Grama Panchayat Election 2026: ಏಪ್ರಿಲ್-ಮೇನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ | ಸರ್ಕಾರದ ತಯಾರಿ ಶುರು

WhatsApp Group Join Now
Telegram Group Join Now

Grama Panchayat Election 2026: ರಾಜ್ಯದಲ್ಲಿ ಗ್ರಾಮ ಪಂಚಾಯತಿ ಚುನಾವಣೆ ಮಾತು ಚೋರಾಗುತ್ತಿದೆ. ರಾಜ್ಯ ಸರ್ಕಾರ ಕೂಡ ಈ ಬಗ್ಗೆ ಸಿದ್ಧತೆ ಶುರು ಮಾಡಿದೆ. ಹಾಗಿದ್ದರೆ ಗ್ರಾ.ಪಂ ಚುನಾವಣೆ ಯಾವಾಗ? ಸಂಪೂರ್ಣ ವಿವರ ಇಲ್ಲಿದೆ…

ಕರ್ನಾಟಕದಲ್ಲಿ ಮತ್ತೆ ಗ್ರಾಮ ಪಂಚಾಯಿತಿ ಚುನಾವಣೆಗಳ ಮಾತು ಜೋರಾಗಿದೆ. ಏಕೆಂದರೆ ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಅಧಿಕಾರಾವಧಿ 2026ರ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಈಗಲೇ ಎಚ್ಚೆತ್ತುಕೊಂಡಿದ್ದು, 2026ರ ಏಪ್ರಿಲ್-ಮೇ ತಿಂಗಳಲ್ಲಿ ಗ್ರಾಪಂ ಚುನಾವಣೆ ನಡೆಸಲು ಸಿದ್ಧತೆ ಆರಂಭಿಸಿದೆ.

ಇದನ್ನೂ ಓದಿ: New Ration Card: ಈ ದಾಖಲೆಗಳಿದ್ರೆ 15 ದಿನದಲ್ಲಿ ನಿಮಗೆ ರೇಷನ್ ಕಾರ್ಡ್ ಸಿಗುತ್ತೆ!

ಎಷ್ಟು ಪಂಚಾಯಿತಿಗಳಿಗೆ ಚುನಾವಣೆ ಬೇಕು?

ರಾಜ್ಯದಲ್ಲಿ ಒಟ್ಟು 5,948 ಗ್ರಾಮ ಪಂಚಾಯಿತಿಗಳಿವೆ. ಇವುಗಳಲ್ಲಿ 5,698 ಗ್ರಾಪಂಗಳಿಗೆ 2020ರ ಡಿಸೆಂಬರ್‌ನಲ್ಲಿ ಚುನಾವಣೆ ನಡೆದಿತ್ತು. ಆದರೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ 2021-22ರಲ್ಲಿ ನಡೆದ ಕಾರಣ, ಈ ಪಂಚಾಯಿತಿಗಳ ಚುನಾಯಿತ ಸದಸ್ಯರ ಅವಧಿ 2026ರ ಫೆಬ್ರವರಿಯ ಎರಡನೇ ವಾರಕ್ಕೆ ಮುಗಿಯಲಿದೆ.

ಇದರ ಜೊತೆಗೆ, 2026ರ ಮಾರ್ಚ್’ಲ್ಲಿ ಅವಧಿ ಮುಗಿಯಲಿರುವ ಇನ್ನೂ 92 ಗ್ರಾಮ ಪಂಚಾಯಿತಿಗಳನ್ನು ಸೇರಿಸಿ, ಒಟ್ಟಾರೆ ಸುಮಾರು 5,790 ಗ್ರಾಪಂಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಸುವ ತಯಾರಿ ಸರ್ಕಾರ ಮಾಡುತ್ತಿದೆ.

ಇದನ್ನೂ ಓದಿ: Gruha Lakshmi Yojane: 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್! ನಿಮಗೂ ಹಣ ಜಮೆಯಾಗಿಲ್ಲವೇ?

ಆಡಳಿತಾಧಿಕಾರಿಗಳೇ ಆಡಳಿತ ನಡೆಸಿದರೆ ಏನಾಗುತ್ತದೆ?

