Azolla Cultivation: ಹಾಲು ಹೆಚ್ಚಿಸುವ ‘ಅಜೋಲ್ಲಾ’ | ಹಸು, ಎಮ್ಮೆ, ಕೋಳಿ, ಕುರಿ-ಮೇಕೆಗಳಿಗೆ ಪೋಷಕಾಂಶಗಳ ಭಂಡಾರ | ಸಂಪೂರ್ಣ ಮಾರ್ಗದರ್ಶಿ

WhatsApp Group Join Now
Telegram Group Join Now

Azolla Cultivation: ಹಸು, ಎಮ್ಮೆ, ಕೋಳಿ, ಕುರಿ-ಮೇಕೆಗಳಿಗೆ ಅಜೋಲ್ಲಾ ಬೆಳೆಯುವ ವಿಧಾನ, ಪೋಷಕಾಂಶಗಳು, ತಿನ್ನಿಸುವ ಕ್ರಮ ಹಾಗೂ ಹಾಲು ಉತ್ಪಾದನೆ ಹೆಚ್ಚಿಸುವ ಲಾಭಗಳ ಸಂಪೂರ್ಣ ಮಾಹಿತಿ…

ಇಂದಿನ ಕೃಷಿ ಮತ್ತು ಪಶುಪಾಲನಾ ಕ್ಷೇತ್ರದಲ್ಲಿ ದೊಡ್ಡ ಸವಾಲು ಎಂದರೆ ಮೇವಿನ ಕೊರತೆ. ಅಂತರ್ಜಲ ಮಟ್ಟ ಕುಸಿತ, ಮಳೆಯ ಅನಿಶ್ಚಿತತೆ, ಭೂಮಿಯ ಅಭಾವ ಇತ್ಯಾದಿ ಕಾರಣಗಳಿಂದ ಹಸಿರು ಮೇವು ಬೆಳೆಸುವುದು ರೈತರಿಗೆ ಕಷ್ಟಕರವಾಗಿದೆ.

ಈ ಸಂದರ್ಭದಲ್ಲಿ ಕಡಿಮೆ ವೆಚ್ಚದಲ್ಲಿ, ಅತಿ ಕಡಿಮೆ ಜಾಗದಲ್ಲಿ, ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಪರ್ಯಾಯ ಮೇವಿನ ಮೂಲವಾಗಿ Azolla cultivation ರೈತರ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: Swachh Bharat Mission: ಶೌಚಾಲಯ ನಿರ್ಮಿಸಲು ₹20 ಸಾವಿರವರೆಗೆ ಸಹಾಯಧನ | ಸಂಪೂರ್ಣ ಮಾಹಿತಿ ಇಲ್ಲಿದೆ…

‘ಹಸಿರು ಚಿನ್ನ’ ಅಜೋಲ್ಲಾ

ಅಜೋಲ್ಲಾ ಒಂದು ನೀರಿನಲ್ಲಿ ತೇಲುವ ಸಣ್ಣ ಜಲಸಸ್ಯ (floating fern). ಇದನ್ನು ಸರಿಯಾಗಿ ಬೆಳೆಸಿ, ಸಮರ್ಪಕವಾಗಿ ಪಶುಗಳಿಗೆ ನೀಡಿದರೆ ಹೈನುಗಾರಿಕೆ, ಆಡು-ಕುರಿ, ಕೋಳಿ, ಹಂದಿ ಸಾಕಾಣಿಕೆ ಕ್ಷೇತ್ರಗಳಲ್ಲಿ ಉತ್ತಮ ಫಲಿತಾಂಶ ನೀಡುತ್ತದೆ.

ಇದೇ ಕಾರಣಕ್ಕೆ ಅಜೋಲ್ಲಾವನ್ನು ‘ಹಸಿರು ಚಿನ್ನ’ (Green Gold for Farmers)ಎಂದು ಕರೆಯುವುದಕ್ಕೆ ಕಾರಣ ಅದರ ಪೋಷಕಾಂಶಗಳು ಮತ್ತು ಲಾಭಗಳು.

