Free Horticulture Training 2026: ತೋಟಗಾರಿಕೆ ಇಲಾಖೆಯಿಂದ ರೈತ ಮಕ್ಕಳಿಗಾಗಿ ಉಚಿತ ಊಟ, ವಸತಿ ಸೌಲಭ್ಯದೊಂದಿಗೆ 10 ತಿಂಗಳ ಉಚಿತ ತೋಟಗಾರಿಕೆ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ…
ಇಂದಿನ ದಿನಗಳಲ್ಲಿ ಕೇವಲ ಹಳೆಯ ಕಾಲದ ಕೃಷಿ ಪದ್ಧತಿಯನ್ನೇ ನಂಬಿಕೊAಡು ಕುಳಿತರೆ ನಿರೀಕ್ಷಿತ ಲಾಭ ಗಳಿಸುವುದು ಕಷ್ಟಸಾಧ್ಯ. ಹವಾಮಾನ ವೈಪರೀತ್ಯ ಹಾಗೂ ಮಾರುಕಟ್ಟೆಯ ಏರಿಳಿತಗಳ ನಡುವೆ ಕೃಷಿಯನ್ನು ಲಾಭದಾಯಕವಾಗಿಸಲು ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಅನಿವಾರ್ಯವಾಗಿದೆ.
ನಿಮ್ಮಲ್ಲಿ ಜಮೀನಿದೆ, ಕೃಷಿ ಮಾಡುವ ಆಸಕ್ತಿಯೂ ಇದೆ, ಆದರೆ ಸೂಕ್ತ ಮಾರ್ಗದರ್ಶನದ ಕೊರತೆ ಇದೆಯೇ? ಹಾಗಾದರೆ ನಿಮಗಾಗಿಯೇ ರಾಜ್ಯ ಸರ್ಕಾರದ ತೋಟಗಾರಿಕೆ ಇಲಾಖೆ (Department of Horticulture) ಒಂದು ಅದ್ಭುತವಾದ ಯೋಜನೆಯನ್ನು ತಂದಿದೆ. ಅದೇ 10 ತಿಂಗಳ ಉಚಿತ ತೋಟಗಾರಿಕೆ ತರಬೇತಿ.
ಬನ್ನಿ, ಈ ತರಬೇತಿಯ ಸಂಪೂರ್ಣ ವಿವರಗಳನ್ನು, ಇದರಿಂದ ನಿಮ್ಮ ಭವಿಷ್ಯ ಹೇಗೆ ಬದಲಾಗಬಹುದು ಎಂಬುದನ್ನು ವಿವರವಾಗಿ ತಿಳಿಯೋಣ.
ಇದನ್ನೂ ಓದಿ: Digital Census India: ನಿಮ್ಮ ಮೊಬೈಲ್ನಲ್ಲೇ ‘ಡಿಜಿಟಲ್ ಜನಗಣತಿ’ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ
ಏನಿದು ಯೋಜನೆ? ಇದರ ಮುಖ್ಯ ಉದ್ದೇಶವೇನು?
ನಮ್ಮ ಗ್ರಾಮೀಣ ಭಾಗದ ಯುವಕರು ಉದ್ಯೋಗ ಅರಸಿ ನಗರಗಳತ್ತ ವಲಸೆ ಹೋಗುವುದನ್ನು ತಪ್ಪಿಸಿ, ಅವರನ್ನು ತಮ್ಮದೇ ಊರಿನಲ್ಲಿ ಸ್ವಾವಲಂಬಿಗಳನ್ನಾಗಿ ಮಾಡುವುದು ಈ ಯೋಜನೆಯ ಮೂಲ ಉದ್ದೇಶ.
2026-27ನೇ ಸಾಲಿನ ವಿಸ್ತರಣಾ ಯೋಜನೆಯಡಿ ಯುವಕ-ಯುವತಿಯರಿಗೆ ಹಣ್ಣು, ತರಕಾರಿ ಮತ್ತು ಹೂವಿನ ಬೆಳೆಗಳ ಬಗ್ಗೆ ತಜ್ಞರಿಂದ ಸಂಪೂರ್ಣ ಪ್ರಾಯೋಗಿಕ ಜ್ಞಾನವನ್ನು (Practical Knowledge) ನೀಡಲಾಗುತ್ತದೆ.
