Bele Hani Bele Vime Parihara: ರೈತರು ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಯೋಜ£ ಅಡಿಯಲ್ಲಿ ತಮ್ಮ ಬ್ಯಾಂಕ್ ಖಾತೆಗೆ ಬಂದ ಹಣ ಜಮಾ ವಿವರವನ್ನು ಮೊಬೈಲ್ನಲ್ಲಿಯೇ ಸುಲಭವಾಗಿ ಪರಿಶೀಲಿಸಬಹುದು…
ರೈತರ ಬದುಕು ಸಂಪೂರ್ಣವಾಗಿ ಪ್ರಕೃತಿಯ ಮೇಲೆ ಅವಲಂಬಿತವಾಗಿದೆ. ವರ್ಷ ಪೂರ್ತಿ ಹೊಲದಲ್ಲಿ ಬೆವರು ಸುರಿಸಿದ ಶ್ರಮ, ಕೆಲವೇ ದಿನಗಳ ಅತಿಯಾದ ಮಳೆ, ನೆರೆ, ಗಾಳಿ ಅಥವಾ ಮಳೆ ಕೊರತೆಯಿಂದ ಸಂಪೂರ್ಣವಾಗಿ ನಾಶವಾಗುವ ಪರಿಸ್ಥಿತಿ ಎದುರಾಗುತ್ತದೆ.
ಇಂತಹ ಕಷ್ಟದ ಸಮಯದಲ್ಲಿ ರೈತರಿಗೆ ಆರ್ಥಿಕವಾಗಿ ನೆರವಾಗಲೆಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಯೋಜನೆಗಳನ್ನು ಜಾರಿಗೆ ತಂದಿವೆ.
ಇತ್ತೀಚೆಗೆ 2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಅತಿಯಾದ ಮಳೆಯಿಂದಾಗಿ ಬೆಳೆ ನಷ್ಟ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರವು ಬೆಳೆ ಹಾನಿ ಪರಿಹಾರ ಹಾಗೂ ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯಡಿ ಬೆಳೆ ವಿಮೆ ಪರಿಹಾರದ ಹಣವನ್ನು ನೇರ ನಗದು ವರ್ಗಾವಣೆ (DBT) ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಿದೆ.
ಆದರೆ ಬಹುತೇಕ ರೈತರಿಗೆ ಹಣ ಖಾತೆಗೆ ಬಂದಿದೆಯೇ? ಎಷ್ಟು ಮೊತ್ತ ಜಮಾ ಆಗಿದೆ? ಯಾವ ಯೋಜನೆಯ ಹಣ ಬಂದಿದೆ? ಎಂಬ ಗೊಂದಲ ಇರುವುದರಿಂದ, ಈ ಲೇಖನದಲ್ಲಿ ಎಲ್ಲ ವಿವರಗಳನ್ನು ಸರಳವಾಗಿ ಮತ್ತು ಸ್ಪಷ್ಟವಾಗಿ ತಿಳಿಸುತ್ತಿದ್ದೇವೆ.
ಇದನ್ನೂ ಓದಿ: New Ration Card: ಈ ದಾಖಲೆಗಳಿದ್ರೆ 15 ದಿನದಲ್ಲಿ ನಿಮಗೆ ರೇಷನ್ ಕಾರ್ಡ್ ಸಿಗುತ್ತೆ!
ಬೆಳೆ ಹಾನಿ ಪರಿಹಾರ ಯೋಜನೆ ಎಂದರೇನು?
ಅತಿಯಾದ ಮಳೆ, ನೆರೆ, ಬರ, ಗಾಳಿಯಿಂದಾಗಿ ಬೆಳೆ ಸಂಪೂರ್ಣ ಅಥವಾ ಭಾಗಶಃ ಹಾನಿಯಾದ ಸಂದರ್ಭದಲ್ಲಿ, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು SDRF / NDRF ಮಾರ್ಗಸೂಚಿಗಳಂತೆ ಪರಿಹಾರ ನೀಡುತ್ತವೆ.
ಬೆಳೆ ಹಾನಿ ಪರಿಹಾರ ಪಡೆಯಲು ಏನು ಮಾಡಬೇಕು?
ಇಲ್ಲಿ ವಿಮೆ ಕಡ್ಡಾಯವಲ್ಲ; ಬೆಳೆ ಹಾನಿಯಾದರೆ ಸರ್ಕಾರದ ಪರಿಹಾರ ದೊರೆಯುತ್ತದೆ. ಅದಕ್ಕಾಗಿ ಬೆಳೆ ಹಾನಿಯಾದ ತಕ್ಷಣ ನಿಮ್ಮ ಗ್ರಾಮ ಲೆಕ್ಕಾಧಿಕಾರಿ (VAO) ಅಥವಾ ಕಂದಾಯ ಇಲಾಖೆಯನ್ನು ಸಂಪರ್ಕಿಸಬೇಕು. ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಹಾನಿಯ ಪ್ರಮಾಣ ನಿಗದಿ ಮಾಡುತ್ತಾರೆ. ಪರಿಶೀಲನೆ ಪೂರ್ಣಗೊಂಡ ನಂತರ, ಪರಿಹಾರದ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಆಃಖಿ ಮೂಲಕ ಜಮಾ ಮಾಡಲಾಗುತ್ತದೆ.