ಅಜೋಲ್ಲಾ ಎಂದರೇನು?

ಅಜೋಲ್ಲಾ (Azolla) ಒಂದು ನೀಲಿ-ಹಸಿರು ಪಾಚಿಯಂತಹ ತೇಲುವ ಜಲಸಸ್ಯ. ಇದು ನೀರಿನ ಮೇಲ್ಮೈಯಲ್ಲಿ ಚಾದರದಂತೆ ಹರಡುತ್ತದೆ. ಅಜೋಲ್ಲಾದಲ್ಲಿ ಅನೇಕ ಪ್ರಭೇದಗಳಿದ್ದರೂ Azolla pinnata ಭಾರತೀಯ ಪರಿಸ್ಥಿತಿಗೆ ಹೆಚ್ಚು ಸೂಕ್ತವಾಗಿದೆ.

ಈ ಸಸ್ಯವು ವಾತಾವರಣದ ಸಾರಜನಕವನ್ನು (Nitrogen fixation) ಸ್ಥಿರಗೊಳಿಸುವ ಸಾಮರ್ಥ್ಯ ಹೊಂದಿದೆ. ಇದರಿಂದ ಭತ್ತದ ಗದ್ದೆಗಳಲ್ಲಿ ಸಹ ಇದನ್ನು ಜೈವಿಕ ಗೊಬ್ಬರವಾಗಿ ಬಳಸಲಾಗುತ್ತದೆ. ಆದರೆ ಇತ್ತೀಚೆಗೆ ಇದು cattle feed supplement ಆಗಿ ಹೆಚ್ಚು ಜನಪ್ರಿಯವಾಗಿದೆ.

ಇದನ್ನೂ ಓದಿ: Post Matric Scholarship 2026 Karnataka: ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ₹20,000 ವಿದ್ಯಾರ್ಥಿವೇತನ | ಕೂಡಲೇ ಅರ್ಜಿ ಸಲ್ಲಿಸಿ

ಅಜೋಲ್ಲಾದಲ್ಲಿರುವ ಪೋಷಕಾಂಶಗಳು

ಅಜೋಲ್ಲಾವನ್ನು ಸೂಕ್ಷ್ಮ ಪೋಷಕಾಂಶಗಳ ಭಂಡಾರ ಎಂದು ಹೇಳಬಹುದು.

  • ಶೇಕಡಾ 25-28% ಪ್ರೋಟಿನ್ (High Protein Livestock Feed)
  • 10-15% ಖನಿಜ ಲವಣಗಳು
  • 7-10 ವಿಧದ ಅಮಿನೋ ಆಮ್ಲಗಳು (Essential amino acids)
  • ವಿಟಮಿನ್ A, B12, ಬಿಟಾ ಕ್ಯಾರೋಟಿನ್
  • ಕ್ಯಾಲ್ಸಿಯಂ (Calcium)
  • ರಂಜಕ (Phosphorus)
  • ಪೊಟ್ಯಾಷ್ (Potassium)
  • ಕಬ್ಬಿಣ (Iron)
  • ತಾಮ್ರ (Copper)

ಇವುಗಳ ಸಂಯೋಜನೆ ಜಾನುವಾರುಗಳಿಗೆ ಸುಲಭವಾಗಿ ಜೀರ್ಣವಾಗುತ್ತದೆ. ಕಡಿಮೆ ನಾರಿನಾಂಶ (Low Fiber) ಇರುವುದರಿಂದ ಇದು ಜಾನುವಾರುಗಳ ಹೊಟ್ಟೆಗೆ ತೊಂದರೆ ಕೊಡದು.

ಹೀಗಾಗಿ ಅಜೋಲ್ಲಾ ಒಂದು natural protein source for dairy animals ಆಗಿ ಪರಿಗಣಿಸಲಾಗಿದೆ.

