BSNL Recruitment 2026: ಬಿಎಸ್ಎನ್ಎಲ್ನಲ್ಲಿ ಭರ್ಜರಿ ನೇಮಕಾತಿ | ತಿಂಗಳಿಗೆ 90,000 ರೂ.ವರೆಗೆ ವೇತನ – ಸಂಪೂರ್ಣ ಮಾಹಿತಿ
ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಇಂಜಿನಿಯರಿಂಗ್ ಹಾಗೂ ಫೈನಾನ್ಸ್ ಹಿನ್ನೆಲೆಯ ಅಭ್ಯರ್ಥಿಗಳಿಗೆ ಇದು ಒಳ್ಳೆಯ ಅವಕಾಶ. ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) 2026ನೇ ಸಾಲಿಗೆ ಖಾಲಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ.
ಒಟ್ಟು 120 ಹಿರಿಯ ಕಾರ್ಯನಿರ್ವಾಹಕ ತರಬೇತುದಾರ (Senior Executive Trainee) ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆಯನ್ನು ಪ್ರಕಟಿಸಿದ್ದು; ಉತ್ತಮ ವೇತನ, ಭದ್ರ ಉದ್ಯೋಗ ಮತ್ತು ಕೇಂದ್ರ ಸರ್ಕಾರದ ಸೌಲಭ್ಯಗಳೊಂದಿಗೆ ಈ ಹುದ್ದೆಗಳು ಅಭ್ಯರ್ಥಿಗಳ ಗಮನ ಸೆಳೆಯುತ್ತಿವೆ.
ಇದನ್ನೂ ಓದಿ: New Voter ID- ಹೊಸ ಮತದಾರರ ಚೀಟಿಗೆ ಮೊಬೈಲ್ ಮೂಲಕ ಅರ್ಜಿ ಹಾಕುವುದು ಹೇಗೆ? ಸರಳ ವಿಧಾನ ಇಲ್ಲಿದೆ…
ಹುದ್ದೆಗಳ ವಿವರ (Post Details)
ಬಿಎಸ್ಎನ್ಎಲ್ ಒಟ್ಟು 120 ಹುದ್ದೆಗಳನ್ನು ಎರಡು ಪ್ರಮುಖ ವಿಭಾಗಗಳಲ್ಲಿ ಹಂಚಿಕೆ ಮಾಡಿದೆ:
- ಟೆಲಿಕಾಂ ವಿಭಾಗ ಹುದ್ದೆಗಳ ಸಂಖ್ಯೆ: 95
ಇಂಜಿನಿಯರಿಂಗ್ ಹಿನ್ನೆಲೆಯ ಅಭ್ಯರ್ಥಿಗಳಿಗೆ ಅವಕಾಶ - ಫೈನಾನ್ಸ್ ವಿಭಾಗ ಹುದ್ದೆಗಳ ಸಂಖ್ಯೆ: 25
ವಾಣಿಜ್ಯ ಮತ್ತು ಲೆಕ್ಕಪತ್ರ ಕ್ಷೇತ್ರದ ಅಭ್ಯರ್ಥಿಗಳಿಗೆ ಅವಕಾಶ
ಇದನ್ನೂ ಓದಿ: Jathi-Aadaya Pramanapatra- ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಆನ್ಲೈನ್ನಲ್ಲೇ ಅರ್ಜಿ ಸಲ್ಲಿಸಿ – ಸಂಪೂರ್ಣ ಮಾಹಿತಿ
ಶೈಕ್ಷಣಿಕ ಅರ್ಹತೆ (Educational Qualification)
ಟೆಲಿಕಾಂ ವಿಭಾಗಕ್ಕೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಸಂಸ್ಥೆಯಿAದ ಕನಿಷ್ಠ 60% ಅಂಕಗಳೊಂದಿಗೆ ಕೆಳಗಿನ ವಿಷಯಗಳಲ್ಲಿ ಬಿ.ಇ / ಬಿ.ಟೆಕ್ ಪದವಿ ಹೊಂದಿರಬೇಕು:
- ಎಲೆಕ್ಟ್ರಾನಿಕ್ಸ್
- ಟೆಲಿಕಾಂ
- ಕಂಪ್ಯೂಟರ್ ಸೈನ್ಸ್
- ಮಾಹಿತಿ ತಂತ್ರಜ್ಞಾನ (IT)
- ಎಲೆಕ್ಟ್ರಿಕಲ್ ಇಂಜಿನಿಯರಿಂಗ್
ಫೈನಾನ್ಸ್ ವಿಭಾಗಕ್ಕೆ: CA (ಚಾರ್ಟರ್ಡ್ ಅಕೌಂಟೆಂಟ್) ಅಥವಾ CMA (ಕಾಸ್ಟ್ & ಮ್ಯಾನೇಜ್ಮೆಂಟ್ ಅಕೌಂಟೆಂಟ್) ಪದವಿ ಪೂರ್ಣಗೊಳಿಸಿರುವವರು ಅರ್ಹರು.
