BV 380 layer farming: ವರ್ಷವಿಡಿ ಮೊಟ್ಟೆ ಹಾಕುವ ಬಿವಿ 380 ಕೋಳಿ ಸಾಕಾಣಿಕೆಯಿಂದ ಭರ್ಜರಿ ಆದಾಯ | ಸಂಪೂರ್ಣ ಮಾರ್ಗದರ್ಶಿ

WhatsApp Group Join Now
Telegram Group Join Now

BV 380 layer farming: ವರ್ಷಕ್ಕೆ 280 ಮೊಟ್ಟೆ ಹಾಕುವ ಬಿವಿ 380 (BV 380) ಮೊಟ್ಟೆ ಕೋಳಿ ಸಾಕಾಣಿಕೆ ಬಗ್ಗೆ ಸಂಪೂರ್ಣ ಮಾಹಿತಿ. ಮರಿ ಆಯ್ಕೆ ವಿಧಾನ, ಸಮತೋಲನ ಆಹಾರ, ಲಾಭ-ನಷ್ಟ ಲೆಕ್ಕಾಚಾರ ಕುರಿತು ಸಂಪೂರ್ಣ ಮಾರ್ಗದರ್ಶಿ…

ಗ್ರಾಮೀಣ ಭಾಗದಲ್ಲಿ ಕಡಿಮೆ ಜಾಗ, ಮಧ್ಯಮ ಬಂಡವಾಳ ಮತ್ತು ಸರಿಯಾದ ನಿರ್ವಹಣೆಯೊಂದಿಗೆ ಉತ್ತಮ ಆದಾಯ ಪಡೆಯಬಹುದಾದ ಉದ್ಯಮವೆಂದರೆ ಮೊಟ್ಟೆ ಕೋಳಿ ಸಾಕಾಣಿಕೆ (Layer Farming).

ಇತ್ತೀಚಿನ ವರ್ಷಗಳಲ್ಲಿ ಬಿವಿ 380 (BV 380) ತಳಿ ಕೋಳಿ ರೈತರ ಗಮನ ಸೆಳೆದಿದೆ. ಸರಿಯಾದ ವಿಧಾನದಲ್ಲಿ ಸಾಕಾಣಿಕೆ ಮಾಡಿದರೆ ವರ್ಷಕ್ಕೆ ಸುಮಾರು 280 ಮೊಟ್ಟೆಗಳವರೆಗೆ ಇಡುವ ಸಾಮರ್ಥ್ಯ ಹೊಂದಿರುವ ಈ ತಳಿ, ಲಾಭದಾಯಕ ಉದ್ಯಮವಾಗಬಹುದು.

ಆದರೆ ಸೂಕ್ತ ಜ್ಞಾನವಿಲ್ಲದೆ ಆರಂಭಿಸಿದರೆ ನಷ್ಟವೂ ಸಂಭವಿಸಬಹುದು. ಹೀಗಾಗಿ ಬಿವಿ 380 ಕೋಳಿ ಸಾಕಾಣಿಕೆಯ ಸಂಪೂರ್ಣ ಮಾಹಿತಿ, ಲಾಭ-ನಷ್ಟ ಲೆಕ್ಕಾಚಾರ, ಆಹಾರ ವ್ಯವಸ್ಥೆ, ಮರಿ ಆಯ್ಕೆ, ಮಾರುಕಟ್ಟೆ ವ್ಯವಸ್ಥೆ ಹಾಗೂ ನಿರ್ವಹಣಾ ಸೂತ್ರಗಳನ್ನು ಇಲ್ಲಿ ವಿವರವಾಗಿ ನೋಡೋಣ.

ಇದನ್ನೂ ಓದಿ: RTE Karnataka 2026-27- ಆರ್‌ಟಿಇ 2026-27 ಅರ್ಜಿ ಆಹ್ವಾನ : ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣಕ್ಕೆ ಅವಕಾಶ | ಸಂಪೂರ್ಣ ಮಾಹಿತಿ ಇಲ್ಲಿದೆ

ಬಿವಿ 380 ತಳಿ ಪರಿಚಯ

ಬಿವಿ 380 ಕೋಳಿ ತಳಿಯನ್ನು ವೆಂಕಟೇಶ್ವರ ಹ್ಯಾಚರೀಸ್ ಅಭಿವೃದ್ಧಿಪಡಿಸಿದ್ದು, ಕೇರಳದ ಅಭಿಲಾಶ್ ಹ್ಯಾಚರೀಸ್ ಇದರ ಪೇಟೆಂಟ್ ಪಡೆದು ಉತ್ತಮ ಗುಣಮಟ್ಟದ ಮರಿಗಳನ್ನು ಉತ್ಪಾದಿಸುತ್ತಿದೆ.