ಯಾರೆಲ್ಲಾ ಈ ತರಬೇತಿಗೆ ಸೇರಬಹುದು? (Eligibility for Horticulture Training)
ಈ ತರಬೇತಿಗೆ ಸೇರಲು ಯಾವುದೇ ಕಠಿಣ ನಿಯಮಗಳಿಲ್ಲ. ಅತ್ಯಂತ ಸರಳವಾದ ಅರ್ಹತೆಗಳನ್ನು ಕೇಳಲಾಗಿದೆ:
- ವಿದ್ಯಾರ್ಹತೆ: ನೀವು ಕನಿಷ್ಠ ಎಸ್ಎಸ್ಎಲ್ಸಿ ಪಾಸಾಗಿರಬೇಕು.
- ವಯೋಮಿತಿ: ಅರ್ಜಿ ಸಲ್ಲಿಸುವಾಗ ಕನಿಷ್ಠ 18 ವರ್ಷ ತುಂಬಿರಬೇಕು.
- ವಿಶೇಷ ಆದ್ಯತೆ: ನೀವೊಬ್ಬರು ರೈತ ಕುಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದರೆ ಈ ಯೋಜನೆಯಲ್ಲಿ ನಿಮಗೆ ಮೊದಲ ಆದ್ಯತೆ ಸಿಗುತ್ತದೆ.
ಇದನ್ನೂ ಓದಿ: Kaaludari Bandidaari: ಜಮೀನಿನ ಕಾಲುದಾರಿ, ಬಂಡಿದಾರಿ ಮುಚ್ಚಿದ್ದಾರೆಯೇ? ಇದು ಅಪರಾಧ, ದೂರು ನೀಡಿದರೆ ಆಗಲಿದೆ ತೆರವು
ತರಬೇತಿ ಮುಖ್ಯ ದಿನಾಂಕಗಳು (Important Dates)
ದಯವಿಟ್ಟು ಗಮನಿಸಿ, ಅರ್ಜಿ ಸಲ್ಲಿಸಲು ಸಮಯ ಮೀರುತ್ತಿದೆ! ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಏಪ್ರಿಲ್ 2026 (ಏಪ್ರಿಲ್ 15ರ ನಂತರ ಯಾವುದೇ ಕಾರಣಕ್ಕೂ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ).
- ತರಬೇತಿ ಆರಂಭ: 2 ಮೇ 2026
- ತರಬೇತಿ ಮುಕ್ತಾಯ: 28 ಫೆಬ್ರವರಿ 2027
ಇದನ್ನೂ ಓದಿ: Karnataka Pension New Rules: ವೃದ್ಧಾಪ್ಯ, ವಿಧವಾ, ಅಂಗವಿಕಲ ವೇತನ ಪಡೆಯಲು ಹೊಸ ನಿಯಮ | ಪಿಂಚಣಿದಾರರು ತಪ್ಪದೇ ಗಮನಿಸಿ
ತರಬೇತಿಯಲ್ಲಿ ಸಿಗುವ ಉಚಿತ ಸೌಲಭ್ಯಗಳೇನು? (Free Facilities Available)
ತರಬೇತಿ ಏನೋ ಉಚಿತ, ಆದರೆ 10 ತಿಂಗಳು ಊಟ, ವಸತಿಗೆ ಏನು ಮಾಡುವುದು? ಎಂಬ ಚಿಂತೆ ಬೇಡ. ಸರ್ಕಾರವೇ ಎಲ್ಲವನ್ನೂ ನಿಭಾಯಿಸುತ್ತದೆ:
ಊಟ ಮತ್ತು ವಸತಿ (Free Hostel & Meals): ಆಯ್ಕೆಯಾದ ಎಲ್ಲಾ ಅಭ್ಯರ್ಥಿಗಳಿಗೆ 10 ತಿಂಗಳ ಕಾಲ ಊಟ ಮತ್ತು ಉಳಿದುಕೊಳ್ಳಲು ಅತ್ಯುತ್ತಮ ವಸತಿ ವ್ಯವಸ್ಥೆಯನ್ನು ಉಚಿತವಾಗಿ ನೀಡಲಾಗುತ್ತದೆ.
