Gruha Lakshmi Yojane: 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್! ನಿಮಗೂ ಹಣ ಜಮೆಯಾಗಿಲ್ಲವೇ?

WhatsApp Group Join Now
Telegram Group Join Now

Gruha Lakshmi Yojane: ಗೃಹಲಕ್ಷ್ಮಿ ಯೋಜನೆಯಡಿ ಸುಮಾರು 52 ಸಾವಿರ ಮಹಿಳೆಯರಿಗೆ ಹಣ ಜಮೆಯಾಗುತ್ತಿಲ್ಲ ಎಂಬ ಮಾಹಿತಿ ಬಹಿರಂಗವಾಗಿದ್ದು, ಫಲಾನುಭವಿಗಳಲ್ಲಿ ಆತಂಕ ಮೂಡಿಸಿದೆ. ನಿಮಗೂ ಹಣ ಜಮೆಯಾಗಿಲ್ಲವೇ? ಸಂಪೂರ್ಣ ಮಾಹಿತಿ ಇಲ್ಲಿದೆ…

ಕರ್ನಾಟಕ ಸರ್ಕಾರದ (Government of Karnataka) ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ (GruhaLakshmi Yojane) ರಾಜ್ಯದ ಲಕ್ಷಾಂತರ ಮಹಿಳೆಯರಿಗೆ ಆರ್ಥಿಕ ನೆರವಾಗುತ್ತಿದೆ. ಆದರೆ ಇತ್ತೀಚೆಗೆ ಈ ಯೋಜನೆಯಡಿ ಸುಮಾರು 52 ಸಾವಿರ ಮಹಿಳೆಯರಿಗೆ ಹಣ ಜಮೆಯಾಗುತ್ತಿಲ್ಲ ಎಂಬ ಮಾಹಿತಿ ಬಹಿರಂಗವಾಗಿದ್ದು, ಫಲಾನುಭವಿಗಳಲ್ಲಿ ಆತಂಕ ಮೂಡಿಸಿದೆ.

ಈ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ವಿಧಾನ ಪರಿಷತ್‌ನಲ್ಲಿ ಸ್ಪಷ್ಟನೆ ನೀಡಿದ್ದಾರೆ. ಹಾಗಾದರೆ ಹಣ ಏಕೆ ಬಂದಿಲ್ಲ? ಸರ್ಕಾರದ ತಪ್ಪೇ? ಸಮಸ್ಯೆಗೆ ಪರಿಹಾರ ಸಿಗುತ್ತದೆಯೇ? ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: Post Office Recruitment 2026- ಪೋಸ್ಟ್ ಆಫೀಸ್ ನೇಮಕಾತಿ | ಎಸ್ಸೆಸ್ಸೆಲ್ಸಿ ಪಾಸಾದವರಿಗೆ 1,023 ಹುದ್ದೆಗಳು | ನಿಮ್ಮೂರಲ್ಲೇ ಉದ್ಯೋಗ ಮಾಡುವ ಅವಕಾಶ

ಗೃಹಲಕ್ಷ್ಮಿ ಹಣ ಜಮೆಯಾಗದ ಕಾರಣವೇನು?

ವಿಧಾನ ಪರಿಷತ್ ವಿಶೇಷ ಅಧಿವೇಶನದಲ್ಲಿ ಸದಸ್ಯರಾದ ಪಿಎಚ್ ಪೂಜಾರ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ‘ಜಿಎಸ್‌ಟಿ ಮತ್ತು ಆದಾಯ ತೆರಿಗೆ ಪಾವತಿಸುತ್ತಿರುವ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುತ್ತಿಲ್ಲ. ಈ ಕಾರಣದಿಂದ ಸುಮಾರು 52 ಸಾವಿರ ಫಲಾನುಭವಿಗಳಿಗೆ ಹಣ ಬಂದಿಲ್ಲ’ ಎಂದು ತಿಳಿಸಿದ್ದಾರೆ.

ಅಂದರೆ, ಗೃಹಲಕ್ಷ್ಮಿ ಯೋಜನೆಗೆ ಅರ್ಹರಾಗಿದ್ದರೂ, ಫಲಾನುಭವಿ ಮಹಿಳೆಯ ಹೆಸರು ಜಿಎಸ್‌ಟಿ ಅಥವಾ ಆದಾಯ ತೆರಿಗೆ ದಾಖಲೆಗಳಲ್ಲಿ ಕಾಣಿಸಿಕೊಂಡರೆ, ಸಾಫ್ಟ್ವೇರ್ ಮೂಲಕ ಸ್ವಯಂಚಾಲಿತವಾಗಿ ಹಣ ತಡೆಹಿಡಿಯಲಾಗುತ್ತಿದೆ.