ಇದು ಮುಖ್ಯವಾಗಿ ಮೊಟ್ಟೆ ಉತ್ಪಾದನೆಗಾಗಿ ಅಭಿವೃದ್ಧಿಪಡಿಸಿದ ತಳಿ (Layer Breed). ಸರಿಯಾದ ಆಹಾರ ಮತ್ತು ಆರೈಕೆಯೊಂದಿಗೆ ವರ್ಷಕ್ಕೆ 260-280 ಮೊಟ್ಟೆಗಳವರೆಗೆ ಇಡಬಲ್ಲದು.

ಆದರೆ ಇಲ್ಲಿ ಮುಖ್ಯ ಸಮಸ್ಯೆ ಏನೆಂದರೆ, ಕೆಲವು ಸ್ಥಳೀಯ ಮರಿ ಉತ್ಪಾದನಾ ಘಟಕಗಳು ಮೂಲ ಪೇಟೆಂಟ್ ಪಡೆದ ತಳಿ ಮರಿಯನ್ನು ತಂದು ಅದರಿಂದ ಮತ್ತೆ ಮರಿ ಉತ್ಪಾದನೆ ಮಾಡಿ ಮಾರಾಟ ಮಾಡುತ್ತಿರುವುದು.

ಇದರಿಂದ ತಳಿಯ ಶುದ್ಧತೆ (Genetic Purity) ಕಾಪಾಡಲಾಗುತ್ತಿಲ್ಲ. ಪರಿಣಾಮವಾಗಿ ಮೊಟ್ಟೆ ಉತ್ಪಾದನೆ 170-180ಕ್ಕೆ ಇಳಿಯುತ್ತದೆ. ಇದು ರೈತರ ಲಾಭದ ಮೇಲೆ ನೇರ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Kukkuta Sanjeevini Scheme: ಮಹಿಳೆಯರಿಗೆ ಉಚಿತ ಕೋಳಿ ಮರಿ, ಕೋಳಿ ಶೆಡ್‌ಗೆ ಸಹಾಯಧನ

ಲಾಭ-ನಷ್ಟದ ಲೆಕ್ಕಾಚಾರ

ಒಂದು ಬಿವಿ 380 ಕೋಳಿ ವರ್ಷಕ್ಕೆ 280 ಮೊಟ್ಟೆ ಇಟ್ಟರೆ ದಿನಕ್ಕೆ ಸರಾಸರಿ 1 ಮೊಟ್ಟೆ. ಒಂದು ಮೊಟ್ಟೆ ಮೇಲೆ 50 ಪೈಸೆಯಿಂದ 1 ರೂ.ವರೆಗೆ ಲಾಭ ಸಾಧ್ಯ. ವರ್ಷಕ್ಕೆ ಒಂದು ಕೋಳಿಗೆ ಒಟ್ಟು ₹140-₹280 ಅಂದಾಜು ಲಾಭ.

ಇದನ್ನು 500 ಕೋಳಿಗಳಲ್ಲಿ ಲೆಕ್ಕ ಹಾಕಿದರೆ ಕನಿಷ್ಠ ಲಾಭ ₹70,000 ಹಾಗೂ ಗರಿಷ್ಠ ಲಾಭ ₹1,40,000 ಸಿಗುತ್ತದೆ. ಆದರೆ ಕಳಪೆ ಗುಣಮಟ್ಟದ ಕೋಳಿ 170-180 ಮೊಟ್ಟೆ ಮಾತ್ರ ಇಟ್ಟರೆ ಲಾಭ ಬಹಳ ಕಡಿಮೆಯಾಗುತ್ತದೆ ಅಥವಾ ನಷ್ಟ ಸಂಭವಿಸುತ್ತದೆ. ಹೀಗಾಗಿ ಮರಿ ಆಯ್ಕೆ ಅತ್ಯಂತ ಪ್ರಮುಖ ಅಂಶವಾಗಿದೆ.