ಕ್ಷೇತ್ರ ಅಧ್ಯಯನ (Educational Tour): ಕೇವಲ ತರಗತಿಯೊಳಗಿನ ಪಾಠವಲ್ಲದೆ, 5 ದಿನಗಳ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಲಾಗುತ್ತದೆ. ಯಶಸ್ವಿ ಕೃಷಿಕರ ತೋಟಗಳು ಮತ್ತು ಸಂಶೋಧನಾ ಕೇಂದ್ರಗಳಿಗೆ ಭೇಟಿ ನೀಡುವ ಅವಕಾಶ ನಿಮ್ಮದಾಗುತ್ತದೆ.
ಇದನ್ನೂ ಓದಿ: Paytm Personal Loan: ಪೇಟಿಎಂ ಲೋನ್: ಮೊಬೈಲ್ನಲ್ಲೇ ತಕ್ಷಣ ಸಾಲ ಪಡೆಯುವ ಸಂಪೂರ್ಣ ಮಾರ್ಗದರ್ಶಿ

ಏನೆಲ್ಲಾ ಕಲಿಯಬಹುದು? (What Will You Learn?)
ಇದು ಸಂಪೂರ್ಣವಾಗಿ ಮಾಡಿಕಲಿಯುವ (Hands-on Training) ತರಗತಿಯಾಗಿದೆ. ಇಲ್ಲಿ ನೀವು:
- ವಿವಿಧ ಬಗೆಯ ಸಸ್ಯಗಳಿಗೆ ಕಸಿ ಕಟ್ಟುವ ಅತ್ಯಾಧುನಿಕ ವಿಧಾನಗಳು
- ಕಟಿಂಗ್ಸ್ ಮತ್ತು ಗೂಟಿ ವಿಧಾನದ ಮೂಲಕ ಸಸಿಗಳ ಉತ್ಪಾದನೆ
- ರೋಗ ನಿಯಂತ್ರಣ ಮತ್ತು ಮಣ್ಣಿನ ನಿರ್ವಹಣೆ
- ಲಾಭದಾಯಕ ನರ್ಸರಿ ನಿರ್ವಹಣೆಯ ಬಗ್ಗೆ ಕಲಿಯುವಿರಿ.
ತರಬೇತಿಯ ನಂತರ ಮುಂದೇನು? (Career Opportunities & Jobs)
10 ತಿಂಗಳ ಈ ಕಠಿಣ ತರಬೇತಿ ಮುಗಿಸಿ ಹೊರಬಂದ ಮೇಲೆ ನೀವು ಸಾಮಾನ್ಯ ರೈತರಾಗಿರುವುದಿಲ್ಲ, ಬದಲಾಗಿ ‘ತಜ್ಞ ಕೃಷಿಕ’ರಾಗಿರುತ್ತೀರಿ!
ಸರ್ಕಾರಿ ಕೆಲಸ (Govt Jobs): ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಬೀಳುವ ಗಾರ್ಡನರ್ (Gardener) ಹುದ್ದೆಗಳಿಗೆ ನಿಮ್ಮಂತಹ ತರಬೇತಿ ಪಡೆದ ಯುವಕರಿಗೆ ನೇರ ಆದ್ಯತೆ ಸಿಗುತ್ತದೆ.
ಖಾಸಗಿ ಉದ್ಯೋಗ (Private Sector Jobs): ದೊಡ್ಡ ದೊಡ್ಡ ಕೃಷಿ ಫಾರ್ಮ್ಗಳು, ನರ್ಸರಿ ಎಸ್ಟೇಟ್ಗಳಲ್ಲಿ ಸೂಪರ್ವೈಸರ್ (Agricultural Supervisor) ಆಗಿ ಕೈತುಂಬಾ ಸಂಬಳ ಪಡೆಯಬಹುದು.