ಇದನ್ನೂ ಓದಿ: New Voter ID- ಹೊಸ ಮತದಾರರ ಚೀಟಿಗೆ ಮೊಬೈಲ್ ಮೂಲಕ ಅರ್ಜಿ ಹಾಕುವುದು ಹೇಗೆ? ಸರಳ ವಿಧಾನ ಇಲ್ಲಿದೆ…

20 ಸಾವಿರ ಮಹಿಳೆಯರ ಸಮಸ್ಯೆಗೆ ಪರಿಹಾರ

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಹೇಳುವಂತೆ, ಒಟ್ಟು 52,000 ಫಲಾನುಭವಿಗಳಲ್ಲಿ ಸುಮಾರು 20,000 ಮಹಿಳೆಯರ ಸಮಸ್ಯೆಯನ್ನು ಈಗಾಗಲೇ ಪರಿಹರಿಸಲಾಗಿದೆ.

ಉಳಿದ ಸುಮಾರು 32,000 ಮಹಿಳೆಯರ ಪ್ರಕರಣಗಳನ್ನು ಸರಿಪಡಿಸಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಇದು ನಿರಂತರ ಪ್ರಕ್ರಿಯೆಯಾಗಿದ್ದು, ತಾಂತ್ರಿಕ ಹಾಗೂ ದಾಖಲೆ ಸಂಬAಧಿತ ತಿದ್ದುಪಡಿಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Jathi-Aadaya Pramanapatra- ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ – ಸಂಪೂರ್ಣ ಮಾಹಿತಿ

ಸರ್ಕಾರದ ತಪ್ಪಿಲ್ಲ ಎಂದ ಸಚಿವೆ

ಈ 32,000 ಮಹಿಳೆಯರಿಗೆ ಹಣ ಜಮೆಯಾಗದೇ ಇರುವುದಕ್ಕೆ ಸರ್ಕಾರ ಅಥವಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಪ್ಪಿಲ್ಲ ಎಂದು ಸಚಿವೆ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.

‘ಜಿಎಸ್‌ಟಿ ಹಾಗೂ ಆದಾಯ ತೆರಿಗೆ ಇಲಾಖೆಗಳ ದಾಖಲೆಗಳಲ್ಲೂ ಫಲಾನುಭವಿಗಳ ಹೆಸರು ಕಾಣಿಸುತ್ತಿದೆ. ಆ ದಾಖಲೆಗಳ ಆಧಾರದಲ್ಲೇ ಸಾಫ್ಟ್ವೇರ್ ಕಾರ್ಯನಿರ್ವಹಿಸುತ್ತಿದೆ. ಸರ್ಕಾರದ ಅಥವಾ ನಮ್ಮ ಇಲಾಖೆಯ ತಪ್ಪಿಲ್ಲ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: Grama Panchayati Yojanegalu- ಗ್ರಾಮ ಪಂಚಾಯತಿ ಮೂಲಕ ಯಾವೆಲ್ಲ ಯೋಜನೆ ಪ್ರಯೋಜನ ಪಡೆಯಬಹುದು? ಸಂಪೂರ್ಣ ಮಾಹಿತಿ

ಸಾಫ್ಟ್‌ವೇರ್’ನಲ್ಲಿ ಬದಲಾವಣೆ ಸಾಧ್ಯವೇ?

ಗೃಹಲಕ್ಷ್ಮಿ ಯೋಜನೆಗಾಗಿ ವಿಶೇಷವಾಗಿ ರೂಪಿಸಲಾಗಿರುವ ಸಾಫ್ಟ್‌ವೇರ್’ನಲ್ಲಿ, ಫಲಾನುಭವಿ ಮಹಿಳೆಯ ಹೆಸರು, ಜಿಎಸ್‌ಟಿ ಅಥವಾ ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಇದ್ದರೆ ಅದನ್ನು ತಕ್ಷಣವೇ ಬದಲಾವಣೆ ಮಾಡುವುದು ಸಾಧ್ಯವಿಲ್ಲ.

ಆದರೆ, ಈ ವಿಷಯವನ್ನು ಈಗಾಗಲೇ ಆದಾಯ ತೆರಿಗೆ ಇಲಾಖೆ ಮತ್ತು ಜಿಎಸ್‌ಟಿ ಕೌನ್ಸಿಲ್ ಗಮನಕ್ಕೆ ತರಲಾಗಿದೆ. ಸಾಫ್ಟ್ವೇರ್‌ನಲ್ಲಿ ಅಗತ್ಯ ಬದಲಾವಣೆ ಮಾಡುವ ಸಾಧ್ಯತೆ ಕುರಿತು ಚರ್ಚೆ ನಡೆಯುತ್ತಿದೆ ಎಂದು ಸಚಿವೆ ಹೆಬ್ಬಾಳ್ಕರ್ ಹೇಳಿದ್ದಾರೆ.

Gruha Lakshmi Scheme payment stopped
Gruha Lakshmi Scheme payment stopped

ಇದನ್ನೂ ಓದಿ: Jameenina Mele Saala- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಮೊಬೈಲ್‌ನಲ್ಲೇ ಚೆಕ್ ಮಾಡಿ | ಸಂಪೂರ್ಣ ಮಾಹಿತಿ ಇಲ್ಲಿದೆ

ರಾಜ್ಯದಲ್ಲಿ 1.26 ಕೋಟಿ ಫಲಾನುಭವಿಗಳು

ಸುಮಾರು 1.26 ಕೋಟಿಯಷ್ಟು ಒಟ್ಟು ಫಲಾನುಭವಿ ಮಹಿಳೆಯರಿದ್ದು; ಇವರಿಗೆ ತಿಂಗಳಿಗೆ ₹2000 ಸಹಾಯಧನವನ್ನು ಕುಟುಂಬದ ಮಹಿಳಾ ಮುಖ್ಯಸ್ಥರಿಗೆ ನೇರವಾಗಿ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ.

