Hosa Ration Card Arji: ಕರ್ನಾಟಕದಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಆರಂಭವಾಗಿದೆ. ಅರ್ಹರು ಮಾರ್ಚ್ 31ರೊಳಗೆ ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆಗಳು, ಅರ್ಜಿ ವಿಧಾನ, ಅರ್ಹತೆ ಮತ್ತು ಸಂಪೂರ್ಣ ಮಾಹಿತಿ ಇಲ್ಲಿದೆ…
ಇತ್ತೀಚೆಗೆ ರಾಜ್ಯ ಸರ್ಕಾರ ಮಹತ್ವದ ಪ್ರಕಟಣೆ ನೀಡಿದ್ದು, ಸಾಮಾನ್ಯ ಹೊಸ ರೇಷನ್ ಕಾರ್ಡ್ (New Ration Card) ಅರ್ಜಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆದರೆ ಕೆಲವು ವಿಶೇಷ ಹಾಗೂ ತುರ್ತು ವರ್ಗದವರಿಗೆ ಮಾತ್ರ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿ 2026ರ ಮಾರ್ಚ್ 31 ನಿಗದಿಪಡಿಸಲಾಗಿದೆ.
ಈ ಲೇಖನದಲ್ಲಿ ಯಾರು ಅರ್ಜಿ ಹಾಕಬಹುದು? ಯಾವ ದಾಖಲೆಗಳು ಬೇಕು? ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಹೇಗೆ ಅರ್ಜಿ ಸಲ್ಲಿಸಬೇಕು? ಎಷ್ಟು ದಿನಗಳಲ್ಲಿ ರೇಷನ್ ಕಾರ್ಡ್ ಸಿಗುತ್ತದೆ? ಎಂಬ ಎಲ್ಲ ಪ್ರಶ್ನೆಗಳಿಗೆ ಸಂಪೂರ್ಣ ಮತ್ತು ಸ್ಪಷ್ಟ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: 8th Pay Commission: ಸರ್ಕಾರಿ ನೌಕರರೇ ಗಮನಿಸಿ | 8ನೇ ವೇತನ ಆಯೋಗಕ್ಕೆ ಪ್ರತಿಕ್ರಿಯೆ ಸಲ್ಲಿಸಿ | ಮಾರ್ಚ್ 16 ಡೆಡ್‌ಲೈನ್
ಹೊಸ ರೇಷನ್ ಕಾರ್ಡ್ ಯಾರಿಗೆ ಅವಕಾಶ ಇದೆ?
ಸರ್ಕಾರದ ಇತ್ತೀಚಿನ ಆದೇಶದಂತೆ, ಕೆಳಗಿನ ನಾಲ್ಕು ವಿಶೇಷ ವರ್ಗದವರು ಮಾತ್ರ ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಲು ಅರ್ಹರು.
1) ಇ-ಶ್ರಮ್ ಕಾರ್ಡ್ (e-Shram Card) ಹೊಂದಿರುವವರು
ಅಸಂಘಟಿತ ಕ್ಷೇತ್ರದಲ್ಲಿ (Unorganised Sector) ಕೆಲಸ ಮಾಡುವ ಕಾರ್ಮಿಕರಿಗೆ ಕೇಂದ್ರ ಸರ್ಕಾರದ ಮೂಲಕ ನೀಡಲಾಗುವ ಇ-ಶ್ರಮ್ ಕಾರ್ಡ್ ಒಂದು ಪ್ರಮುಖ ಗುರುತಿನ ದಾಖಲೆ.
ದಿನಗೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಬೀದಿ ವ್ಯಾಪಾರಿಗಳು, ಗೃಹಕಾರ್ಮಿಕರು, ಆಟೋ ಚಾಲಕರು, ಹಸ್ತಶಿಲ್ಪ ಕಾರ್ಮಿಕರು ಮುಂತಾದವರು ಇ-ಶ್ರಮ್ ಕಾರ್ಡ್ ಹೊಂದಿದ್ದರೆ ಹೊಸ ರೇಷನ್ ಕಾರ್ಡ್ಗೆ ಅರ್ಜಿ ಹಾಕಬಹುದು. ಅರ್ಹತಾ ಷರತ್ತುಗಳು:
- ವಯಸ್ಸು 16 ರಿಂದ 59 ವರ್ಷದೊಳಗಿರಬೇಕು
- EPFO, ESI ಅಥವಾ NPS ಸದಸ್ಯರಾಗಿರಬಾರದು
- ಕುಟುಂಬದಲ್ಲಿ ಈಗಾಗಲೇ ರೇಷನ್ ಕಾರ್ಡ್ ಇರಬಾರದು
- ಇ-ಶ್ರಮ್ ಕಾರ್ಡ್ ಮಾನ್ಯವಾಗಿರಬೇಕು
ಇ-ಶ್ರಮ್ ಕಾರ್ಡ್ ಇರುವುದರಿಂದ ಅರ್ಜಿಗೆ ಆದ್ಯತೆ ಸಿಗುತ್ತದೆ. ಪರಿಶೀಲನೆ (Verification) ಪ್ರಕ್ರಿಯೆ ವೇಗವಾಗಿ ನಡೆಯುವ ಸಾಧ್ಯತೆ ಇದೆ.