ಇದನ್ನೂ ಓದಿ: Shakti Yojana Smart Card: ಮಹಿಳೆಯರಿಗೆ ಶಕ್ತಿ ಯೋಜನೆ ಉಚಿತ ಬಸ್ ಪ್ರಯಾಣಕ್ಕೆ ಇನ್ಮುಂದೆ ಸ್ಮಾರ್ಟ್ ಕಾರ್ಡ್

ಅಜೋಲ್ಲಾ ಬೆಳೆಯುವುದು ಹೇಗೆ? (Azolla Cultivation Method)

ಅಜೋಲ್ಲಾ ಬೆಳೆಸಲು ದೊಡ್ಡ ಹೊಲ ಅಗತ್ಯವಿಲ್ಲ. ಮನೆಯ ಹಿತ್ತಲು, ಡೈರಿ ಶೆಡ್ ಹತ್ತಿರ, ಕೋಳಿ ಶೆಡ್ ಪಕ್ಕದಲ್ಲಿ ಕೂಡ ಬೆಳೆಸಬಹುದು.

ಜಾಗ ಆಯ್ಕೆ: ನೆರಳು ಇರುವ ಸ್ಥಳ ಉತ್ತಮ. ನೇರ ಸೂರ್ಯರಶ್ಮಿ ಕಡಿಮೆ ಇರಬೇಕು. ಸಮತಟ್ಟಾದ ಭೂಮಿ ಆಯ್ಕೆ ಮಾಡಬೇಕು

ಗುಂಡಿ ತಯಾರಿ: 6 ಅಡಿ x 4 ಅಡಿ ಗಾತ್ರದ ಗುಂಡಿ ತೋಡಬೇಕು. ಆಳ 15-20 ಸೆಂ.ಮೀ ಇರಬೇಕು. ಪ್ಲಾಸ್ಟಿಕ್ ಹಾಳೆ ಹಾಸಿ ನೀರು ಸೋರದಂತೆ ನೋಡಿಕೊಳ್ಳಬೇಕು. ಸುತ್ತಲೂ ಇಟ್ಟಿಗೆ ಇಟ್ಟು ಬಲಪಡಿಸಬೇಕು. ಈ ಗಾತ್ರದ ಗುಂಡಿಯಲ್ಲಿ ದಿನಕ್ಕೆ ಸುಮಾರು 1 ಕೆಜಿ ಅಜೋಲ್ಲಾ ಉತ್ಪಾದಿಸಬಹುದು.

ಆರಂಭಿಕ ಮಿಶ್ರಣ: 2 ಕೆಜಿ ಗೋಮಯ (Cow dung), 30-40 ಗ್ರಾಂ ಸೂಪರ್ ಫಾಸ್ಫೇಟ್, 10 ಲೀಟರ್ ನೀರು- ಇವುಗಳನ್ನು ಚೆನ್ನಾಗಿ ಬೆರೆಸಿ ಗುಂಡಿಯಲ್ಲಿ ಸುರಿಯಬೇಕು. ನಂತರ 0.5-1 ಕೆಜಿ ಅಜೋಲ್ಲಾ ಮದ್ದು (starter culture) ಹರಡಬೇಕು. ಒಂದು ವಾರದೊಳಗೆ ಅಜೋಲ್ಲಾ ಸಂಪೂರ್ಣವಾಗಿ ಹರಡಿ ಬೆಳೆಯುತ್ತದೆ.

ಇದನ್ನೂ ಓದಿ: BV 380 layer farming: ವರ್ಷವಿಡಿ ಮೊಟ್ಟೆ ಹಾಕುವ ಬಿವಿ 380 ಕೋಳಿ ಸಾಕಾಣಿಕೆಯಿಂದ ಭರ್ಜರಿ ಆದಾಯ | ಸಂಪೂರ್ಣ ಮಾರ್ಗದರ್ಶಿ

Azolla Cultivation
Azolla Cultivation

ನಿರ್ವಹಣೆ (Maintenance Tips)