ಹೀಗಾಗಿ ಇದು ರಾಜ್ಯದ ಅತಿದೊಡ್ಡ ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಒಂದಾಗಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಯೋಜನೆ ಜಾರಿಯಾಗುತ್ತಿರುವುದರಿಂದ, ಕೆಲ ತಾಂತ್ರಿಕ ಸಮಸ್ಯೆಗಳು ಎದುರಾಗುವುದು ಸಹಜ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: Free Fodder Seed Kit Scheme- ರೈತರಿಗೆ ಉಚಿತ ಮೇವಿನ ಬೀಜ ಕಿಟ್ ವಿತರಣೆ | ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿ

ಗೃಹಲಕ್ಷ್ಮಿ ಯೋಜನೆಯ 26 ಕಂತು ಬಿಡುಗಡೆ

ಮಾಧ್ಯಮಗಳಿಗೆ ಕಳೆದ ಭೆಬ್ರವರಿ 1ರಂದು ಪ್ರತಿಕ್ರಿಯಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಹಿಂದಿನ ಬಿಜೆಪಿ ಸರ್ಕಾರದಿಂದ ಜನತೆ ಭ್ರಮನಿರಸಗೊಂಡಿದ್ದರು. ನಾವು ಕೊಟ್ಟ ಮಾತಿನಂತೆ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ.

ಇದುವರೆಗೆ 26 ತಿಂಗಳ ಕಂತುಗಳನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದ್ದೇವೆ. ಈ ಯೋಜನೆಯ ಮೂಲಕ ಸರ್ಕಾರದ ಹಲವು ಕಲ್ಯಾಣ ಯೋಜನೆಗಳು ಮನೆಮನೆಗೂ ತಲುಪುತ್ತಿವೆ ಎಂದೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: PM Surya Ghar Yojana- ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಅರ್ಜಿ ಆಹ್ವಾನ | ಸಂಪೂರ್ಣ ಮಾಹಿತಿ ಇಲ್ಲಿದೆ…

ಫೆಬ್ರವರಿ-ಮಾರ್ಚ್ ತಿಂಗಳ ಹಣ ಯಾವಾಗ?

ಕಳೆದ ವರ್ಷದ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಕಂತುಗಳ ಬಿಡುಗಡೆ ಕುರಿತು ಪ್ರಶ್ನೆ ಕೇಳಿದಾಗ, ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಣಕಾಸು ಇಲಾಖೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಸಚಿವೆ ಉತ್ತರಿಸಿದ್ದಾರೆ.

ನಿಮಗೆ ಹಣ ಬಂದಿಲ್ಲವೇ? ಏನು ಮಾಡಬೇಕು?

  • ನಿಮಗೂ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲದಿದ್ದರೆ ನಿಮ್ಮ ಆಧಾರ್ – ಬ್ಯಾಂಕ್ ಲಿಂಕ್ ಸರಿಯಾಗಿದೆಯೇ ಪರಿಶೀಲಿಸಿ
  • ನೀವು ಅಥವಾ ಕುಟುಂಬದವರು ಜಿಎಸ್‌ಟಿ / ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಇದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ
  • ಸಮೀಪದ ಸೇವಾ ಕೇಂದ್ರ / ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿ ಸಂಪರ್ಕಿಸಿ
  • ಅಧಿಕೃತ ಘೋಷಣೆಗಳಿಗಾಗಿ ಸರ್ಕಾರದ ಪ್ರಕಟಣೆಗಳನ್ನು ಗಮನಿಸಿ

ಗೃಹಲಕ್ಷ್ಮಿ ಯೋಜನೆ ರಾಜ್ಯದ ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಮಹತ್ವದ ಯೋಜನೆಯಾಗಿದೆ. ಕೆಲ ತಾಂತ್ರಿಕ ಹಾಗೂ ತೆರಿಗೆ ಸಂಬಂಧಿತ ಅಡಚಣೆಗಳಿಂದ 52 ಸಾವಿರ ಮಹಿಳೆಯರಿಗೆ ಹಣ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಆದರೆ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಪರಿಹಾರಕ್ಕಾಗಿ ಪ್ರಯತ್ನ ನಡೆಸುತ್ತಿದೆ.

Jameenina Mele Saala- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಮೊಬೈಲ್‌ನಲ್ಲೇ ಚೆಕ್ ಮಾಡಿ | ಸಂಪೂರ್ಣ ಮಾಹಿತಿ ಇಲ್ಲಿದೆ

 

WhatsApp Group Join Now
Telegram Group Join Now

11 thoughts on “Gruha Lakshmi Yojane: 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್! ನಿಮಗೂ ಹಣ ಜಮೆಯಾಗಿಲ್ಲವೇ?”

Leave a Comment