ್ಣ ಮಾಹಿತಿ…
ಬ್ಯಾಂಕ್ ಖಾತೆಗೆ ಸಹಾಯಧನ ಜಮಾ
ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯದ ಮಾರ್ಗದರ್ಶನದಲ್ಲಿ ಈ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ಅರ್ಹ ಫಲಾನುಭವಿಗಳಿಗೆ ಮಾಸಿಕ ಪಿಂಚಣಿ, ಗೌರವಧನ ಹಾಗೂ ಏಕಕಾಲಿಕ ಸಹಾಯಧನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಈ ಲೇಖನದಲ್ಲಿ ಕಂದಾಯ ಇಲಾಖೆಯ ಮೂಲಕ ಚಾಲಗೊಳ್ಳುತ್ತಿರುವ ಎಲ್ಲಾ ಪ್ರಮುಖ ಪಿಂಚಣಿ ಹಾಗೂ ಸಹಾಯಧನ ಯೋಜನೆಗಳ ವಿವರ, ಪಿಂಚಣಿ ಮೊತ್ತ, ಅರ್ಹತಾ ಮಾನದಂಡಗಳು ಮತ್ತು ಅರ್ಜಿ ಸಲ್ಲಿಸುವ ವಿಧಾನವನ್ನು ಸಂಪೂರ್ಣವಾಗಿ ತಿಳಿಸಿಕೊಳ್ಳೋಣ.
1. ವೃದ್ಧಾಪ್ಯ ವೇತನ ಯೋಜನೆ (Old Age Pension)
ಬಡತನ ರೇಖೆಗಿಂತ ಕೆಳಗಿನ ಹಿರಿಯ ನಾಗರಿಕರಿಗೆ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾದ ಈ ಯೋಜನೆಯಡಿ 60 ರಿಂದ 84 ವರ್ಷ ವಯಸ್ಸಿನವರಿಗೆ ಪ್ರತಿ ತಿಂಗಳು ₹600 ಹಾಗೂ 85 ವರ್ಷ ಮೇಲ್ಪಟ್ಟವರಿಗೆ ₹1,000 ಪಿಂಚಣಿ ನೀಡಲಾಗುತ್ತದೆ.
ಕನಿಷ್ಠ 60 ವರ್ಷ ವಯಸ್ಸಿರಬೇಕು. ಕುಟುಂಬದ ವಾರ್ಷಿಕ ಆದಾಯ ₹32,000 ಕ್ಕಿಂತ ಕಡಿಮೆ ಇರಬೇಕು. ಆಧಾರ್ ಕಾರ್ಡ್, ವಯಸ್ಸಿನ ಪ್ರಮಾಣ ಪತ್ರ, ವಿಳಾಸದ ದಾಖಲೆ ಹಾಗೂ ಬ್ಯಾಂಕ್/ಅAಚೆ ಖಾತೆ ವಿವರಗಲೊಂದಿಗೆ ಅರ್ಜಿ ಸಲ್ಲಸಬಹುದು.
2. ವಿಧವಾ ವೇತನ ಯೋಜನೆ (Widow Pension)
ನಿರ್ಗತಿಕ ವಿಧವೆಯರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ಪ್ರತೀ ತಿಂಗಳು ಈ ಮಹಿಳೆಯರಿಗೆ ₹800 ಪಿಂಚಣಿ ನೀಡಲಾಗುತ್ತದೆ.
ಇದರ ಪ್ರಯೋಜನ ಪಡೆಯಲು 18 ವರ್ಷ ಮೇಲ್ಪಟ್ಟ ವಿಧವೆಯರಾಗಿರಬೇಕು. ಕುಟುಂಬದ ವಾರ್ಷಿಕ ಆದಾಯ ₹32,000 ಕ್ಕಿಂತ ಕಡಿಮೆ ಇರಬೇಕು. ಆಧಾರ್ ಕಾರ್ಡ್, ಪತಿಯ ಮರಣ ಪ್ರಮಾಣ ಪತ್ರ, ವಿಳಾಸದ ದಾಖಲೆ, ಬ್ಯಾಂಕ್ ಖಾತೆ ವಿವರಗಳೊಂದಿಗೆ ಅರ್ಜಿ ಸಲ್ಲಿಸಬಹುದು.
3. ಅಂಗವಿಕಲ ವೇತನ ಯೋಜನೆ (Disability Pension)
ಅಂಗವಿಕಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು 40% ಅಂಗವಿಕಲತೆ ಹೊಂದಿರುವವರಿಗೆ ಪ್ರತಿ ತಿಂಗಳು ₹800 ಹಾಗೂ 75% ಕ್ಕಿಂತ ಹೆಚ್ಚು ಅಂಗವಿಕಲತೆ ಇರುವವರಿಗೆ ₹1,400 ನೆರವು ನೀಡಲಾಗುತ್ತದೆ.