ಇದನ್ನೂ ಓದಿ: What is Land Podi: ‘ಪೋಡಿ’ ಬಗ್ಗೆ ನಿಮಗೆಷ್ಟು ಗೊತ್ತು? ರೈತರಿಗೆ ಸಂಪೂರ್ಣ ಮಾಹಿತಿ
2) ವೈದ್ಯಕೀಯ ತುರ್ತು ಪರಿಸ್ಥಿತಿ (Medical Emergency) ಇರುವ ಕುಟುಂಬಗಳು
ಕುಟುಂಬದ ಸದಸ್ಯರಿಗೆ ಗಂಭೀರ ಅನಾರೋಗ್ಯ (Serious Illness), ಅಪಘಾತ (Accident), ಶಸ್ತ್ರಚಿಕಿತ್ಸೆ (Surgery) ಅಥವಾ ದೀರ್ಘಕಾಲದ ಆಸ್ಪತ್ರೆ ಚಿಕಿತ್ಸೆ ಅಗತ್ಯವಿದ್ದರೆ, ವೈದ್ಯಕೀಯ ತುರ್ತು ಆಧಾರದಲ್ಲಿ ಹೊಸ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಬಹುದು. ಕಡ್ಡಾಯ ದಾಖಲೆಗಳು:
- ಆಸ್ಪತ್ರೆಯ ದಾಖಲೆಗಳು
- ವೈದ್ಯರ ಪ್ರಮಾಣಪತ್ರ
- ಚಿಕಿತ್ಸೆ ವಿವರ
ಈ ರೀತಿಯ ಅರ್ಜಿಗಳಿಗೆ ಸಾಮಾನ್ಯವಾಗಿ 7 ರಿಂದ 15 ದಿನಗಳೊಳಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ದಾಖಲೆಗಳು ಸರಿಯಾಗಿ ಇದ್ದರೆ ಪ್ರಕ್ರಿಯೆ ಇನ್ನಷ್ಟು ವೇಗವಾಗಿ ಮುಗಿಯುತ್ತದೆ.
3) ಪಿವಿಟಿಜಿ (PVTG – Particularly Vulnerable Tribal Groups) ಸಮುದಾಯದವರು
ಅತ್ಯಂತ ಹಿಂದುಳಿದ ಮತ್ತು ವಿಶೇಷ ಬುಡಕಟ್ಟು ಸಮುದಾಯಗಳ ಕುಟುಂಬಗಳಿಗೆ ಸರ್ಕಾರ ವಿಶೇಷ ಆದ್ಯತೆ ನೀಡಿದೆ. ಈ ವರ್ಗದ ಫಲಾನುಭವಿಗಳು ಸರ್ಕಾರ ನಿಗದಿಪಡಿಸಿದ ಆದಾಯ ಮಿತಿಯೊಳಗಿರಬೇಕು.ಅಗತ್ಯ ದಾಖಲೆಗಳು:
- ಜಾತಿ ಪ್ರಮಾಣಪತ್ರ
- ಆದಾಯ ಪ್ರಮಾಣಪತ್ರ
- ನಿವಾಸ ಪ್ರಮಾಣಪತ್ರ
ಈ ವರ್ಗದ ಅರ್ಜಿಗಳನ್ನು ಮಾನವೀಯ ದೃಷ್ಟಿಯಿಂದ (Humanitarian Grounds) ಪರಿಶೀಲಿಸಲಾಗುತ್ತದೆ.