ಇದನ್ನೂ ಓದಿ: Ahara Vahini Yojana: ಆಹಾರ ವಾಹಿನಿ ಯೋಜನೆ: ಮೊಬೈಲ್ ಕ್ಯಾಂಟೀನ್ ಆರಂಭಿಸಲು ಸರ್ಕಾರದಿಂದ ₹3 ಲಕ್ಷ ಉಚಿತ ಸಹಾಯಧನ

ಮರಿ ಖರೀದಿಸುವಾಗ ಗಮನಿಸಬೇಕಾದ ಅಂಶಗಳು

  • ಪೇಟೆಂಟ್ ಪಡೆದ ಘಟಕದಿಂದ ಮಾತ್ರ ಮರಿ ಖರೀದಿಸಬೇಕು.
  • ಮರಿಯ ಆರೋಗ್ಯ ಸ್ಥಿತಿ, ತೂಕ ಮತ್ತು ಚುರುಕಿನ ಸ್ವಭಾವ ಗಮನಿಸಬೇಕು.
  • ಒಂದು ದಿನದ ಮರಿ (Day-old Chicks) ಖರೀದಿಸಿ ಸಾಕಾಣಿಕೆ ಆರಂಭಿಸುವುದು ಉತ್ತಮ.
  • ದೊಡ್ಡ ಕೋಳಿಯನ್ನು ಖರೀದಿಸುವುದರಿಂದ ಪರಿಸರ ಬದಲಾವಣೆಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ.
  • ಹುಟ್ಟಿದ ಮರಿ ತಂದು ಸಾಕಿದರೆ ಪ್ರತಿ ಕೋಳಿಗೆ ಸುಮಾರು ₹250 ವೆಚ್ಚ ಸಾಧ್ಯ. ನಿಮ್ಮ ಪರಿಸರಕ್ಕೆ ಹೊಂದಿಕೊAಡು ಉತ್ತಮ ಉತ್ಪಾದನೆ ನೀಡುತ್ತದೆ

ಇದನ್ನೂ ಓದಿ: KarnatakaOne Centre Application: ಕರ್ನಾಟಕಒನ್ ಕೇಂದ್ರ ಸ್ಥಾಪನೆಗೆ ಅರ್ಜಿ ಆಹ್ವಾನ | ನಿರುದ್ಯೋಗಿಗಳಿಗೆ ಭರ್ಜರಿ ಅವಕಾಶ

ಆಹಾರ ವ್ಯವಸ್ಥೆ (Feed Management)

ಮೊಟ್ಟೆ ಕೋಳಿ ಸಾಕಾಣಿಕೆಯಲ್ಲಿ ಅತ್ಯಂತ ಪ್ರಮುಖ ಅಂಶವೆAದರೆ ಸಮತೋಲನ ಆಹಾರ (Balanced Feed). ಒಂದು ಮೊಟ್ಟೆ ಕೋಳಿಗೆ ದಿನಕ್ಕೆ 110-120 ಗ್ರಾಂ ಆಹಾರ ಅಗತ್ಯವಿರುತ್ತದೆ. ಈ ಆಹಾರದಲ್ಲಿ ಈ ಕೆಳಗಿನ ಅಂಶಗಳು ಇರಲೇಬೇಕು:

  • ಪ್ರೋಟೀನ್ (Protein)
  • ಕ್ಯಾಲ್ಸಿಯಂ (Calcium)
  • ಖನಿಜಾಂಶಗಳು (Minerals)
  • ವಿಟಮಿನ್‌ಗಳು (Vitamins)
  • ಶಕ್ತಿದಾಯಕ ಧಾನ್ಯಗಳು (Energy Grains)

ಕೆಲ ರೈತರು ಪಶು ಆಹಾರದ ಅಂಗಡಿಯಲ್ಲಿ ಸಿಗುವ ಸಿದ್ಧ ಆಹಾರಕ್ಕೆ ಅಜೋಲಾ, ಹುಲ್ಲು, ತರಕಾರಿ, ಜೋಳ ಪುಡಿ ಇತ್ಯಾದಿ ಮಿಶ್ರಣ ಮಾಡುತ್ತಾರೆ. ಹೀಗೆ ಮಾಡಿದರೆ ಆಹಾರದ ಸಮತೋಲನ ಹಾಳಾಗುತ್ತದೆ. ಮೊಟ್ಟೆ ಉತ್ಪಾದನೆ ಕುಂಠಿತವಾಗುತ್ತದೆ.