ಸ್ವಂತ ಉದ್ಯಮ (Self-Business): ತರಬೇತಿಯಲ್ಲಿ ಕಲಿತ ವಿದ್ಯೆಯನ್ನು ಬಳಸಿ ನೀವೇ ಸ್ವಂತವಾಗಿ ಸಸಿಗಳ ನರ್ಸರಿಯನ್ನು ಆರಂಭಿಸಬಹುದು. ಇದು ಪ್ರಸ್ತುತ ದಿನಗಳಲ್ಲಿ ಅತಿ ಹೆಚ್ಚು ಆದಾಯ ತರುವ ಉದ್ಯಮವಾಗಿದೆ.
ಇದನ್ನೂ ಓದಿ: PAN Card New Rules: ಪ್ಯಾನ್ ಕಾರ್ಡ್ ಹೊಸ ನಿಯಮಗಳು: ಏಪ್ರಿಲ್ 1ರಿಂದ ಬಿಗಿ ಕ್ರಮ | ಏನೇನು ಬದಲಾವಣೆ ಆಗಲಿದೆ?
ಅರ್ಜಿ ಸಲ್ಲಿಸುವುದು ಹೇಗೆ? (Application Process)
ಅರ್ಜಿ ಪ್ರಕ್ರಿಯೆ ತುಂಬಾ ಸರಳವಾಗಿದೆ. ಯಾವುದೇ ಆನ್ಲೈನ್ ಸೆಂಟರ್ಗಳಿಗೆ ಅಲೆಯುವ ಅಗತ್ಯವಿಲ್ಲ:
ಕೂಡಲೇ ನಿಮ್ಮ ತಾಲೂಕಿನ ತೋಟಗಾರಿಕೆ ಇಲಾಖೆಯ ಕಚೇರಿಗೆ ಭೇಟಿ ನೀಡಿ. ಅಲ್ಲಿನ ಅಧಿಕಾರಿಗಳನ್ನು ಭೇಟಿಯಾಗಿ, ನಿಮ್ಮ ಹತ್ತಿರದ ತರಬೇತಿ ಕೇಂದ್ರದ ವಿವರ ಕೇಳಿ.
ಕೇಂದ್ರದಿಂದ ಅರ್ಜಿ ನಮೂನೆ (Application Form) ಪಡೆದು, ಭರ್ತಿ ಮಾಡಿ. ನಿಮ್ಮ ಎಸ್ಎಸ್ಎಲ್ಸಿ ಅಂಕಪಟ್ಟಿ, ಆಧಾರ್ ಕಾರ್ಡ್, ಫೋಟೋ ಮುಂತಾದ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಏಪ್ರಿಲ್ 15 ರೊಳಗೆ ಸಲ್ಲಿಸಿ.
ಸ್ನೇಹಿತರೇ, ಕೃಷಿ ಇಂದು ಕೇವಲ ಬದುಕುವ ದಾರಿಯಲ್ಲ, ಅದೊಂದು ಬಹುದೊಡ್ಡ ಉದ್ಯಮ. ಈ ಉಚಿತ ತರಬೇತಿಯು ನಿಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸಬಹುದು. ಇನ್ನು ಕೇವಲ ಎರಡು ವಾರಗಳಷ್ಟೇ ಸಮಯವಿರುವುದರಿಂದ, ಆಸಕ್ತಿ ಇರುವವರು ಕೂಡಲೇ ನಿಮ್ಮ ತಾಲೂಕು ಕಚೇರಿಗೆ ಭೇಟಿ ನೀಡಿ.
- ಅರ್ಜಿ ನಮೂನೆ ಮತ್ತು ಅಧಿಸೂಚನೆ: Download
- ಅಧಿಕೃತ ವೆಬ್ಸೈಟ್: horticulturedir.karnataka.gov.in