  • ವಾರಕ್ಕೊಮ್ಮೆ 1 ಕೆಜಿ ಗೋಮಯ + 20 ಗ್ರಾಂ ಸೂಪರ್ ಫಾಸ್ಫೇಟ್ ಸೇರಿಸಬೇಕು
  • ದಿನಕ್ಕೆ 25-30% ನೀರು ಹೆಚ್ಚಿಸಬೇಕು (evaporation compensation)
  • ವಾರಕ್ಕೊಮ್ಮೆ 100 ಗ್ರಾಂ ಮೈಲುತುತ್ತ (Bleaching powder solution) 1 ಲೀಟರ್ ನೀರಿನಲ್ಲಿ ಬೆರೆಸಿ ಹಾಕಿದರೆ ರೋಗ ನಿಯಂತ್ರಣ
  • ತಿಂಗಳಿಗೆ 5 ಕೆಜಿ ಮಣ್ಣು ಮಿಶ್ರಿತ ಗೊಬ್ಬರ ತೆಗೆದು ಹೊಸ ಮಣ್ಣು ಸೇರಿಸಬೇಕು. 6 ತಿಂಗಳಿಗೊಮ್ಮೆ ಸಂಪೂರ್ಣ ಮದ್ದು ಬದಲಿಸಬೇಕು. ಉಷ್ಣಾಂಶ 20-28°C ನಡುವೆ ಇದ್ದರೆ ಉತ್ತಮ.

ಅಜೋಲ್ಲಾ ತಿನ್ನಿಸುವ ವಿಧಾನ (Feeding Method)

ಅಜೋಲ್ಲಾವನ್ನು ಮಡಿಯಿಂದ ತೆಗೆದ ನಂತರ ಸ್ವಚ್ಛ ನೀರಿನಲ್ಲಿ ತೊಳೆಯಬೇಕು. ನೇರವಾಗಿ ಮಣ್ಣು ಅಥವಾ ಗೊಬ್ಬರದ ವಾಸನೆ ಇರಬಾರದು.

ಹಸು, ಎಮ್ಮೆಗಳಿಗೆ: ಪ್ರಾರಂಭದಲ್ಲಿ 200-300 ಗ್ರಾಂ ಮಾತ್ರ ನೀಡಿ. ನಂತರ ಕ್ರಮೇಣ 1-2 ಕೆಜಿ ವರೆಗೆ ಹೆಚ್ಚಿಸಬಹುದು. ಒಂದು ಸಾಮಾನ್ಯ ಹಸುವಿಗೆ ಎರಡು ಬೊಗಸೆಯಷ್ಟು ಅಜೋಲ್ಲಾ ಸಾಕು.

ಹಿಂಡಿ ಅಥವಾ concentrate feed ಜೊತೆ ಮಿಶ್ರಣ ಮಾಡಿ ನೀಡಬಹುದು. ಇದರಿಂದ milk yield improvement 10-15% ವರೆಗೆ ಸಾಧ್ಯ.

ಇದನ್ನೂ ಓದಿ: RTE Karnataka 2026-27- ಆರ್‌ಟಿಇ 2026-27 ಅರ್ಜಿ ಆಹ್ವಾನ : ಖಾಸಗಿ ಶಾಲೆಗಳಲ್ಲಿ ಉಚಿತ ಶಿಕ್ಷಣಕ್ಕೆ ಅವಕಾಶ | ಸಂಪೂರ್ಣ ಮಾಹಿತಿ ಇಲ್ಲಿದೆ

ಕುರಿ, ಮೇಕೆಗಳಿಗೆ: concentrate feed ಜೊತೆಗೆ ಅರ್ಧ ಪ್ರಮಾಣದಲ್ಲಿ ಮಿಶ್ರಣ ಮಾಡಿ. ತೂಕ ಹೆಚ್ಚಿಸಲು ಸಹಕಾರಿ. goat farming ನಲ್ಲಿ growth rate ಹೆಚ್ಚಿಸುತ್ತದೆ.

ಕೋಳಿಗಳಿಗೆ: ನೇರವಾಗಿ ಅಥವಾ ಜಿeeಜ ಜೊತೆ ಮಿಶ್ರಣ ಮಾಡಿ. egg production increase. broiler weight gain ಹೆಚ್ಚುತ್ತದೆ.