ಆರ್ಥಿಕ ಭದ್ರತೆ ಒದಗಿಸುವ ಈ ಯೋಜನೆಯ ಪ್ರಯೋಜನ ಪಡೆಯಲು ಅಂಗವಿಕಲತೆ ದೃಢೀಕರಣ ಮಾಡಿರುವ ವೈದ್ಯಕೀಯ ಪ್ರಮಾಣ ಪತ್ರ ಹೊಂದಿರಬೇಕು. ಕುಟುಂಬದ ಆದಾಯ ₹32,000 ಕ್ಕಿಂತ ಕಡಿಮೆ ಇರಬೇಕು.
4. ಸಂಧ್ಯಾ ಸುರಕ್ಷಾ ಯೋಜನೆ (Sandhya Suraksha Yojana)
65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನೀಡುವ ವಿಶೇಷ ಪಿಂಚಣಿ ಯೋಜನೆ ಇದು. ಅರ್ಹ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ₹1,200 ಪಿಂಚಣಿ ನೀಡಲಾಗುತ್ತದೆ. 65 ವರ್ಷ ಮೇಲ್ಪಟ್ಟ, ಆದಾಯ ಮಿತಿ ₹32,000 ಕಡಿಮೆ ಇರುವವರು ಇದರ ಪ್ರಯೋಜನ ಪಡೆಯಬಹುದು.
ಇದನ್ನೂ ಓದಿ: Grama One Application- ಗ್ರಾಮ ಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ | ಪಿಯುಸಿ ಪಾಸಾದವರಿಗೆ ಉದ್ಯೋಗಾವಕಾಶ
5. ಮನಸ್ವಿನಿ ಯೋಜನೆ (Manaswini Scheme Karnataka)
ಅವಿವಾಹಿತ, ವಿಚ್ಛೇದಿತ ಮತ್ತು ಪರಿತ್ಯಕ್ತ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡುವ ಯೋಜನೆ. ಪ್ರತಿ ತಿಂಗಳು ₹600 ಪಿಂಚಣಿ ನೀಡಲಾಗುತ್ತದೆ. ಕುಟುಂಬದ ಆದಾಯ ₹32,000 ಒಳಗಿರುವ 40 ರಿಂದ 64 ವರ್ಷ ವಯಸ್ಸಿನ ಮಹಿಳೆಯರು ಇದರ ಪ್ರಯೋಜನ ಪಡೆಯಬಹುದು.
6. ಮೈತ್ರಿ ಯೋಜನೆ (Maitri Scheme Transgender Pension)
ಲೈಂಗಿಕ ಅಲ್ಪಸಂಖ್ಯಾತರ (Transgender) ಸಾಮಾಜಿಕ ಹಾಗೂ ಆರ್ಥಿಕ ಸಬಲೀಕರಣಕ್ಕಾಗಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ. ಅರ್ಹರಿಗೆ ಪ್ರತಿ ತಿಂಗಳು ₹600 ಪಿಂಚಣಿ ನೀಡಲಾಗುತ್ತದೆ. ಸಮುದಾಯ ಸಂಸ್ಥೆಗಳ ಪ್ರಮಾಣ ಪತ್ರ ಹೊಂದಿರುವ 25 ರಿಂದ 64 ವರ್ಷ ವಯಸ್ಸಿನೊಳಗಿನವರು ಇದಕ್ಕೆ ಅರ್ಹರು.

7. ರೈತ ವಿಧವಾ ಮಾಸಾಶನ ಯೋಜನೆ (Farmer Widow Pension Karnataka)
ಸಾಲಭಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಪತ್ನಿಗೆ ನೆರವು ನೀಡುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಅರ್ಹ ರೈತ ಮಹಿಳೆಯರಿಗೆ ಪ್ರತಿ ತಿಂಗಳು ₹2,000 ಸಹಾಯಧನ ನೀಡಲಾಗುತ್ತದೆ. ಕೃಷಿ ಇಲಾಖೆಯಿಂದ ರೈತ ಆತ್ಮಹತ್ಯೆ ಪ್ರಕರಣವಾಗಿ ಗುರುತಿಸಲ್ಪಟ್ಟ ಮಹಿಳೆಯರಿಗೆ ಈ ಮಾಶಾಸನ ಸಿಗಲಿದೆ.
8. ಆಸಿಡ್ ದಾಳಿ ಸಂತ್ರಸ್ತ ಮಹಿಳೆಯರಿಗೆ ಸಹಾಯಧನ (Acid Attack Victim Pension)
ಈ ಯೋಜನೆಯಡಿ ಆಸಿಡ್ ದಾಳಿಗೆ ಒಳಗಾದ ಮಹಿಳೆಯರಿಗೆ ಗೌರವಯುತ ಜೀವನ ನಡೆಸಲು ನೆರವು ನೀಡಲಾಗುತ್ತದೆ. ಪ್ರತಿ ತಿಂಗಳು ₹3,000 ಸಹಾಯಧನ ನೀಡಲಾಗುತ್ತದೆ.