4) ಹೊಸ ವಿವಾಹಿತ ದಂಪತಿಗಳು (Newly Married Couples)
ಇತ್ತೀಚೆಗೆ ಮದುವೆಯಾದ ದಂಪತಿಗಳು ಅಥವಾ ಪ್ರತ್ಯೇಕವಾಗಿ ಹೊಸ ಕುಟುಂಬ ಆರಂಭಿಸಿರುವವರು ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು. ಅಗತ್ಯ ದಾಖಲೆಗಳು:
- ಮದುವೆ ಪ್ರಮಾಣಪತ್ರ
- ಹೊಸ ವಿಳಾಸ ಪುರಾವೆ
- ಕುಟುಂಬದಿಂದ ಪ್ರತ್ಯೇಕವಾಗಿರುವ ಪ್ರಮಾಣ
ಇದನ್ನೂ ಓದಿ: Grama Panchayati Sadasyara Kartavyagalu: ಗ್ರಾಮ ಪಂಚಾಯಿತಿ ಸದಸ್ಯರ ಕರ್ತವ್ಯಗಳೇನು? ಎಲ್ಲರೂ ತಿಳಿದಿರಬೇಕಾದ ಮಾಹಿತಿ

ಅರ್ಜಿ ಸಲ್ಲಿಸಲು ಅವಧಿ ಮತ್ತು ಸಮಯ
- ಅವಧಿ: 2025 ಅಕ್ಟೋಬರ್ 4 ರಿಂದ 2026 ಮಾರ್ಚ್ 31 ರವರೆಗೆ
- ಸಮಯ: ಬೆಳಿಗ್ಗೆ 10 ಗಂಟೆಯಿAದ ಸಂಜೆ 5 ಗಂಟೆಯವರೆಗೆ
ಕೊನೆಯ ದಿನಾಂಕದ ನಂತರ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಆದ್ದರಿಂದ ಅರ್ಹರು ಸಮಯಕ್ಕೆ ಅರ್ಜಿ ಸಲ್ಲಿಸುವುದು ಉತ್ತಮ.
ಹೊಸ ರೇಷನ್ ಕಾರ್ಡ್ ಅಗತ್ಯ ಅರ್ಹತೆ
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
- ಕುಟುಂಬದಲ್ಲಿ ಈಗಾಗಲೇ ಯಾವುದೇ ರೇಷನ್ ಕಾರ್ಡ್ ಇರಬಾರದು
- ಸಲ್ಲಿಸುವ ದಾಖಲೆಗಳು ನಿಖರ ಹಾಗೂ ಮಾನ್ಯವಾಗಿರಬೇಕು
- ತಪ್ಪು ಮಾಹಿತಿ ನೀಡಿದರೆ ಕಾನೂನು ಕ್ರಮ ಎದುರಾಗಬಹುದು
ರೇಷನ್ ಕಾರ್ಡ್ ಅರ್ಜಿ ಸಲ್ಲಿಸುವ ವಿಧಾನ
ಆನ್‌ಲೈನ್ ಮೂಲಕ ಅರ್ಜಿ (Online Application)
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ:
- ‘ಹೊಸ ಪಡಿತರ ಚೀಟಿ’ ಆಯ್ಕೆಮಾಡಿ
- ಆಧಾರ್ ಸಂಖ್ಯೆ ನಮೂದಿಸಿ
- ಬಯೋಮೆಟ್ರಿಕ್ ದೃಢೀಕರಣ ಮಾಡಿ
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಅರ್ಜಿ ಸಲ್ಲಿಸಿ
ಅರ್ಜಿಯ ಸ್ಥಿತಿಯನ್ನು (Application Status) ಪೋರ್ಟಲ್‌ನಲ್ಲಿ ಟ್ರ‍್ಯಾಕ್ ಮಾಡಬಹುದು.
ಇದನ್ನೂ ಓದಿ: Swachh Bharat Mission: ಶೌಚಾಲಯ ನಿರ್ಮಿಸಲು ₹20 ಸಾವಿರವರೆಗೆ ಸಹಾಯಧನ | ಸಂಪೂರ್ಣ ಮಾಹಿತಿ ಇಲ್ಲಿದೆ…
ಆಫ್‌ಲೈನ್ ಮೂಲಕ ಅರ್ಜಿ (Offline Application)
ನಿಮ್ಮ ಹತ್ತಿರದ ಗ್ರಾಮ್ ಒನ್ ಕೇಂದ್ರ, ಕರ್ನಾಟಕ ಒನ್ ಕೇಂದ್ರ. ಬೆಂಗಳೂರು ಒನ್ ಕೇಂದ್ರ ಅಥವಾ ತಹಸೀಲ್ದಾರ್ ಕಚೇರಿಯಲ್ಲಿ ಅರ್ಜಿ ನಮೂನೆ ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದು.