ಇದನ್ನೂ ಓದಿ: Gruha Lakshmi Yojane: 52 ಸಾವಿರ ಮಹಿಳೆಯರಿಗೆ ಗೃಹಲಕ್ಷ್ಮಿ ಹಣ ಬಂದ್! ನಿಮಗೂ ಹಣ ಜಮೆಯಾಗಿಲ್ಲವೇ?
ಬೆಳೆ ವಿಮೆ ಯೋಜನೆ ಎಂದರೇನು?
ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆ (PMFBY) ಅಡಿಯಲ್ಲಿ ರೈತರು ತಮ್ಮ ಬೆಳೆಗಳಿಗೆ ಮುಂಚಿತವಾಗಿಯೇ ವಿಮೆ ಮಾಡಿಸಬೇಕು.
ಪ್ರತೀ ಹಂಗಾಮಿನ ಆರಂಭದಲ್ಲಿ ನಿಗದಿತ ಪ್ರೀಮಿಯಂ ಪಾವತಿ ಕಡ್ಡಾಯವಾಗಿ ಪಾವತಿಸಬೇಕು. ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಬೆಳೆಗಳಿಗೆ ಪ್ರತ್ಯೇಕ ವಿಮೆ ಕಟ್ಟಬೇಕು.
ಪ್ರಕೃತಿ ವಿಕೋಪದಿಂದ ಬೆಳೆ ನಷ್ಟವಾದರೆ ವಿಮಾ ಕಂಪನಿಯಿಂದ ಪರಿಹಾರ ಮೊತ್ತ ಜಮಾ ಆಗುತ್ತದೆ. ವಿಮೆ ಮಾಡಿಸದೇ ಇದ್ದರೆ ಈ ಯೋಜನೆಯಡಿ ಹಣ ದೊರೆಯುವುದಿಲ್ಲ. ಅಂದರೆ, ವಿಮೆ ಮಾಡಿಸಿಕೊಂಡ ರೈತರಿಗೆ ಮಾತ್ರ ವಿಮೆ ಪರಿಹಾರ ಸಿಗುತ್ತದೆ.

ಪ್ರತಿ ಹೆಕ್ಟರ್ಗೆ ಎಷ್ಟು ಬೆಳೆ ಹಾನಿ ಪರಿಹಾರ?
ಸರ್ಕಾರದ ಪ್ರಸ್ತುತ ಮಾರ್ಗಸೂಚಿಗಳ ಪ್ರಕಾರ, ಪ್ರತಿ ಹೆಕ್ಟರ್ (ಸುಮಾರು 2.5 ಎಕರೆ) ಪ್ರದೇಶಕ್ಕೆ ನೀಡಲಾಗುವ ಪರಿಹಾರದ ಮೊತ್ತ:
- ಮಳೆಯಾಶ್ರಿತ ಬೆಳೆಗಳು – ₹17,000
- ನೀರಾವರಿ ಬೆಳೆಗಳು – ₹25,500
- ಬಹುವಾರ್ಷಿಕ ಬೆಳೆಗಳು – ₹25,500
ಯಾವುದೇ ಮಧ್ಯವರ್ತಿಗಳಿಲ್ಲದೆ, ಈ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
ಇದನ್ನೂ ಓದಿ: Jathi-Aadaya Pramanapatra- ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಆನ್ಲೈನ್ನಲ್ಲೇ ಅರ್ಜಿ ಸಲ್ಲಿಸಿ – ಸಂಪೂರ್ಣ ಮಾಹಿತಿ
2025-26 ಮುಂಗಾರು ಹಂಗಾಮಿನ ಪರಿಹಾರ ಸ್ಥಿತಿ
2025-26ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿಯಾದ ಮಳೆಯಿಂದ ಹಾನಿಗೊಳಗಾದ ಬೆಳೆಗಳಿಗೆ, ಸರ್ಕಾರವು ಈಗಾಗಲೇ ಹಂತ ಹಂತವಾಗಿ ಬೆಳೆ ಹಾನಿ ಪರಿಹಾರ ಮತ್ತು ಬೆಳೆ ವಿಮೆ ಪರಿಹಾರದ ಹಣ ಜಮಾ ಮಾಡುತ್ತಿದೆ. ಹಣ ಜಮಾ ವಿವರವನ್ನು ಮೊಬೈಲ್ನಲ್ಲಿಯೇ ಸುಲಭವಾಗಿ ಪರಿಶೀಲಿಸಬಹುದು.