ಇದನ್ನೂ ಓದಿ: Jameenina Mele Saala- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಮೊಬೈಲ್ನಲ್ಲೇ ಚೆಕ್ ಮಾಡಿ | ಸಂಪೂರ್ಣ ಮಾಹಿತಿ ಇಲ್ಲಿದೆ
ವಯೋಮಿತಿ Age Limit)
ಬಿಎಸ್ಎನ್ಎಲ್ ನೇಮಕಾತಿಗೆ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಕನಿಷ್ಠ 21 ವರ್ಷ ಹಾಗೂ ಗರಿಷ್ಠ 30 ವರ್ಷ ವಯಸ್ಸು ಹೊಂದಿರಬೇಕು.
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST) 5 ವರ್ಷ, ಇತರೆ ಹಿಂದುಳಿದ ವರ್ಗ (OBC) 3 ವರ್ಷ ಹಾಗೂ ಅಂಗವಿಕಲ ಅಭ್ಯರ್ಥಿಗಳು (PwBD) 10 ವರ್ಷ ವಯೋಸಡಿಲಿಕೆ ಇರಲಿದೆ.
ಇದನ್ನೂ ಓದಿ: Grama Panchayati Yojanegalu- ಗ್ರಾಮ ಪಂಚಾಯತಿ ಮೂಲಕ ಯಾವೆಲ್ಲ ಯೋಜನೆ ಪ್ರಯೋಜನ ಪಡೆಯಬಹುದು? ಸಂಪೂರ್ಣ ಮಾಹಿತಿ
ವೇತನ ಶ್ರೇಣಿ (Salary Details)
ಆಯ್ಕೆಯಾದ ಅಭ್ಯರ್ಥಿಗಳಿಗೆ ಅತ್ಯಾಕರ್ಷಕ ವೇತನವನ್ನು ನಿಗದಿಪಡಿಸಲಾಗುತ್ತದೆ. ಮೂಲ ವೇತನ ₹24,900 ರಿಂದ ₹50,500 ವರೆಗು ಇದ್ದು; ಇದರ ಜೊತೆಗೆ ಮನೆ ಬಾಡಿಗೆ ಭತ್ಯೆ (HRA), ವೈದ್ಯಕೀಯ ಸೌಲಭ್ಯ, ಡಿಎ, ಟಿಎ ಮತ್ತು ಇತರೆ ಭತ್ಯೆಗಳು ಸೇರಿ ಒಟ್ಟು ಮಾಸಿಕ ವೇತನ: ಸುಮಾರು ₹80,000 ರಿಂದ ₹90,000 ವರೆಗೆ ಇರಲಿದೆ.