ಅಗತ್ಯ ದಾಖಲೆಗಳ ಸಂಪೂರ್ಣ ಪಟ್ಟಿ
- ಇ-ಶ್ರಮ್ ಕಾರ್ಡ್ (ಅಗತ್ಯವಿದ್ದರೆ)
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
- ವಿಳಾಸ ಪುರಾವೆ (Electricity Bill / Voter ID / Driving Licence)
- ಆದಾಯ ಪ್ರಮಾಣಪತ್ರ
- ಜಾತಿ ಪ್ರಮಾಣಪತ್ರ (ಅಗತ್ಯವಿದ್ದರೆ)
- ಪಾಸ್‌ಪೋರ್ಟ್ ಸೈಜ್ ಫೋಟೋ
- ವೈದ್ಯಕೀಯ ದಾಖಲೆಗಳು (Medical Emergency ಇದ್ದರೆ)
- 6 ವರ್ಷದೊಳಗಿನ ಮಕ್ಕಳಿಗೆ ಜನನ ಪ್ರಮಾಣಪತ್ರ
ಇದನ್ನೂ ಓದಿ: Cow Shed Subsidy under MGNREGA: ಹಸು ಕೊಟ್ಟಿಗೆ ನಿರ್ಮಾಣಕ್ಕೆ ₹57,000 ಸಹಾಯಧನ | ರೈತರಿಗೆ ಸಂಪೂರ್ಣ ಮಾರ್ಗದರ್ಶಿ
ಎಷ್ಟು ದಿನಗಳಲ್ಲಿ ರೇಷನ್ ಕಾರ್ಡ್ ಸಿಗುತ್ತದೆ?
- ಸಾಮಾನ್ಯ ಅರ್ಜಿಗಳಿಗೆ: 15 ರಿಂದ 30 ದಿನಗಳು
- ವೈದ್ಯಕೀಯ ತುರ್ತು ಅರ್ಜಿಗಳಿಗೆ: 7 ರಿಂದ 15 ದಿನಗಳು
ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಂಡ ನಂತರ ರೇಷನ್ ಕಾರ್ಡ್ ಮುದ್ರಣ ಮತ್ತು ವಿತರಣೆಯಾಗುತ್ತದೆ.
ರೇಷನ್ ಕಾರ್ಡ್ ತಿದ್ದುಪಡಿ (Correction / Update) ಅವಕಾಶ
ಮಾರ್ಚ್ 31ರವರೆಗೆ ಈ ಕೆಳಗಿನ ಬದಲಾವಣೆಗಳನ್ನು ಕೂಡ ಮಾಡಬಹುದು:
- ಹೊಸ ಸದಸ್ಯ ಸೇರಿಸುವುದು
- ಹೆಸರು ತಿದ್ದುಪಡಿ
- ವಿಳಾಸ ನವೀಕರಣ
- ಸದಸ್ಯರನ್ನು ತೆಗೆದುಹಾಕುವುದು
ಇದನ್ನೂ ಓದಿ: Kukkuta Sanjeevini Scheme: ಮಹಿಳೆಯರಿಗೆ ಉಚಿತ ಕೋಳಿ ಮರಿ, ಕೋಳಿ ಶೆಡ್‌ಗೆ ಸಹಾಯಧನ
ಮಾರ್ಚ್ 31ರೊಳಗೆ ಅರ್ಜಿ ಸಲ್ಲಿಸಿ…
ಹೊಸ ರೇಷನ್ ಕಾರ್ಡ್ ಅನೇಕ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡುವ ಪ್ರಮುಖ ಸಾಧನವಾಗಿದೆ. ಸರ್ಕಾರ ಸಾಮಾನ್ಯ ಅರ್ಜಿಗಳನ್ನು ಸ್ಥಗಿತಗೊಳಿಸಿದ್ದರೂ, ಇ-ಶ್ರಮ್ ಕಾರ್ಡ್ ಹೊಂದಿರುವವರು, ವೈದ್ಯಕೀಯ ತುರ್ತು ಪರಿಸ್ಥಿತಿಯವರು, ಪಿವಿಟಿಜಿ ಸಮುದಾಯದವರು ಮತ್ತು ಹೊಸ ವಿವಾಹಿತ ದಂಪತಿಗಳಿಗೆ ವಿಶೇಷ ಅವಕಾಶ ನೀಡಿದೆ.
ಎಲ್ಲಾ ದಾಖಲೆಗಳು ಸಿದ್ಧವಾಗಿದ್ದರೆ ಹಾಗೂ ಅರ್ಹತೆಯನ್ನು ಪೂರೈಸಿದರೆ, ಮಾರ್ಚ್ 31ರೊಳಗೆ ಅರ್ಜಿ ಸಲ್ಲಿಸುವುದು ಅತ್ಯಗತ್ಯ. ಸರಿಯಾದ ಮಾಹಿತಿ ಹಾಗೂ ಮಾನ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿದರೆ ರೇಷನ್ ಕಾರ್ಡ್ ಪಡೆಯುವ ಪ್ರಕ್ರಿಯೆ ಸುಲಭ ಮತ್ತು ವೇಗವಾಗಿರುತ್ತದೆ.
Pension Hike 2026: ಅಂಗವಿಕಲ, ವಿಧವಾ ಮತ್ತು ವೃದ್ಧಾಪ್ಯ ವೇತನ ಹೆಚ್ಚಳ | ನಿಜವಾದ ಮಾಹಿತಿ ಏನು?