9. ಎಂಡೋಸಲ್ಫಾನ್ ಸಂತ್ರಸ್ತರಿಗೆ ಪಿಂಚಣಿ
ಉಡುಪಿ, ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಎಂಡೋಸಲ್ಫಾನ್ ಸಂತ್ರಸ್ತರಿಗೆ (Endosulfan Victim Pension) ಈ ಯೋಜನೆ ಅನ್ವಯವಾಗಿದ್ದು; 25%-59% ಅಂಗವಿಕಲತೆ ಇರುವವರಿಗೆ ₹2,000 ಹಾಗೂ 80% ಮೇಲ್ಪಟ್ಟು ಅಂಗವಿಕಲತೆ ಹೊಂದಿರುವವರಿಗೆ ₹4,000 ಮಾಶಾಸನ ನೀಡಲಾಗುತ್ತದೆ.
10. ರಾಷ್ಟ್ರೀಯ ಕುಟುಂಬ ನೆರವು ಯೋಜನೆ
ಕುಟುಂಬದ ದುಡಿಯುವ ಮುಖ್ಯ ವ್ಯಕ್ತಿ ಮೃತಪಟ್ಟಲ್ಲಿ ನೀಡುವ ಏಕಕಾಲಿಕ ನೆರವು ಇದಾಗಿದ್ದು; ಸಂತ್ರಸ್ತ ಕುಟುಂಬಕ್ಕೆ (National Family Benefit Scheme) ಒಂದು ಬಾರಿಗೆ ₹20,000 ಆರ್ಥಿಕ ನೆರವು ನೀಡಲಾಗುತ್ತದೆ.
11. ಅಂತ್ಯ ಸಂಸ್ಕಾರ ಯೋಜನೆ
ಬಡ ಕುಟುಂಬದ ಸದಸ್ಯರ ಅಂತಿಮ ಕ್ರಿಯೆಗೆ ಈ ಸಹಾಯಧನ ನೀಡಲಾಗುತ್ತಿದ್ದು; ಶವ ಸಂಸ್ಕಾರದ (Funeral Assistance Scheme) ಖರ್ಚಿಗೆ ₹5,000 ರೂ. ಆರ್ಥಿಕ ನೆರವು ನೀಡಲಾಗುತ್ತದೆ.
12. ಆದರ್ಶ ವಿವಾಹ ಯೋಜನೆ
ಸಾಮೂಹಿಕ ವಿವಾಹಗಳನ್ನು ಉತ್ತೇಜಿಸುವ ಹಿನ್ನಲೆಯಲ್ಲಿ ಈ ಯೋಜನೆ ಜಾರಿಗೊಳಿಸಲಾಗಿದೆ. ಪ್ರತಿ ಜೋಡಿಗೆ ₹10,000 ಪ್ರೋತ್ಸಾಹಧನ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ
ಈ ಎಲ್ಲಾ ಯೋಜನೆಗಳಿಗೆ ನಿಮ್ಮ ಹತ್ತಿರದ ನಾಡ ಕಚೇರಿ / ಅಟಲ್ ಜೀ ಜನಸ್ನೇಹಿ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಅಥವಾ ತಾಲ್ಲೂಕಿನ ಉಪ ತಹಶೀಲ್ದಾರ / ತಹಶೀಲ್ದಾರ ಕಚೇರಿ ಸಂಪರ್ಕಿಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಕಂದಾಯ ಇಲಾಖೆಯ ಈ ಪಿಂಚಣಿ ಯೋಜನೆಗಳು ಲಕ್ಷಾಂತರ ಕುಟುಂಬಗಳಿಗೆ ಆರ್ಥಿಕ ನೆಮ್ಮದಿ ನೀಡುತ್ತಿರುವ ಮಹತ್ವದ ಸಾಮಾಜಿಕ ಭದ್ರತಾ ಕ್ರಮಗಳಾಗಿವೆ. ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಈ ಯೋಜನೆಗಳಿಗೆ ಅರ್ಹರಾಗಿದ್ದರೆ, ತಕ್ಷಣವೇ ಸಂಬಂಧಪಟ್ಟ ಕಚೇರಿಯನ್ನು ಸಂಪರ್ಕಿಸಿ ಪ್ರಯೋಜನ ಪಡೆದುಕೊಳ್ಳಿ.
2 thoughts on “Kandaya Ilakhe Pension Yojane – ಕಂದಾಯ ಇಲಾಖೆಯ ಪಿಂಚಣಿ ಯೋಜನೆಗಳು: ಯಾರಿಗೆ ಎಷ್ಟು ಪಿಂಚಣಿ? ಅರ್ಜಿ ಹೇಗೆ? ಸಂಪೂರ್ಣ ಮಾಹಿತಿ”