ಆಯ್ಕೆ ಪ್ರಕ್ರಿಯೆ (Selection Process)
ಬಿಎಸ್ಎನ್ಎಲ್ ನೇಮಕಾತಿ ಪ್ರಕ್ರಿಯೆ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಹಾಗೂ ದಾಖಲೆಗಳ ಪರಿಶೀಲನೆ (Document Verification) ಎರಡು ಹಂತಗಳಲ್ಲಿ ನಡೆಯಲಿದೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳಿಗೆ ಮುಂದಿನ ಹಂತದಲ್ಲಿ ಅವಕಾಶ ದೊರೆಯಲಿದೆ.
ಇದನ್ನೂ ಓದಿ: PM Surya Ghar Yojana- ಮನೆಗೆ ಉಚಿತ ಸೋಲಾರ್ ವಿದ್ಯುತ್ ಪಡೆಯಲು ಅರ್ಜಿ ಆಹ್ವಾನ | ಸಂಪೂರ್ಣ ಮಾಹಿತಿ ಇಲ್ಲಿದೆ…
ಅರ್ಜಿ ಸಲ್ಲಿಸುವ ವಿಧಾನ (How to Apply)
ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಮೊದಲಿಗೆ ಬಿಎಸ್ಎನ್ಎಲ್ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ, ನೇಮಕಾತಿ ವಿಭಾಗದಲ್ಲಿ ಸಂಬಂಧಿತ ಅಧಿಸೂಚನೆ ಆಯ್ಕೆಮಾಡಿ. ಅರ್ಜಿ ಫಾರ್ಮ್ನಲ್ಲಿ ಅಗತ್ಯ ಮಾಹಿತಿಗಳನ್ನು ಭರ್ತಿ ಮಾಡಿ.
ನಂತರ ಫೋಟೋ, ಸಹಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ. ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿಸಿ. ಅರ್ಜಿಯನ್ನು ಸಲ್ಲಿಸಿ ಮತ್ತು ಪ್ರಿಂಟ್ ತೆಗೆದುಕೊಳ್ಳಿ.
ಇದನ್ನೂ ಓದಿ: Free Fodder Seed Kit Scheme- ರೈತರಿಗೆ ಉಚಿತ ಮೇವಿನ ಬೀಜ ಕಿಟ್ ವಿತರಣೆ | ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿ
ಅರ್ಜಿ ಶುಲ್ಕ (Application Fee)
- ಸಾಮಾನ್ಯ / OBC / EWS ಅಭ್ಯರ್ಥಿಗಳು: ₹2,500
- SC / ST / PwBD ಅಭ್ಯರ್ಥಿಗಳು: ₹1,250
ಪ್ರಮುಖ ದಿನಾಂಕಗಳು (Important Dates)
- ಅರ್ಜಿ ಪ್ರಾರಂಭ: ಫೆಬ್ರವರಿ 05, 2026
- ಅರ್ಜಿ ಕೊನೆಯ ದಿನ: ಮಾರ್ಚ್ 07, 2026
- ಅರ್ಜಿ ತಿದ್ದುಪಡಿ ಅವಧಿ: ಮಾರ್ಚ್ 08 ರಿಂದ 15, 2026
- ಪರೀಕ್ಷೆಯ ದಿನಾಂಕ (ತಾತ್ಕಾಲಿಕ): ಮಾರ್ಚ್ 29, 2026
ಉತ್ತಮ ವೇತನ, ಕೇಂದ್ರ ಸರ್ಕಾರದ ಉದ್ಯೋಗ ಭದ್ರತೆ ಮತ್ತು ವೃತ್ತಿ ಬೆಳವಣಿಗೆಯ ಅವಕಾಶಗಳನ್ನು ಬಯಸುವ ಅಭ್ಯರ್ಥಿಗಳಿಗೆ BSNL Senior Executive Trainee Recruitment 2026 ಒಂದು ಅತ್ಯುತ್ತಮ ಅವಕಾಶವಾಗಿದೆ. ನೀವು ಅರ್ಹರಾಗಿದ್ದರೆ ಕೊನೆಯ ದಿನಾಂಕದವರೆಗೆ ಕಾಯದೆ ಈಗಲೇ ಅರ್ಜಿ ಸಲ್ಲಿಸುವುದು ಉತ್ತಮ.