ಈಗಾಗಲೇ ರಾಜ್ಯದ ಪರಿಸ್ಥಿತಿ ಸ್ವಲ್ಪ ಗೊಂದಲದ ಹಾದಿಯಲ್ಲಿ ಇದೆ. 187 ನಗರ ಸ್ಥಳೀಯ ಸಂಸ್ಥೆಗಳ ಕೌನ್ಸಿಲ್ ಅವಧಿ ಮುಗಿದಿದೆ. 2021ರಿಂದಲೇ 31 ಜಿಲ್ಲಾ ಪಂಚಾಯಿತಿಗಳು (ಜಿಪಂ) ಹಾಗೂ 240 ತಾಲೂಕು ಪಂಚಾಯಿತಿಗಳಿಗೆ (ತಾಪಂ) ಚುನಾಯಿತ ಪ್ರತಿನಿಧಿಗಳಿಲ್ಲ.

ಈಗ ಗ್ರಾಮ ಪಂಚಾಯಿತಿಗಳಿಗೂ ಚುನಾವಣೆ ವಿಳಂಬವಾಗಿ, ಎಲ್ಲೆಡೆ ಆಡಳಿತಾಧಿಕಾರಿಗಳನ್ನೇ ನೇಮಿಸಿದರೆ ಸರ್ಕಾರದ ಮೇಲೆ ತೀವ್ರ ಆಕ್ಷೇಪಗಳು ಏಳುವ ಸಾಧ್ಯತೆ ಇದೆ. ಜನಪ್ರತಿನಿಧಿಗಳಿಲ್ಲದೆ ಸ್ಥಳೀಯ ಆಡಳಿತ ನಡೆಯುವುದು ಪ್ರಜಾಪ್ರಭುತ್ವದ ಮೂಲ ಆತ್ಮಕ್ಕೆ ವಿರುದ್ಧ ಎನ್ನುವ ವಾದಗಳು ಬಲವಾಗುತ್ತವೆ.

ಇದನ್ನೂ ಓದಿ: Jathi-Aadaya Pramanapatra- ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ – ಸಂಪೂರ್ಣ ಮಾಹಿತಿ

ಗ್ರಾಪಂ ಸದಸ್ಯರ ಒಕ್ಕೂಟದ ಆಕ್ರೋಶ

ಈ ಹಿಂದೆ ಗ್ರಾಮ ಪಂಚಾಯಿತಿ ಸದಸ್ಯರ ಮಹಾ ಒಕ್ಕೂಟ ಆಡಳಿತಾಧಿಕಾರಿ ನೇಮಕದ ವಿರುದ್ಧ ಪ್ರತಿಭಟನೆ ನಡೆಸಿತ್ತು. ‘ಚುನಾವಣೆ ಅಧಿಸೂಚನೆ ಹೊರಬರುವವರೆಗೂ ಹಾಲಿ ಆಡಳಿತ ಮಂಡಳಿಯ ಅಧಿಕಾರ ಮುಂದುವರಿಸಬೇಕು’ ಎಂಬುದು ಅವರ ಬೇಡಿಕೆಯಾಗಿತ್ತು.

ಇದಕ್ಕೆ ಪೂರಕವಾಗಿ ಜೆ.ಎಚ್. ಪಟೇಲ್ ಸರ್ಕಾರವು ಹಿಂದೆ ಗ್ರಾಪಂ ಆಡಳಿತಾವಧಿಯನ್ನು 15 ತಿಂಗಳು ವಿಸ್ತರಿಸಿದ್ದ ಉದಾಹರಣೆಯನ್ನೂ ಅವರು ಮುಂದಿಟ್ಟಿದ್ದರು. ಇಂತಹ ಎಲ್ಲ ವಿಚಾರಗಳಿಂದ ಸರ್ಕಾರ ಮತ್ತಷ್ಟು ಗೊಂದಲಕ್ಕೆ ಹೋಗಬಾರದೆಂದು ಈಗಲೇ ಚುನಾವಣೆ ಸಿದ್ಧತೆ ಆರಂಭಿಸಿದೆ ಎನ್ನಲಾಗುತ್ತಿದೆ.