ಹಣ ಜಮಾ ವಿವರ ಪರಿಶೀಲಿಸುವ ವಿಧಾನ
ಹಂತ 1️: ಕಂದಾಯ ಇಲಾಖೆಯ ಅಧಿಕೃತ Parihara Payment Report ವೆಬ್ಸೈಟ್ಗೆ ಭೇಟಿ ನೀಡಿ.
ಹಂತ 2: ಅಲ್ಲಿ, ವರ್ಷ, ಹಂಗಾಮು, ವಿಪತ್ತಿನ ವಿಧ, ಜಿಲ್ಲೆ, ತಾಲ್ಲೂಕು, ಹೋಬಳಿ, ಗ್ರಾಮ ಆಯ್ಕೆ ಮಾಡಿ ‘ವರದಿ ಪಡೆಯಿರಿ’ ಕ್ಲಿಕ್ ಮಾಡಿ. ನಿಮ್ಮ ಗ್ರಾಮದಲ್ಲಿ ಯಾರಿಗೆ ಎಷ್ಟು ಪರಿಹಾರ ಜಮಾ ಆಗಿದೆ ಎಂಬ ಸಂಪೂರ್ಣ ಪಟ್ಟಿ ಕಾಣಿಸುತ್ತದೆ.
ಇದನ್ನೂ ಓದಿ: Jameenina Mele Saala- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಮೊಬೈಲ್ನಲ್ಲೇ ಚೆಕ್ ಮಾಡಿ | ಸಂಪೂರ್ಣ ಮಾಹಿತಿ ಇಲ್ಲಿದೆ
ಬೆಳೆ ವಿಮೆ ಪರಿಹಾರ ಹಣ ಚೆಕ್ ಮಾಡುವ ವಿಧಾನ
ಹಂತ 1: ಪ್ರಧಾನಮಂತ್ರಿ ಫಸಲ್ ಬೀಮಾ ಯೋಜನೆಯ ಅಧಿಕೃತ samrakshane ವೆಬ್ಸೈಟ್ಗೆ ಭೇಟಿ ನೀಡಿ.
ಹಂತ 2: ವರ್ಷ ಮತ್ತು ಹಂಗಾಮು ಆಯ್ಕೆ ಮಾಡಿ Application Status / Check Status ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3: ಅರ್ಜಿ ಸಮಯದಲ್ಲಿ ನೀಡಿದ ಮೊಬೈಲ್ ನಂಬರ್ ನಮೂದಿಸಿ, ಕ್ಯಾಪ್ಚಾ ಕೋಡ್ ಹಾಕಿ Search ಬಟನ್ ಒತ್ತಿ
ಹಂತ 4: ಕೆಳಭಾಗದಲ್ಲಿ ಕಾಣುವ Bank Details / UTR Details ಕಾಲಂನಲ್ಲಿ ಪರಿಹಾರದ ಹಣ ಜಮಾ ಆಗಿರುವ ವಿವರಗಳನ್ನು ನೋಡಬಹುದು.
ಇದನ್ನೂ ಓದಿ: Grama Panchayati Yojanegalu- ಗ್ರಾಮ ಪಂಚಾಯತಿ ಮೂಲಕ ಯಾವೆಲ್ಲ ಯೋಜನೆ ಪ್ರಯೋಜನ ಪಡೆಯಬಹುದು? ಸಂಪೂರ್ಣ ಮಾಹಿತಿ
ರೈತರು ತಪ್ಪದೇ ಗಮನಿಸಬೇಕಾದ ವಿಷಯಗಳು
- ಬೆಳೆ ಹಾನಿಯಾದ ತಕ್ಷಣ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕು
- ಪ್ರತೀ ಹಂಗಾಮಿನ ಆರಂಭದಲ್ಲೇ ಬೆಳೆ ವಿಮೆ ಮಾಡಿಸಿಕೊಳ್ಳಬೇಕು
- ಬ್ಯಾಂಕ್ ಖಾತೆ ಆಧಾರ್ಗೆ ಲಿಂಕ್ ಆಗಿರಬೇಕು
ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಎಂದರೆ, ದಯವಿಟ್ಟು ಇತರ ರೈತ ಸ್ನೇಹಿತರಿಗೂ ಹಂಚಿಕೊಳ್ಳಿ. ಇಂತಹ ಇನ್ನಷ್ಟು ರೈತೋಪಯೋಗಿ ಮಾಹಿತಿ ಪಡೆಯಲು ನಮ್ಮ ‘ಕನ್ನಡಜನ’ ಜಾಲತಾಣವನ್ನು ಫಾಲೋ ಮಾಡುತ್ತಿರಿ.
Jameenina Mele Saala- ನಿಮ್ಮ ಜಮೀನಿನ ಮೇಲೆ ಸಾಲ ಎಷ್ಟಿದೆ? ಮೊಬೈಲ್ನಲ್ಲೇ ಚೆಕ್ ಮಾಡಿ | ಸಂಪೂರ್ಣ ಮಾಹಿತಿ ಇಲ್ಲಿದೆ