ಇದನ್ನೂ ಓದಿ: Prize Money Scholarship 2026: ಈ ವಿದ್ಯಾರ್ಥಿಗಳಿಗೆ ₹35,000 ವರೆಗೆ ಪ್ರೋತ್ಸಾಹಧನ | ರಾಜ್ಯ ಸರ್ಕಾರದಿಂದ ಅರ್ಜಿ ಆಹ್ವಾನ

ಸ್ವತಃ ಆಹಾರ ತಯಾರಿಸುವುದು

ರೈತರು ದೊಡ್ಡ ಪ್ರಮಾಣದಲ್ಲಿ ಸಾಕಾಣಿಕೆ ಮಾಡಿದರೆ ಸ್ವತಃ ಆಹಾರ ತಯಾರಿಸಿಕೊಳ್ಳಬಹುದು. ಆದರೆ ಕಚ್ಚಾ ವಸ್ತುಗಳ ಲಭ್ಯತೆ ಸಣ್ಣ ಪ್ರಮಾಣದಲ್ಲಿ ಕಷ್ಟ.

ಮಿಶ್ರಣ ಯಂತ್ರ (Feed Mixer) ಅಗತ್ಯ. ಆದರೆ ಬಂಡವಾಳ ಹೆಚ್ಚಾಗುತ್ತದೆ. ಸಣ್ಣ ರೈತರು 8-10 ಜನ ಸೇರಿ ಆಹಾರ ತಯಾರಿಸುವ ಘಟಕ ಸ್ಥಾಪಿಸಬಹುದು.

ಆಹಾರದ ಪೂರೈಕೆ ಸಮಸ್ಯೆ

ರಾಜ್ಯದ ಎಲ್ಲಾ ತಾಲೂಕುಗಳಲ್ಲಿ ಸಿದ್ಧ ಕೋಳಿ ಆಹಾರ ಲಭ್ಯವಿಲ್ಲ. ದೊಡ್ಡ ಮಿಲ್ಲುಗಳು ಒಂದೇ ಬಾರಿ 6-10 ಟನ್ ಆಹಾರ ತಯಾರಿಸುತ್ತವೆ. ಸಣ್ಣ ಅಂಗಡಿಗಳಿಗೆ ಶೇಖರಣೆ ಕಷ್ಟ. ಹೀಗಾಗಿ ಮಾರುಕಟ್ಟೆಯಲ್ಲಿ ಎಲ್ಲೆಡೆ ಆಹಾರ ಸಿಗುವುದಿಲ್ಲ.

ಇದನ್ನು ಪರಿಶೀಲಿಸದೆ ಸಾಕಾಣಿಕೆ ಆರಂಭಿಸಿದರೆ ನಂತರ ಆಹಾರ ಕೊರತೆಯಿಂದ ಕೋಳಿಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬೇಕಾಗುತ್ತದೆ. ಇದರಿಂದ ಸಾವಿರಾರು ರೈತರು ನಷ್ಟ ಅನುಭವಿಸಿದ್ದಾರೆ.

ಇದನ್ನೂ ಓದಿ: Free PSI Coaching Karnataka- ಉಚಿತ ಪಿಎಸ್‌ಐ ಕೋಚಿಂಗ್: 75 ದಿನಗಳ ಊಟ, ವಸತಿ ಸಹಿತ ತರಬೇತಿಗೆ ಆನ್‌ಲೈನ್ ಅರ್ಜಿ ಆಹ್ವಾನ

BV 380 layer farming
BV 380 layer farming

ವಾಸಸ್ಥಳ (Housing Management)

ಜಾಲರಿ ವ್ಯವಸ್ಥೆ (Cage System) ಅಥವಾ ನೆಲದ ಮೇಲೆ ಸಾಕಾಣಿಕೆ (Deep Litter System) ಮಾಡಿದರೆ ಗಾಳಿಯ ಹರಿವು ಸರಿಯಾಗಿ ಇರಬೇಕು. ಸ್ವಚ್ಛತೆ ಕಡ್ಡಾಯ. ಕುಡಿಯುವ ನೀರಿನ ಪೂರೈಕೆ ನಿರಂತವಾಗಿರಬೇಕು.

ಕೋಳಿ ಶೆಡ್ ನಿರ್ಮಾಣ ಮಾಡುವಾಗ ಬಿಸಿಲಿನಿಂದ ರಕ್ಷಣೆ, ಮಳೆ ನೀರು ಒಳಬಾರದಂತೆ ವ್ಯವಸ್ಥೆ ಹಾಗೂ ಇಲಿ, ಹಾವುಗಳಿಂದ ರಕ್ಷಣೆ ಅತ್ಯವಾಗಿ ಮಾಡಿಕೊಳ್ಳಬೇಕು.