Grama Panchayat Election 2026
Grama Panchayat Election 2026

ಇದನ್ನೂ ಓದಿ: Jathi-Aadaya Pramanapatra- ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ – ಸಂಪೂರ್ಣ ಮಾಹಿತಿ

ನ್ಯಾಯಾಲಯ ಮತ್ತು ಚುನಾವಣಾ ಆಯೋಗದ ಒತ್ತಡ

ರಾಜ್ಯ ಚುನಾವಣಾ ಆಯೋಗವು, ‘ಅವಧಿ ಪೂರ್ಣಗೊಂಡ ಗ್ರಾಮ ಪಂಚಾಯಿತಿಗಳಿಗೆ ನಿಗದಿತ ಸಮಯದಲ್ಲಿ ಮೀಸಲು ಅಧಿಸೂಚನೆ ಹೊರಡಿಸಬೇಕು’ ಎಂದು ಸರ್ಕಾರವನ್ನು ಈಗಾಗಲೇ ಕೋರಿದೆ. ಇದರ ಜೊತೆಗೆ, ಈ ವಿಷಯದಲ್ಲಿ ಹೈಕೋರ್ಟ್ನಲ್ಲಿ ರಿಟ್ ಅರ್ಜಿಯೂ ಸಲ್ಲಿಕೆಯಾಗಿದೆ.

ಹೀಗಾಗಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಅಡಿಯಲ್ಲಿ 2026-31 ಅವಧಿಗೆ ಹೊಸ ಗ್ರಾಪಂ ಸಾರ್ವತ್ರಿಕ ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ.

ಇದನ್ನೂ ಓದಿ: Jameenina Mele Saala- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಮೊಬೈಲ್‌ನಲ್ಲೇ ಚೆಕ್ ಮಾಡಿ | ಸಂಪೂರ್ಣ ಮಾಹಿತಿ ಇಲ್ಲಿದೆ

ಜಿಲ್ಲಾಧಿಕಾರಿಗಳಿಗೆ ಸರ್ಕಾರದ ಸ್ಪಷ್ಟ ಸೂಚನೆ

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಕಾರ್ಯದರ್ಶಿಗಳು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಚುನಾವಣೆ ಪೂರ್ವಸಿದ್ಧತೆಗಾಗಿ ಕೈಗೊಂಡ ಕ್ರಮಗಳ ಸಂಪೂರ್ಣ ವರದಿಯನ್ನು ಸರ್ಕಾರಕ್ಕೆ, ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.

ಇದನ್ನೂ ಓದಿ: Grama Panchayati Yojanegalu- ಗ್ರಾಮ ಪಂಚಾಯತಿ ಮೂಲಕ ಯಾವೆಲ್ಲ ಯೋಜನೆ ಪ್ರಯೋಜನ ಪಡೆಯಬಹುದು? ಸಂಪೂರ್ಣ ಮಾಹಿತಿ

ಚುನಾವಣೆ ಸರಾಗವಾಗಿ ನಡೆಯುತ್ತದೆಯೇ?

ಎಲ್ಲವೂ ಯೋಜನೆಯಂತೆ ನಡೆದರೆ, ಸಮಯಕ್ಕೆ ಸರಿಯಾಗಿ ಮೀಸಲು ಅಧಿಸೂಚನೆ ಪ್ರಕಟವಾದರೆ ಹೊಸ ಕಾನೂನು ಅಥವಾ ಆಡಳಿತ ಗೊಂದಲಗಳು ಉಂಟಾಗದಿದ್ದರೆ 2026ರ ಏಪ್ರಿಲ್-ಮೇ ತಿಂಗಳಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗಳು ಸುಗಮವಾಗಿ ನಡೆಯುವ ಸಾಧ್ಯತೆ ಹೆಚ್ಚು.

ಗ್ರಾಮ ಮಟ್ಟದ ಆಡಳಿತ ಜನರ ಕೈಯಲ್ಲೇ ಇರಬೇಕು ಎನ್ನುವ ಪ್ರಜಾಪ್ರಭುತ್ವದ ಆಶಯಕ್ಕೆ ಇದು ಒಳ್ಳೆಯ ಹೆಜ್ಜೆ. ಮುಂದಿನ ದಿನಗಳಲ್ಲಿ ಸರ್ಕಾರ ಈ ಸಿದ್ಧತೆಯನ್ನು ಎಷ್ಟು ಪರಿಣಾಮಕಾರಿಯಾಗಿ ಜಾರಿಗೆ ತರುತ್ತದೆ ಎಂಬುದೇ ಮುಖ್ಯ.

Bele Hani Bele Vime Parihara: ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಹಣ ರೈತರ ಖಾತೆಗೆ ಜಮಾ | ಸಂಪೂರ್ಣ ವಿವರ ಇಲ್ಲಿದೆ…

WhatsApp Group Join Now
Telegram Group Join Now

Leave a Comment