ಹಂದಿಗಳಿಗೆ: ಹಿಂಡಿ ಜೊತೆ ಮಿಶ್ರಣ ಮಾಡಿದರೆ ಕೊಬ್ಬಿನಾಂಶ ಹೆಚ್ಚಿಸಲು ಸಹಕಾರಿ.

ಅಜೋಲ್ಲಾ ಬಳಕೆಯ ಲಾಭಗಳು

  • ಹಾಲು ಉತ್ಪಾದನೆ ಹೆಚ್ಚಳ: ಅಜೋಲ್ಲಾ ನಿಯಮಿತವಾಗಿ ನೀಡಿದರೆ ಹಸುಗಳಲ್ಲಿ 10-15% ಹಾಲು ಹೆಚ್ಚಳ ಕಂಡುಬರುತ್ತದೆ. ಇದು natural milk booster ಆಗಿ ಕಾರ್ಯನಿರ್ವಹಿಸುತ್ತದೆ.
  • ಕಡಿಮೆ ವೆಚ್ಚದ ಮೇವು: ಒಮ್ಮೆ ಮದ್ದು ತಯಾರಿಸಿದ ನಂತರ ಕಡಿಮೆ ವೆಚ್ಚದಲ್ಲಿ ನಿರಂತರ ಉತ್ಪಾದನೆ.
  • ಜೀರ್ಣಶಕ್ತಿ ಸುಧಾರಣೆ: ಅಮಿನೋ ಆಮ್ಲಗಳು ಮತ್ತು ವಿಟಮಿನ್‌ಗಳಿಂದ ಜಾನುವಾರುಗಳ ಆರೋಗ್ಯ ಉತ್ತಮ.
  • ಬರಗಾಲದ ಪರಿಹಾರ: Drought season ನಲ್ಲಿ green fodder substitute ಆಗಿ ಕಾರ್ಯನಿರ್ವಹಿಸುತ್ತದೆ.
  • ಜೈವಿಕ ಗೊಬ್ಬರ: ಅಜೋಲ್ಲಾ ಭತ್ತದ ಗದ್ದೆಗಳಲ್ಲಿ biofertilizer ಆಗಿ ಬಳಕೆ.
  • ಮಿಶ್ರ ಬೇಸಾಯ ಲಾಭ: ಭತ್ತ + ಅಜೋಲ್ಲಾ + ಮೀನು ಸಂಯೋಜಿತ ಕೃಷಿ (Integrated farming system) ಬಹು ಲಾಭದಾಯಕ.

ಇದನ್ನೂ ಓದಿ: Kukkuta Sanjeevini Scheme: ಮಹಿಳೆಯರಿಗೆ ಉಚಿತ ಕೋಳಿ ಮರಿ, ಕೋಳಿ ಶೆಡ್‌ಗೆ ಸಹಾಯಧನ

ಅಜೋಲ್ಲಾ ಬೆಳೆಸುವಾಗ ಗಮನಿಸಬೇಕಾದ ವಿಷಯಗಳು

  • ನೇರ ಸೂರ್ಯ ಕಿರಣ ತಪ್ಪಿಸಬೇಕು
  • ನೀರಿನ ಮಟ್ಟ ಸದಾ ಇರಬೇಕು
  • ಹೆಚ್ಚು ಪ್ರಮಾಣದಲ್ಲಿ ನೀಡಬಾರದು
  • ರೋಗ ಕಾಣಿಸಿದರೆ ಹಳೆಯ ಮದ್ದು ತೆಗೆದು ಹೊಸದಾಗಿ ಪ್ರಾರಂಭಿಸಬೇಕು
  • ಅತಿಯಾದ ಬಿಸಿಲಿನಲ್ಲಿ shading ಅಗತ್ಯ

ಇದನ್ನೂ ಓದಿ: Ahara Vahini Yojana: ಆಹಾರ ವಾಹಿನಿ ಯೋಜನೆ: ಮೊಬೈಲ್ ಕ್ಯಾಂಟೀನ್ ಆರಂಭಿಸಲು ಸರ್ಕಾರದಿಂದ ₹3 ಲಕ್ಷ ಉಚಿತ ಸಹಾಯಧನ