ದೊಡ್ಡ ಕೋಳಿ ಖರೀದಿಸುವ ಅಪಾಯ

ಕೆಲ ರೈತರು ಮೊಟ್ಟೆ ಇಡಲು ಸಿದ್ಧವಾಗಿರುವ ದೊಡ್ಡ ಕೋಳಿಗಳನ್ನು ಖರೀದಿಸುತ್ತಾರೆ. ಆದರೆ ಹೊಸ ಪರಿಸರಕ್ಕೆ ಹೊಂದಿಕೊಳ್ಳಲು 1-1.5 ತಿಂಗಳು ಬೇಕು. ಆ ಸಮಯದಲ್ಲಿ ಕೆಲ ಕೋಳಿಗಳು ಸಾಯುತ್ತವೆ.

ಕೆಲವಕ್ಕೆ ತೂಕ ಇಳಿಕೆಯಾಗುತ್ತದೆ. ತತ್ಪರಿಣಾಮ ಮೊಟ್ಟೆ ಉತ್ಪಾದನೆ ಕುಂಠಿತವಾಗುತ್ತದೆ. ಹೀಗಾಗಿ ದೊಡ್ಡ ಕೋಳಿಗಳ ಬದಲು ಒಂದು ದಿನದ ಮರಿ ತಂದು ಸಾಕುವುದು ಉತ್ತಮ.

ಇದನ್ನೂ ಓದಿ: Sheep & Goat Farming Subsidy: ಕುರಿ-ಮೇಕೆ ಸಾಕಾಣಿಕೆಗೆ ₹43,750 ಸರ್ಕಾರದ ಸಹಾಯಧನ | ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆ ಸಂಪೂರ್ಣ ಮಾಹಿತಿ

ಮಾರುಕಟ್ಟೆ ವ್ಯವಸ್ಥೆ (Marketing)

ಮೊಟ್ಟೆ ಮಾರಾಟದಲ್ಲಿ ಲಾಭ ಪಡೆಯಲು ಸ್ಥಳೀಯ ಅಂಗಡಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವುದು ಮುಖ್ಯ. ಹೋಟೆಲ್, ಬೇಕರಿ, ಕ್ಯಾಂಟೀನ್‌ಗಳಿಗೆ ನೇರ ಪೂರೈಕೆ ಮಾಡಿದರೆ ಉತ್ತಮ.

ರೈತರ ಗುಂಪು ರಚಿಸಿ ಒಟ್ಟಾಗಿ ಮಾರಾಟ ಮಾಡುವುದು. ಗ್ರಾಹಕರಿಗೆ ನೇರ ಮಾರಾಟ (Direct Selling) ಮಾಡುವ ಮೂಲಕ ಮಾರುಕಟ್ಟೆ ವ್ಯವಸ್ಥೆ ಮೊದಲು ಖಚಿತಪಡಿಸಿಕೊಳ್ಳಬೇಕು.

ಸಾಮಾನ್ಯ ತಪ್ಪುಗಳು

  • ಕಳಪೆ ಗುಣಮಟ್ಟದ ಮರಿ ಖರೀದಿ
  • ಆಹಾರದಲ್ಲಿ ಮಿಶ್ರಣ ಮಾಡುವುದು
  • ಮಾರುಕಟ್ಟೆ ಪರಿಶೀಲನೆ ಇಲ್ಲದೆ ಆರಂಭ
  • ದೊಡ್ಡ ಕೋಳಿ ಖರೀದಿ
  • ವೈದ್ಯಕೀಯ ತಪಾಸಣೆ ನಿರ್ಲಕ್ಷ್ಯ

ಇದನ್ನೂ ಓದಿ: Gruha Lakshmi Scheme: ಗೃಹಲಕ್ಷ್ಮಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್; ₹4000 ಹಣ ಜಮಾ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಹತ್ವದ ಮಾಹಿತಿ

ಲಾಭ ಹೆಚ್ಚಿಸಲು ಸಲಹೆಗಳು

  • ಗುಂಪು ರೂಪದಲ್ಲಿ ಮರಿ ಖರೀದಿ
  • ಆಹಾರ ಖರೀದಿಯಲ್ಲಿ ಒಟ್ಟುಗೂಡಿ ಡಿಸ್ಕೌಂಟ್ ಪಡೆಯುವುದು
  • ನಿಯಮಿತ ಲಸಿಕೆ (Vaccination)
  • ರೋಗ ನಿಯಂತ್ರಣ ಕ್ರಮಗಳು
  • ಲೆಕ್ಕಪತ್ರ ನಿರ್ವಹಣೆ
  • ಸಮಗ್ರ ಯೋಜನೆ ರೂಪಿಸಿಕೊಳ್ಳಿ

ಬಿವಿ 380 ಕೋಳಿ ಸಾಕಾಣಿಕೆ ಆರಂಭಿಸುವ ಮೊದಲು ಮರಿ ಮೂಲ ಪರಿಶೀಲನೆ ಮಾಡಿ. ಆಹಾರ ಪೂರೈಕೆ ಖಚಿತಪಡಿಸಿಕೊಳ್ಳಿ. ಮಾರುಕಟ್ಟೆ ವ್ಯವಸ್ಥೆ ಮಾಡಿಕೊಂಡು ಶೆಡ್ ಸಿದ್ಧತೆ ಮಾಡಿ. ಅಂತಿಮವಾಗಿ ವೆಚ್ಚ-ಲಾಭ ಲೆಕ್ಕಾಚಾರ ಮಾಡಿಕೊಳ್ಳಿ.

ಇದನ್ನೂ ಓದಿ: Jameenina Mele Saala- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಮೊಬೈಲ್‌ನಲ್ಲೇ ಚೆಕ್ ಮಾಡಿ | ಸಂಪೂರ್ಣ ಮಾಹಿತಿ ಇಲ್ಲಿದೆ

ಬಿವಿ 380 ಕೋಳಿ ಸಾಕಾಣಿಕೆ ಸರಿಯಾದ ಜ್ಞಾನ, ಯೋಜನೆ ಮತ್ತು ನಿರ್ವಹಣೆಯೊಂದಿಗೆ ಮಾಡಿದರೆ ಲಾಭದಾಯಕ ಉದ್ಯಮ. ಆದರೆ ಕಳಪೆ ಮರಿ, ಆಹಾರ ಕೊರತೆ, ಮಾರುಕಟ್ಟೆ ಸಮಸ್ಯೆ ಹಾಗೂ ನಿರ್ವಹಣಾ ತಪ್ಪುಗಳಿಂದ ನಷ್ಟ ಸಂಭವಿಸುತ್ತದೆ.

ಹೀಗಾಗಿ ಹುಟ್ಟಿದ ಒಂದು ದಿನದ ಮರಿ ತಂದು, ಸಮತೋಲನ ಆಹಾರ ನೀಡಿ, ಮಾರುಕಟ್ಟೆ ವ್ಯವಸ್ಥೆ ಮಾಡಿ, ಗುಂಪು ರೂಪದಲ್ಲಿ ಸಾಕಾಣಿಕೆ ಮಾಡಿದರೆ ಉತ್ತಮ ಆದಾಯ ಪಡೆಯಬಹುದು.

ಗ್ರಾಮೀಣ ಯುವಕರು, ಮಹಿಳೆಯರು ಮತ್ತು ಸಣ್ಣ ರೈತರಿಗೆ ಇದು ಉತ್ತಮ ಸ್ವಯಂ ಉದ್ಯೋಗ (Self Employment) ಅವಕಾಶವಾಗಬಹುದು. ಸರಿಯಾದ ಯೋಜನೆಯೊಂದಿಗೆ ಮುಂದಾದರೆ ಬಿವಿ 380 ಕೋಳಿ ಸಾಕಾಣಿಕೆ ವರ್ಷವಿಡೀ ಆದಾಯದ ಮೂಲವಾಗಬಹುದು.

Kukkuta Sanjeevini Scheme: ಮಹಿಳೆಯರಿಗೆ ಉಚಿತ ಕೋಳಿ ಮರಿ, ಕೋಳಿ ಶೆಡ್‌ಗೆ ಸಹಾಯಧನ

WhatsApp Group Join Now
Telegram Group Join Now

1 thought on “BV 380 layer farming: ವರ್ಷವಿಡಿ ಮೊಟ್ಟೆ ಹಾಕುವ ಬಿವಿ 380 ಕೋಳಿ ಸಾಕಾಣಿಕೆಯಿಂದ ಭರ್ಜರಿ ಆದಾಯ | ಸಂಪೂರ್ಣ ಮಾರ್ಗದರ್ಶಿ”

Leave a Comment