ರೈತರಿಗೆ ಆರ್ಥಿಕ ಲಾಭ

Azolla farming ಒಂದು ಸಣ್ಣ ಉದ್ಯಮವಾಗಿಯೂ ರೂಪುಗೊಳ್ಳುತ್ತಿದೆ. ಕೆಲವು ರೈತರು ಅಜೋಲ್ಲಾ ಮದ್ದು ಮಾರಾಟ ಮಾಡಿ ಹೆಚ್ಚುವರಿ ಆದಾಯ ಗಳಿಸುತ್ತಿದ್ದಾರೆ. Dairy farming profit increase, low cost cattle feed, organic livestock nutrition ಕ್ಷೇತ್ರದಲ್ಲಿ ಅಜೋಲ್ಲಾ ಮಹತ್ವ ಪಡೆದುಕೊಂಡಿದೆ.

ಹಸು, ಎಮ್ಮೆ, ಕೋಳಿ, ಕುರಿ-ಮೇಕೆ, ಹಂದಿ ಎಲ್ಲ ಜಾನುವಾರುಗಳಿಗೂ ಪೋಷಕಾಂಶ ನೀಡಬಲ್ಲ ಅಜೋಲ್ಲಾ ಒಂದು ಅದ್ಭುತ ಜಲಸಸ್ಯ. ಕಡಿಮೆ ಜಾಗ, ಕಡಿಮೆ ನೀರು, ಕಡಿಮೆ ವೆಚ್ಚದಲ್ಲಿ ಹೆಚ್ಚು ಲಾಭ ಕೊಡಬಲ್ಲ ಈ Azolla cultivation for dairy farmers ವಿಧಾನವು ಗ್ರಾಮೀಣ ರೈತರಿಗೆ ದೊಡ್ಡ ನೆರವು ನೀಡುತ್ತದೆ.

ಪರ್ಯಾಯ ಮೇವಿನ ಮೂಲ

ಹಾಲು ಉತ್ಪಾದನೆ ಹೆಚ್ಚಿಸಲು, ಜಾನುವಾರುಗಳ ಆರೋಗ್ಯ ಸುಧಾರಿಸಲು, ಮೇವಿನ ಕೊರತೆಯನ್ನು ನೀಗಿಸಲು ಅಜೋಲ್ಲಾ ಅತ್ಯುತ್ತಮ ಪರಿಹಾರ. ಸರಿಯಾದ ನಿರ್ವಹಣೆ ಮತ್ತು ಸಮತೋಲನ ಆಹಾರ ಕ್ರಮದೊಂದಿಗೆ ಬಳಸಿದರೆ ಇದು ರೈತರ ಆದಾಯವನ್ನು ಹೆಚ್ಚಿಸುವ ‘ಹಸಿರು ಚಿನ್ನ’ ಎಂಬುದು ಅನುಭವದಿಂದಲೇ ಸಾಬೀತಾಗಿದೆ.

ಪರ್ಯಾಯ ಮೇವಿನ ಮೂಲ ಹುಡುಕುತ್ತಿರುವ ಪ್ರತಿಯೊಬ್ಬ ರೈತನೂ ಅಜೋಲ್ಲಾ ಬೆಳೆಯುವತ್ತ ಒಂದು ಹೆಜ್ಜೆ ಇಡುವುದು ಸೂಕ್ತ. ಇದು ಭವಿಷ್ಯದ sustainable livestock farming ದತ್ತ ಸಾಗುವ ಮಾರ್ಗವಾಗಿದೆ.

BV 380 layer farming: ವರ್ಷವಿಡಿ ಮೊಟ್ಟೆ ಹಾಕುವ ಬಿವಿ 380 ಕೋಳಿ ಸಾಕಾಣಿಕೆಯಿಂದ ಭರ್ಜರಿ ಆದಾಯ | ಸಂಪೂರ್ಣ ಮಾರ್ಗದರ್ಶಿ

WhatsApp Group Join Now
Telegram Group Join Now

Leave a Comment